My Blog List

Friday, 13 December 2019

ಜಂಟಿ ನಿರ್ದೇಶಕರ ಭೇಟಿ

ಇಂದು ಡಿ.ಎಸ್.ಇ.ಆರ್.ಟಿ ಜಂಟಿನಿರ್ದೇಶಕರಾದ ಶ್ರೀಮತಿ ಗಾಯಿತ್ರಿದೇವಿಯವರು ಭೇಟಿ ನೀಡಿದ್ದರು. ಡಯಟ್ ಮೈಸೂರಿನಲ್ಲಿ ನಡೆಯುತ್ತಿದ್ದ ವಿವಿಧ ತರಬೇತಿಗಳಿಗೆ ಭೇಟಿ ನೀಡಿದರು.


ಈ ಸಂದರ್ಭದಲ್ಲಿ ಟ್ಯಾಲ್ಪ್ ತರಬೇತಿಗೆ ಆಗಮಿಸಿದ  ಅವರು ತರಬೇತಿ ಪಡೆಯುತ್ತಿದ್ದ ಶಿಕ್ಷಕರೊಂದಿಗೆ ಸಂವಾದ ನಡೆಸಿದರು. ಶಿಕ್ಷಕರ ಅಭಿಪ್ರಾಯ ಕೇಳಿದರು. 


ತಾವೂ ಸಹ ಶಿಬಿರಾರ್ಥಿಗಳಿಗೆ ಕನ್ನಡ ಟೈಪಿಂಗ್ ಮತ್ತು UNDO  , CONTROL+Z , ಬಳಕೆಯ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಲ್ಲದೇ, ಟ್ಯಾಲ್ಪ್ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ಇದರಿಂದ ಶಿಕ್ಷಕರು ಸ್ಮಾರ್ಟ್ ಆಗಲಿದ್ದಾರೆ. ಶಿಕ್ಷಕರೆಲ್ಲಾ ಒಂದು ಶಕ್ತಿ ಇದ್ದಂತೆ ಎಂದು ಶಿಕ್ಷಕರನ್ನು ಹುರಿದುಂಬಿಸಿದರು. 


ಈ ಸಂದರ್ಭದಲ್ಲಿ ಮೈಸೂರು ಡಯಟ್ ಪ್ರಾಂಶುಪಾಲರಾದ ಶ್ರೀ ಕೆ.ಮಹದೇವಪ್ಪನವರು ಹಾಗು ಇವೃತ್ತ ಜಂಟಿನಿರ್ದೇಶಕರಾದ ಶ್ರೀ ಪ್ರಭುಸ್ವಾಮಿ ರವರು, ಆರ್.ಎಂ.ಎಸ್.ಎ ನೊಡಲ್ ಅಧಿಕಾರಿಗಳಾದ ಶ್ರೀ ಚಂದ್ರಕಾಂತ್ ರವರು ಹಾಗು ಟ್ಯಾಲ್ಪ್ ನೋಡಲ್ ಅಧಿಕಾರಿಗಳಾದ ಪ್ರಶಾಂತ್.ಎಂ.ಸಿ ಹಾಗು ಶ್ರೀಮತಿ ಭಾಗ್ಯಲಕ್ಷ್ಮೀರವರು ಉಪಸ್ಥಿತರಿದ್ದರು.

No comments:

Post a Comment

NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...