ಮಾನ್ಯ ಶ್ರೀ ಜಯಕುಮಾರ್ ಸರ್ ರವರು ಸಿಟಿಇ ಮತ್ತು ಡಯಟ್ ಎರಡೂ ಸಂಸ್ಥೆಗಳಿಗೆ ಭೇಟಿ ನೀಡಿದರು. ಬಂದವರೇ ಮೊದಲಿಗೆ ತಮ್ಮ ಸವಿ ನೆನಪನ್ನು ಅಚ್ಚಳಿಯದೆ ಉಳಿಸಿದ್ದು ಸಸಿ ನೆಡುವ ಮೂಲಕ.
ನಂತರ ಡಯಟ್ ನ ಹಿರಿಯ ಉಪನ್ಯಾಸಕರು, ಉಪನ್ಯಾಸಕರೊಂದಿಗೆ ಶೈಕ್ಷಣಿಕ ಸಂವಾದ ನಡೆಸಿದರು.
ಪ್ರಸ್ತುತ ಜಾರಿಗೊಂಡಿರುವ ಹತ್ತು ಅಂಶಗಳ ಕಾರ್ಯಕ್ರಮ ಹೇಗೆ ಅನುಷ್ಠಾನಗೊಳ್ಳುತ್ತಿದೆ ?
ಆರ್.ಇ.ಎಂ.ಎಸ್ ಅಧ್ಯಯನದ ಫಲಶ್ರುತಿಗಳು ಏನು ?
ತರಬೇತಿಗಳ ಸ್ವರೂಪ ಹೇಗಿದೆ ?
ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಸಲಹೆಗಳೇನು ?
ಇತ್ಯಾದಿಯಾಗಿ ಹಲವು ವಿಷಯಗಳ ಕುರಿತು ನಮ್ಮ ಸಂಸ್ಥೆಯ ಶೈಕ್ಷಣಿಕ ಚಿಂತಕರೊಂದಿಗೆ ಚರ್ಚಿಸಿದರು.
ಇದಕ್ಕೂ ಮುನ್ನ ಸಿಟಿಇ ಪ್ರಾಂಗಣಕ್ಕೆ ತೆರಳಿದ್ದರು. ಅಲ್ಲಿರುವ ವಿಜ್ಞಾನ ಪಾರ್ಕ್ ಪರಿವೀಕ್ಷಣೆ ಮಾಡಿದರು. ಹಲವು ಮಾಹಿತಿಯನ್ನು ಪಡೆದರು. ಮಕ್ಕಳಿಗೆ ಉಪಯೋಗವಾಗುವಂತೆ ಈ ಪಾರ್ಕ್ ಅಭಿವೃದ್ಧಿಪಡಿಸಲು ಸಲಹೆ ನೀಡಿದರು.
- Prashanth M C
Lecturer, Diet, Mysore
No comments:
Post a Comment