ಹೆಚ್.ಡಿ.ಕೋಟೆ ತಾಲೂಕಿನ ಸಿ.ಆರ್.ಪಿ, ಬಿ.ಆರ್.ಪಿ ಗಳ ಸಭೆಯನ್ನು ನಡೆಸಲಾಯಿತು. ಬಿ.ಇ.ಓರವರಾದ ಉದಯ್ ಕುಮಾರ್, ತಾಲೂಕು ನೋಡಲ್ ಅಧಿಕಾರಿಗಳಾದ ಶ್ರೀ ಸ್ವಾಮಿ.ಎಸ್, ಸಹಾಯಕ ನೋಡಲ್ ಅಧಿಕಾರಿಗಳಾದ ಪ್ರಶಾಂತ್.ಎಂ.ಸಿ ಮತ್ತು ಎನ್.ಟಿ.ಎಸ್.ಇ&ಎನ್.ಎಂ.ಎಂ.ಎಸ್ ನೋಡಲ್ ಅಧಿಕಾರಿಗಳಾದ ಶ್ರೀಕಂಠಸ್ವಾಮಿ.ಎಂ.ಬಿರವರು ಸಭೆಯಲ್ಲಿ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರಮುಖವಾಗಿ
- ಪ್ರಸಕ್ತ ವರ್ಷ ತಾಲೂಕು ವಲಯದಲ್ಲಿ ಕೈಗೊಳ್ಳಲಿರುವ ನಾವಿನ್ಯಯುತ ಶೈಕ್ಷಣಿಕ ಚಟುವಟಿಕೆಗಳ ಕುರಿತು ಚರ್ಚೆ ನಡೆಸಲಾಯಿತು.
- ಕ್ಲಸ್ಟರ್ ಗೆ ಒಂದು ಶಾಲೆಯಂತೆ ಪ್ರತಿಕ್ಲಸ್ಟರ್ ನಿಂದ ಹೆಚ್.ಪಿಎಸ್.ಶಾಲೆಯೊಂದನ್ನು ಆಯ್ದುಕೊಂಡು ಸಿ.ಆರ್.ಪಿ ರವರ ಉಸ್ತುವಾರಿಯಲ್ಲಿ ಈ ಶಾಲೆಯಲ್ಲಿ ವ್ಯವಸ್ಥಿತ ಶಾಲಾ ಗ್ರಂಥಾಲಯ ಮತ್ತು ರೀಡಿಂಗ್ ಕಾರ್ನರ್ ನಿರ್ಮಿಸಲು ಸಂಕಲ್ಪತೊಡಲಾಯಿತು.
- ಮೊದಲಿಗೆ SWATವಿಶ್ಲೇಷಣೆ ಮಾಡಿಕೊಂಡು ಅದರ ಅನ್ವಯ ಕ್ರಿಯಾಯೋಜನೆ ರಚಿಸಿ ಬಳಿಕ ಈ ಪ್ರಾಜೆಕ್ಟ್ ಅನುಷ್ಠಾನ ಕೈಗೊಳ್ಳಲು ನಿರ್ಧರಿಸಲಾಯಿತು.
- ಈ ಸಂದರ್ಭದಲ್ಲಿ ಮುಂದಿನ ಪ್ರಾಜೆಕ್ಟ್ ಸಭೆಯನ್ನು ಹೊಮ್ಮರಗಳ್ಳಿಯಲ್ಲಿ ನಡೆಸಲು ಹೊಮ್ಮರಗಳ್ಳಿ ಮುಖ್ಯಶಿಕ್ಷಕರ ಆಹ್ವಾನದ ಮೆರೆಗೆ ಸಮ್ಮಿತಿಸಲಾಯಿತು.
- ಹಾಗೆಯೇ ಎನ್.ಟಿ.ಎಸ್.ಇ ಮತ್ತು ಎನ್.ಎಂ.ಎಂ.ಎಸ್ ಪರೀಕ್ಷೆ ಪಾಸಾದ ವಿದ್ಯಾರ್ಥಿಗಳ ವಿವರವನ್ನು ತಿಳಿಸಲಾಯಿತು. ಬಳಿಕ ಪಾಸಾದ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಆಧಾರ್ ನೊಂದಣಿ ಮಾಡಿಸಿ(ಸೀಡ್) ಅದರ ಮಾಹಿತಿಗಳನ್ನು ಡಯಟ್ ಗೆ ನೀಡುವಂತೆ ತಿಳಿಸಲಾಯಿತು. ಅಲ್ಲದೇ, ಆಧಾರ್ ಸಂಖ್ಯೆ ಸೀಡ್ ಮಾಡಿಸಲು ಅನುಸರಿಸದಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಕೆ.ಎಸ್.ಕ್ಯೂ.ಎ.ಎ.ಸಿ ಮತ್ತು ಕೆ.ಎಲ್.ಎ.ಎಸ್ ನಿಂದ ಕಳೆದೆರಡು ವರ್ಷಗಳಲ್ಲಿ ನಡೆಸಲಾದ ಮೌಲ್ಯಾಂಕನಕ್ಕೆ ಒಳಪಟ್ಟ ಶಾಲೆಗಳನ್ನು ನೋಡಲ್ ಅಧಿಕಾರಿಗಳು ಒಳಗೊಂಡಂತೆ ದತ್ತುತೆಗೆದುಕೊಳ್ಳಲಾಯಿತು. ಈ ಶಾಲೆಗಳಿಗೆ ಆಗಿಂದಾಗ್ಗೆ ಭೇಟಿ ನೀಡಿ ಸೂಕ್ತ ಮಾರ್ಗದರ್ಶನ ನೀಡಲು ತಿಳಿಸಲಾಯಿತು.
- ಸಿ.ಆರ್.ಪಿ ಮತ್ತು ಬಿ.ಆರ್.ಪಿಗಳು ಭೇಟಿಗಳ ಸಂದರ್ಭದಲ್ಲಿ ಶೈಕ್ಷಣಿಕ ಮೇಲ್ವಿಚಾರಣೆಯನ್ನು ಮಾಡುವ ಸಂದರ್ಭದಲ್ಲಿ ಏನೆಲ್ಲಾ ಅಂಶಗಳ ಬಗ್ಗೆ ಗಮನಕೇಂದ್ರೀಕರಿಸಬೇಕೆಂಬ ಕುರಿತು ಚರ್ಚಿಸಲಾಯಿತು.
No comments:
Post a Comment