My Blog List

Wednesday 2 December 2015

ಬಾರಿಸು ಕನ್ನಡ ಡಿಂಡಿಮವಾ..... (ಕನ್ನಡ ಎಸ್.ಟಿ.ಎಫ್ ತರಬೇತಿ ಮೊದಲನೇ ತಂಡ)


ಕನ್ನಡವೆನೆ ಬರಿಯ ಹೆಸರೆ ಮಣ್ಣಿಗೆ ?
ಅದು ಮಂತ್ರ ಕಣಾ ! ಶಕ್ತಿ ಕಣಾ ! ಅಂತಾರೆ ರಸ‍ಋಷಿ. 
ಅವರ ಮಾತಿನಂತೆ ಜಿಲ್ಲೆಯ ಕನ್ನಡ ಭಾಷಾ ಶಿಕ್ಷಕರ ತರಗತಿಗಳನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ದಿನಾಂಕ :01-12-2015 ರಂದು ಮೊದಲ ಬ್ಯಾಚ್ ನಲ್ಲಿ ಕನ್ನಡ ಎಸ್.ಟಿ.ಎಫ್ ತರಬೇತಿಯನ್ನು ಆರಂಭಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾನ್ಯ ಪ್ರಾಂಶುಪಾಲರು ಭಾಷಾ ಶಿಕ್ಷಕರ ಮಹತ್ವವನ್ನ ಮನವರಿಕೆ ಮಾಡಿದರು. ಶಾಲೆಗಳ ಚಲನಶೀಲತೆಗೆ ಭಾಷಾ ಶಿಕ್ಷಕರು ಹೇಗೆ ಕೊಡುಗೆ ನೀಡಬೇಕೆಂದು ಉದಾಹರಣೆಗಳೊಂದಿಗೆ ಸ್ಫೂರ್ತಿತುಂಬಿದರು.


ಶಿಕ್ಷಕರು, ತಮ್ಮ ಅನುಭವಗಳನ್ನು, ಅಭ್ಯಾಸಗಳು ಹಾಗೂ ಒಳನೋಟಗಳನ್ನು ಮತ್ತು ಕಲಿಕೆಗಳನ್ನು ಹಂಚಿಕೊಳ್ಳಲು, ತಮ್ಮ ಸಹವರ್ತಿಗಳೊಂದಿಗೆ  ನಿರಂತರವಾಗಿ ಸಂಪರ್ಕ ಹೊಂದುವ ಅಗತ್ಯವಿದೆ. ಸಹವರ್ತಿಗಳೊಂದಿಗೆ  ಸಂವಹನ ಸಂಪರ್ಕವನ್ನು  ಹೊಂದುವ ಹಾಗೂ ಅವರ ಜೊತೆಯಲ್ಲಿ ಮಾರ್ಗದರ್ಶಕರ ಬೆಂಬಲ ಕೂಡ ಅಗತ್ಯವಿದೆ.  ಭಾರತದಲ್ಲಿರುವ ದೊಡ್ಡ ಶಾಲಾ ವ್ಯವಸ್ಥೆಯಲ್ಲಿ ಇದು ಬಹಳ ಮುಖ್ಯವಾಗಿದೆ. ನಾವು ಶಿಕ್ಷಕರಾಗಿ ತಮ್ಮ ಅಭ್ಯಾಸ  ಮತ್ತು  ತಮ್ಮ ಅನುಭವಗಳನ್ನು ಹಂಚಿಕೊಳ್ಳುವ,ಪುನಃ ವಿಮರ್ಶಿಸುವ ಮತ್ತು ತಮ್ಮ ನಿರ್ದಿಷ್ಟ ಸವಾಲುಗಳಿಗೆ ಪರಿಹಾರಗಳನ್ನು ಪಡೆಯಲು ವೃತ್ತಿಪರ ಶಿಕ್ಷಕರ ಸಮೂಹದೊಡನೆ ಬೆರೆಯಬೇಕಾಗಿದೆ.




ಈಗಾಗಲೇ ಕರ್ನಾಟಕದಲ್ಲಿ ವೃತ್ತಿಪರ ಶಿಕ್ಷಕರ ವೇದಿಕೆಗಳು ಜಾರಿಯಲ್ಲಿದ್ದು,  ಗಣಿತ, ವಿಜ್ಞಾನ ಮತ್ತು ಸಮಾಜವಿಜ್ಞಾನ ವಿಷಯ ಶಿಕ್ಷಕರ ವೇದಿಕೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವುದರನ್ನು ನೋಡಬಹುದಾಗಿದೆ.
ಕಾರ್ಯಕ್ರಮದ ಉದ್ದೇಶಗಳು:

