My Blog List

Tuesday, 23 August 2016

ಐಟಿ @ ಸ್ಕೂಲ್ ಸಭೆ

ಹಲವು ಮಹತ್ವಾಕಾಂಕ್ಷೆಗಳೊಂದಿಗೆ ರಾಜ್ಯದ ಆಯ್ದ ಪ್ರೌಢಶಾಲೆಗಳಲ್ಲಿ ತಂತ್ರಜ್ಞಾನ ಆಧರಿತ ಬೋಧನೆ ಆರಂಭಿಸಬೇಕೆಂಬ ಕನಸು ಐಟಿ @ ಸ್ಕೂಲ್ ಯೋಜನೆಯದು. ಪ್ರಸ್ತುತ ನಮ್ಮ ಜಿಲ್ಲೆಯಲ್ಲಿಯೂ 55 ಪ್ರೌಢಶಾಲೆಗಳಲ್ಲಿ ಯೋಜನೆ ಜಾರಿಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಆಯ್ಕೆಗೊಂಡಿರುವ ಪ್ರೌಢಶಾಲೆಗಳಲ್ಲಿ ಮಾಡಿಕೊಳ್ಳಬೇಕಾದ ಪೂರ್ವ ತಯಾರಿ ಕುರಿತು ಮುಖ್ಯಶಿಕ್ಷಕರೊಂದಿಗೆ ಚರ್ಚೆ ನಡೆಸಲಾಯಿತು.

ಸಭೆಯನ್ನುದ್ದೇಶಿಸಿ ಪ್ರಾಂಶುಪಾಲರು ಮಾತನಾಡುತ್ತಿರುವುದು

ಸಭೆಯಲ್ಲಿರುವ ಮುಖ್ಯಶಿಕ್ಷಕರು

ಸಭೆಯಲ್ಲಿರುವ ಮುಖ್ಯಶಿಕ್ಷಕರು

ಐಟಿ@ಸ್ಕೂಲ್ ನೋಡಲ್ ಅಧಿಕಾರಿಗಳಾದ ಶ್ರೀ ಸ್ವಾಮಿ.ಎಸ್ ರವರು ಮಾತನಾಡುತ್ತಿರುವುದು.

ಡಿ.ಎಸ್.ಇ.ಆರ್.ಟಿ ನಿರ್ದೇಶಕರ ಮೊದಲ ಭೇಟಿ

ರಾಜ್ಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಮೈಸೂರಿನ ಡಯಟ್ ಗೆ ಭೇಟಿ ನೀಡಿದ ಶ್ರೀಯುತ ಬೆಳ್ಳಶೆಟ್ಟಿರವರು ಹಲವು ಶೈಕ್ಷಣಿಕ ವಿಚಾರಗಳ ಕುರಿತು ಡಯಟ್ ನ ಪ್ರಾಂಶುಪಾಲರು, ಹಿರಿಯ ಉಪನ್ಯಾಸಕರು, ಉಪನ್ಯಾಸಕರೊಂದಿಗೆ ಚರ್ಚೆ ನಡೆಸಿದರು.




Wednesday, 17 August 2016

ವಿವಿಧತೆಯಲ್ಲಿ ಏಕತೆ

ಮೈಸೂರು ಜಿಲ್ಲೆಯೆಲ್ಲೆಡೆ ಕೂಡ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಅದರ ವಿವಿಧ ನೋಟಗಳಿವು.


ಮೈಸೂರು ವಿಭಾಗದ ವಿಭಾಗೀಯ ಕಾರ್ಯದರ್ಶಿಗಳು ಹಾಗು ಸಹ ನಿರ್ದೇಶಕರ ಕಛೇರಿ ಮತ್ತು ಉಪನಿರ್ದೇಶಕರ ಕಛೇರಿಯ ವತಿಯಿಂದ ಜಂಟಿಯಾಗಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಅತಿ ಹೆಚ್ಚು ಅಂಕ ಪಡೆದ ಎಸ್.ಎಸ್.ಎಲ್.ಸಿ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು

.
ಪಿರಿಯಾಪಟ್ಟಣದಲ್ಲಿ ಬೆಂಗಳೂರು ಸುಬ್ಬಣ್ಣನವರ ಸರ್ಕಾರಿ ಪದವಿ ಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ)ನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ವಾತಂತ್ರ್ಯೋತ್ಸವದಂದು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುಸ್ತಕ ಉಡುಗೊರೆ ನೀಡಿದರು.
ಪಿರಿಯಾಪಟ್ಟಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ

ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಪ್ರೌಢಶಾಲೆಯಲ್ಲಿ ನಡೆದ ಸಂಭ್ರಮ


ಡಯಟ್ ನಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಕೆಜಿಬಿವಿ ವಿದ್ಯಾರ್ಥಿನಿಯರು

ಡಯಟ್ ನಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಕೆಜಿಬಿವಿ ವಿದ್ಯಾರ್ಥಿನಿಯರು

ಟಿ.ನರಸೀಪುರ ತಾಲೂಕಿನ ಮೇದಿನಿಯ ಸರ್ಕಾರಿ ಪ್ರೌಢಶಾಲೆಯಲ್ಲಿ

 ಟಿ.ನರಸೀಪುರದ ಕೊತ್ತೇಗಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಗಸ್ಟ್ 14ರ ರಾತ್ರಿ ನಡೆದ ಸ್ವಾತಂತ್ರ್ಯೋತ್ಸವ ಸಂಭ್ರಮ



Tuesday, 16 August 2016

ಡಯಟ್ ನಲ್ಲಿ 70ನೇ ಸ್ವಾತಂತ್ರ್ಯೋತ್ಸವ

ಸ್ವಾತಂತ್ರ್ಯೋತ್ಸವ ಎಂದರೆ ಇಡೀ ದೇಶಕ್ಕೆ ದೇಶವೇ ದೇಶಾಭಿಮಾನದಿಂದ ತುಂಬಿ ಹೊಳೆಯುತ್ತೆ. ಅಂತಹ ಹೊಳಪಿನ ಕಾರ್ಯಕ್ರಮ ನಮ್ಮ ಡಯಟ್ ನಲ್ಲೂ ನಡೆಯಿತು. 15-08-2016ರ ಬೆಳಿಗ್ಗೆ ಡಯಟ್ ನ ಅಂಗಳದಲ್ಲಿ ಕೆಜಿಬಿವಿ ಮಕ್ಕಳ ಕಲರವದಿಂದ ಕಾರ್ಯಕ್ರಮ ಕಳೆಗಟ್ಟಿತ್ತು.
ಸಂಚಲನ ಮೂಡಿಸಿದ ಆಕರ್ಷಕ ಪಥಸಂಚಲನ

ಸ್ವಾತಂತ್ರ್ಯೋತ್ಸವ ಭಾಷಣ ಮಾಡುತ್ತಿರುವ ಮಾನ್ಯ ಪ್ರಾಂಶುಪಾಲರಾದ ಶ್ರೀ ಆರ್.ರಘುನಂದನ್ ರವರು
ಸ್ವಾತಂತ್ರ್ಯೋತ್ಸವದಲ್ಲಿ ಉಪನ್ಯಾಸಕ ವೃಂದ

ಧ್ವಜವಂದನೆ ಸಲ್ಲಿಸುತ್ತಿರುವ ಕೆಜಿಬಿವಿ ವಿದ್ಯಾರ್ಥಿನಿಯರು

ಯೋಗ ಮಾಡೋಣ,ನವ ಚೈತನ್ಯ ಪಡೆಯೋಣ

ಯೋಗವು ಎಲ್ಲರನ್ನೂ, ಎಲ್ಲವನ್ನೂ ಸಮನ್ವಯಗೊಳಿಸುವ ಕ್ರಿಯೆಯಾಗಿದೆ.ಇಂತಹ ಪವಿತ್ರ ಕ್ರಿಯೆಗೆ ಸಾಕ್ಷಿಯಾಗಿದ್ದು ಕಲ್ಲೂರು ನಾಗನಹಳ್ಳಿಯ ಸರ್ಕಾರಿ ಪ್ರೌಢಶಾಲೆ. ಮೈಸೂರು ಡಯಟ್ ನ ಹಿರಿಯ ಉಪನ್ಯಾಸಕರಾದ ಶ್ರೀ ಎಸ್ . ಸ್ವಾಮಿರವರು ಯೋಗಾಸನಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಟ್ಟರಲ್ಲದೆ ಪ್ರಾಣಾಯಾಮ,ಧ್ಯಾನದ ಅಭ್ಯಾಸವನ್ನು ಮಾಡಿಸಿ, ಯೋಗವು ದೇಹ ಮತ್ತು ಮನಸ್ಸುಗಳನ್ನು ಬೆಸೆಯುವ, ತನ್ಮೂಲಕ  ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಉತ್ತಮ ಸಾಧನವಾಗಿದೆ ಎಂದು ಸವಿವರವಾಗಿ ತಿಳಿಸಿದರು.

