My Blog List

Wednesday, 4 December 2019

ಇ-ತ್ಯಾಜ್ಯ ನಿರ್ವಹಣೆ ಸಭೆ

ಈ ದಿನ ಮೈಸೂರು ಡಯಟ್ ನಲ್ಲಿ ನಡೆದ ಇ-ತ್ಯಾಜ್ಯ ನಿರ್ವಹಣೆ ಮತ್ತು ಡಯಟ್ ತರಬೇತಿಗಳ ಸಂಬಂಧ ಸಭೆಯಲ್ಲಿ ಮೈಸೂರು ಜಿಲ್ಲೆಯ ಕ್ಷೇತ್ರಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ತಂಡ ಭಾಗವಹಿಸಿತ್ತು. ಸಭೆಯಲ್ಲಿ ಈ ಕೆಳಕಂಡ ವಿಷಯಗಳನ್ನು ಚರ್ಚಿಸಲಾಯಿತು. 

ಮೊದಲಿಗೆ ಇ-ತ್ಯಾಜ್ಯ ಮತ್ತು ಇ ಆಸ್ತಿ ನಿರ್ವಹಣೆ ಸಂಬಂಧ ಕೈಪಿಡಿಯ ಮಾಹಿತಿಗಳನ್ನು ಹಂಚಿಕೊಳ್ಳಲಾಯಿತು.ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ಶ್ರೀಮತಿ ಭಾಗ್ಯಲಕ್ಷ್ಮೀರವರು ಈ ಬಗ್ಗೆ ವಿವರಿಸಿದರು.
  • ಪ್ರತಿ ಶಾಲೆಗಳಲ್ಲಿ ಮತ್ತು ವಲಯ ಮಟ್ಟದಲ್ಲಿ ಮೊದಲಿಗೆ ಈ ಸಂಭಂಧ ಇ-ಕೋಶ ರಚಿಸಲು ತಿಳಿಸಲಾಯಿತು. 
  • ಸುತ್ತೋಲೆಯಲ್ಲಿ ತಿಳಿಸಿರುವಂತೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ, ತಾಲೂಕು ಹಂತದ ಕಚೇರಿಗಳಲ್ಲಿ, ಜಿಲ್ಲಾ ಹಂತದ ಕಚೇರಿಗಳಲ್ಲಿ ಇರುವ ಇ ಆಸ್ತಿಗಳನ್ನು ಅವುಗಳ ಸ್ಥಿತಿಗತಿ ಆಧರಿಸಿ ನಿಗದಿಪಡಿಸಿರುವ ನಮೂನೆಯಲ್ಲಿ ಮಾಹಿತಿಗಳನ್ನು ಕ್ರೋಢೀಕರಿಸಿ ತಾಲೂಕು ಹಂತಕ್ಕೆ , ನಂತರ ಜಿಲ್ಲಾ ಹಂತಕ್ಕೆ ರವಾನಿಸಲು ತಿಳಿಸಲಾಯಿತು.
  • ನಂತರ ಟ್ಯಾಲ್ಪ್  ಅಥವ ಐಟಿ@ಸ್ಕೂಲ್ಸ್ ಕಾರ್ಯಕ್ರಮದ ಸಂಪೂರ್ಣ ವಿವರವನ್ನು ನೀಡಲಾಯಿತು. ನೋಡಲ್ ಅಧಿಕಾರಿಗಳಾದ ಶ್ರೀ ಪ್ರಶಾಂತ್.ಎಂ.ಸಿರವರು ಮಹತ್ವಾಕಾಂಕ್ಷಿಯ ಕಾರ್ಯಕ್ರಮದ ಅಡಿಯಲ್ಲಿ ನೀಡಲಾಗುತ್ತಿರುವ ತರಬೇತಿ ಮತ್ತು ಅದರ ಸ್ವರೂಪ ಹಾಗು ತರಬೇತಿಯ ಬಳಿಕ ತರಗತಿಗಳಲ್ಲಿ ಅಳವಡಿಸಿಕೊಳ್ಳಬೇಕಾದ ಅಂಶಗಳ ಬಗ್ಗೆಯೂ ವಿವರಿಸಲಾಯಿತು. 
  • ಜಿಲ್ಲೆಯ ಎಲ್ಲಾ ಬ್ಲಾಕ್ ನ ಸರ್ಕಾರಿ ಪ್ರೌಢಶಾಲೆಗಳಲ್ಲಿಯೂ ಟ್ಯಾಲ್ಪ್ ಶಾಲೆಗಳಲ್ಲಿ ಬ್ಲಾಗ್ ರಚಿಸಲು ತಿಳಿಸಿದ್ದು, ಇವುಗಳನ್ನು ಸಂಭಂಧಿಸಿದ ಕ್ಷೇತ್ರಶಿಕ್ಷಣಾಧಿಕಾರಿಗಳು ಉಸ್ತುವಾರಿ ಮಾಡಲು ತಿಳಿಸಲಾಯಿತು.

