My Blog List

Thursday 20 June 2019

ಟಿಇ ಪ್ಲಾನ್ ಮತ್ತು ತರಬೇತಿಗಳು ಹಾಗು ರಾಷ್ಟ್ರೀಯಶಿಕ್ಷಣ ನೀತಿ-2019-20ರ ಕುರಿತು ಸಭೆ


ಈ ದಿನ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ 2019-20ನೇ ಸಾಲಿನ ಟಿಇ ಪ್ಲಾನ್ ಮತ್ತು ತರಬೇತಿಗಳ ಆಯೋಜನೆ ಹಾಗು ಡಯಟ್ ಕಾರ್ಯಚಟುವಟಿಕೆಗಳ ಕುರಿತು ಸಭೆ ನಡೆಯಿತು. ಸಭೆಯಲ್ಲಿ ವಿಸ್ತೃತವಾಗಿ ಡಯಟ್ ಕಾರ್ಯಚಟುವಟಿಕೆಗಲ ಕುರಿತು ಚರ್ಚೆ ನಡೆಯಿತು.

ಟಿಇ ಪ್ಲಾನ್ ನಡಿಯಲ್ಲಿ ನಡೆಯಬೇಕಾದ ಸಂಶೋಧನಾ ಚಟುವಟಿಕೆಗಳು, ಡಯಟ್ ಸಂಚಿಕೆಗಳು, ವೆಬ್ ಸೈಟ್, ಡಯಟ್ ಲ್ಯಾಬ್ ಅಪ್‍ಗ್ರೇಡ್‍ ಕೆಲಸ,  ತರಬೇತಿಗಳು-ವರದಿಗಳು-ಪೂರ್ವ ಚಟುವಟಿಕೆಗಳು-ತರಬೇತಿ ಆಯೋಜನೆ ಸ್ವರೂಪ-ಫಲಶೃತಿಗಳು, ಇತ್ಯಾದಿ ವಿಷಯಗಳನನ್ನು ನೋಡಲ್ ಅಧಿಕಾರಿಗಳಾದ ಶ್ರೀನಿವಾಸ್ ರವರು ಪ್ರಸ್ತುಪಡಿಸಿದರು. ಸಭೆಯಲ್ಲಿದ್ದ ಹಿರಿಯ ಉಪನ್ಯಾಸಕರು, ಉಪನ್ಯಾಸಕರುಗಳು ಚರ್ಚೆಯಲ್ಲಿ ಭಾಗವಹಿಸಿದ್ದರು.

ರಾಷ್ಟ್ರೀಯಶಿಕ್ಷಣ ನೀತಿ-2019-20ರ ಕುರಿತು ಸಹ ಟಿಟಿಐನ ಪ್ರಾಂಶುಪಾಲರಾದ ಶ್ರೀ ನಂಜುಂಡಸ್ವಾಮಿ ಮತ್ತು ಶ್ರೀ ಶಂಕರ್ ರವರು ತಮ್ಮ ವಿಚಾರ ಪ್ರಸ್ತುತಪಡಿಸಿದರು. ಈ ಬಗ್ಗೆ ಮತ್ತೊಮ್ಮೆ ಕೂಲಂಕಷವಾಗಿ ಚರ್ಚೆ ನಡೆಸುವ  ಇಂಗಿತ ವ್ಯಕ್ತಪಡಿಸಿದರು.





Thursday 13 June 2019

ಮೌಲ್ಯಮಾಪನ ಕೇಂದ್ರದ ಕಂಪ್ಯೂಟರ್ ಲ್ಯಾಬ್

ಮತ್ತೊಂದು ಕಂಪು ಟ್ಯೂಟರ್ ಲ್ಯಾಬ್  ಡಯಟ್ ಮೈಸೂರಿಗೆ ಲಭಿಸಿದೆ. ಪ್ರಸಕ್ತ ವರ್ಷದಲ್ಲಿ ಹೊಸದಾಗಿ ಇಲಾಖೆ ಸೇರುತ್ತಿರುವ ಪ್ರಾಥಮಿಕ ಪದವೀಧರ ಶಿಕ್ಷಕರ ಪರೀಕ್ಷಾ ಮೌಲ್ಯಮಾಪನದ ಉದ್ದೇಶಕ್ಕಾಗಿಯೇ ಡಿ.ಎಸ್.ಇ.ಆರ್.ಟಿ ಮತ್ತು ಸಿ.ಎ.ಸಿ ಕೇಂದ್ರದ ವತಿಯಿಂದ ನೀಡಲಾಗಿರುವ ಕಂಪ್ಯೂಟರ್ ಗಳನ್ನು ಈ ದಿನ ಹೊಸ ಲ್ಯಾಬ್ ನಲ್ಲಿ ಅಳವಡಿಸಲಾಯಿತು.