  • ಶಿಕ್ಷಕರು ಸಹವರ್ತಿ ಮತ್ತು ಸಹಯೋಜಿತ ಕಲಿಕೆ ಮತ್ತು ಹಂಚಿಕೆಯಲ್ಲಿ ತೊಡಗಲು ಸಹಕಾರಿಯಾಗುವಂತೆ ಭಾಷಾ ಶಿಕ್ಷಕರ  ವೇದಿಕೆಯನ್ನು ಪರಿಚಯಿಸುವುದು
  • ಭಾಷಾ ಶಿಕ್ಷಕರ ವೇದಿಕೆ ನಿರ್ಮಾಣ  ಮಾಡುವ ಮೂಲಕ  ಭಾಷಾ ಶಿಕ್ಷಕರು ತಮ್ಮ ಅನುಭವಗಳನ್ನು   ಮತ್ತು  ಭೋದನೆಯಲ್ಲಿನ ಸವಾಲುಗಳನ್ನು  ಮತ್ತು  ಅವುಗಳನ್ನು  ತರಗತಿಯಲ್ಲಿ  ಹೇಗೆ ಪರಿಹರಿಸಿದರು ಎಂಬುದನ್ನು   ಹಂಚಿಕೊಳ್ಳಲು ಪ್ರೋತ್ಸಾಹಿಸುವುದು. 
  • ಶಿಕ್ಷಕರಿಗೆ ತಂತ್ರಜ್ಞಾನದಲ್ಲಿ  ಆಸಕ್ತಿಯನ್ನು  ಮೂಡಿಸುವ ಮೂಲಕ ಸ್ವಯಂ ಕಲಿಕೆಗೆ, ತರಗತಿ ಕಲಿಕೆಗೆ ಮತ್ತು ಬೋಧನಾ  ವಿಧಾನದಲ್ಲಿ  ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆ ಮಾಡುವುದು .
  • ತಂತ್ರಜ್ಞಾನದ ಮೂಲಕ ಭಾಷಾ ಕಲಿಕೆ ಅವಕಾಶಗಳನ್ನು ತಿಳಿಯುವುದು & ಶೈಕ್ಷಣಿಕ ಪರಿಕರಗಳ ಪರಿಚಯ
  • ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ ದ ಪರಿಚಯ
  • ಪಠ್ಯಕ್ರಮದಲ್ಲಿ ಕನ್ನಡ ಭಾಷಾ ಬೋಧನೆಯ ಉದ್ದೇಶಗಳನ್ನು   ಅರ್ಥೈಸಿಕೊಳ್ಳುವುದು.
  • ಹೊಸ ಪಠ್ಯಕ್ರಮ ಭೋದನೆ
  • ಮಕ್ಕಳಲ್ಲಿನ ಭಾಷಾ ಸಾಕ್ಷರತೆ ಮತ್ತು ಸಾಮರ್ಥ್ಯಗಳು
  • ಸೇತುಬಂಧ ಕಾರ್ಯಕ್ರಮ ಸಾಮಗ್ರಿ ರಚನೆ
  • ಭಾಷಾ ಕಲಿಕೆಯಲ್ಲಿ ತಾಂತ್ರಿಕ ಪರಿಕರಗಳ ಬಳಕೆ
  • ಭಾಷಾ ಪಠ್ಯಕ್ರಮದ ವಿಷಯಗಳಿಗೆ ಕೊಯರ್ ಮೂಲಕ ಸಂಪನ್ಮೂಲ ಅಭಿವೃದ್ದಿಪಡಿಸುವುದು. 
  • NCF ಪೋಷಿಷನ್ ಪೇಪರ್ ಮತ್ತು ಪ್ರಸ್ತುತ ಪಠ್ಯಪುಸ್ತಕಗಳಲ್ಲಿನ ಪರಿಕಲ್ಪನೆಗಳ ಚರ್ಚೆ
  • ಉಪಯುಕ್ತ ಅಂತರ್ಜಾಲ ತಾಣಗಳ ಪರಿಚಯ, ಅಂತರ್ಜಾಲಾಧಾರಿತ ಸಂಪನ್ಮೂಲ ಸಂಗ್ರಹಾಲಯ ರಚಿಸುವ ವಿಧಾನವನ್ನು  ತಿಳಿಯುವುದು. ಇಂಟರ್ನೆಟ್ ಬಳಕೆ, ಇಮೇಲ್ ಬಳಕೆ, ವಿವಿಧ ಅಂತರ್ಜಾಲ ತಾಣಗಳ ಮೂಲಕ ಸಂಪನ್ಮೂಲ ಸಂಗ್ರಹಿಸುವಿಕೆ


ಈ ಮೇಲಿನ ಉದ್ದೇಶಗಳನ್ನು  ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ವಿಷಯ ಶಿಕ್ಷಕರ ವೇದಿಕೆ  ಕಾರ್ಯಗಾರಗಳನ್ನು  ಹಮ್ಮಿಕೊಳ್ಳಲಾಗುವುದು.
ಕಾರ್ಯಾಗಾರದ ಉದ್ದೇಶಗಳು :

  • ಶಿಕ್ಷಕರು ತಮ್ಮ ತರಗತಿ ಭಾಷಾ ಬೊಧನಾ ಪ್ರಕ್ರಿಯೆಯಲ್ಲಿ ಎದುರಿಸುವ ಸವಾಲುಗಳು ಮತ್ತು ಪರಿಹಾರಿಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸುವುದು. 
  • ಈ ಸವಾಲುಗಳನ್ನು ಪರಿಹರಿಸಲು ಮತ್ತು ನಾವಿನ್ಯಯುತ ಚಟುವಟಿಕೆಗಳ ಮಕ್ಕಳಲ್ಲಿ ಕಲಿಕಾಸಕ್ತಿ ಮೂಡಿಸಲು ಸಾದ್ಯವಾಗುವಂತೆ ಅಂತರ್ಜಾಲಾಧಾರಿತ ಸಂಪನ್ಮೂಲ ಬಳಕೆಗಳ ಬಗ್ಗೆ ಶಿಕ್ಷಕರಿಗೆ ಅರಿವು ಮೂಡಿಸುವುದು. 
  • ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆಯ ಅರಿವು ಮೂಡಿಸಿವುದು. ಅಂತರ್ಜಾಲ ಸಂಪನ್ಮೂಲಗಳ ಬಳಕೆ ಮತ್ತು ಅವುಗಳ ಮೌಲ್ಯಮಾಪನದ ಬಗ್ಗೆ ತಿಳಿಯುವುದು. 
  • ಬಹುಭಾಷಾ ಹಿನ್ನೆಲೆ ಮತ್ತು ಬಹುಭಾಷಾ ಸಾಮರ್ಥ್ಯವುಳ್ಳ ಮಕ್ಕಳ ಕಲಿಕೆಗ ಪೂರಕವಾದ ಚಟುವಟಿಕೆಗಳು ಮತ್ತು ಸಂಪನ್ಮೂಲಗಳ ಬಗ್ಗೆ ತಿಳಿಯುವುದು. 
  • ಭಾಷಾ ಕಲಿಕೆಯ ಉದ್ದೇಶಗಳು, ಭಾಷೆಯ ಬೆಳವಣಿಗೆ ಬಗೆಗಿನ ನೀತಿ ನಿರೂಪಣೆಗಳನ್ನು, ಲೇಖನಗಳನ್ನು ಚರ್ಚಿಸುವುದು. 
  • ಮಕ್ಕಳಲ್ಲಿ ಸೃಜನಾತ್ಮಕ ಅಭಿವೈಕ್ತಿ ಮೂಡಿಸಲು ಪೂರಕವಾಗುವ ಸಂಪನ್ಮೂಲಗಳ ಸಂಗ್ರಹಿಸುವುದು..
  • ಭಾಷಾ ಶಿಕ್ಷಕರಲ್ಲಿ ತಂತ್ರಜ್ಞಾನ ಕೌಶಲ ಬೆಳೆಸುವುದು. 