  • ಆರ್.ಎಂ.ಎಸ್.ಎ ತರಬೇತಿ ಸಂಬಂಧ ಮಾಹಿತಿಯನ್ನು ನೋಡಲ್ ಅಧಿಕಾರಿಗಳಾದ ಶ್ರೀ ಚಂದ್ರಕಾಂತ್ ಸರ್ ಹಂಚಿಕೊಂಡರು. ನಿಗದಿಪಡಿಸಿರುವ ಗುರಿ ತಲುಪಲು ಮುಂದಿನ ತರಬೇತಿಗಳಿಗೆ ಶಿಕ್ಷಕರನ್ನು ಮತ್ತು ಸಂಪನ್ಮೂಲ ವ್ಯಕ್ತಿಗಳನ್ನು ಕಳುಹಿಸಿಕೊಡಲು ತಿಳಿಸಲಾಯಿತು.

  •  ಇದೇ ವೇಳೆ ಗುರುಚೇತನ ತರಬೇತಿ ಬಗ್ಗೆ ವಿವರಣೆಯನ್ನು ನೋಡಲ್ ಅಧಿಕಾರಿಗಳಾದ ಶ್ರೀ ಚಂದ್ರಶೇಖರ್ ರವರು ವಿವರಿಸಿದರು. 

  • ಈ ಸಂದರ್ಭದಲ್ಲಿ ಓದು ಕರ್ನಾಟಕ ಮತ್ತು ಗಣಿತ ಕಲಿಕಾಂದೋಲನ ತರಬೇತಿಯ ನೋಡಲ್ ಅಧಿಕಾರಿಗಳಾದ ಶ್ರೀ ನಂಜುಂಡಾರಾಧ್ಯ ರವರು ತಮ್ಮ ಗುರಿ-ಸಾಧನೆಯ ಬಗ್ಗೆ ವಿವರಿಸಿದರು
  • NISHTHA ತರಬೇತಿಯ ಉದ್ದೇಶ ಮತ್ತು ಮುಂದಿನ ದಿನಗಳಲ್ಲಿ KRP&SRP ಗಳನ್ನು ಬಳಸಿಕೊಂಡು ಕೈಗೊಳ್ಳಬೇಕಾದ ತರಬೇತಿಗಳ ಬಗ್ಗೆ ಶ್ರೀಮತಿ ರಾಧಾಮಣಿ ರವರು ವಿವರಿಸಿದರು.
  • ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಸಂಭಂಧ ವಲಯ ಮಟ್ಟದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಕ್ಷೇತ್ರಶಿಕ್ಷಣಾಧಿಕಾರಿಗಳೋಂದಿಗೆ ವಿಭಾಗದ ಮುಖ್ಯಸ್ಥರಾದ ಶ್ರೀ ಸಿ.ನಾಗರಾಜಯ್ಯನವರು ಚರ್ಚಿಸಿದರು.


No comments:

Post a Comment

NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...