My Blog List

Monday 10 December 2018

ಡಯಟ್ ಸಲಹಾ ಸಮಿತಿ ಸಭೆ

ದಿನಾಂಕ:11-12-2018 ರಂದು ಜಿಲ್ಲಾಪಂಚಾಯತ್ ಮೈಸೂರಿನ ಮಾನ್ಯ ಸಿ.ಇ.ಓ. ರವರಾದ ಕೆ.ಜ್ಯೋತಿ(IAS)ರವರು ಡಯಟ್ ಸಲಹಾ ಸಮಿತಿ ಸಭೆಗೆ ಭೇಟಿ ನೀಡಿದ್ದರು. ಡಯಟ್ ಮೂಲಕ ಪ್ರಸಕ್ತ ವರ್ಷ ಹಮ್ಮಿಕೊಳ್ಳಲಾಗುತ್ತಿರುವ ತರಬೇತಿಗಳು, ಸಂಶೋಧನೆಗಳು, ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕ್ರಿಯಾಯೋಜನೆಗೆ ಅನುಮೋದನೆ ನೀಡಿದರು.


ಜಿ.ಪಂ. ಸಿಇಓ ರವರಾದ ಕೆ.ಜ್ಯೋತಿ ಮೇಂ ರವರನ್ನು ಸ್ವಾಗತಿಸಿದ ಸಂದರ್ಭ

ಈ ಸಂದರ್ಭದಲ್ಲಿ ಅವರು ಡಯಟ್ ನಲ್ಲಿ ನಡೆಯುತ್ತಿದ್ದ ಟ್ಯಾಲ್ಪ್ ರಿಫ್ರೆಶರ್ ತರಬೇತಿ ತಂಡ-4ಕ್ಕೆ ಭೇಟಿ ನೀಡಿದರು. ಶಿಕ್ಷಕರೊಂದಿಗೆ ಚರ್ಚಿಸಿದರು. ತಂತ್ರಜ್ಞಾನದ ಮೂಲಕ ತರಗತಿಗಳಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಗಣಿತ ವಿಷಯ ಬೋಧಕರು ಆಗಿದ್ದ ಅವರು ಗಣಿತ ವಿಷಯದಲ್ಲಿ ಬಳಕೆ ಮಾಡುತ್ತಿರುವ  ಟೂಲ್ ಗಳ ಬಗ್ಗೆ ವಿವರ ಪಡೆದರು. ಈ ವೇಳೆ ಹುಣಸೂರು ತಾಲೂಕಿನ ಬನ್ನಿಕುಪ್ಪೆ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕರಾದ ಹರೀಶ್ ರವರು ಜಿಯೋ ಜೀಬ್ರಾ ಕುರಿತು ವಿವರಣೆ ನೀಡಿದರು.



ಒಟ್ಟಾರೆ ತಂತ್ರಜ್ಞಾನ ಆಧರಿತ ಕಲಿಕೆ ಬೋಧನೆ ಮಕ್ಕಳಿಗೆ ಮುಟ್ಟಬೇಕು ಎಂಬ ಆಶಯವನ್ನು ಶ್ರೀಮತಿ ಜ್ಯೋತಿ ಮೇಂ ರವರು ವ್ಯಕ್ತಪಡಿಸಿದರು. 

Monday 26 November 2018

ರಿಪ್ರೆಶರ್ ತರಬೇತಿ – ಬ್ಯಾಚ್ -02


ಡಯಟ್ ವಸಂತಮಹಲ್ ನಲ್ಲಿ ದಿನಾಂಕ:13-11-2018 ರಿಂದ 22-11-2018ರವರೆಗೆ  ಒಟ್ಟು 42 ಶಿಬಿರಾರ್ಥಿಗಳಿಗೆ ಟ್ಯಾಲ್ಪ್ /  ಐಟಿ@ಸ್ಕೂಲ್ ರಿಫ್ರೆಶರ್ ಕೋರ್ಸ್ ತರಬೇತಿಯನ್ನು ನೀಡಲಾಯಿತು. ಈ ಹತ್ತು ದಿನಗಳಲ್ಲಿ ತರಬೇತಿಯಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳ ಕಾರ್ಯಚಟುವಟಿಕೆಗಳ ಕುರಿತ ವಿಡಿಯೋ ವೀಕ್ಷಿಸಲು ಈ ಲಿಂಕ್ ನ್ನು ಕ್ಲಿಕ್ಕಲಿಸಿ.