ಭಾಷಾ ಬೋಧನೆ-ಕಲಿಕೆಗೆ ಪೂರಕವಾದ ಅಂತರ್ಜಾಲಾಧಾರಿತ ಉಪಯುಕ್ತ ವೆಬ್‌ತಾಣಗಳ ಬಗ್ಗೆ ತಿಳಿಯುವುದು.
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ ಪ್ರಕ್ರಿಯೆಯ ಬಗ್ಗೆ ತಿಳಿಯುವುದು ಮತ್ತು ನೆರವು ನೀಡುವುದು.
ಈ ಕಾರ್ಯಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಿಗೆ ರಾಜ್ಯಮಟ್ಟದಲ್ಲಿ ತರಬೇತಿ ನೀಡಲಾಗುವುದು.   ಈ ಸ೦ಪನ್ಮೂಲ ವ್ಯಕ್ತಿಗಳ ಮೂಲಕ ಜಿಲ್ಲಾ ಹಂತದಲ್ಲಿ ತರಬೇತಿ ನೀಡುವುದು. ಕಾರ್ಯಗಾರದ ನಂತರ ಅಂತರ್ಜಾಲದ ಮೂಲಕ ಶಿಕ್ಷಕರ ನಡುವೆ ಸಂವಹನ, ಸಂಪನ್ಮೂಲ ಹಂಚಿಕೆ ಪ್ರಕ್ರಿಯೆ ಮುಂದುವರೆಯುತ್ತದೆ. .







Sunday 8 November 2015

ಸಮಸ್ಯೆಯೊಳಗಣ ಸಂಭ್ರಮ

“Everyone’s effort is needed to implement educational technology in classroom. Let us all attempt to achieve this”

ಕಲಿಕೋತ್ಸಾಹದಲ್ಲಿ ವಿದ್ಯಾರ್ಥಿಗಳು

ವಿದ್ಯಾರ್ಥಿ 1 : “ ಲೋ ಇವತ್ತು ಪಿ.ಸಿಯಲ್ಲಿ ವಿಜ್ಞಾನದ ಹೊಸ ಪಾಠ ಓದೋಣ”
ವಿದ್ಯಾರ್ಥಿ 2: ಹ್ಞಾಂ ಕಣೋ….
ವಿದ್ಯಾರ್ಥಿ 2 :”ನಿನ್ನೆ ಮೇಡಂ ಪಾಠಕ್ಕೆ ಸಂಬಂಧಿಸಿದಂತೆ ಮಾಡಿರುವ ಪೇಯಿಂಟಿಂಗ್ ತೋರಿಸ್ತಿನಿ”…
ವಿದ್ಯಾರ್ಥಿ 1:’ಹ್ಞಾಂ ಆಯ್ತು’. ಆದ್ರೆ ನಂಗೂ ಹೇಳ್ಕೊಡಬೇಕಪ್ಪ ಪೇಯಿಂಟಿಂಗ್ ಮಿಕ್ಸ್ ಮಾಡೋದು….ಆಯ್ತಾ “

ಡಿ.ವಿ.ಡಿ ನೋಡುತ್ತಿರುವ ವಿದ್ಯಾರ್ಥಿಗಳು
ಹೀಗೆ ಪರಸ್ಪರ ಕಲಿಕೆ. ಒಬ್ಬರಿಗೊಬ್ಬರು ಗುರುವಾಗಿ, ಉತ್ಸಾಹದಿಂದ ಕಲಿಕೆಗೆ ತೊಡಗಿರುವ ಕ್ಷಣ ನೋಡೋದೆ ಕಣ್ಣಿಗೆ ಹಬ್ಬ. “ಶಾಲೆಯೊಂದು ದೇವಾಲಯ ಕೈಮುಗಿದು ಒಳಗೆ ಬನ್ನಿ “ ಎಂಬ ಫಲಕ, ಇಂತಹ ಸನ್ನಿವೇಶಗಳಿಂದಲೇ ಪುಳಕಗೊಳಿಸೋದು. ಅಂದಹಾಗೆ, ಈ ಸಂದರ್ಭ ನಮ್ಮ ಕಣ್ಣಿಗೆ ಸಿಗೋದು ಮೈಸೂರು ದಕ್ಷಿಣ ವಲಯದಲ್ಲಿರುವ ಟಿ.ಕೆ. ಲೇ ಔಟ್ ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ.
ವಿದ್ಯಾರ್ಥಿಗಳೇ ಸ್ವಯಂ ಕಂಪ್ಯೂಟರ್ ನಿರ್ವಹಿಸುತ್ತಿರುವುದು
ಇಲ್ಲಿರುವ ಶಿಕ್ಷಕರ ಆಸ್ಥೆ, ಎಸ್.ಡಿ.ಎಂ.ಸಿಯವರ ಸಹಕಾರ, ಪರಸ್ಪರ ನಂಬಿಕೆಗಳೇ ಈ ಶಾಲೆಯ ಸಿ.ಎ.ಎಲ್.ಸಿ ಕಲಿಕಾಕೇಂದ್ರ ನಿರಂತರವಾಗಿ ಮುಂದುವರಿಯಲು ಸಾಧ್ಯವಾಗಿದೆ. ಪ್ರಸ್ತುತ  ಶಾಲೆಯ ಮುಖ್ಯಶಿಕ್ಷಕಿಯಾಗಿ ಕರ್ತವ್ಯನಿರ್ವಹಿಸುತ್ತಿರುವ ಚಂದ್ರಮ್ಮ, ಕಂಪ್ಯೂಟರ್ ಕಲಿಕಾಕೇಂದ್ರದ  ಉಸ್ತುವಾರಿ ಶಿಕ್ಷಕಿ ಸುಬ್ಬುಲಕ್ಷ್ಮಿ ಅವರ ಅವಿರತ ಪರಿಶ್ರಮದ ಫಲವೇ ಸಿ.ಎ.ಎಲ್.ಸಿ ಕೇಂದ್ರ ಜೀವಂತವಾಗಿರುವುದಕ್ಕೆ ಮುಖ್ಯ ಕಾರಣ.

