My Blog List
Wednesday, 18 December 2019
Friday, 13 December 2019
ಜಂಟಿ ನಿರ್ದೇಶಕರ ಭೇಟಿ
ಇಂದು ಡಿ.ಎಸ್.ಇ.ಆರ್.ಟಿ
ಜಂಟಿನಿರ್ದೇಶಕರಾದ ಶ್ರೀಮತಿ ಗಾಯಿತ್ರಿದೇವಿಯವರು ಭೇಟಿ ನೀಡಿದ್ದರು. ಡಯಟ್ ಮೈಸೂರಿನಲ್ಲಿ ನಡೆಯುತ್ತಿದ್ದ
ವಿವಿಧ ತರಬೇತಿಗಳಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಟ್ಯಾಲ್ಪ್ ತರಬೇತಿಗೆ ಆಗಮಿಸಿದ ಅವರು ತರಬೇತಿ ಪಡೆಯುತ್ತಿದ್ದ ಶಿಕ್ಷಕರೊಂದಿಗೆ ಸಂವಾದ ನಡೆಸಿದರು. ಶಿಕ್ಷಕರ ಅಭಿಪ್ರಾಯ ಕೇಳಿದರು.
ತಾವೂ ಸಹ ಶಿಬಿರಾರ್ಥಿಗಳಿಗೆ ಕನ್ನಡ ಟೈಪಿಂಗ್ ಮತ್ತು UNDO , CONTROL+Z , ಬಳಕೆಯ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಲ್ಲದೇ, ಟ್ಯಾಲ್ಪ್ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ಇದರಿಂದ ಶಿಕ್ಷಕರು ಸ್ಮಾರ್ಟ್ ಆಗಲಿದ್ದಾರೆ. ಶಿಕ್ಷಕರೆಲ್ಲಾ ಒಂದು ಶಕ್ತಿ ಇದ್ದಂತೆ ಎಂದು ಶಿಕ್ಷಕರನ್ನು ಹುರಿದುಂಬಿಸಿದರು.
Thursday, 5 December 2019
ಇ-ಕಂಟೆಂಟ್ ಕಮಿಟ್ಮೆಂಟ್
ಇ-ಕಂಟೆಂಟ್. ಟ್ಯಾಲ್ಪ್ ತರಬೇತಿಗಳ ಮುಂದುವರಿದ ಭಾಗ. 2016-17ನೇ ಸಾಲಿನಲ್ಲಿ ಟ್ಯಾಲ್ಪ್ ಗೆ ಆಯ್ಕೆಗೊಂಡ ಶಾಲೆಗಳಲ್ಲಿ ಇಬ್ಬರು ಶಿಕ್ಷಕರು ಈ ಇ-ಕಂಟೆಂಟ್ ತರಬೇತಿ ಪಡೆದಿದ್ದಾರೆ. ಪ್ರಸ್ತುತ ಶಾಲೆಗಳಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಈ ತರಬೇತಿಯು ಅನುಷ್ಠಾನಗೊಂಡಿದ್ದು, ಅದರ ವಿವಿಧ ಶಾಲೆಯ ಚಿತ್ರಗಳು ಇಂತಿವೆ.
ಸರ್ಕಾರಿ ಪ್ರೌಢಶಾಲೆ, ಹಂಪಾಪುರ, ಕೆ.ಆರ್.ನಗರ
ತಾ.
|
ಸರ್ಕಾರಿ ಪ್ರೌಢಶಾಲೆ, ಹಂಪಾಪುರ, ಕೆ.ಆರ್.ನಗರ
ತಾ.
|
Add caption |
ಸರ್ಕಾರಿ ಪ್ರೌಢಶಾಲೆ, ಎನ್.ಆರ್.ಮೊಹಲ್ಲಾ,ಮೈಸೂರು
ಉತ್ತರ
|
Wednesday, 4 December 2019
ಇ-ತ್ಯಾಜ್ಯ ನಿರ್ವಹಣೆ ಸಭೆ
ಈ ದಿನ ಮೈಸೂರು ಡಯಟ್ ನಲ್ಲಿ ನಡೆದ ಇ-ತ್ಯಾಜ್ಯ ನಿರ್ವಹಣೆ ಮತ್ತು ಡಯಟ್ ತರಬೇತಿಗಳ ಸಂಬಂಧ
ಸಭೆಯಲ್ಲಿ ಮೈಸೂರು ಜಿಲ್ಲೆಯ ಕ್ಷೇತ್ರಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ತಂಡ
ಭಾಗವಹಿಸಿತ್ತು. ಸಭೆಯಲ್ಲಿ ಈ ಕೆಳಕಂಡ ವಿಷಯಗಳನ್ನು ಚರ್ಚಿಸಲಾಯಿತು.