Thursday 15 November 2018

ಸಾಧನಕೇರಿಗೆ ಸಾರ್ಥಕ ನಡಿಗೆ


ಪ್ರತಿ ವರ್ಷದಂತೆ ಈ ವರ್ಷವೂ ಶೈಕ್ಷಣಿಕ ಪ್ರವಾಸ ಹೋಗುವ ಸಂದರ್ಭ ಒದಗಿ ಬಂತು. ಈ ಬಾರಿ ನಮ್ಮ ಪ್ರಯಾಣ ಹೊರಟಿದ್ದು ಸಾಧನಕೇರಿಗೆ. ಹೌದು. ಧಾರವಾಡಕ್ಕೆ. ಧಾರವಾಡ ಎಂದಾಕ್ಷಣ ನಮಗೆ ಸಾಹಿತ್ಯದ ಸೊಬಗು, ಕವಿಗಳ ಕುಟೀರ, ಸಾಧಕರ ಸಾಲು ಸಾಲು, ವಿಜ್ಞಾನ ಪಾರ್ಕ್ ವೈಭವ, ಡಯಟ್ ಅಂಗಳ, ಡೆಪ್ಯುಟಿ ಚೆನ್ನಬಸಪ್ಪನವರ ಸಾಹಸಗಾಥೆಗಳು, ಅಪರ ಆಯುಕ್ತರ ಕಚೇರಿ, ಧಾರವಾಡ ಪೇಡ, ಅಲ್ಲಿಯ ಸವಿಯೂಟ, ಸವಿನೋಟ… ಹೀಗೆ ಹತ್ತಾರು ನೆನಪುಗಳು ಬಂದು ಹೋಗುತ್ತವೆ.  

ಅಂತೆಯೇ ನಮ್ಮ ಡಯಟ್ ನ ತಂಡ ಮಾನ್ಯ ಪ್ರಾಂಶುಪಾಲರಾದ ಕೆ.ಮಹದೇವಪ್ಪನವರ ಸಾರಥ್ಯದಲ್ಲಿ ಧಾರವಾಡಕ್ಕೆ ಭೇಟಿ ಕೊಟ್ಟು ಅಲ್ಲಿ ಕಂಡುಂಡ ನೆನಪುಗಳನ್ನು ಈ ವಿಡಿಯೋ ಮೂಲಕ ನೆನಪುಮಾಡಿಕೊಳ್ಳುತ್ತಿದ್ದೇವೆ.

https://youtu.be/3IupmzuLweY ವಿಡಿಯೋ ಕ್ಲಿಪ್ಪಿಂಗ್ ನೋಡಲ್ ಈ ಲಿಂಕ್ ನ್ನು ಕ್ಲಿಕ್ಕಿಸಿ

Tuesday 30 October 2018

ರಿಫ್ರೆಶ್ ರಿಫ್ರೆಶ್ ಪ್ಲೀಸ್ ರಿಫ್ರೆಶ್



ಹೆಸರೇ ಹೇಳುವಂತೆ ಇದು ರಿಫ್ರೆಶರ್ ತರಬೇತಿ. ಈಗಾಗಲೇ ಐಟಿ@ಸ್ಕೂಲ್ ಇಂಡಕ್ಷನ್ ತರಬೇತಿ ಪಡೆದ ಶಿಕ್ಷಕರಿಗೆ ಪ್ರಸಕ್ತ ವರ್ಷ ನೀಡಲಿರುವ ರಿಫ್ರೆಶರ್ ತರಬೇತಿ. ಇಂಡಕ್ಷನ್ ತರಬೇತಿಯಲ್ಲಿ ಕಂಪು ಟ್ಯೂಟರ್ ಮೂಲಕ ಹಲವು ಹೊಸ ಹೊಸ ತಂತ್ರಾಂಶಗಳ ಬಳಕೆ, ಕಂಪ್ಯೂಟರ್ ಬಳಕೆಯಲ್ಲಿ ಹೆಚ್ಚಿನ ಪ್ರಾವಿಣ್ಯತೆ ಗಳಿಸಿಕೊಂಡಿರುವ ಶಿಕ್ಷಕರು ಈ ತರಬೇತಿಯಲ್ಲಿ ಒಂದು ಹೆಜ್ಜೆ ಮುಂದಡಿಯಿಡಲಿದ್ದಾರೆ.




