ಯಾವುದೇ ಒಂದು ದೇಶ ಹಾಗೂ ಸಮಾಜ ಅಲ್ಲಿನ ಶಿಕ್ಷಕರ ಮಟ್ಟವನ್ನು ಮೀರಿರಲು ಸಾಧ್ಯವಿಲ್ಲ” ಎನ್ನುವ ಹೇಳಿಕೆ, ಶಿಕ್ಷಕರ ಶಕ್ತಿ ಹಾಗೂ ಮಹತ್ವವನ್ನು ಸಾರಿ ಹೇಳುತ್ತದೆ. ಸಮಾಜದ ನಿರೀಕ್ಷೆಗಳನ್ನು ಈಡೇರಿಸುವ ಶಿಕ್ಷಕರ ಕಾರ್ಯದಕ್ಷತೆಯ ಮೇಲೆ ಶಿಕ್ಷಣ ಇಲಾಖೆ ಅತೀವ ನಂಬಿಕೆಯನ್ನಿರಿಸಿದೆ. ಶಿಕ್ಷಕರಲ್ಲದೆ ಇನ್ನಾರಿಗೂ ಸದೃಢ ಸಮಾಜ ನಿರ್ಮಾಣ ಕಾರ್ಯದಲ್ಲಿ ಮಹತ್ವದ ಪಾತ್ರ ನಿರ್ವಹಿಸಲು ಸಾಧ್ಯವಾಗದು. ಶಿಕ್ಷಕರು ಕೇವಲ ಅಕ್ಷರ ಕಲಿಸುವವರಲ್ಲ, ಬದಲಾಗಿ ಈ ದೇಶದ ಭವಿಷ್ಯಕ್ಕೆ ಅಗತ್ಯವಾದ ಮಾನವ ಸಂಪನ್ಮೂಲವನ್ನು ರೂಪಿಸುವವರು. ಇಲಾಖೆಯ ಹಾಗೂ ಭಾಗಿದಾರ ಪೋಷಕರ ನಡುವೆ ಜ್ಞಾನ ಸೇತುವೆಯಾಗಿ ಅಸಾಧಾರಣ ಸಂದರ್ಭಗಳಲ್ಲಿಯೂ ವ್ಯಕ್ತಿಯಾಗಿ ಕಾರ್ಯನಿರ್ವಹಿಸುವರು. ಅಂತಹ ಸಮರ್ಥ ಶಿಕ್ಷಕರ ಪಡೆಯನ್ನು ಹೊಂದುವುದೇ ನಮ್ಮ ರಾಜ್ಯದ ಕನಸು. ಶಿಕ್ಷಕರು ವ್ಯಕ್ತಿ-ಶಕ್ತಿಯಾಗಿ ರೂಪುಗೊಳ್ಳುತ್ತ ಶಿಕ್ಷಣದ ಬೆನ್ನೆಲುಬಾಗಿ ಸಮಗ್ರ ಗುರಿಯ ಕಡೆಗೆ ಹೆಜ್ಜೆಯಿರಿಸಬೇಕೆಂಬುದೇ ಶಿಕ್ಷಣ ಇಲಾಖೆಯ ಆಶಯ.
ಈ ಹಿನ್ನೆಲೆಯಲ್ಲೇ ರೂಪುಗೊಂಡ ಇಲಾಖೆಯ ಕನಸಿನ ಕೂಸು "ಗುರುಚೇತನ" ಈ ಗಾಗಲೇ ಇದರ ರೂಪುರೇಷೆ ಸಿದ್ಧಗೊಂಡಿದೆ. ಉದ್ದೇಶಗಳು ಇಂತಿವೆ.