ಈ ಸಂದರ್ಭದಲ್ಲಿ ಮಾನ್ ಪ್ರಾಂಶುಪಾಲರಾದ ಕೆ.ಮಹದೇವಪ್ಪನವರು, ಹಿರಿಯ ಉಪನ್ಯಾಸಕರುಗಳಾದ ಶ್ರೀ ಅಮಿತ್.ಡಿ, ಶ್ರೀಮತಿ ವಿಜಯಶ್ರೀ ರವರು ಮತ್ತು ಉಪನ್ಯಾಸಕರುಗಳಾದ ಶ್ರೀ ಪ್ರಶಾಂತ್.ಎಂ.ಸಿ, ಶ್ರೀಮತಿ ಪುಷ್ಪಲತಾ, ಶ್ರೀಮತಿ ಭಾಗ್ಯ ರವರು, ಶ್ರೀಮತಿ ಮಂಜುಳಾರವರು ಉಪಸ್ಥಿತರಿದ್ದರು.

Friday 7 June 2019

ಥರಥರ ಭೀತಿ ಬಡಿದೋಡಿಸುವ ತರಬೇತಿ


ಐಟಿ@ಸ್ಕೂಲ್. ಮಹತ್ವಾಕಾಂಕ್ಷಿ ಕಾರ್ಯಕ್ರಮ. ರಾಜ್ಯದ ಎಲ್ಲಾ ಸರ್ಕಾರಿ ಪ್ರೌಢಶಾಲೆಗಳೂ ಈ ಯೋಜನೆಗೆ ಒಳಪಡುತ್ತಿವೆ. ಅಂತೆಯೇ ನಮ್ಮ ಜಿಲ್ಲೆಯ 232 ಶಾಲೆಗಳೂ ಸಹ  ಈ ಯೋಜನೆ ವ್ಯಾಪ್ತಿಗೆ ಸೇರುತ್ತಿರುವುದು ಖುಷಿ ವಿಷಯ.


ಈ ಸಾಲಿನಲ್ಲಿ ಟ್ಯಾಲ್ಪ್ ಗೆ ಆಯ್ಕೆಯಾದ ಎಲ್ಲಾ ಶಾಲೆಗಳ ಆರು ವಿಷಯ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಅದರ ಮೊದಲ ಭಾಗವಾಗಿ 2016-17ನೇ ಸಾಲಿನಲ್ಲಿ ಆಯ್ಕೆಯಾದ 43 ಶಾಲೆಗಳ ಶಿಕ್ಷಕರಿಗೆ ಮೊದಲ ಇಂಡಕ್ಷನ್ ತರಬೇತಿಯನ್ನು ದಿನಾಂಕ:03-06-2019 ರಂದು ಆರಂಭಿಸಲಾಯಿತು.

ತರಬೇತಿಗೆ ಶುಭಕೋರಿದ ಮಾನ್ಯ ಪ್ರಾಂಶುಪಾಲರಾದ ಶ್ರೀ ಮಹದೇವಪ್ಪನವರು ತಂತ್ರಜ್ಞಾನದ ಮಹತ್ವದ ಕುರಿತು ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕಿಯವರಾದ ಶ್ರೀಮತಿ ಭಾಗ್ಯಲಕ್ಷ್ಮಿಯವರು ಸವಿವರವಾಗಿ ತರಬೇತಿ ಸ್ವರೂಪವನ್ನು ಮನದಟ್ಟು ಮಾಡಿದರು.

