My Blog List

Wednesday 13 September 2017

weಜ್ಞಾನದಿಂ ಸುಜ್ಞಾನದೆಡೆಗೆ


ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಇಂದು ವಿಜ್ಞಾನದ ಗಾಢ ಪ್ರಭಾವವಿದೆ. ಬಿಜ್ಞಾನ ರಹಿತ ನಡಿಗೆ ಊಹಿಸಲೂ ಅಸಾಧ್ಯ. ಈ ವಿಜ್ಞಾನವನ್ನು ಬಿತ್ತುವ ಕೆಲಸವನ್ನು ಶಾಲೆ ಎಂಬ ಕೃಷಿ ಭೂಮಿಯಲ್ಲಿ ನಾವು ನೋಡುತ್ತೇವೆ. ಹಲವು ಮಾಧ್ಯಮದಲ್ಲಿ ಈ ಕಾರ್ಯವನ್ನು ಮಾಡಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಆಶಯದಂತೆ ಮತ್ತು ಡಿ.ಎಸ್.ಇ.ಆರ್.ಟಿ ನಿರ್ದೇಶನದಂತೆ ಪ್ರತಿ ವರ್ಷವೂ ಜಿಲ್ಲಾ ಹಂತದಲ್ಲಿ ವಿಜ್ಞಾನ ನಾಟಕ ಸ್ಪರ್ಧೆ ಆಯೋಜಿಸಲಾಯಿತು. 




  1. ಸ್ವಚ್ಛಭಾರತ
  2. ಡಿಜಿಟಲ್ ಭಾರತ
  3. ಹಸಿರು ಶಕ್ತಿ
  4. ನದಿಗಳ ಶುದ್ಧೀಕರಣ 
ಈ ನಾಲ್ಕು ವಿಷಯಗಳಲ್ಲಿ ತಮ್ಮ ಪಾತ್ರಾಭಿನಯದ ಮೂಲಕ ತಾಲೂಕು ಹಂತದಲ್ಲಿ ಭಾಗವಹಿಸಿ, ಪ್ರಥಮ ಬಹುಮಾನ ಪಡೆದಿದ್ದ ತಂಡಗಳು ಜಿಲ್ಲಾ ಹಂತವನ್ನು ಪ್ರತಿನಿಧಿಸಿದ್ದವು. ನಂಜನಗೂಡು ತಾಲೂಕಿನ ಹೆಗ್ಗಡಹಳ್ಳಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಸಿರುಶಕ್ತಿ ವಿಷಯವಾಗಿ ಪ್ರಸ್ತುತ ಪಡಿಸಿದ "ಜಟ್ರೋಫ ಎಂಬ ವರ" ನಾಟಕ ಪ್ರಥಮ ಸ್ಥಾನವನ್ನು ಜಿಲ್ಲಾ ಹಂತದಲ್ಲಿ ಪಡೆಯಿತು. ಹುಣಸೂರಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ಮತ್ತು ಮೈಸೂರು ಉತ್ತರ ವಲಯದ ದಟ್ಟಗಳ್ಳಿ ಪ್ರೌಢಶಾಲೆಯ ವಿದ್ಯಾರ್ಥಿಗಳು ತೃತೀಯ ಬಹುಮಾನ ಪಡೆದರು.


 ಈ ಭಾರಿಯ ವಿಶೇಷ.  ಉತ್ತಮ ನಿರ್ದೇಶಕ, ಉತ್ತಮ ಸಾಹಿತ್ಯ ರಚನೆ, ಅತ್ಯುತ್ತಮ ನಟ, ಅತ್ಯುತ್ತಮ ನಟಿ ಪ್ರಶಸ್ತಿ ನೀಡಿದ್ದು.
ತಮ್ಮ ನಿರ್ದೇಶನಕ್ಕೆ ಹುಣಸೂರಿನ ಪ್ರೌಢಶಾಲೆಯ ನಾಟಕ ಶಿಕ್ಷಕಿ ವಿದ್ಯಾಕಾಮತ್, ಉತ್ತಮ ಸಾಹಿತ್ಯ ರಚನೆಗಾಗಿ ಸಂತೋಷ್ ಗುಡ್ಡಿಯಂಗಡಿ, ಅತ್ಯುತ್ತಮ ನಟನಾಗಿ ದರ್ಶನ್, ಅತ್ಯುತ್ತಮ ನಟಿಯಾಗಿ ಜಟ್ರೋಫ ಪಾತ್ರಧಾರಿ ವಿದ್ಯಾರ್ಥಿನಿ ಬಹುಮಾನ ಪಡೆದು ಸಂಭ್ರಮಿಸಿದರು.




NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...