ತರಬೇತಿಯ ಗುಂಪಿಗೆ ಕ್ಯು.ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಸೇರ್ಪಡೆಗೊಂಡ ಪ್ರಾಂಶುಪಾಲರಾದ ಶ್ರೀ ಮಹದೇವಪ್ಪ ಸರ್ ರವರು, ತಂತ್ರಜ್ಞಾನದ ಆಯಾಮಗಳನ್ನು ತೆರೆದಿಟ್ಟರು. ತಾವು ಕಂಪ್ಯೂಟರ್ ಕಲಿಕೆಗಾಗಿ ಮಾಡಿದ ಹಲವು ಸನ್ನಿವೇಶಗಳನ್ನು ಶಿಬಿರಾರ್ಥಿಗಳ ಮುಂದಿಟ್ಟರು.


ದಿನಾಂಕ;25-10-2018 ರಿಂದ 03-10-2018ರವರೆಗೆ ಮೊದಲ ಬ್ಯಾಚ್ ನಡೆಯುತ್ತಿದೆ. ಒಟ್ಟು 40 ಶಿಕ್ಷಕರ ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ. ಅವರ ಉತ್ಸಾಹ,  ಅವರ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.


ದಿನದಿಂದ ದಿನಕ್ಕೆ ಹೊಸ ಹೊಸ ಆಪ್ ಗಳ ಕಲಿಕೆ ಅವರನ್ನು ಸ್ಫೂರ್ತಿಸುತ್ತಿದೆ. ಒಂದು ಪರಿಕಲ್ಪನೆಯನ್ನು ತೆಗೆದುಕೊಂಡು ಅದಕ್ಕೆ ಪೂರಕವಾದ ಆಪ್ ಗಳನ್ನು ಬಳಸಿಕೊಂಡು ಒಂದು ಸಂಪನ್ಮೂಲವನ್ನು ಸ್ವತಃ ಪ್ರತಿಯೋರ್ವ ಶಿಕ್ಷಕರು ಈ ತರಬೇತಿಯ ಅಂತಿಮ ದಿನ ಸೃಷ್ಠಿಸಲಿದ್ದಾರೆ.
 


ಈ ತರಬೇತಿಗೆ ಸಂಬಂಧಿಸಿದ ವಿಡಿಯೋ ಕ್ಲಿಪ್ಪಿಂಗ್ ನೋಡಲ್ ಈ ಲಿಂಕ್ ನ್ನು ಕ್ಲಿಕ್ಕಿಸಿ https://youtu.be/mOFS65NwMmo

ಐಟಿ@ಸ್ಕೂಲ್ ಮುಖ್ಯಶಿಕ್ಷಕರ ಸಭೆ



26-10-2018 ರಂದು ಜಿಲ್ಲೆಯ ಐಟಿ@ಸ್ಕೂಲ್ ಶಾಲೆಗಳ ಮುಖ್ಯಶಿಕ್ಷಕರ ಸಭೆ ಕರೆಯಲಾಗಿತ್ತು. 2016-17 ಮತ್ತು 2017-18ನೇ ಸಾಲಿನಲ್ಲಿ ಆಯ್ಕೆಗೊಂಡ ಐಟಿ@ಸ್ಕೂಲ್ ಗಳಿಗೆ ನೀಡಲಾಗಿರುವ ಲ್ಯಾಪ್ ಟಾಪ್, ಪ್ರೊಜೆಕ್ಟರ್ ಗಳ ಸ್ಥಿತಿಗತಿ ಮಾಹಿತಿ ಮತ್ತು ಕಂಪ್ಯೂಟರ್ ಕೊಠಡಿ ಸಿದ್ಧತೆಗೆ ಇಲಾಖೆಯಿಂದ ನೀಡಲಾಗಿದ್ದ ಹಣಕಾಸಿನ ವಿವರವನ್ನು ಈ ಸಭೆಯಲ್ಲಿ ಪಡೆಯಲಾಯಿತು.