ಶಿಕ್ಷಕರನ್ನು ಚಿಂತನಶೀಲ ಅಭ್ಯಾಸಿಗರನ್ನಾಗಿ (Reflective Practitioner) ಮಾಡುವುದು
ಶಿಕ್ಷಕರು ಸ್ವ ಪ್ರೇರಣೆಯಿಂದ ವೃತ್ತಿಪರ ಅಭಿವೃಧ್ಧಿಯಲ್ಲಿ ಪಾಲ್ಗೊಳ್ಳುವ ಅವಕಾಶಗಳನ್ನು ಕಲ್ಪಿಸುವುದು
ಮಕ್ಕಳ ಕಲಿಕೆಯ ಅವಕಾಶಗಳನ್ನು ಅರ್ಥೈಸಲು ಮತ್ತು ಅನುಕೂಲಿಸಲು ಸ್ವಾಯತ್ತ ಶಿಕ್ಷಕರನ್ನು ರೂಪಿಸುವುದು
ಪ್ರಥಮ ಬಾರಿಗೆ ಶಿಕ್ಷಕರ ಶಿಕ್ಷಣ ಕ್ಷೇತ್ರದಲ್ಲಿ ಅದ್ವಿತೀಯ ಎನ್ನಬಹುದಾದ ಶಿಕ್ಷಕರ ಆಯ್ಕೆ ಆಧಾರಿತ ಅಭಿವೃದ್ಧಿಗೆ ಅವಕಾಶ. ಶಿಕ್ಷಕರು ತಮ್ಮ ವೃತ್ತಿ ಬೆಳವಣಿಗೆಯ ಅಗತ್ಯ ಹಾಗೂ ಆಸಕ್ತಿಗೆ ತಕ್ಕ ಮಾಡ್ಯೂಲ್‍ಗಳನ್ನು ಆಯ್ಕೆ ಮಾಡಿಕೊಂಡು ಭಾಗವಹಿಸುವ ಅವಕಾಶವಿದೆ.
ಧೀರ್ಘಾಕಾಲದಲ್ಲಿ ಶಿಕ್ಷಕರ ಅಭಿವೃದ್ಧಿಯನ್ನು ಯೋಜಿಸಲು ನೆರವಾಗಲು “ಶಿಕ್ಷಕರ ಅಭಿವೃದ್ಧಿ ಪಠ್ಯಕ್ರಮ”ವನ್ನು ಇಲಾಖೆ ರೂಪಿಸಿದೆ, ಅದರಲ್ಲಿ ಶಿಕ್ಷಕರ ಅಭಿವೃದ್ಧಿಗೆ ಮುಂದಿನ 3-5ವರ್ಷಗಳಿಗೆ ಅಗತ್ಯವಾದ ಥೀಮ್‍ಗಳನ್ನು ಗುರುತಿಸಿದೆ.
ಆರಂಭಿಕಾಗಿ 2017-18ನೇ ಸಾಲಿನಲ್ಲಿ 28 ಮಾಡ್ಯೂಲ್‍ಗಳನ್ನು ಅಭಿವೃದ್ಧಿ ಮಾಡಲಾಗಿದೆ, ಶಿಕ್ಷಕರು ಅವುಗಳಲ್ಲಿ ಆದ್ಯತೆಯ ಮೇರೆಗೆ ನಾಲ್ಕನ್ನು ಗುರುತಿಸುವ ಅವಕಾಶವಿದೆ.
ಶಿಕ್ಷಕರು ಮಾಡ್ಯೂಲ್ ಆಯ್ಕೆ ಸಂದರ್ಭದಲ್ಲಿ ಅವರು ಬೋಧಿಸುವ ವಿಷಯಕ್ಕೆ ಸೀಮಿತವಾಗದೆ, ಅವರ ಆಸಕ್ತಿ ಹಾಗೂ ಅಗತ್ಯತೆ ಇರುವ ಯಾವುದೇ ಮಾಡ್ಯೂಲ್‍ಗಳನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಿದೆ.
ನೀಡಲಾದ ಆದ್ಯತೆಯ ನಾಲ್ಕರಲ್ಲಿ 2 ಮಾಡ್ಯೂಲ್‍ಗಳ 2 ಅವಧಿಯ ಒಟ್ಟು 10 ದಿನಗಳ ಕಾರ್ಯಗಾರದಲ್ಲಿ ಭಾಗವಹಿಸುವ ಅವಕಾಶವಿದೆ.
2017-18ನೇ ಸಾಲಿನಲ್ಲಿ 50,000 ಶಿಕ್ಷಕರು ಇದರ ಪ್ರಯೋಜನ ಪಡೆಯಲಿದ್ದಾರೆ.
ವಿಷಯ ಪರಿಕರ, ಸಂಶೋಧನೆ ಮತ್ತು ವಿವಿಧ ಜ್ಞಾನಕ್ಷೇತ್ರಗಳ ಸಮಗ್ರತೆಯ ಆಶಯಹೊಂದಿದ ಮಾಡ್ಯೂಲ್‍ಗಳನ್ನು ಕಾರ್ಯಾಗಾರದ ಪೂರ್ವದಲ್ಲೇ ಅಧ್ಯಯನ ಮಾಡಲು ವೆಬ್‍ಸೈಟ್‍ನಲ್ಲಿ ಅಳವಡಿಸಲಾಗಿದೆ.