ಮೊದಲಿಗೆ ಇ-ತ್ಯಾಜ್ಯ ಮತ್ತು ಇ ಆಸ್ತಿ ನಿರ್ವಹಣೆ ಸಂಬಂಧ ಕೈಪಿಡಿಯ ಮಾಹಿತಿಗಳನ್ನು ಹಂಚಿಕೊಳ್ಳಲಾಯಿತು.ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ಶ್ರೀಮತಿ ಭಾಗ್ಯಲಕ್ಷ್ಮೀರವರು ಈ ಬಗ್ಗೆ ವಿವರಿಸಿದರು.
ಮೊದಲಿಗೆ ಇ-ತ್ಯಾಜ್ಯ ಮತ್ತು ಇ ಆಸ್ತಿ ನಿರ್ವಹಣೆ ಸಂಬಂಧ ಕೈಪಿಡಿಯ ಮಾಹಿತಿಗಳನ್ನು ಹಂಚಿಕೊಳ್ಳಲಾಯಿತು.ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ಶ್ರೀಮತಿ ಭಾಗ್ಯಲಕ್ಷ್ಮೀರವರು ಈ ಬಗ್ಗೆ ವಿವರಿಸಿದರು.
- ಪ್ರತಿ ಶಾಲೆಗಳಲ್ಲಿ ಮತ್ತು ವಲಯ ಮಟ್ಟದಲ್ಲಿ ಮೊದಲಿಗೆ ಈ ಸಂಭಂಧ ಇ-ಕೋಶ ರಚಿಸಲು ತಿಳಿಸಲಾಯಿತು.
- ಸುತ್ತೋಲೆಯಲ್ಲಿ ತಿಳಿಸಿರುವಂತೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ, ತಾಲೂಕು ಹಂತದ ಕಚೇರಿಗಳಲ್ಲಿ, ಜಿಲ್ಲಾ ಹಂತದ ಕಚೇರಿಗಳಲ್ಲಿ ಇರುವ ಇ ಆಸ್ತಿಗಳನ್ನು ಅವುಗಳ ಸ್ಥಿತಿಗತಿ ಆಧರಿಸಿ ನಿಗದಿಪಡಿಸಿರುವ ನಮೂನೆಯಲ್ಲಿ ಮಾಹಿತಿಗಳನ್ನು ಕ್ರೋಢೀಕರಿಸಿ ತಾಲೂಕು ಹಂತಕ್ಕೆ , ನಂತರ ಜಿಲ್ಲಾ ಹಂತಕ್ಕೆ ರವಾನಿಸಲು ತಿಳಿಸಲಾಯಿತು.
- ನಂತರ ಟ್ಯಾಲ್ಪ್ ಅಥವ ಐಟಿ@ಸ್ಕೂಲ್ಸ್ ಕಾರ್ಯಕ್ರಮದ ಸಂಪೂರ್ಣ ವಿವರವನ್ನು ನೀಡಲಾಯಿತು. ನೋಡಲ್ ಅಧಿಕಾರಿಗಳಾದ ಶ್ರೀ ಪ್ರಶಾಂತ್.ಎಂ.ಸಿರವರು ಮಹತ್ವಾಕಾಂಕ್ಷಿಯ ಕಾರ್ಯಕ್ರಮದ ಅಡಿಯಲ್ಲಿ ನೀಡಲಾಗುತ್ತಿರುವ ತರಬೇತಿ ಮತ್ತು ಅದರ ಸ್ವರೂಪ ಹಾಗು ತರಬೇತಿಯ ಬಳಿಕ ತರಗತಿಗಳಲ್ಲಿ ಅಳವಡಿಸಿಕೊಳ್ಳಬೇಕಾದ ಅಂಶಗಳ ಬಗ್ಗೆಯೂ ವಿವರಿಸಲಾಯಿತು.
- ಜಿಲ್ಲೆಯ ಎಲ್ಲಾ ಬ್ಲಾಕ್ ನ ಸರ್ಕಾರಿ ಪ್ರೌಢಶಾಲೆಗಳಲ್ಲಿಯೂ ಟ್ಯಾಲ್ಪ್ ಶಾಲೆಗಳಲ್ಲಿ ಬ್ಲಾಗ್ ರಚಿಸಲು ತಿಳಿಸಿದ್ದು, ಇವುಗಳನ್ನು ಸಂಭಂಧಿಸಿದ ಕ್ಷೇತ್ರಶಿಕ್ಷಣಾಧಿಕಾರಿಗಳು ಉಸ್ತುವಾರಿ ಮಾಡಲು ತಿಳಿಸಲಾಯಿತು.