ಮಾನ್ಯ ಪ್ರಾಂಶುಪಾಲರಾದ ಶ್ರೀ ಮಹದೇವಪ್ಪ ಸರ್ ರವರು ಮುಖ್ಯಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದರು. ಮಖ್ಯಶಿಕ್ಷಕರು ವೇಳಾಪಟ್ಟಿಯಲ್ಲಿ ಐಟಿ @ಸ್ಕೂಲ್ ತರಗತಿ ಹಾಕಲು ತಿಳಿಸಿ, ಶಿಕ್ಷಕರಿಗೆ ಲ್ಯಾಪ್ ಟಾಪ್ ನೀಡುವಂತೆ ಸಹ ತಿಳಿಸಿದರು. ಕೊಠಡಿ ಸಿದ್ಧತೆಯ ಕುರಿತು ವಿವರ ವರದಿ ನೀಡುವಂತೆ 30-10-2018ರೊಳಗೆ ದಿನಾಂಕವನ್ನು ಸಹ ಗೊತುಪಡಿಸಿದರು.


ವಿಭಾಗ ಮುಖ್ಯಸ್ಥರಾದ ಮಹಿಮುನ್ನಿಸಾಬೇಗಂ ರವರು ಮಾತನಾಡಿದರು. ಟ್ಯಾಲ್ಪ್ ನೋಡಲ್ ಅಧಿಕಾರಿಗಳಾದ ಪ್ರಶಾಂತ್ ಎಂ.ಸಿ, ಶ್ರೀಮತಿ ಭಾಗ್ಯಲಕ್ಷ್ಮೀ ರವರು ಸಭೆಯಲ್ಲಿ ಭಾಗವಹಿಸಿದ್ದರು.

Monday 8 October 2018

"ಮಂಥನ" ಎಂಬ ಮನೆತನ



ಮಂಥನ. ನಮ್ಮೊಳಗೆ, ನನ್ನೊಳಗೆ ಆಗಲೇಬೇಕಾದ ಪ್ರಕ್ರಿಯೆ. ಆದಾಗಲೇ ಮಥಿಸಿ,ಮಥಿಸಿ ಬಂದ ಭಾವ ನವನೀತವಾಗೋದು. ದಿನ ಬೆಳಗಾದರೆ ಮಾಹಿತಿಗಳ ಮಂಥನದಲ್ಲೇ ಮುಳುಗುವ ನಾವು, ನಮ್ಮೊಳಗಿನ, ನನ್ನೊಳಗಿನ ಮಂಥನಕ್ಕೆ ಅವಕಾಶ ನೀಡುವುದೇ ಕಡಿಮೆ. ಈ ಅವಕಾಶ ಕಡಿಮೆ ಆದ್ದದ್ದರಿಂದಲೇ ನಮ್ಮ ಕಾರ್ಯಕ್ಷಮತೆ ನಮಗೆ ಅರಿವಿಲ್ಲದೇ ಕರಗುತ್ತಿದೆ. ಇದು ಆಗಬಾರದು. ನಮ್ಮತನಗಳ ಕುರಿತು ನಮಗೆ ನಾವೇ ಮಂಥನ ಮಾಡಿಕೊಳ್ಳಬೇಕು. ಇದಕ್ಕೆ ಇಲಾಖೆ ಪರೋಕ್ಷವಾಗಿ ಅವಕಾಶ ಕಲ್ಪಿಸಿದೆ. ಅದು ಸ್ಟಿರ್ ಮೂಲಕ. 


ಸ್ಟಿರ್ ಅಂತಾರಾಷ್ಷ್ರೀಯ ಸರ್ಕಾರೇತರ ಸಂಸ್ಥೆ. ಇದರ ಮೂಲ ಬ್ರಿಟನ್. ಈಗಾಗಲೇ 2 ಲಕ್ಷ ಶಿಕ್ಷಕರ ಸಮೂಹವನ್ನು ತಲುಪಿರುವ ಸಂಸ್ಥೆ ಶಿಕ್ಷಕರ ಬಲವರ್ಧನೆ, ಉಸ್ತುವಾರಿದಾರರ ಗುಣವರ್ಧನೆಗೆ ಶ್ರಮಿಸುತ್ತಿದೆ. ನಮ್ಮೊಳಗಿನ ಸವಾಲುಗಳಿಗೆ ನಮ್ಮಿಂದಲೇ ಉತ್ತರ ಹುಡುಕಿಸುವ, ನಮ್ಮೊಳಗಿನ ಸಮಸ್ಯೆಗಳಿಗೆ ನಮ್ಮಲ್ಲೇಪರಿಹಾರ ಕಾಣಿಸುವ, ಪರಸ್ಪರ ಕೇಳಿಸಿಕೊಳ್ಳುವ, ಪರಸ್ಪರ ನೋಡಿಕೊಳ್ಳುವ, ಪರಸ್ಪರ ಹಂಚಿಕೊಳ್ಳುವ, ಪರಸ್ಪರ ಬೆಳೆಯುವ ಬೆಳೆಸುವ ಗುರಿ ಇದರದ್ದು. 