ಕಾರ್ಯಗಾರಗಳು ವಿಕೇಂದ್ರಿಕೃತ, ಸಹವರ್ತಿ, ಸುಸ್ಥಿರ ಸ್ವಕಲಿಕೆಯ ಅವಕಾಶವನ್ನು ಪಾಲ್ಗೊಳ್ಳುವ ಶಿಕ್ಷಕರಿಗೆ ಒದಗಿಸುತ್ತವೆ.
ಶಿಕ್ಷಕರು ತಂಡವಾಗಿ ನಿರಂತರ ಕಲಿಕೆಯ ಸಂಸ್ಕøತಿಯನ್ನು ಹುಟ್ಟುಹಾಕುವ ಮೂಲಕ ಸಮಥ ಶಿಕ್ಷರನ್ನು ಅಭಿವೃದ್ಧಿಗೊಳಿಸುವ ಆಶಯ ಹೊಂದಿದೆ.
ಕಾರ್ಯಗಾರಗಳು ನಡೆಯುವ ಸ್ಥಳ ಹಾಗೂ ದಿನಾಂಕಗಳನ್ನು ಇಲಾಖೆಯ ವೆಬ್‍ಸೈಟ್‍ನಲ್ಲಿ ಪೂರ್ವಭಾವಿಯಾಗಿ ಪ್ರಕಟಿಸಲಾಗುತ್ತದೆ. ಶಿಕ್ಷಕರು ಮಾಡ್ಯೂಲ್ ಆಯ್ಕೆ ನಂತರ ಬ್ಯಾಚ್ ಫಾರಂ ಆದ ಮೇಲೆ ಕಾರ್ಯಾಗಾರ ನಡೆಯುವ ದಿನಾಂಕ ಮತ್ತು ಸ್ಥಳದ ಬಗ್ಗೆ ನೊಂದಾಯಿತ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್ ಸಂದೇಶ ರವಾನೆಯಾಗುತ್ತದೆ.
ಗುರುಚೇತನದ ಸಂಪೂರ್ಣ ವಿವರವನ್ನು ಈ ಲಿಂಕ್ ಮೂಲಕ ನೀವು ಪಡೆಯಬಹುದು. http://dsert.kar.nic.in/guruchethana/
ಈಗಾಗಲೇ ಎಂ.ಆರ್.ಪಿ ತರಬೇತಿ ಪಡೆದು ಬಂದ ಮೈಸೂರು ಜಿಲ್ಲೆಯ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ನಮ್ಮ ಜಿಲ್ಲೆಯಲ್ಲಿ ಈ ಕನಸನ್ನು ಹೇಗೆ ನನಸಾಗಿಸಬೇಕೆಂದು ತಾವೂ ಒಂದು ಕನಸು ಕಂಡರು. ಈ ಕನಸಿಗೆ ದಿನಾಂಕ:12-09-2017 ರಂದು ಡಯಟ್, ಮೈಸೂರು ವೇದಿಕೆ ಕಲ್ಪಿಸಿತ್ತು.
ಈ ಹಿನ್ನೆಲೆಯಲ್ಲೇ ರೂಪುಗೊಂಡ ಇಲಾಖೆಯ ಕನಸಿನ ಕೂಸು "ಗುರುಚೇತನ" ಈ ಗಾಗಲೇ ಇದರ ರೂಪುರೇಷೆ ಸಿದ್ಧಗೊಂಡಿದೆ. ಉದ್ದೇಶಗಳು ಇಂತಿವೆ.
ಕಾರ್ಯಕ್ರಮದ ವಿಶೇಷತೆಗಳು
ಗುರುಚೇತನದ ಸಂಪೂರ್ಣ ವಿವರವನ್ನು ಈ ಲಿಂಕ್ ಮೂಲಕ ನೀವು ಪಡೆಯಬಹುದು. http://dsert.kar.nic.in/guruchethana/
ಈಗಾಗಲೇ ಎಂ.ಆರ್.ಪಿ ತರಬೇತಿ ಪಡೆದು ಬಂದ ಮೈಸೂರು ಜಿಲ್ಲೆಯ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ನಮ್ಮ ಜಿಲ್ಲೆಯಲ್ಲಿ ಈ ಕನಸನ್ನು ಹೇಗೆ ನನಸಾಗಿಸಬೇಕೆಂದು ತಾವೂ ಒಂದು ಕನಸು ಕಂಡರು. ಈ ಕನಸಿಗೆ ದಿನಾಂಕ:12-09-2017 ರಂದು ಡಯಟ್, ಮೈಸೂರು ವೇದಿಕೆ ಕಲ್ಪಿಸಿತ್ತು.
No comments:
Post a Comment