- ಆರ್.ಎಂ.ಎಸ್.ಎ ತರಬೇತಿ ಸಂಬಂಧ ಮಾಹಿತಿಯನ್ನು ನೋಡಲ್ ಅಧಿಕಾರಿಗಳಾದ ಶ್ರೀ ಚಂದ್ರಕಾಂತ್ ಸರ್ ಹಂಚಿಕೊಂಡರು. ನಿಗದಿಪಡಿಸಿರುವ ಗುರಿ ತಲುಪಲು ಮುಂದಿನ ತರಬೇತಿಗಳಿಗೆ ಶಿಕ್ಷಕರನ್ನು ಮತ್ತು ಸಂಪನ್ಮೂಲ ವ್ಯಕ್ತಿಗಳನ್ನು ಕಳುಹಿಸಿಕೊಡಲು ತಿಳಿಸಲಾಯಿತು.
- ಇದೇ ವೇಳೆ ಗುರುಚೇತನ ತರಬೇತಿ ಬಗ್ಗೆ ವಿವರಣೆಯನ್ನು ನೋಡಲ್ ಅಧಿಕಾರಿಗಳಾದ ಶ್ರೀ ಚಂದ್ರಶೇಖರ್ ರವರು ವಿವರಿಸಿದರು.
- ಈ ಸಂದರ್ಭದಲ್ಲಿ ಓದು ಕರ್ನಾಟಕ ಮತ್ತು ಗಣಿತ ಕಲಿಕಾಂದೋಲನ ತರಬೇತಿಯ ನೋಡಲ್ ಅಧಿಕಾರಿಗಳಾದ ಶ್ರೀ ನಂಜುಂಡಾರಾಧ್ಯ ರವರು ತಮ್ಮ ಗುರಿ-ಸಾಧನೆಯ ಬಗ್ಗೆ ವಿವರಿಸಿದರು
- NISHTHA ತರಬೇತಿಯ ಉದ್ದೇಶ ಮತ್ತು ಮುಂದಿನ ದಿನಗಳಲ್ಲಿ KRP&SRP ಗಳನ್ನು ಬಳಸಿಕೊಂಡು ಕೈಗೊಳ್ಳಬೇಕಾದ ತರಬೇತಿಗಳ ಬಗ್ಗೆ ಶ್ರೀಮತಿ ರಾಧಾಮಣಿ ರವರು ವಿವರಿಸಿದರು.
- ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಸಂಭಂಧ ವಲಯ ಮಟ್ಟದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಕ್ಷೇತ್ರಶಿಕ್ಷಣಾಧಿಕಾರಿಗಳೋಂದಿಗೆ ವಿಭಾಗದ ಮುಖ್ಯಸ್ಥರಾದ ಶ್ರೀ ಸಿ.ನಾಗರಾಜಯ್ಯನವರು ಚರ್ಚಿಸಿದರು.
Saturday, 30 November 2019
2016-17ನೇ ಸಾಲಿನ ಐಟಿ@ಸ್ಕೂಲ್ಸ್ ಶಾಲೆಗಳಲ್ಲಿ ಅನುಷ್ಠಾನಗೊಳ್ಳಲಿರುವ ವಿದ್ಯಾರ್ಥಿ ಇ-ಕಂಟೆಂಟ್ ಸಂಬಂಧ ಮುಖ್ಯಶಿಕ್ಷಕರ ಸಭೆ
2016-17ನೇ ಸಾಲಿನ ಐಟಿ@ಸ್ಕೂಲ್ಸ್
ಶಾಲೆಗಳಲ್ಲಿ ಅನುಷ್ಠಾನಗೊಳ್ಳಲಿರುವ ವಿದ್ಯಾರ್ಥಿ ಇ-ಕಂಟೆಂಟ್ ಸಂಬಂಧ ಮುಖ್ಯಶಿಕ್ಷಕರ ಸಭೆಯಲ್ಲಿ ಚರ್ಚಿತ
ವಿಷಯಗಳು.
·
ಮಾನ್ಯ ಪ್ರಾಂಶುಪಾಲರಾದ ಕೆ.ಮಹದೇವಪ್ಪನವರು
ಪ್ರಾಸ್ತಾವಿಕವಾಗಿ ಇಂದಿನ ಸಭೆಯ ಮಹತ್ವವನ್ನು ಮುಖ್ಯಶಿಕ್ಷಕರಿಗೆ ವಿವರಿಸಿದರು.
·
ವಾರದಲ್ಲಿ 3 ಅವಧಿ ಐಸಿಟಿಗೆ ನಿಗದಿಪಡಿಸಬೇಕು.