ವಿದ್ಯಾರ್ಥಿಗೆ ಅನುಕೂಲಿಸುತ್ತಿರುವ ಶಿಕ್ಷಕರು

ಅಂದಹಾಗೆ ಈ ಶಾಲೆ ಆರಂಭಗೊಂಡಿದ್ದು 2010-11 ರಲ್ಲಿ. ಪ್ರತಿ ಸಿ.ಎ.ಎಲ್.ಸಿ ಶಾಲೆಗೆ ನೀಡುವಂತೆ 3ಕೆ.ವಿ.ಎ ಯುಪಿಎಸ್ , 5 ಕಂಪ್ಯೂಟರ್ ಗಳನ್ನು ಇಲ್ಲಿಗೂ ನೀಡಲಾಗಿದೆ. ಇದರ ಜೊತೆಗೆ 10 ಸ್ಪೀಕರ್ ಗಳನ್ನು ಇವರ ದಾನಿಗಳ ನೆರವಿನಿಂದ ಪಡೆದಿದ್ದಾರೆ. ಡಿ.ಎಸ್.ಇ.ಆರ್.ಟಿಯಿಂದ ನೀಡಿರುವ ಡಿವಿಡಿಗಳನ್ನು ಮಕ್ಕಳ ಕಲಿಕೆಗೆ ಅನುಕೂಲಿಸುತ್ತಾ ಪರಿಣಾಮಕಾರಿ ಕಲಿಕೆ ಉಂಟುಮಾಡುವಲ್ಲಿ ಶ್ರಮಿಸುತ್ತಿದ್ದಾರೆ.
ವಿದ್ಯಾರ್ಥಿಗೆ ಅನುಕೂಲಿಸುತ್ತಿರುವ ಶಿಕ್ಷಕರು
ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ಶಿಕ್ಷಣಕ್ಕೆ ತಾಂತ್ರಿಕತೆಯ ಒತ್ತು ಕೊಟ್ಟು ರೇಡಿಯೊ, ಶಿಕ್ಷಣ ಸಂವಾದ, ಶ್ರವಣ ಮತ್ತು ದೃಶ್ಯ ಮಾಧ್ಯಮ - ಟಿ.ವಿ., ಗಣಕ ಯಂತ್ರ, ಉಪಗ್ರಹ ಆಧಾರಿತ ದೂರ ಸಂಪರ್ಕ ತರಬೇತಿ ಕಾರ್ಯಕ್ರಮ ಇತ್ಯಾದಿಗಳ ಮುಖಾಂತರ ಶಿಕ್ಷಣ ನೀಡಿದಲ್ಲಿ ಶಿಕ್ಷಣ ಇನ್ನೂ ಪರಿಣಾಮಕಾರಿಯಾಗಬಲ್ಲದು ಎಂಬ ಆಲೋಚನೆಯೇ ಸಿ.ಎ.ಎಲ್.ಸಿ ಹುಟ್ಟಿಗೆ ಮೂಲ. ಹೀಗೆ ರಾಜ್ಯದಲ್ಲಿ 2001-02 ರಲ್ಲಿ ಸಿ.ಎ.ಎಲ್.ಸಿ ಆರಂಭಗೊಂಡಿತು. ಅಂದು ಇದ್ದ 22567 ಶಾಲೆಗಳ ಪೈಕಿ 4301 ಹೆಚ್.ಪಿ.ಎಸ್ ಗಳಲ್ಲಿ ಸಿ.ಎ.ಎಲ್.ಸಿ ಕೇಂದ್ರ ಸ್ಥಾಪಿಸಲಾಯಿತು. ಇದುವರೆವಿಗೂ ನಮ್ಮ ಜಿಲ್ಲೆಯಲ್ಲಿ 169 ಸಿ.ಎ.ಎಲ್.ಸಿ ಕೇಂದ್ರಗಳು ಸ್ಥಾಪನೆಗೊಂಡಿವೆ. ಇವುಗಳಲ್ಲಿ ಹಲವು ಕೇಂದ್ರಗಳು ಸ್ಥಾವರವಾಗಿ ಮತ್ತೆ ಹಲವು ಜಂಗಮವಾಗಿಯೂ ಕಾರ್ಯನಿರ್ವಹಿಸುತ್ತಿವೆ.



ಜಂಗಮರೂಪದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿ.ಎ.ಎಲ್.ಸಿ ಶಾಲೆಗಳ ಚಿತ್ರಣವನ್ನು ನಮ್ಮ ಬ್ಲಾಗ್ ನಲ್ಲಿ ನಿಮ್ಮಮುಂದಿಡಲಿದ್ದೇವೆ. ಇದರ ಮೊದಲ ಹೆಜ್ಜೆಯೇ ನೀವಿಗ ಕಾಣುತ್ತಿರುವ ಮೈಸೂರು ದಕ್ಷಿಣ ವಲಯದ ಟಿ.ಕೆ.ಕಾಲೋನಿಯಲ್ಲಿರುವ ಹೆಚ್.ಪಿ.ಎಸ್ ಶಾಲೆ. 