ಜಿಲ್ಲೆಯ ವಿವಿಧ ಶಾಲೆಗಳಲ್ಲಿಯೂ ಯೋಗ ದಿನಾಚರಣೆಯನ್ನು ಬಹಳ ಉತ್ಸಾಹದಿಂದ ಆಚರಿಸಲಾಯಿತು. ಅದರ ಪ್ರತಿಬಿಂಬಗಳು ಇವು.

ಸರ್ಕಾರಿ ಪ್ರೌಢಶಾಲೆ, ತಿಪ್ಪೂರು, ಕೆ.ಆರ್.ನಗರ ತಾಲೂಕು






ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಸಿ.ಆರ್.ಪಿ, ಬಿ.ಆರ್.ಪಿ ಮತ್ತು ಮುಖ್ಯಶಿಕ್ಷಕರ ಸಭೆ

ಹೆಚ್.ಡಿ.ಕೋಟೆ ತಾಲೂಕಿನ ಸಿ.ಆರ್.ಪಿ, ಬಿ.ಆರ್.ಪಿ ಗಳ ಸಭೆಯನ್ನು ನಡೆಸಲಾಯಿತು. ಬಿ.ಇ.ಓರವರಾದ ಉದಯ್ ಕುಮಾರ್, ತಾಲೂಕು ನೋಡಲ್ ಅಧಿಕಾರಿಗಳಾದ ಶ್ರೀ ಸ್ವಾಮಿ.ಎಸ್, ಸಹಾಯಕ ನೋಡಲ್ ಅಧಿಕಾರಿಗಳಾದ ಪ್ರಶಾಂತ್.ಎಂ.ಸಿ ಮತ್ತು ಎನ್.ಟಿ.ಎಸ್.ಇ&ಎನ್.ಎಂ.ಎಂ.ಎಸ್ ನೋಡಲ್ ಅಧಿಕಾರಿಗಳಾದ ಶ್ರೀಕಂಠಸ್ವಾಮಿ.ಎಂ.ಬಿರವರು ಸಭೆಯಲ್ಲಿ ಚರ್ಚೆ ನಡೆಸಿದರು. 
ಈ ಸಂದರ್ಭದಲ್ಲಿ ಪ್ರಮುಖವಾಗಿ 
  • ಪ್ರಸಕ್ತ ವರ್ಷ ತಾಲೂಕು ವಲಯದಲ್ಲಿ ಕೈಗೊಳ್ಳಲಿರುವ ನಾವಿನ್ಯಯುತ ಶೈಕ್ಷಣಿಕ ಚಟುವಟಿಕೆಗಳ ಕುರಿತು ಚರ್ಚೆ ನಡೆಸಲಾಯಿತು.   
  • ಕ್ಲಸ್ಟರ್ ಗೆ ಒಂದು ಶಾಲೆಯಂತೆ ಪ್ರತಿಕ್ಲಸ್ಟರ್ ನಿಂದ ಹೆಚ್.ಪಿಎಸ್.ಶಾಲೆಯೊಂದನ್ನು ಆಯ್ದುಕೊಂಡು ಸಿ.ಆರ್.ಪಿ ರವರ ಉಸ್ತುವಾರಿಯಲ್ಲಿ ಈ ಶಾಲೆಯಲ್ಲಿ ವ್ಯವಸ್ಥಿತ ಶಾಲಾ ಗ್ರಂಥಾಲಯ ಮತ್ತು ರೀಡಿಂಗ್ ಕಾರ್ನರ್ ನಿರ್ಮಿಸಲು ಸಂಕಲ್ಪತೊಡಲಾಯಿತು.
  • ಮೊದಲಿಗೆ SWATವಿಶ್ಲೇಷಣೆ ಮಾಡಿಕೊಂಡು ಅದರ ಅನ್ವಯ ಕ್ರಿಯಾಯೋಜನೆ ರಚಿಸಿ ಬಳಿಕ ಈ ಪ್ರಾಜೆಕ್ಟ್ ಅನುಷ್ಠಾನ ಕೈಗೊಳ್ಳಲು ನಿರ್ಧರಿಸಲಾಯಿತು. 
  • ಈ ಸಂದರ್ಭದಲ್ಲಿ ಮುಂದಿನ ಪ್ರಾಜೆಕ್ಟ್ ಸಭೆಯನ್ನು ಹೊಮ್ಮರಗಳ್ಳಿಯಲ್ಲಿ ನಡೆಸಲು ಹೊಮ್ಮರಗಳ್ಳಿ ಮುಖ್ಯಶಿಕ್ಷಕರ ಆಹ್ವಾನದ ಮೆರೆಗೆ ಸಮ್ಮಿತಿಸಲಾಯಿತು.