·
ತರಬೇತಿ ಪಡೆದ ಎಲ್ಲಾ ಶಿಕ್ಷಕರಿಗೂ ಸಮನಾಗಿ
ಅವಧಿ ಹಂಚಿಕೆ ಆಗಬೇಕು.
·
8ನೇ ತರಗತಿಗೆ ಪ್ರಸ್ತುತ ವರ್ಷ ಅಳವಡಿಕೆ
ಆಗಲಿ.
·
ಇ-ಕಂಟೆಂಟ್ ನಿರ್ವಹಣೆ ಸಂದರ್ಭದಲ್ಲಿ ಎದುರಾಗುವ
ಸಮಸ್ಯೆಗಳ ಪಟ್ಟಿಯನ್ನು ಡಯಟ್ ಗೆ ಮುಖ್ಯಶಿಕ್ಷಕರು ನೀಡಬೇಕು.
·
10ರಲ್ಲಿ 5 ಯುನಿಟ್ ಮಾತ್ರ 3 ತಿಂಗಳ ಅವಧಿಗೆ
ಮಾಡಬೇಕಾಗಿದೆ.
·
ವೆಬ್ ರಿಸೋರ್ಸ್ ಉಳಿದು ಇತರೆ ತರಗತಿಗಳನ್ನು
ನಿರ್ವಹಿಸಬೇಕು.
·
ಸೂಚನೆಗನುಸಾರವಾಗಿ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ
ತರಗತಿಯಲ್ಲಿ ಅಭ್ಯಾಸ ಮಾಡುತ್ತಾರೆ.
·
9ನೇ ತರಗತಿಯಲ್ಲೂ ಇದು ಪ್ರಾಯೋಗಿಕವಾಗಿ ಮುಂದುವರಿಯುತ್ತದೆ.
·
2ನೇ ಹಂತದಲ್ಲಿ ಅಂದರೆ 9ನೇ ತರಗತಿಯಲ್ಲಿ
ಇ-ಪೋರ್ಟ್ ಪೋಲಿಯೋವನ್ನು ಮಗುವು ಸಲ್ಲಿಸಬೇಕಾಗಿರುತ್ತದೆ.
·
2022ರ ಲ್ಲೂ 10ನೇ ತರಗತಿಯ ವಿದ್ಯಾರ್ಥಿಗೆ
ಇದೇ ವಿಷಯ ಪ್ರಾಯೋಗಿಕವಾಗಿ ಅನುಷ್ಠಾನಗೊಳ್ಳಲಿದೆ.
·
ತರಬೇತಿ ಪಡೆದ ಇಬ್ಬರು ಶಿಕ್ಷಕರೇ ಉಳಿದ ಶಿಕ್ಷಕರಿಗೆ
ಮಾರ್ಗದರ್ಶನ ನೀಡಬೇಕು.
·
ಕಂಪ್ಯೂಟರ್ ಲ್ಯಾಬ್ ನಿರ್ವಹಣೆಗೆ ಲಾಗ್ ಪುಸ್ತಕವನ್ನು
ನಿರ್ವಹಣೆ ಮಾಡಬೇಕು.
·
ಶಾಲೆಯಲ್ಲಿರುವ ವಿದ್ಯಾರ್ಥಿಗಳಿಗೆ ಇರುವ
ಕಂಪ್ಯೂಟರ ಗಳನ್ನು ಹಂಚಿಕೆಮಾಡಿ ತರಗತಿ ನಿರ್ವಹಿಸಬೇಕು.
·
ಮುಂದಿನ ದಿನಗಳಲ್ಲಿ ಲ್ಯಾಬ್ ಬಳಕೆ ಸಂಬಂಧ
ಮಾಹಿತಿಯನ್ನುಪಡೆಯಲಿದ್ದೇವೆ.
·
ಇಂದಿನ ಸಭೆಗೆ ಹಾಜರಾಗದ ಮತ್ತು ತರಬೇತಿಗೂ
ಹಾಜರಾಗದ ಮುಖ್ಯಶಿಕ್ಷಕರಿಗೆ ಕಾರಣ ಕೇಳಿ ನೊಟೀಸ್ ನೀಡುವಂತೆ ಸಭೆಯಲ್ಲಿ ಪ್ರಾಂಶುಪಾಲರು ಸೂಚಿಸಿದರು.