Saturday 17 October 2015

ಸ್ವಾತಂತ್ರ್ಯೋತ್ಸವ

ಪ್ರಾಚಾರ್ಯರನ್ನು ಬರಮಾಡಿಕೊಳ್ಳುತ್ತಿರುವ ಡಿಇಡಿ ವಿದ್ಯಾರ್ಥಿಗಳು


ಧ್ವಜಾರೋಹಣಕ್ಕೆ ಸಿದ್ಧತೆ

ಶಿಸ್ತಿನ ಸಿಪಾಯಿಗಳು

ಧ್ವಜಸ್ತಂಭ


ಕೈಬೀಸಿ ಕರೆವ ಕರಕುಶಲ ಕಲೆ

ಬಳಸಿದ ಕಾಗದ. ಬಿಸಾಡಿದ ಕಾಗದ. ಒಡೆದ ಗಾಜು. ಒಡೆದ ಬಳೆ. ಒರೆದ ಪೆನ್ಸಿಲ್. ಹರಿದ ಬಟ್ಟೆ....ಹೀಗೆ ಶಾಲಾ ಅಂಗಳದಲ್ಲಿ ಕಸವೆಂದು ಎಸೆದ ವಸ್ತುಗಳು ರಸದ ರೂಪ ತಳೆದಿವೆ. ತ್ಯಾಜ್ಯದ ಜೊತೆ ವ್ಯಾಜ್ಯ ಮಾಡಿ ಕಲ್ಪನೆಗೆ ಜೀವ ತುಂಬಿದವರು ಈ ಶಾಲೆಯ ಶಿಕ್ಷಕರು.
ಬಳಸಿದ ಕಾಗದ ಬಳಸಿ ಅರಳಿದ ಕಲೆ
ಇದು ಹೆಚ್.ಡಿ.ಕೋಟೆ ತಾಲೂಕಿನ ಜೆಬಿ ಸರಗೂರು ಪ್ರೌಢಶಾಲೆಯ ಕರಕುಶಲ ಕಲೆಯ ಒಂದು ಚಿತ್ರಣ. ಇಲ್ಲಿನ ವಿದ್ಯಾರ್ಥಿಗಳಿಗೆ ಕಸದಿಂದ ರಸತೆಗೆಯುವ ಈ  ಕುಶಲ ಕಲೆ ಕಂಡರೆ ಇನ್ನಿಲ್ಲದ ಪ್ರೀತಿ.

ಬಳಸಿದ ಕಾಗದ ಬಳಸಿ ಅರಳಿದ ಕಲೆ
ಕಸವೇ ಜನನ....ರಸವೇ ಅನುರಣನ...

ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ....

ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ

ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ

ಬಾಪೂಜಿ-ಶಾಸ್ತ್ರೀಜಿ ನೆನಪು


"ಬಾಪೂಜಿ ನಿನ್ನ ಕೈಯೊಳಗಿದ್ದ ಕೋಲು
ಕೋಲ್ಮಿಂಚಿಗೂ ತರಿಸಬಹುದಲ್ಲವೇ ಸೋಲು"
ಈ ಸಾಲುಗಳು ಮತ್ತು





"ಮೇಲೊಂದು ಗರುಡ ಹಾರುತಿಹುದು
ಕೆಳಗದರ ನೆರಳು ಓಡುತಿಹುದು
ಅದಕೋ ಅದರಿಚ್ಛೆ ಹಾದಿ
ಇದಕು ಹರಿದತ್ತ ಬೀದಿ"
ಈ ಸಾಲುಗಳು 
ಇಂದು ಅನುರಣಿಸಿದವು.

ಕಾರ್ಯಕ್ರಮದ ಉದ್ಘಾಟನೆ ಮಾನ್ಯ ಪ್ರಾಂಶುಪಾಲರಿಂದ

ಬಾಪೂಜಿ ಬಗ್ಗೆ ಬಿಚ್ಚಿಟ್ಟ ಮಾತು ಪ್ರಾಂಶುಪಾಲರಾದ ಶ್ರೀ ಆರ್. ರಘುನಂದನ್ ರವರಿಂದ 

ಕಾರ್ಯಕ್ರಮಕ್ಕೂ ಮುಂಚೆ ಕೃತಿಲೇಸು ಕಾರ್ಯ "ಸ್ವಚ್ಛಭಾರತ್"

ಕಾರ್ಯಕ್ರಮಕ್ಕೂ ಮುಂಚೆ ಕೃತಿಲೇಸು ಕಾರ್ಯ "ಸ್ವಚ್ಛಭಾರತ್"
ಇಂದು ಮತ್ತೊಂದು ಅವಿಸ್ಮರಣೀಯ ಕಾರ್ಯಕ್ರಮಕ್ಕೆ ನೃಪತುಂಗ ಸಭಾಂಗಣ ವೇದಿಕೆ ಆಯ್ತು. ನಮ್ಮ ಸಂಸ್ಥೆಯ ಲಿಪಿಕ ನೌಕರರಾದ ಶ್ರೀ ಸೋಮಯ್ಯ ರವರ ಸುಪುತ್ರ ಆದೀಶ್ ಗೆ ಗೌರವಿಸಲಾಯಿತು. ಕಾರಣ ಈತ ವಿಶೇಷ ಚೇತನ. ಆದರೆ ಹೆತ್ತವರಿಗೆ, ನಮ್ಮ ನಾಡಿಗೆ ವಿಶಿಷ್ಟ ಪ್ರತಿಭೆ. ಮಾತು ಮೌನವಾದರೂ, ಶಬ್ದದೊಳಗಿನ ಶಬ್ದ ಮಾತ್ರ ಕೇಳುವ ಪೋರ ಈ ಆದೀಶ್. ಅಂತರರಾಷ್ಟ್ರೀಯ ಮಟ್ಟದ ಚೆಸ್ ಆಟಗಾರ. ಹಲವು ರಾಷ್ಟ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ, ಈಜುಸ್ಪರ್ಧೆಯಲ್ಲೂ ತಮ್ಮನ್ನು ಗುರುತಿಸಿಕೊಂಡಿರುವ ಆದೀಶ್ ನಮ್ಮ ಡಯಟ್ ಸಿಬ್ಬಂದಿಯವರ ಸುಪುತ್ರ ಎಂಬುದು ಹೆಮ್ಮೆಯ ಸಂಗತಿ. ಈತನಿಗೆ ಡಯಟ್ ವತಿಯಿಂದ ಗೌರವಿಸಲಾಯಿತು. ಇನ್ನೂ ಸಾಧನೆಯ ಶಿಖರವೇರಲಿ ಎಂದು ಎಲ್ಲರೂ ಹರಸಿದರು.

ಅಂತರರಾಷ್ಟ್ರೀಯ ಚೆಸ್ ಆಟಗಾರ ಆದೀಶ್ ಗೆ ಪ್ರಾಂಶುಪಾಲರಿಂದ ಗೌರವ

SOME - ಆಲೋಚನೆಯ ಒಂದು ನೋಟ

ಹೆಚ್.ಡಿ.ಕೋಟೆ ತಾಲೂಕಿನ ಅಣ್ಣೂರು ಕ್ಲಸ್ಟರ್. ಅಂದು 22-08-2015. ಕ್ಲಸ್ಟರ್ ನ ನಂಜನಾಯಕನಹಳ್ಳಿಯಲ್ಲಿ SOME-ಆಲೋಚನೆಗಳ ಸಭೆ ನಡೆದಿತ್ತು. ಕ್ಲಿಷ್ಟಕರ ಅಂಶಗಳನ್ನು ಈಗಾಗಲೇ ಪಟ್ಟಿಮಾಡಿಕೊಂಡಿದ್ದ ಶಿಕ್ಷಕರು ವಿದ್ಯಾರ್ಥಿಗಳ ಮುಂದೆ ಪಾಠ ಪ್ರಸ್ತುತಪಡಿಸಿದರು. 