ಹೀಗೆ ಗುರಿಯೊಂದಿಗೆ ಮೈಸೂರಿನ ವಸಂತಯಾನದ ಸಹಭಾಗಿಯಾದ ಸ್ಟಿರ್ ಸಂಸ್ಥೆ ಮೊದಲಿಗೆ ಕಾರ್ಯಾಗಾರದ ಮೂಲಕ ತನ್ನೆಲ್ಲ ಉಸ್ತುವಾರಿದಾರರಿಗೆ ಮೊದಲು ಪರಸ್ಪರ ಎಂಬ ಪರಿಚಯ ಮಾಡಿಕೊಟ್ಟಿತು. ಮಂಥನಕ್ಕೆ ನಾಂದಿ ಹಾಡಿತು. ಮಾನ್ಯ ಪ್ರಾಂಶುಪಾಲರಾದ ಮಹದೇವಪ್ಪನವರು ಹಾಗು ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿಗಳು(ಎಸ್ಎಸ್.ಎ)ರವರನ್ನು ಒಳಗೊಂಡಂತೆ ಕಾರ್ಯಕ್ರಮದಲ್ಲಿ ಹಲವರು ಭಾಗಿಯಾದರು. ಭಾಗೀದಾರರಾದರು. 







ಮೊದಲಿಗೆ ಜಿಲ್ಲಾ ಹಂತದಲ್ಲಿ ಕಾರ್ಯಕ್ರಮ ನಡೆಸಿ, ನಂತರ ಎಲ್ಲಾ ತಾಲೂಕುಗಳಲ್ಲೂ ಸಹ ಎಲ್ಲಾ ಉಸ್ತುವಾರಿದಾರರನ್ನೂತಲುಪುವ ಕೈಂಕರ್ಯ ತೊಟ್ಟಿತು. ಆ ಮೂಲಕ ದೂರವೇ ಇದ್ದ ಸ್ಟಿರ್ ಇನ್ನಷ್ಟು ಹತ್ತಿರವಾಯಿತು. 













ಮುಂದೆ ಕ್ಲಸ್ಟರ್ ಸಮಾಲೋಚನಾ ಸಭೆಗಳ ಮೂಲಕ ತನ್ನ ಗುರಿ ಸಾಧನೆಗೆ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಇನ್ನಷ್ಟೇ ಯಶಸ್ಸಿನ ಹಾದಿ ಹಿಡಿಯಬೇಕಿದೆ. ನಮ್ಮೊಳಗಿನ ಬಲವರ್ಧನೆಗೆ ನಾವೇ ನಾಂದಿ ಹಾಡಬೇಕಿದೆ.

Sunday 7 October 2018

ಕೂಗಿ ಕರಿ…ಮುದ್ದನ….ಹಳ್ಳಿ

ಕರಿಮುದ್ದನಹಳ್ಳಿ. ನಿಮಗೆಲ್ಲಾ ಪರಿಚಯಿಸಲೇ ಬೇಕಾದ ಹೆಸರು. ಏಕೀ ಪರಿಚಯ ? ಹೌದು. ಇದರ ಪರಿ ಪರಿಯನ್ನು ಪರಿಚಯಿಸಲೇ ಬೇಕು. ಊರಿನ ಸಾನಿಧ್ಯ ಇರುವವರಿಗೆಲ್ಲಾ ಗೊತ್ತಿದೆ.
ಈ ಊರಿನ ಅಕ್ಷರ ತೇರಿನ ಬಗ್ಗೆ,

ಅಕ್ಕರೆ ಅಕ್ಷರಿಗರ ಬಗ್ಗೆ,

ಸಮುದಾಯದ ನೆರವಿನ ಬಗ್ಗೆ,

ಶಾಲೆಗಳು ಹೂಮಾಲೆ ಆದ ಬಗ್ಗೆ.,

ಮಕ್ಕಳೆಮಗೆ ಬದುಕಾದ ಬಗ್ಗೆ,

ಒಬ್ಬೊಬ್ಬರದ್ದೂ ಒಂದೊಂದು ಬಗೆ.

