My Blog List

Sunday 24 November 2019

ಮೆಘಾ ಸಂಶೋಧನೆ ಓಘ


ದೇಶದಲ್ಲೇ ಎನ್.ಸಿ.ಇ.ಆರ್.ಟಿ ವತಿಯಿಂದ ನಡೆಸಲಾಗುತ್ತಿರುವ  ಬ್ಲಾಕ್ ಮಟ್ಟದ ಸಂಶೋಧನೆಯು ಮೈಸೂರು ಜಿಲ್ಲೆಯ ಹುಣಸೂರು  ವಲಯದಲ್ಲಿ ಮುಂದುವರಿದಿದೆ. ಈಗಾಗಲೇ ಬೇಸ್ ಲೈನ್ ಸರ್ವೆ ಹಂತ ಕಾರ್ಯ ಕಳೆದ ವರ್ಷವೇ ಮುಗಿದ್ದಿದ್ದು, ಪ್ರಸ್ತುತ ವರ್ಷ ಹಲವು ಟಾಸ್ಕ್ ಪೋರ್ಸ್ ಗಳ ನೇತೃತ್ವದಲ್ಲಿ ಶಿಕ್ಷಕರಿಗೆ ತರಬೇತಿ ನೀಡುವ ಕಾರ್ಯ ನಡೆಯುತ್ತಿದೆ. ಇದರ ಮುಂದುವರಿದ ಭಾಗವಾಗಿ   ಮೆಘಾ ಸಂಶೋಧನೆಯ ಪ್ರಕ್ರಿಯೆಯನ್ನು ವೀಕ್ಷಿಸಲು ರಾಷ್ಟ್ರ ಹಂತದ ತಂಡ ಹುಣಸೂರಿಗೆ ಭೇಟಿ ನೀಡಿತ್ತು. 


ದಿನಾಂಕ:16-11-2019 ರ ಶನಿವಾರದಂದು ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆ(ಆರ್.ಐ.ಇ) ನಾಲ್ಕು ತಂಡಗಳಲ್ಲಿ ಹುಣಸೂರು ವಲಯದ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಭೇಟಿ ಮಾಡಿತು. ತಂಡದ ನೇತೃತ್ವವನ್ನು ಎನ್.ಸಿ.ಇ.ಆರ್.ಟಿ ಯ ತಂಡದ ಸಾರಥ್ಯ ವಹಿಸಿದ್ದ ಫ್ರೋ.ಶ್ರೀವತ್ಸ, ಭೋಪಾಲ್ ಆರ್.ಐ.ಇ ಪ್ರಾಂಶುಪಾಲರಾದ ಫ್ರೋ.ಪ್ರಧಾನ್, ಮತ್ತು ಆರ್.ಐ.ಇ,ಮೈಸೂರಿನ ಮುಖ್ಯಸ್ಥರಾದ ಫ್ರೋ.ಶ್ರೀಕಾಂತ್ ಮತ್ತು ಸಂಶೋಧನೆಯ ಸಾರಥ್ಯವಹಿಸಿಕೊಂಡಿರುವ ಫ್ರೋ.ವೆಂಕಟೇಶಮೂರ್ತಿ ರವರು ಮತ್ತು ಅವರ ತಂಡ  ಈ ಹಲವು ಮಾರ್ಗಗಳ ನೇತೃತ್ವ ವಹಿಸಿದ್ದರು.



  • ಒಂದನೇ ತರಗತಿಯಿಂದ ಹತ್ತನೇ ತರಗತಿಯ ವರೆಗಿನ ಮಕ್ಕಳ ಕಲಿಕಾಮಟ್ಟವನ್ನು ಅಳೆಯಲಾಯಿತು.
  • ಈ ಹಿಂದೆ ತರಬೇತಿ ಪಡೆದಿರುವ ಶಿಕ್ಷಕರು ತರಗತಿಪ್ರಕ್ರಿಯೆಗಳಲ್ಲಿ ಅಳವಡಿಸಿಕೊಂಡಿರುವ ನಾವಿನ್ಯಯುತ ಚಟುವಟಿಕೆಗಳನ್ನು ಪರಿಶೀಲಿಸಿದರು.
  • ಶಿಕ್ಷಕರ ಸಮಸ್ಯೆಗಳನ್ನು ಆಲಿಸಿದರು. ಶಿಕ್ಷಕರಿಗೆ ಹೇಗೆ ನೆರವು ಆರ್.ಐ.ಇ ವತಿಯಿಂದ ಬೇಕೆಂಬುದನ್ನು ತಿಳಿಸಿದರು.
  • ಎಸ್.ಡಿ.ಎಂ.ಸಿ ಸದಸ್ಯರ ಜೊತೆ ಚರ್ಚಸಿದರು. ಹೇಗೆ ಶಾಲೆಗೆ ಈ ಸದಸ್ಯರು ನೆರವಾಗುತ್ತಿದ್ದಾರೆ ಎಂಬುದನ್ನು ಅರಿತರು.


ಪ್ರತಿ ಶಾಲೆಗಳು ಸಹ ಅತಿಥಿಗಳ ಸ್ವಾಗತಕ್ಕೆ ಸಜ್ಜುಗೊಂಡಿದ್ದವು. ಕಡೆಯದಾಗಿ ಹುಣಸೂರು ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಟಿಇ ಪ್ರಾಂಶುಪಾಲರು ಮತ್ತು ಜಂಟಿನಿರ್ದೇಶಕರಾದ ಶ್ರಿಮತಿ ಗೀತಾಂಬರವರು, ಸಿಟಿಇ ರೀಡರ್ ಮತ್ತು ಕಾರ್ಯಕ್ರಮದ ಉಸ್ತುವಾರಿಯವರಾದ ಶ್ರೀಮತಿ ಮಂಜುಳಾ ಮೇಂ ರವರು, ಡಿಡಿಪಿಐ ಆಡಳಿತರವರಾದ ಶ್ರೀ ಡಾ.ಪಾಂಡುರಂಗರವರು ಮತ್ತು ಕ್ಷೇತ್ರಶಿಕ್ಷಣಾಧಿಕಾರಿಗಳಾದ ಶ್ರೀ ನಾಗರಾಜು.ಎಸ್.ಪಿ ಮತ್ತು ಡಯಟ್ ನೋಡಲ್ ಅಧಿಕಾರಿಗಳಾದ ಶ್ರೀ ಪ್ರಶಾಂತ್.ಎಂ.ಸಿ ರವರು ಹಾಜರಿದ್ದರು. ತಾಲೂಕಿನ ಎಲ್ಲಾ ಸಿ.ಆರ್.ಪಿಗಳು ಸಭೆಯಲ್ಲಿ ಹಾಜರಿದ್ದರು.


No comments:

Post a Comment

NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...