·
Sunday, 24 November 2019
ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಶಾಲೆಗಳ ಮುಖ್ಯಶಿಕ್ಷಕರ ಸಭೆ
ಐಟಿ@ಸ್ಕೂಲ್ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆ. ಈ ಯೋಜನೆಯಡಿಯಲ್ಲಿ
ಈಗಾಗಲೇ ಹಂತ ಹಂತವಾಗಿ ಸರ್ಕಾರಿಶಾಲೆಗಳ ಬಲವರ್ಧನೆಗೆ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಶಾಲೆಗಳಿಗೆ
ಲ್ಯಾಪ್ ಟಾಪ್, ಪ್ರೊಜೆಕ್ಟರ್, ಕಂಪ್ಯೂಟರ್ ಲ್ಯಾಬ್, ಕಂಪ್ಯೂಟರ್ ಗಳು, ಶಿಕ್ಷಕರಿಗೆ ತರಬೇತ ಇತ್ಯಾದಿ
ಹಮ್ಮಿಕೊಂಡಿದೆ. ಇದರ ಮುಂದುವರಿದ ಭಾಗವಾಗಿ ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗಡದ ಮಕ್ಕಳೇ ಹೆಚ್ಚಿರುವ
ಶಾಲೆಗಳಲ್ಲಿ ಕಂಪ್ಯೂಟರ್ ಲ್ಯಾಬ್ ಸ್ಥಾಪಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ಇದರ ಭಾಗವಾಗಿ ಡಿ.ಎಸ್.ಇ.ಆರ್.ಟಿ
ನಿರ್ದೇಶದಂತೆ ಮೈಸೂರು ಜಿಲ್ಲೆಯ 45 ಶಾಲೆಗಳಮುಖ್ಯಶಿಕ್ಷಕರ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ
ಇಲಾಖೆ ನಿರ್ದೇಶದನ್ವಯ ಅಗತ್ಯ ಮಾಹಿತಿಗಳನ್ನು ಪಡೆದುಕೊಳ್ಳಲಾಯಿತು.
ಜೊತೆಗೆ ಟೆಲಿಶಿಕ್ಷಣ
ಶಾಲೆಗಳ ಹಸ್ತಾಂತರ ಪ್ರಕ್ರಿಯೆಯನ್ನು ಅವಲೋಕಿಸಲಾಯಿತು. ಟಿನರಸೀಪುರ ಮತ್ತು ಹೆಚ್.ಡಿ.ಕೋಟೆಗಳಲ್ಲಿ
ಈಗಾಗಲೇ ತಲಾ 11 ಶಾಲೆಗಳು ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿದ್ದು, ಉಳಿದ ಶಾಲೆಗಳಲ್ಲೂ ಹಸ್ತಾಂತರ
ಪ್ರಕ್ರಿಯೆಗಳನ್ನು ಕೈಗೊಳ್ಳುತ್ತಿರುವುದಾಗಿ ವಿಷಯವನ್ನು ಹಂಚಿಕೊಳ್ಳಲಾಯಿತು. ನೋಡಲ್ ಅಧಿಕಾರಿಗಳಾದ
ಶ್ರೀಮತಿ ವಿಜಯಶ್ರೀ ಮೇಂ ರವರು ಸಭೆಗೆ ಮಾಹಿತಿ ಹಂಚಿಕೊಂಡರು.
ಇದೇ ವೇಳೆ ಇ ವೇಸ್ಟೇಜ್
ಕಾರ್ಯಕ್ರಮ ಅನುಷ್ಠಾನ ಸಂಬಂಧ ಮಾಹಿತಿಯನ್ನು ಶ್ರೀಮತಿ ಭಾಗ್ಯಲಕ್ಷ್ಮೀ ರವರು ವಿವರಿಸಿದರು. ಶಾಲೆಗಳಲ್ಲಿ
ತೆರೆಯಬೇಕಾದ ಇ-ಕೋಶದ ಬಗ್ಗೆ, ಅದರ ಕಾರ್ಯವೈಖರಿಗಳ
ಬಗ್ಗೆ, ಅನುಪಯುಕ್ತ ವಸ್ತುಗಳ ಪಟ್ಟಿ ಮಾಡುವ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು
ಕಾರ್ಯಕ್ರಮದಲ್ಲಿ
ಇ-ಪ್ರೊಕ್ರ್ಯೂರ್ ಮೆಂಟ್ ಆಪ್ ಬಳಸಿಕೊಂಡು ಎ.ಎಂ.ಸಿ
ಮಾಹಿತಿ ಹೇಗೆ ಒದಗಿಸಬೇಕೆಂಬುದರ ಬಗ್ಗೆ ಮತ್ತು ಐಟಿ@ಸ್ಕೂಲ್ಸ್ ಕಾರ್ಯಕ್ರಮದ ಮಹತ್ವ, ಶಿಕ್ಷಕರ ತರಬೇತಿ
ಪ್ರಕ್ರಿಯೆ ಮತ್ತು ಶಾಲೆಗಳಲ್ಲಿ ವೇಳಾಪಟ್ಟಿ ಅಳವಡಿಕೆ ಹಾಗು ಶಿಕ್ಷಕರ ಪಾಠಗಳನ್ನು ಅವಲೋಕಿಸಿ ಗೂಗಲ್
ಫಾರಂ ಭರ್ತಿ ಮಾಡಬೆಕಾದ ಬಗ್ಗೆ ವಿವರಣೆಯನ್ನು ನೋಡಲ್ ಅಧಿಕಾರಿ ಪ್ರಶಾಂತ್.ಎಂ.ಸಿ ವಿವರಿಸಿದರು.