ನಂಜನಾಯಕನಹಳ್ಳಿ ಕ್ಲಸ್ಟರ್ ಸಮಾಲೋಚನಾ ಸಭೆ

ನಂಜನಾಯಕನಹಳ್ಳಿ ಕ್ಲಸ್ಟರ್ ಸಮಾಲೋಚನಾ ಸಭೆ

ಪುಸ್ತಕದಿಂದ ಮಸ್ತಕಕ್ಕೆ...

 ಮೈಸೂರು ಡಯಟ್ ಪರಂಪರೆಯ ಪರಿಯ ಪ್ರತಿಬಿಂಬ. ಹೊಸ ಪರಂಪರೆಯ ಹುಟ್ಟು ಆಗಿಂದಾಗ್ಗೆ ನಡೆಯುತ್ತಿರುತ್ತದೆ. ಈ ಹಿನ್ನೆಲೆಯಲ್ಲಿಯೇ ಪುಸ್ತಕಗಳ ಪರಿಚಯ ಕಾರ್ಯಾಗಾರ ನಮ್ಮ ಡಯಟ್ ನಲ್ಲಿ ನಡೆಯಿತು. ಮೊದಲಿಗೆ ಶ್ರೀ ಸ್ವಾಮಿ, ಹಿರಿಯ ಉಪನ್ಯಾಸಕರು ರವರು "ತೋತೋಚಾನ್ " ಪುಸ್ತಕವನ್ನು ಪರಿಚಯಿಸಿದರು. ಇದೊಂದು ಅವಿಸ್ಮರಣೀಯ ಅನುಭವ ತಂದುಕೊಟ್ಟಿತು.


ಹಾಗೆಯೇ 24-05-2015 ರಂದು "ರಂಗಣ್ಣನ ಕನಸಿನ ದಿನಗಳು" ಪುಸ್ತಕ ಪರಿಚಯ ಮಾಡಿಕೊಡಲಾಯಿತು. ಉಪನ್ಯಾಸಕರಾದ ಶ್ರೀ ಪ್ರಶಾಂತ್.ಎಂ.ಸಿ ರವರು ರಂಗಣ್ಣನ ಕನಸಿನ ದಿನಗಳನ್ನು ವಾಸ್ತವಕ್ಕೆ ತೆರೆದಿಟ್ಟರು.  ಅಂದು ರಂಗಣ್ಣನ ಕನಸಿನ ದಿನಗಳಲ್ಲಿನ ಪಾತ್ರಗಳು ನಮ್ಮೊಳಗಿನ ಹಲವು ವ್ಯಕ್ತಿ ಚಿತ್ರಗಳನ್ನು ಕಣ್ ಮುಂದೆ ತಂದವು.
ರೇಖೆಗಳಲ್ಲಿ ರಂಗಣ್ಣ...

ಪುಸ್ತಕ ಪರಿಚಯಿಸುತ್ತಿರುವ ಉಪನ್ಯಾಸಕರಾದ ಶ್ರೀ ಪ್ರಶಾಂತ್. ಎಂ.ಸಿ

ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪುಸ್ತಕಪ್ರೇಮಿಗಳು

ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪುಸ್ತಕಪ್ರೇಮಿಗಳು

ಪ್ರಶ್ನಿಸುತ್ತಿರುವ ಪುಸ್ತಕಪ್ರೇಮಿ ವಿದ್ಯಾರ್ಥಿಗಳು

ಟೆಸ್ ಇಂಡಿಯಾದ ಮ್ಯಾಸಿವ್ ಆನ್ ಲೈನ್ ಓಪನ್ ಕೋರ್ಸ್ ಕಾರ್ಯಕ್ರಮ

 ಟೆಸ್ ಇಂಡಿಯಾದವರು ನಡೆಸಿದ ಮ್ಯಾಸಿವ್ ಆನ್ ಲೈನ್ ಓಪನ್ ಕೋರ್ಸ್ ನ್ನು ರಾಜ್ಯದ ಆಯ್ದ ಡಯಟ್ ಮತ್ತು ಸಿಟಿಇ ಉಪನ್ಯಾಸಕರಿಗೆ ನೀಡಲಾಯಿತು. ಕೋರ್ಸ್ ಪೂರ್ಣಗೊಳಿಸಿದ ಉಪನ್ಯಾಸಕರಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಡಿ.ಎಸ್.ಇ.ಆರ್.ಟಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಿಟಿಇ ಉಪನ್ಯಾಸಕರಾದ ಶ್ರೀ ಅಮಿತ್ ರವರು ಮತ್ತು ನಮ್ಮ ಡಯಟ್ ನ ಪ್ರಶಾಂತ್ ರವರು ಪ್ರಮಾಣ ಪತ್ರ ಪಡೆದರು.


ಮೂಕ್ ಪ್ರಮಾಣಪತ್ರ ವಿತರಣೆ ಸಮಾರಂಭ

ಮೂಕ್ ಕಾರ್ಯಕ್ರಮ
















Thursday 13 August 2015

ಮನಸು ಮನಸುಗಳ ಬೆಸುಗೆ - ಮಕ್ಕಳ ಮನೋಧರ್ಮದೆಡೆ ನಮ್ಮಯ ನಡಿಗೆ

ದಿನಾಂಕ:12-08-2015 ರಂದು ಮಾನ್ಯ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ ರವರು ಸಂಸ್ಥೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮೈಸೂರು ಶೈಕ್ಷಣಿಕ ವಿಭಾಗದ ಜಂಟಿ ನಿರ್ದೇಶಕರಾದ ಶ್ರೀ ಬಿ.ಕೆ.ಬಸವರಾಜುರವರು, ಡಯಟ್ ಪ್ರಾಂಶುಪಾಲರಾದ ಶ್ರೀ ರಘುನಂದನ್ ರವರು ಮತ್ತು ಉಪನಿರ್ದೇಶಕರು(ಆಡಳಿತ)ರವರಾದ ಶ್ರೀ ಬಸಪ್ಪನವರು ಶ್ರೀಯುತರನ್ನು ಸ್ವಾಗತಿಸಿದರು.

