My Blog List

Sunday 24 November 2019

ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಶಾಲೆಗಳ ಮುಖ್ಯಶಿಕ್ಷಕರ ಸಭೆ




ಐಟಿ@ಸ್ಕೂಲ್  ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆ. ಈ ಯೋಜನೆಯಡಿಯಲ್ಲಿ ಈಗಾಗಲೇ ಹಂತ ಹಂತವಾಗಿ ಸರ್ಕಾರಿಶಾಲೆಗಳ ಬಲವರ್ಧನೆಗೆ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಶಾಲೆಗಳಿಗೆ ಲ್ಯಾಪ್ ಟಾಪ್, ಪ್ರೊಜೆಕ್ಟರ್, ಕಂಪ್ಯೂಟರ್ ಲ್ಯಾಬ್, ಕಂಪ್ಯೂಟರ್ ಗಳು, ಶಿಕ್ಷಕರಿಗೆ ತರಬೇತ ಇತ್ಯಾದಿ ಹಮ್ಮಿಕೊಂಡಿದೆ. ಇದರ ಮುಂದುವರಿದ ಭಾಗವಾಗಿ ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗಡದ ಮಕ್ಕಳೇ ಹೆಚ್ಚಿರುವ ಶಾಲೆಗಳಲ್ಲಿ ಕಂಪ್ಯೂಟರ್ ಲ್ಯಾಬ್ ಸ್ಥಾಪಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ಇದರ ಭಾಗವಾಗಿ ಡಿ.ಎಸ್.ಇ.ಆರ್.ಟಿ ನಿರ್ದೇಶದಂತೆ ಮೈಸೂರು ಜಿಲ್ಲೆಯ 45 ಶಾಲೆಗಳಮುಖ್ಯಶಿಕ್ಷಕರ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಇಲಾಖೆ ನಿರ್ದೇಶದನ್ವಯ ಅಗತ್ಯ ಮಾಹಿತಿಗಳನ್ನು ಪಡೆದುಕೊಳ್ಳಲಾಯಿತು.


ಜೊತೆಗೆ ಟೆಲಿಶಿಕ್ಷಣ ಶಾಲೆಗಳ ಹಸ್ತಾಂತರ ಪ್ರಕ್ರಿಯೆಯನ್ನು ಅವಲೋಕಿಸಲಾಯಿತು. ಟಿನರಸೀಪುರ ಮತ್ತು ಹೆಚ್.ಡಿ.ಕೋಟೆಗಳಲ್ಲಿ ಈಗಾಗಲೇ ತಲಾ 11 ಶಾಲೆಗಳು ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿದ್ದು, ಉಳಿದ ಶಾಲೆಗಳಲ್ಲೂ ಹಸ್ತಾಂತರ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತಿರುವುದಾಗಿ ವಿಷಯವನ್ನು ಹಂಚಿಕೊಳ್ಳಲಾಯಿತು. ನೋಡಲ್ ಅಧಿಕಾರಿಗಳಾದ ಶ್ರೀಮತಿ ವಿಜಯಶ್ರೀ ಮೇಂ ರವರು ಸಭೆಗೆ ಮಾಹಿತಿ ಹಂಚಿಕೊಂಡರು.

ಇದೇ ವೇಳೆ ಇ ವೇಸ್ಟೇಜ್ ಕಾರ್ಯಕ್ರಮ ಅನುಷ್ಠಾನ ಸಂಬಂಧ ಮಾಹಿತಿಯನ್ನು ಶ್ರೀಮತಿ ಭಾಗ್ಯಲಕ್ಷ್ಮೀ ರವರು ವಿವರಿಸಿದರು. ಶಾಲೆಗಳಲ್ಲಿ ತೆರೆಯಬೇಕಾದ  ಇ-ಕೋಶದ ಬಗ್ಗೆ, ಅದರ ಕಾರ್ಯವೈಖರಿಗಳ ಬಗ್ಗೆ, ಅನುಪಯುಕ್ತ ವಸ್ತುಗಳ ಪಟ್ಟಿ ಮಾಡುವ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು

ಕಾರ್ಯಕ್ರಮದಲ್ಲಿ ಇ-ಪ್ರೊಕ್ರ್ಯೂರ್ ಮೆಂಟ್  ಆಪ್ ಬಳಸಿಕೊಂಡು ಎ.ಎಂ.ಸಿ ಮಾಹಿತಿ ಹೇಗೆ ಒದಗಿಸಬೇಕೆಂಬುದರ ಬಗ್ಗೆ ಮತ್ತು ಐಟಿ@ಸ್ಕೂಲ್ಸ್ ಕಾರ್ಯಕ್ರಮದ ಮಹತ್ವ, ಶಿಕ್ಷಕರ ತರಬೇತಿ ಪ್ರಕ್ರಿಯೆ ಮತ್ತು ಶಾಲೆಗಳಲ್ಲಿ ವೇಳಾಪಟ್ಟಿ ಅಳವಡಿಕೆ ಹಾಗು ಶಿಕ್ಷಕರ ಪಾಠಗಳನ್ನು ಅವಲೋಕಿಸಿ ಗೂಗಲ್ ಫಾರಂ ಭರ್ತಿ ಮಾಡಬೆಕಾದ ಬಗ್ಗೆ ವಿವರಣೆಯನ್ನು ನೋಡಲ್ ಅಧಿಕಾರಿ ಪ್ರಶಾಂತ್.ಎಂ.ಸಿ ವಿವರಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಶ್ರಿ ಮಹದೇವಪ್ಪನವರು ಎಲ್ಲಾ ಮಾಹಿತಿಗಳನ್ನು ಪುನರ್ ವಿಮರ್ಶಿಸಿ, ಹಂಚಿಕೊಂಡರು.

No comments:

Post a Comment

NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...