ಶಿಭಿರಾರ್ಥಿಗಳು ಬಹಳ ಉತ್ಸಾಹದಿಂದ ಮೊದಲ ಬ್ಯಾಚಿನಲ್ಲಿ ತರಬೇತಿಯಲ್ಲಿ ಪಾಲ್ಗೊಂಡರು. ಶಿಭಿರಾರ್ಥಿಗಳು ಬಹಳ ಉತ್ಸಾಹದಿಂದ ಮೊದಲ ಬ್ಯಾಚಿನಲ್ಲಿ ತರಬೇತಿಯಲ್ಲಿ ಪಾಲ್ಗೊಂಡರು. ಕನ್ನಡ ಟೈಪಿಸುವ ಕಲಿಕೆಯನ್ನು ಸಂಭ್ರಮಿಸಿದ ಶಿಬಿರಾರ್ಥಿಗಳು ತಮ್ಮ HONEYಸಿಕೆ ಹಂಚಿಕೊಂಡಿದ್ದು ಹೀಗೆ..



ಖಾನ್ ಅಕಾಡೆಮಿ ಕಾರ್ಯಾಗಾರ

7ನೇ ತರಗತಿ ಗಣಿತ ವಿಷಯದ ಖಾನ್ ಅಕಾಡೆಮಿ ಇ-ಸಂಪನ್ಮೂಲಗಳನ್ನು ಸ್ಥಳೀಕರಣ ಗೊಳಿಸುವ ಜವಬ್ದಾರಿಯನ್ನು ಮೈಸೂರು ಡಯಟ್ ಗೆ ವಹಿಸಲಾಗಿತ್ತು.  ಇದು ರಜಾ ದಿನಗಳಲ್ಲಿ ಆಗಬೇಕಾದ ಕಾರ್ಯ. ಎಂದಿನಂತೆ ಈ ಹೊಣೆ ಇಟಿ ವಿಭಾಗಕ್ಕೆ ಬಿತ್ತು. ನಮ್ಮ ವಿಭಾಗದ ಉಪನ್ಯಾಸಕಿಯವರಾದ ಶ್ರೀಮತಿ ಭಾಗ್ಯಲಕ್ಷ್ಮೀ ರವರು ಈ ಕಾರ್ಯಾಗಾರಕ್ಕೆ ಕಾರ್ಯೋನ್ಮುಖರಾದರು.

ಸತತ ದೂರವಾಣಿ ಕರೆಗಳ ಮೂಲಕ ಸಂಪರ್ಕಿಸಿ ಹದಿನೈದು ಮಂದಿ ಅನುವಾದಕರು ಮತ್ತು ಐದು ಮಂದಿ ಅನುಮೋದಕರನ್ನು ಆಯ್ಕೆಮಾಡಿದರು. ಎಲ್ಲರನ್ನು ಕಾರ್ಯಾಗಾರಕ್ಕೆ ಕರೆಸುವಲ್ಲಿ ಯಶಸ್ವಿಯಾದರು.

ಹತ್ತು ದಿನಗಳ ಕಾಲ  ಈ ಕಾರ್ಯಾಗಾರ ನಡೆಯಿತು. ತಪಸ್ಸಿಗೆ ಕುಳಿತಂತೆ ಹೊಸ ಕಾರ್ಯದ  ಅನುಭವಗಳನ್ನು ತಮ್ಮದಾಗಿಸಿಕೊಂಡ ಇಡೀ ತಂಡ ಪ್ರಾಂಶುಪಾಲರ ಮೆಚ್ಚುಗೆಗೆ ಪಾತ್ರವಾಯಿತು.  

 ಕಾರ್ಯಾಗರದ ಮಧ್ಯೆ ಭೇಟಿ ನೀಡಿದ ಡಿ.ಎಸ್.ಇ.ಆರ್.ಟಿಯ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀ ವೇದಮೂರ್ತಿರವರು ಸಂಪನ್ಮೂಲವ್ಯಕ್ತಿಗಳೊಂದಿಗೆ ಸಂವಾದ ನಡೆಸಿದರು. ಸಲಹೆ ನೀಡಿದರು. ಜೊತೆ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಇಡಿ ರಾಜ್ಯವನ್ನು ಉದ್ದೇಶಿಸಿ “ಹೋಬಳಿ ಹಂತದ ಸಮಾಲೋಚನಾ ಕಾರ್ಯಾಗಾರಗಳ” ಬಗ್ಗೆ ಇಲ್ಲಿಂದಲೇ ಮಾಹಿತಿ ನೀಡಿದರು.


NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...