ಸಭೆಯ ಅಧ್ಯಕ್ಷತೆ
ವಹಿಸಿದ್ದ ಪ್ರಾಂಶುಪಾಲರಾದ ಶ್ರಿ ಮಹದೇವಪ್ಪನವರು ಎಲ್ಲಾ ಮಾಹಿತಿಗಳನ್ನು ಪುನರ್ ವಿಮರ್ಶಿಸಿ, ಹಂಚಿಕೊಂಡರು.
ಶಿವಮೊಗ್ಗೆ ಲಗ್ಗೆ ಇಟ್ಟ ಕ್ಷಣ
ಟಿಇ ಪ್ಲಾನ್ ನಡಿಯಲ್ಲಿ
ಕಳೆದ ವರ್ಷಗಳಿಂದ ಪ್ರತಿ ಡಯಟ್ ತಂಡ ಮತ್ತೊಂದು ಡಯಟ್ ಗೆ ತೆರಳಿ ಪರಸ್ಪರ ತಾವು ಕೈಗೊಂಡಿರುವ ನಾವಿನ್ಯಯುತ
ಚಟುವಟಿಕೆಗಳು, ಶೈಕ್ಷಣಿಕ ಮೇಲುಸ್ತುವಾರಿ ಹಂತಗಳನ್ನು ಅವಲೋಕಿಸಿ ವರದಿ ಮಾಡುತ್ತಿದ್ದು, ಅಂತೆಯೇ
ಶಿವಮೊಗ್ಗೆಯ ಉಪನ್ಯಾಸಕರ ತಂಡ ಮೈಸೂರು ಡಯಟ್ ಗೆ ಆಗಮಸಿತ್ತು. ಸಿಟಿಇ ಮತ್ತು ಡಯಟ್ ನ ವಿವಿಧ ತರಬೇತಿ
ಕೇಂದ್ರಗಳಿಗೆ ತೆರಳಿ ಮತ್ತುಪ್ರಾಂಶುಪಾಲರು ಹಾಗುಉಪನ್ಯಾಸಕರ ಜೊತೆಗೂಡಿ ಚರ್ಚೆ ನಡೆಸಿದರು.
ಮೆಘಾ ಸಂಶೋಧನೆ ಓಘ
ದೇಶದಲ್ಲೇ ಎನ್.ಸಿ.ಇ.ಆರ್.ಟಿ
ವತಿಯಿಂದ ನಡೆಸಲಾಗುತ್ತಿರುವ ಬ್ಲಾಕ್ ಮಟ್ಟದ ಸಂಶೋಧನೆಯು
ಮೈಸೂರು ಜಿಲ್ಲೆಯ ಹುಣಸೂರು ವಲಯದಲ್ಲಿ ಮುಂದುವರಿದಿದೆ.
ಈಗಾಗಲೇ ಬೇಸ್ ಲೈನ್ ಸರ್ವೆ ಹಂತ ಕಾರ್ಯ ಕಳೆದ ವರ್ಷವೇ ಮುಗಿದ್ದಿದ್ದು, ಪ್ರಸ್ತುತ ವರ್ಷ ಹಲವು ಟಾಸ್ಕ್
ಪೋರ್ಸ್ ಗಳ ನೇತೃತ್ವದಲ್ಲಿ ಶಿಕ್ಷಕರಿಗೆ ತರಬೇತಿ ನೀಡುವ ಕಾರ್ಯ ನಡೆಯುತ್ತಿದೆ. ಇದರ ಮುಂದುವರಿದ
ಭಾಗವಾಗಿ ಮೆಘಾ ಸಂಶೋಧನೆಯ ಪ್ರಕ್ರಿಯೆಯನ್ನು ವೀಕ್ಷಿಸಲು
ರಾಷ್ಟ್ರ ಹಂತದ ತಂಡ ಹುಣಸೂರಿಗೆ ಭೇಟಿ ನೀಡಿತ್ತು.