ಡಯಟ್ ಗೆ ಆಗಮಿಸುತ್ತಿರುವ ಮಾನ್ಯ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ ರವರು

ಮಾನ್ಯ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ ರವರಿಗೆ ಡಯಟ್ ಪ್ರಾಂಶುಪಾಲರು, ಸಿಟಿಇ ಪ್ರಾಂಶುಪಾಲರು ಮತ್ತು ಉಪನಿರ್ದೇಶಕರು(ಆಡಳಿತ) ರವರಿಂದ ಸ್ವಾಗತ

ಡಯಟ್ ನ ಹಿರಿಯ ಉಪನ್ಯಾಸಕರು, ಉಪನ್ಯಾಸಕರೊಡನೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡ ಮಾನ್ಯ ಸಚಿವರು ಪ್ರಸ್ತುತ ಶಿಕ್ಷಣ ವ್ಯವಸ್ಥೆ ಸಾಗಬೇಕಾದ ಹಾದಿ, ಹಾದಿಯಲ್ಲಿ ಸಾಗುವ ಮಂದಿಯ ಮನಸ್ಥಿತಿ, ಎದುರಾಗುವ ಸವಾಲುಗಳು ಹೇಗಿರುತ್ತವೆ ? ಅವುಗಳನ್ನು ಹೇಗೆ ಎದುರಿಸಬೇಕು ? ಇತ್ಯಾದಿ ಸಂಗತಿಗಳ ಸಾಂಗತ್ಯದಲ್ಲಿ ಸಂವಾದ ನಡೆಸಿದರು.

ಸಂವಾದಕ್ಕೆ ಸ್ವಾಗತಿಸುತ್ತಿರುವ ಡಯಟ್ ಪ್ರಾಂಶುಪಾಲರು


ಸಚಿವರಿಂದ ಹೃದಯ ಸಂವಾದ

ಹೃದಯ ಸಂವಾದದ ಬಳಿಕ  ಗಿರಿಜನ ಹಾಡಿ, ಗ್ರಾಮೀಣ ಭಾಗದ ಹಲವು ಪ್ರದೇಶಗಳಿಂದ ಬಂದು ಕೆ.ಜಿ.ಬಿ.ವಿಗೆ ದಾಖಲಾಗಿರುವ ಮಕ್ಕಳೊಂದಿಗೆ ಮಕ್ಕಳಾದರು.



Friday 27 March 2015

ಹೀಗೊಂದು "ಹೃದಯ ಸಂವಾದ"

ವೇದವೇ ಹಿರಿದೆಂದು ವಾದವನು ಮಾಡುವರು
ವೇದದೊಳೇನು ಹಿರಿದಿಹುದು ಅನುಭವಿಯ
ವೇದವೇ ವೇದ ಸರ್ವಜ್ಞ ||
ಸಭೆ-ಶೋಭೆ

ಸಭೆಗೆ ಶೋಭೆಯ ಮಾತು ಮಾನ್ಯ ಪ್ರಾಚರ್ಯರಾದ ಬಿ.ಕೆ.ಬಸವರಾಜರವರಿಂದ

"ಅನುಭವ" ಪದಕ್ಕೆ ಎಲ್ಲ ಬಲ್ಲವರು ಹೇಳಿದ ಮಾತದು. ಈ ಮಾತಿನಂತೆ "ಅನುಭವ" ಅನಾವರಣಗೊಂಡಿದ್ದು ದಿ:03-2015 ರಿಂದ 4 ದಿನ ಮತ್ತು 03-2015 ರಿಂದ 4 ದಿನಗಳ ಕಾಲ. ಬರಿಯ ಶಿಕ್ಷಕರಿಗಷ್ಟೇ ತರಬೇತಿಗಳನ್ನು ಆಗಿಂದಾಗ್ಗೆ ನೀಡುವ ಅನುಪಾಲನಾಧಿಕಾರಿಗಳು, ತಾವೂ ತರಬೇತಿ ಪಡೆಯುವುದು ಅವಶ್ಯ ಎಂಬುದು ಈ ತರಬೇತಿಯ ಆಶಯ. ಆದರೆ ಈ ಆಶಯ ಈಡೇರಿದ್ದು ತರಬೇತಿಗಾಗಿ ತರಬೇತಿ ಎಂಬಂತಲ್ಲ. ಇದು "ಹೃದಯ ಸಂವಾದ"ದ ಮೂಲಕ.


ಎರಡು ತಂಡಗಳಲ್ಲಿ ಈ ಹೃದಯ ಸಂವಾದ ನಡೆಯಿತು. ಹಲವು ಹೃದಯಗಳ ಹೃದ್ಯಂಗಮವಾದ ಪಾಲ್ಗೊಳ್ಳುವಿಕೆ ತರಬೇತಿಯ ತಿರುಳಿನ ರುಚಿ ಹೆಚ್ಚಿಸಿತು. ಮೊದಲ ದಿನ 'ಎಲೆಗಳು ನೂರಾರು ಭಾವದ ಎಳೆಗಳು ನೂರಾರು...' ಹಾಡಿಗೆ ರೂಪಕ ಎಂಬಂತೆ, ಮಾನ್ಯ ಪ್ರಾಚಾರ್ಯರಾದ ಶ್ರೀ ಬಿ.ಕೆ.ಬಸವರಾಜರವರು ಸೇರಿದಂತೆ ತರಬೇತಿಯ ಎಲ್ಲ ಭಾಗೀದಾರರೂ ಹಾಡಿನ ಸಾಲಿಗೆ ಅನ್ವರ್ಥವಾದರು.
ಎಲೆಗಳು ನೂರಾರು ಹಾಡಿಗೆ ರೂಪುಗೊಂಡ ಚಿತ್ರಪಟ