  • ಹಾಗೆಯೇ ಎನ್.ಟಿ.ಎಸ್.ಇ ಮತ್ತು ಎನ್.ಎಂ.ಎಂ.ಎಸ್ ಪರೀಕ್ಷೆ ಪಾಸಾದ ವಿದ್ಯಾರ್ಥಿಗಳ ವಿವರವನ್ನು ತಿಳಿಸಲಾಯಿತು. ಬಳಿಕ ಪಾಸಾದ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಆಧಾರ್ ನೊಂದಣಿ ಮಾಡಿಸಿ(ಸೀಡ್) ಅದರ ಮಾಹಿತಿಗಳನ್ನು ಡಯಟ್ ಗೆ ನೀಡುವಂತೆ ತಿಳಿಸಲಾಯಿತು. ಅಲ್ಲದೇ, ಆಧಾರ್ ಸಂಖ್ಯೆ ಸೀಡ್ ಮಾಡಿಸಲು ಅನುಸರಿಸದಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. 

ಕೆ.ಎಸ್.ಕ್ಯೂ.ಎ.ಎ.ಸಿ ಮತ್ತು ಕೆ.ಎಲ್.ಎ.ಎಸ್ ನಿಂದ ಕಳೆದೆರಡು ವರ್ಷಗಳಲ್ಲಿ ನಡೆಸಲಾದ ಮೌಲ್ಯಾಂಕನಕ್ಕೆ ಒಳಪಟ್ಟ ಶಾಲೆಗಳನ್ನು ನೋಡಲ್ ಅಧಿಕಾರಿಗಳು ಒಳಗೊಂಡಂತೆ ದತ್ತುತೆಗೆದುಕೊಳ್ಳಲಾಯಿತು. ಈ ಶಾಲೆಗಳಿಗೆ ಆಗಿಂದಾಗ್ಗೆ ಭೇಟಿ ನೀಡಿ ಸೂಕ್ತ ಮಾರ್ಗದರ್ಶನ ನೀಡಲು ತಿಳಿಸಲಾಯಿತು.

  • ಸಿ.ಆರ್.ಪಿ ಮತ್ತು ಬಿ.ಆರ್.ಪಿಗಳು ಭೇಟಿಗಳ ಸಂದರ್ಭದಲ್ಲಿ ಶೈಕ್ಷಣಿಕ ಮೇಲ್ವಿಚಾರಣೆಯನ್ನು ಮಾಡುವ ಸಂದರ್ಭದಲ್ಲಿ ಏನೆಲ್ಲಾ ಅಂಶಗಳ ಬಗ್ಗೆ ಗಮನಕೇಂದ್ರೀಕರಿಸಬೇಕೆಂಬ ಕುರಿತು ಚರ್ಚಿಸಲಾಯಿತು.


Tuesday, 1 March 2016

ಶೈಕ್ಷಣಿಕ ಸ್ಪಂದನ

ಡಿ.ಎಸ್.ಇ.ಆರ್.ಟಿ, ಬೆಂಗಳೂರು ರವರಿಂದ ಮೈಸೂರು ಡಯಟ್ ನಲ್ಲಿ ನಡೆದ "ಶೈಕ್ಷಣಿಕ ಸ್ಪಂದನ" ಕಾರ್ಯಕ್ರಮದ ಕ್ಷಣಗಳು
ಎಲ್ಲರನ್ನು ಸ್ವಾಗತಿಸುತ್ತಿರುವ ಹಿರಿಯ ಉಪನ್ಯಾಸಕರಾದ ರಾಜು ಎಂ ರವರು



NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...