ದಿನಾಂಕ:16-11-2019 ರ ಶನಿವಾರದಂದು ಮೈಸೂರಿನ
ಪ್ರಾದೇಶಿಕ ಶಿಕ್ಷಣ ಸಂಸ್ಥೆ(ಆರ್.ಐ.ಇ) ನಾಲ್ಕು ತಂಡಗಳಲ್ಲಿ ಹುಣಸೂರು ವಲಯದ ಸರ್ಕಾರಿ ಪ್ರೌಢಶಾಲೆ,
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಭೇಟಿ ಮಾಡಿತು. ತಂಡದ
ನೇತೃತ್ವವನ್ನು ಎನ್.ಸಿ.ಇ.ಆರ್.ಟಿ ಯ ತಂಡದ ಸಾರಥ್ಯ ವಹಿಸಿದ್ದ ಫ್ರೋ.ಶ್ರೀವತ್ಸ, ಭೋಪಾಲ್ ಆರ್.ಐ.ಇ
ಪ್ರಾಂಶುಪಾಲರಾದ ಫ್ರೋ.ಪ್ರಧಾನ್, ಮತ್ತು ಆರ್.ಐ.ಇ,ಮೈಸೂರಿನ ಮುಖ್ಯಸ್ಥರಾದ ಫ್ರೋ.ಶ್ರೀಕಾಂತ್ ಮತ್ತು
ಸಂಶೋಧನೆಯ ಸಾರಥ್ಯವಹಿಸಿಕೊಂಡಿರುವ ಫ್ರೋ.ವೆಂಕಟೇಶಮೂರ್ತಿ ರವರು ಮತ್ತು ಅವರ ತಂಡ ಈ ಹಲವು ಮಾರ್ಗಗಳ ನೇತೃತ್ವ ವಹಿಸಿದ್ದರು.
- ಒಂದನೇ ತರಗತಿಯಿಂದ ಹತ್ತನೇ ತರಗತಿಯ ವರೆಗಿನ ಮಕ್ಕಳ ಕಲಿಕಾಮಟ್ಟವನ್ನು ಅಳೆಯಲಾಯಿತು.
- ಈ ಹಿಂದೆ ತರಬೇತಿ ಪಡೆದಿರುವ ಶಿಕ್ಷಕರು ತರಗತಿಪ್ರಕ್ರಿಯೆಗಳಲ್ಲಿ ಅಳವಡಿಸಿಕೊಂಡಿರುವ ನಾವಿನ್ಯಯುತ ಚಟುವಟಿಕೆಗಳನ್ನು ಪರಿಶೀಲಿಸಿದರು.
- ಶಿಕ್ಷಕರ ಸಮಸ್ಯೆಗಳನ್ನು ಆಲಿಸಿದರು. ಶಿಕ್ಷಕರಿಗೆ ಹೇಗೆ ನೆರವು ಆರ್.ಐ.ಇ ವತಿಯಿಂದ ಬೇಕೆಂಬುದನ್ನು ತಿಳಿಸಿದರು.
- ಎಸ್.ಡಿ.ಎಂ.ಸಿ ಸದಸ್ಯರ ಜೊತೆ ಚರ್ಚಸಿದರು. ಹೇಗೆ ಶಾಲೆಗೆ ಈ ಸದಸ್ಯರು ನೆರವಾಗುತ್ತಿದ್ದಾರೆ ಎಂಬುದನ್ನು ಅರಿತರು.
ಪ್ರತಿ ಶಾಲೆಗಳು
ಸಹ ಅತಿಥಿಗಳ ಸ್ವಾಗತಕ್ಕೆ ಸಜ್ಜುಗೊಂಡಿದ್ದವು. ಕಡೆಯದಾಗಿ ಹುಣಸೂರು ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ
ಸಿಟಿಇ ಪ್ರಾಂಶುಪಾಲರು ಮತ್ತು ಜಂಟಿನಿರ್ದೇಶಕರಾದ ಶ್ರಿಮತಿ ಗೀತಾಂಬರವರು, ಸಿಟಿಇ ರೀಡರ್ ಮತ್ತು ಕಾರ್ಯಕ್ರಮದ
ಉಸ್ತುವಾರಿಯವರಾದ ಶ್ರೀಮತಿ ಮಂಜುಳಾ ಮೇಂ ರವರು, ಡಿಡಿಪಿಐ ಆಡಳಿತರವರಾದ ಶ್ರೀ ಡಾ.ಪಾಂಡುರಂಗರವರು
ಮತ್ತು ಕ್ಷೇತ್ರಶಿಕ್ಷಣಾಧಿಕಾರಿಗಳಾದ ಶ್ರೀ ನಾಗರಾಜು.ಎಸ್.ಪಿ ಮತ್ತು ಡಯಟ್ ನೋಡಲ್ ಅಧಿಕಾರಿಗಳಾದ
ಶ್ರೀ ಪ್ರಶಾಂತ್.ಎಂ.ಸಿ ರವರು ಹಾಜರಿದ್ದರು. ತಾಲೂಕಿನ ಎಲ್ಲಾ ಸಿ.ಆರ್.ಪಿಗಳು ಸಭೆಯಲ್ಲಿ ಹಾಜರಿದ್ದರು.