ಶೈಕ್ಷಣಿಕ ಅನುಪಾಲನೆ ಎಲ್ಲರೂ ತೊಡಗಿಸಿಕೊಳ್ಳಬೇಕಾದ ಚಟುವಟಿಕೆ. ಸಂವಾದಗಳ ಮೂಲಕ ಭಾಗೀದಾರರ ಒಳಗೊಳ್ಳುವಿಕೆ. ತಮ್ಮ ತಮ್ಮ ಪರಿಭಾಷೆಯ ಪಥ ಬದಲಿಸಿ, ಎನ್.ಸಿ.ಎಫ್-ಕೆ.ಸಿ.ಎಫ್ ತಿರುಳನ್ನು ಕುಸುರಾಗಿ ಬಿಡಿಸಿಟ್ಟು ತಿರುಗೊಮ್ಮೆ ತಾವಾಗಿಯೇ ಧರಿಸಲು ಈ ತರಬೇತಿ ಅನುಭವ ಚೆಲ್ಲಿತು.
ಚಟುವಟಿಕೆಯಲ್ಲಿ ನಿರತರಾಗಿರುವ ಶಿಬಿರಾರ್ಥಿಗಳು

ಚಟುವಟಿಕೆಯಲ್ಲಿ ನಿರತರಾಗಿರುವ ಶಿಬಿರಾರ್ಥಿಗಳು

ಚಿಂತನಶೀಲ ಆಚರಣೆಗಳು, ಸಂವಾದ-ಸಂವಹನದ ಅನುಸಂಧಾನ, ಸಮಸ್ಯೆ ನಿರ್ವಹಣೆ ಕೌಶಲ, ತಾಂತ್ರಿಕ ಪರಿಣತಿ, ಬದಲಾದ ಶೈಕ್ಷಣಿಕ ಪರಿಕಲ್ಪನೆಗಳ ಸ್ಪಷ್ಟ ಅರಿವಿನೊಂದಿಗೆ ಎಲ್ಲ ಸುಗಮಕಾರರನ್ನು ಬೀಳ್ಕೊಡುವುದು ಈ ತರಬೇತಿಯ ಸದುದ್ದೇಶವಾಗಿತ್ತು. ಅಂತೆಯೇ ತರಬೇತಿಯ ಭಾಗವಾಗಿ ಬಂದ ನಮ್ಮ ಜಿಲ್ಲೆಯ ಮಾನ್ಯ ಉಪನಿರ್ದೇಶಕರು(ಆಡಳಿತ)ರವರಾದ ಬಸಪ್ಪನವರು ತಾವೊಂದು ನಾವಿನ್ಯಯುತ ಚಟುವಟಿಕೆ ನಡೆಸಿ ಭಾಗೀದಾರರ ಲವಲವಿಕೆ ಹೆಚ್ಚಿಸಿದರು.
ಶ್ರೀ ಬಸಪ್ಪರವರು, ಉಪನಿರ್ದೇಶಕರು(ಆಡಳಿತ), ರವರಿಂದ ಚಟುವಟಿಕೆ ಕಾರ್ಯ


ಸೌಜನ್ಯಯುತ ನಡವಳಿಕೆ, ಒಪ್ಪಿಕೊಳ್ಳುವಿಕೆ,ಧೈಹಿಕ ಭಾಷೆ, ಸೂಕ್ತ ಪದ ಬಳಕೆ, ಪ್ರಜಾಸತ್ತಾತ್ಮಕತೆ ಮತ್ತು ಧನಿಯ ಏರಿಳಿತದಿಂದ ಕೂಡಿತ ಮಾತು ಉತ್ತಮ ಸಂವಹನವಾಗಬಲ್ಲುದು ಎಂಬ ಅಂಶ ಅರಿವಿಗೆ ಬಂದಿತು.
ಗೋಧೂಳಿ ಸಮಯದಲ್ಲಿ ನಿತ್ಯ ಯೋಗ-ಪ್ರಾಣಾಯಾಮ ತರಗತಿ ನಡೆದವು. ಯೋಗಾಯೋಗದ ಲಾಭವನ್ನು ಶಿಬಿರಾರ್ಥಿಗಳು ಅನುಭವಕ್ಕೆ ತಂದುಕೊಂಡರು.
ಸಂವಹನ ತರಗತಿ ನಿರ್ವಹಣೆ ಸಂದರ್ಭ 

ಎರಡೂ ತಂಡಗಳ ಹೃದಯ ಸಂವಾದದ ಕೊನೆಯ ದಿನ ಅದು ಮೊದಲ ದಿನದ ಅನುಭವ. ಭಾವಬಿಂದು ಎಲ್ಲರೆದೆಯಲ್ಲಿ ತುಂಬಿ ಬಂದಿತ್ತು. ಎಲ್ಲರು ಮಾತಿಗೆ ಮಾತು ಕೊಟ್ಟರು. ತಮ್ಮ ತಮ್ಮ ಕಾರ್ಯಕ್ಷೇತ್ರದ ಶ್ರೀಮಂತಿಕೆ ಹೆಚ್ಚಿಸುವ ಸಂಕಲ್ಪತೊಟ್ಟರು.
ಬಿದಿರಮ್ಮ ತಾಯಿ ಕೇಳೆ...ಹಾಡು ಹಾಡುತ್ತಿರುವ ಅಧಿಕಾರಿಗಳು..

ತರಬೇತಿ ತಂಡದ ಒಂದು ಕ್ಲೋಸಪ್...

ಪರಸ್ಪರ ಸಂಕಲ್ಪ ಗಟ್ಟಿಗೊಳಿಸುವ ಪ್ರಕ್ರಿಯೆ

ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ ಕರೆಯುವೆ ಕೈ ಬೀಸಿ....ಬತ್ತಿದೆದೆಯಲ್ಲಿ ಬೆಳೆಯಿರಿ ಹಸಿರನು ಪ್ರೀತಿಯ ಮಳೆಸುರಿಸಿ....ಎಂಬ ಹಾಡು ಅರ್ಥಪೂರ್ಣವಾಯಿತು. ಹೃದಯ ಸಂವಾದಕೆ ನಾಂದಿ ಹಾಡಿತು.
- Prashanth M C
Lecturer, Diet, Mysore

NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...