My Blog List

Thursday 2 October 2014

ಗಾಂಧಿ ಎಂಬ ನಾಂದಿ - ಶಾಸ್ತ್ರಿ ಎಂಬ ಆದರ್ಶ



 
ಭಾರತ ಭಾಗ್ಯವಿಧಾತ
ಈ ಶಾಂತಿಧೂತ.
ಜಯ ಹೇ ಗಾಂಧಿತಾತ.

 ಸತ್ಯಕ್ಕೆ ನಾಂದಿ. ಸತ್ಯಾಗ್ರಹಕ್ಕೆ ನಾಂದಿ.
ಅಹಿಂಸೆಗೆ ನಾಂದಿ. ಅಪರಿಗ್ರಹಕ್ಕೆ ನಾಂದಿ.
ಸ್ವಾತಂತ್ರ್ಯಕ್ಕೆ ನಾಂದಿ. ಸ್ವದೇಶಿ ಮಂತ್ರಕ್ಕೆ ನಾಂದಿ.
ತ್ಯಾಗಕ್ಕೆ ನಾಂದಿ. ಯೋಗಕ್ಕೆ ನಾಂದಿ.
ಹುಲಿಮನಕ್ಕೆ ನಾಂದಿ. ಬಲಿದಾನಕ್ಕೆ ನಾಂದಿ..... 
ಹೀಗೆ ಗಾಂಧಿ ಎಂಬ ಹೆಸರು ಹಲವು ಪ್ರಥಮಗಳಿಗೆ ನಾಂದಿ.  
ಯುಗಯುಗಗಳು ಉರುಳಲಿ. ಶತ ಶತಮಾನಗಳು ಮರಳಲಿ. ಗಾಂಧಿ ಹೆಸರು ಚಿರಸ್ಥಾಯಿ. ಕಾರಣ ಈ ಶಕ್ತಿಯ ವಿವಿಧ ರೂ ಪ. ಈ ವ್ಯಕ್ತಿಯೇ ನಂದಾದೀಪ. ಇಂದು ಗಾಂಧಿ ಜಯಂತಿ. ಹಾಗೆಯೇ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿಯೂ ಸಹ. ಇಂದಿನ ದಿನ ಮಾನ್ಯ ಪ್ರಧಾನ ಮಂತ್ರಿಗಳ "ಸ್ವಚ್ಛ ಭಾರತ್-ಸ್ವಸ್ಥ ಭಾರತ್-ಸಮೃದ್ಧ ಭಾರತ್" ಸಂಕಲ್ಪದಂತೆ, ನಮ್ಮ ಡಯಟ್ ನಲ್ಲೂ  ಸ್ವಚ್ಛಭಾರತ್ ಅನುಷ್ಠಾನಗೊಂಡಿದ್ದು ಹೀಗೆ.....
 

ಅಂಗಳವೆಲ್ಲ ಮಂಗಳಮಯವಾದ ನಂತರ ಎಲ್ಲರು ಕಂಗಳೆಲ್ಲ ನಮಿಸಿದ್ದು ಗಾಂಧಿಜಿ-ಶಾಸ್ತ್ರೀ ಭಾವಚಿತ್ರಕ್ಕೆ. ನೆಲಹಾಸಿನ ಮೇಲೆ ಕು ಳಿತ ಎಲ್ಲರೂ ಸರ್ವ ಧರ್ಮ ಪ್ರಾರ್ಥನೆ ಪಠಿಸಿದೆವು. ರಘುಪತಿ ರಾಘವನ ಸ್ತುತಿಸಿದೆವು.


ಡಿಇಡಿ ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮ ನಿರೂ ಪಿಸಿದರು. ಅರ್ಥಪೂ ರ್ಣವಾಗಿ ಸರ್ವಧರ್ಮ ಸಮನ್ವಯತೆ ಸಾರಿದರು. ಗಾಂಧೀಜಿ ಜೀವನ ಚರಿತ್ರೆ, ಶಾಸ್ರ್ರೀಜಿ ಸ್ಮರಣೆ ಮಾಡಿದರು . ಪ್ರಾಂಶು ಪಾಲರು ಸಹ ಗಾಂಧೀಜಿ ಯವರನ್ನು , ಲಾಲ್ ಬಹದ್ದೂ ರ್ ಶಾಸ್ತ್ರೀಜಿ ಯವರನ್ನು ಸ್ಮರಿಸಿದರು. ಶಾಸ್ತ್ರೀಜಿಯವರ ಸರಳತೆ, ಸಮಗ್ರತೆಯನ್ನು ಪ್ರಸ್ತಾಪಿಸಿದರು. ಅವರ ಆದರ್ಶಗಳ ಪಾಲನೆ ಇಂದಿನ ಅಗತ್ಯ ಎಂದರು.

ಜಾತಿ ಭಾಷೆ ಪಂಥ ಹಲವು. ಅವುಗಳ ಹಿಂದೆ ಮಾತ್ರ ಒಂದೇ ಒಲವು....ಎನ್ನುತ್ತಾ "ಜೈ ಜವಾನ್-ಜೈ ಕಿಸಾನ್" ಎಂಬ ಉದ್ಘೋಷದೊಂದಿಗೆ ಕಾರ್ಯಕ್ರಮಕ್ಕೆ ಮಂಗಳ ಹಾಡಿದೆವು.
- Prashanth M C
Lecturer, Diet, Mysore

1 comment:

NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...