ಯೋಗವು ಎಲ್ಲರನ್ನೂ, ಎಲ್ಲವನ್ನೂ ಸಮನ್ವಯಗೊಳಿಸುವ ಕ್ರಿಯೆಯಾಗಿದೆ.ಇಂತಹ ಪವಿತ್ರ ಕ್ರಿಯೆಗೆ ಸಾಕ್ಷಿಯಾಗಿದ್ದು ಕಲ್ಲೂರು ನಾಗನಹಳ್ಳಿಯ ಸರ್ಕಾರಿ ಪ್ರೌಢಶಾಲೆ. ಮೈಸೂರು ಡಯಟ್ ನ ಹಿರಿಯ ಉಪನ್ಯಾಸಕರಾದ ಶ್ರೀ ಎಸ್ . ಸ್ವಾಮಿರವರು ಯೋಗಾಸನಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಟ್ಟರಲ್ಲದೆ ಪ್ರಾಣಾಯಾಮ,ಧ್ಯಾನದ ಅಭ್ಯಾಸವನ್ನು ಮಾಡಿಸಿ, ಯೋಗವು ದೇಹ ಮತ್ತು ಮನಸ್ಸುಗಳನ್ನು ಬೆಸೆಯುವ, ತನ್ಮೂಲಕ ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಉತ್ತಮ ಸಾಧನವಾಗಿದೆ ಎಂದು ಸವಿವರವಾಗಿ ತಿಳಿಸಿದರು.
ಜಿಲ್ಲೆಯ ವಿವಿಧ ಶಾಲೆಗಳಲ್ಲಿಯೂ ಯೋಗ ದಿನಾಚರಣೆಯನ್ನು ಬಹಳ ಉತ್ಸಾಹದಿಂದ ಆಚರಿಸಲಾಯಿತು. ಅದರ ಪ್ರತಿಬಿಂಬಗಳು ಇವು.
ಸರ್ಕಾರಿ ಪ್ರೌಢಶಾಲೆ, ತಿಪ್ಪೂರು, ಕೆ.ಆರ್.ನಗರ ತಾಲೂಕು |
No comments:
Post a Comment