ಹಲವು ಹೂ ನಗೆ,

ಕೆಲವೇ ಬಣ್ಣನೆ ಹೇಗೆ ?
ನಿಜ. ಹೀಗನಿಸದಿರದು. ಒಂದೊಂದು ಶಾಲೆಯದ್ದೂ ಒಂದೊಂದು ಕಥೆ. ಒಂದೊಂದು ಸಾಹಸಗಾಥೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಹೇಳುವ ಯಾವುದೇ ಒಂದು ದೇಶ ಹಾಗೂ ಸಮಾಜ ಅಲ್ಲಿನ ಶಿಕ್ಷಕರ ಮಟ್ಟವನ್ನು ಮೀರಿರಲು ಸಾಧ್ಯವಿಲ್ಲ ಎಂಬ ಹೇಳಿಕೆಗೆ ಜ್ವಲಂತ ಸಾಕ್ಷಿ ಇಲ್ಲಿದೆ. ಹಲವು ನಿದರ್ಶನಗಳು ಇಲ್ಲಿವೆ. ಇದರ ಯಶೋಪಯಣ ನಮ್ಮ ವಸಂತಯಾನದಲ್ಲಿ ಈಗ ತಾನೆ ಆರಂಭವಾಗುತ್ತಿದೆ. ಇದರ ಮೊದಲ ಕಂತಿನ ಮೊದಲ ಎಪಿಸೋಡ್ ಇದು. 

ಇದು ಸಮಷ್ಠಿ ಸಭೆ. ಸ ಮುಷ್ಠಿ ಸಭೆಯೂ ಹೌದು. ಏಕೆಂದರೆ ವ್ಯಷ್ಟಿ ವ್ಯಷ್ಟಿ ಸ್ವರ ಸಮಷ್ಠಿಯೇ ತಾನಂ…ಎಂಬ ಪುತಿನರ ಮಾತಿನಂತೆ ಸಮಷ್ಠಿಯೊಂದು ತನ್ನ,, ತನ್ನವರ ಏಳ್ಗೆಗೆ ಟೊಂಕಕಟ್ಟಿ ನಿಂತಿದೆ. ಇದಕ್ಕೆ ನಿದರ್ಶನ ಈ ವಿಡಿಯೋ.  ಅಂದಹಾಗೆ ಇದೆಲ್ಲದರ ಹಿಂದೆ ಒಂದು ಪ್ರೇರಣೆ ಇದೆ. ಒಬ್ಬ ವ್ಯಕ್ತಿ ಇದ್ದಾರೆ. ಅವರದ್ದೇ ವ್ಯಕ್ತಿತ್ವವಿದೆ. ವ್ಯಕ್ತಿತ್ವಕ್ಕೆ ತಕ್ಕ ಭಕ್ತಿತ್ವ ಇದೆ. ಭಕ್ತಿ ಬಯಸಿದ್ದಷ್ಟೂ ಶಕ್ತಿತ್ವವೂ ಇದೆ. ಅವರೇ ವಾಸು. ವಾಹ್….ಸು..ಯೋಗ, ಸು…ಮಧುರ…ಸು…ಲಾಭ…. ಸು..ದರ….. ಸು...ಮಾರ್ಗ…. ಸು….ವಾರ್ತೆ ಎಂಬಂತೆ ಅವರ ಕಾರ್ಯ ವೈಖರಿ ಇದೆ. ದಿನಾಂಕ:06-10-2018 ರಂದು ಹೀಗೆ ಆಹ್ವಾನದ ಮೇರೆಗೆ ಇಲ್ಲಿಗೆ ಡಯಟ್ ಪ್ರತಿನಿಧಿಯಾಗಿ ಭೇಟಿ ನೀಡಿದೆ. ನಿಜಕ್ಕೂ ಆಶ್ಯರ್ಯವಾಯಿತು. ನಿಜಕ್ಕೂ ಹೆಮ್ಮೆ ಎನಿಸಿತು. ನಿಜಕ್ಕೂ ಅರ್ಥಪೂರ್ಣವಾಗಿತ್ತು. ನಿಜಕ್ಕೂ ಹ್ಯಾಟ್ಸ್ ಅಪ್ ಎಂದಿತು ಮನಸು. ಮತ್ತೆ ಬರಬೇಕೆನಿಸಿತು. “ ಆನೋ ಭದ್ರಾಃ ಕ್ರತವೋಯಂತು ವಿಶ್ವತಃ” ಎಂಬ ಮಾತಿನಂತೆ ಜಗತ್ತಿನೆಲ್ಲೆಡೆಯಿಂದ ಇಲ್ಲಿಗೆ ಒಳ್ಳೆಯ ಸಂಗತಿಗಳೇ ಹರಿದು ಬರಲಿ ಎಂದು ಆಶಿಸಿದೆ. ಒಳ್ಳೆಯ ಕೆಲಸವನ್ನು ಎಲ್ಲರಿಗೂ ಹಂಚುವ ಎಂದು ಇಲ್ಲಿ ಒಂದಷ್ಟು ತೋಚಿದ್ದು ಗೀಚಿದೆ. ಇದು ಆರಂಭ. ಮುಂದೆ ಇಲ್ಲಿನ ಒಂದೊಂದು ಕಥೆಯನ್ನು ನಿಮ್ಮ ಮುಂದೆ ಇದೆ ವಸಂತಯಾನದಲ್ಲಿ ಬಿಚ್ಚಿಡಬೇಕೆಂಬ ಹಂಬಲ ಇದೆ. ನಿರೀಕ್ಷಿಸಿ…..

