ದಿನಾಂಕ:12-08-2015 ರಂದು ಮಾನ್ಯ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ ರವರು ಸಂಸ್ಥೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮೈಸೂರು ಶೈಕ್ಷಣಿಕ ವಿಭಾಗದ ಜಂಟಿ ನಿರ್ದೇಶಕರಾದ ಶ್ರೀ ಬಿ.ಕೆ.ಬಸವರಾಜುರವರು, ಡಯಟ್ ಪ್ರಾಂಶುಪಾಲರಾದ ಶ್ರೀ ರಘುನಂದನ್ ರವರು ಮತ್ತು ಉಪನಿರ್ದೇಶಕರು(ಆಡಳಿತ)ರವರಾದ ಶ್ರೀ ಬಸಪ್ಪನವರು ಶ್ರೀಯುತರನ್ನು ಸ್ವಾಗತಿಸಿದರು.
|
ಡಯಟ್ ಗೆ ಆಗಮಿಸುತ್ತಿರುವ ಮಾನ್ಯ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ ರವರು |
|
ಮಾನ್ಯ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ ರವರಿಗೆ ಡಯಟ್ ಪ್ರಾಂಶುಪಾಲರು, ಸಿಟಿಇ ಪ್ರಾಂಶುಪಾಲರು ಮತ್ತು ಉಪನಿರ್ದೇಶಕರು(ಆಡಳಿತ) ರವರಿಂದ ಸ್ವಾಗತ |
ಡಯಟ್ ನ ಹಿರಿಯ ಉಪನ್ಯಾಸಕರು, ಉಪನ್ಯಾಸಕರೊಡನೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡ ಮಾನ್ಯ ಸಚಿವರು ಪ್ರಸ್ತುತ ಶಿಕ್ಷಣ ವ್ಯವಸ್ಥೆ ಸಾಗಬೇಕಾದ ಹಾದಿ, ಹಾದಿಯಲ್ಲಿ ಸಾಗುವ ಮಂದಿಯ ಮನಸ್ಥಿತಿ, ಎದುರಾಗುವ ಸವಾಲುಗಳು ಹೇಗಿರುತ್ತವೆ ? ಅವುಗಳನ್ನು ಹೇಗೆ ಎದುರಿಸಬೇಕು ? ಇತ್ಯಾದಿ ಸಂಗತಿಗಳ ಸಾಂಗತ್ಯದಲ್ಲಿ ಸಂವಾದ ನಡೆಸಿದರು.
|
ಸಂವಾದಕ್ಕೆ ಸ್ವಾಗತಿಸುತ್ತಿರುವ ಡಯಟ್ ಪ್ರಾಂಶುಪಾಲರು
|
|
ಸಚಿವರಿಂದ ಹೃದಯ ಸಂವಾದ |
ಹೃದಯ ಸಂವಾದದ ಬಳಿಕ ಗಿರಿಜನ ಹಾಡಿ, ಗ್ರಾಮೀಣ ಭಾಗದ ಹಲವು ಪ್ರದೇಶಗಳಿಂದ ಬಂದು ಕೆ.ಜಿ.ಬಿ.ವಿಗೆ ದಾಖಲಾಗಿರುವ ಮಕ್ಕಳೊಂದಿಗೆ ಮಕ್ಕಳಾದರು.
No comments:
Post a Comment