Tuesday, 22 October 2019
Wednesday, 18 September 2019
೨೦೧೯-೨೦ನೇ ಸಾಲಿನ ಗ್ರೂಪ್ - ೨ ರ ಮೊದಲ ತಂಡದ ತರಬೇತಿ
ದಿನಾಂಕ: ೧೬-೦೯-೨೦೧೯ ರಿಂದ ೨೫-೦೯-೨೦೧೯ರವರೆಗೆ ೨೦೧೯-೨೦ನೇ ಸಾಲಿನ ಶಾಲೆಗಳ ಮೊದಲನೇ ತಂಡದ ತರಬೇತಿಯನ್ನು ಡಯಟ್ ನಲ್ಲಿ ಆರಂಭಿಸಲಾಗಿದೆ. ಪ್ರಸ್ತುತ ಬ್ಯಾಚ್ ನಲ್ಲಿ ೪೨ ಶಿಬಿರಾರ್ಥಿಗಳು ಇದ್ದು, ಬಹಳ ಸಂತೋಷವಾಗಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಹೊಸ ಹೊಸ ವಿಷಯಗಳ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ನಮ್ಮ ಸರ್ಕಾರಿ ಶಾಲೆಗಳಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡುವ ಮನಸು ಹೊಂದಿದ್ದಾರೆ.
೨೦೧೯-೨೦ನೇಸಾಲಿನ ಶಾಲೆಗಳ - ಇಂಡಕ್ಷನ್ ೨ನೇ ತಂಡ
ದಿನಾಂಕ: ೧೧-೦೯-೨೦೧೯ ರಿಂದ ೨೦-೦೯-೨೦೧೯ರವರೆಗೆ ೨೦೧೯-೨೦ನೇ ಸಾಲಿನ ಶಾಲೆಗಳ ಎರಡನೇ ತಂಡದ ತರಬೇತಿಯನ್ನು ಡಯಟ್ ನಲ್ಲಿ ಆರಂಭಿಸಲಾಗಿದೆ. ಪ್ರಸ್ತುತ ಬ್ಯಾಚ್ ನಲ್ಲಿ ೪೨ ಶಿಬಿರಾರ್ಥಿಗಳು ಇದ್ದು, ಬಹಳ ಸಂತೋಷವಾಗಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಹೊಸ ಹೊಸ ವಿಷಯಗಳ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ನಮ್ಮ ಸರ್ಕಾರಿ ಶಾಲೆಗಳಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡುವ ಮನಸು ಹೊಂದಿದ್ದಾರೆ.
Subscribe to:
Posts (Atom)
NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ
NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...
-
ಯಾವುದೇ ಒಂದು ದೇಶ ಹಾಗೂ ಸಮಾಜ ಅಲ್ಲಿನ ಶಿಕ್ಷಕರ ಮಟ್ಟವನ್ನು ಮೀರಿರಲು ಸಾಧ್ಯವಿಲ್ಲ” ಎನ್ನುವ ಹೇಳಿಕೆ, ಶಿಕ್ಷಕರ ಶಕ್ತಿ ಹಾಗೂ ಮಹತ್ವವನ್ನು ಸಾರಿ ಹೇಳುತ್ತದೆ. ಸಮಾಜದ ನ...
-
ಡಯಟ್ ಎಂದಾಕ್ಷಣ ಶರೀರದ ಏರುಪೇರು ಸರಿಪಡಿಸಲು ಮಾಡುವ ಪಥ್ಯ ಎಂಬುದೇ ಸಾಮಾನ್ಯರ ಭಾವನೆ. ಆದರೆ, ಡಯಟ್ ಅರ್ಥಾತ್ DISTRICT INSTITUTE OF EDUCATION AND TRAINING (...
-
ಇಂದು ಆರ್.ಎಂ.ಎಸ್.ಎ ನಿರ್ದೇಶಕರಾದ ಶ್ರೀ ನಾಗೇಂದ್ರ ಮಧ್ಯಸ್ಥರ ಸರ್ ಮತ್ತು ನಲಿಕಲಿ ಕೋಶದ ಮುಖ್ಯಸ್ಥರಾದ ಶ್ರೀ ಬೆಳ್ಳಶೆಟ್ಟರು ಹಾಗು ರಾಜ್ಯ ಮಟ್ಟದ ಅಧಿಕಾರಿಗಳ ಸಾರಥ್...