ಈ ಕ್ಲಸ್ಟರ್ ನಿಜಕ್ಕೂ ಕ್ಲ್ಯೂ ಸ್ಟಾರ್ ಆಗಿದೆ. ಹಲವು ಸಮಸ್ಯೆಗಳಿಗೆ ಕ್ಲ್ಯೂ ನೀಡುತ್ತಾ…ಸ್ಟಾರ್ ಆಗಿದೆ. pls see this linkhttps://www.facebook.com/100027375706281/posts/168564164066106/


prASHAnth.M.C
Lecturer
Diet,Mysuru

ಟಿಪಿಡಿ ತರಬೇತಿ – ಕನ್ನಡ



ಕನ್ನಡ  ಭಾಷಾ ಸ್ವರೂಪ ಮತ್ತು ಸಂರಚನೆ ಹಾಗು ವ್ಯಾಕರಣ ಕಲಿಕೆಯಲ್ಲಿ ಹೊಸ ದೃಷ್ಟಿಕೋನ ವಿಷಯದ ಟಿಪಿಡಿ ತರಬೇತಿಯು ದಿನಾಂಕ:01-10-2018 ರಿಂದ 06-10-2018 ರವರೆಗೆ ಕೆ.ಆರ್.ನಗರ ಆದರ್ಶ ವಿದ್ಯಾಲಯದಲ್ಲಿ ನಡೆಯಿತು. ಈ ತರಬೇತಿಯಲ್ಲಿ ಪಾಲ್ಗೊಂಡ ಬಗೆ, ಶಿಬಿರಾರ್ಥಿಗಳ ಭಾಗವಹಿಸುವಿಕೆ ಇತ್ಯಾದಿ ಕುರಿತ ಒಂದು ವಿಡಿಯೋ ಇದು. ಇದರ ಯೂಟೂಬ್ ಲಿಂಕ್ ಇಲ್ಲಿದೆ.  https://www.youtube.com/watch?v=4i9Rf1VjAmY&t=6s ಇದನ್ನು ಕ್ಲಿಕ್ಕಿಸುವ ಮೂಲಕವೂ ನೀವು ವಿಡಿಯೋ ವೀಕ್ಷಿಸಬಹುದು. (ಸಲಹೆಗಳಿಗೆ ಸ್ವಾಗತ.)

-prASHAnth.M.C
Lecturer
Diet,Mysuru






NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...