My Blog List

Wednesday 1 October 2014

ಅಮೂಲ್ಯ 'ರತ್ನ'

ಯಾರಿದು ಅಮೂಲ್ಯ ರತ್ನ ?
ಇದು ಹೊಗಳಿಕೆಯಲ್ಲ. ಸ್ವಾಮಿನಿಷ್ಠೆಯೂ ಅಲ್ಲ. ಓಲೈಸುವಿಕೆಯಂತೂ ಖಂಡಿತ ಅಲ್ಲ. ಒಬ್ಬರು ವ್ಯಕ್ತಿಯ ಅನ್ವರ್ಥ. ಅಕ್ಷರಶಃ ಅನ್ವರ್ಥ. 
ಹೌದು. ಅವರೇ ನಮ್ಮ ಶಿಕ್ಷಣ ಸಚಿವರು. ಮಾನ್ಯ ಕಿಮ್ಮನೆ ರತ್ನಾಕರರವರು. ಅಂದು ಮಕ್ಕಳ ದಸರೆ ಉದ್ಘಾಟನೆ ಕಾರ್ಯಕ್ರಮ. ಮೈಸೂರಿಗೆ ಸನ್ಮಾನ್ಯರು ಬಂದಿದ್ದರು. ಅವರನ್ನು ನಮ್ಮ ಡಯಟ್ ಗೂ ಕರೆತಂದವರು ಮಾನ್ಯ ಪ್ರಾಚಾರ್ಯರಾದ ಬಿ.ಕೆ.ಬಸವರಾಜ ರವರು. ಮಾನ್ಯ ನಿರ್ದೇಶಕರು(ಅಭಿವೃದ್ಧಿ)ರವರ ಪ್ರೀತಿಯ ಕೆರೆಗೆ ಕಿವಿಗೊಟ್ಟು ಬಂದ ಸಚಿವರು, ಸಮಯ ವ್ಯರ್ಥಮಾಡದೇ ಬರಬರುತ್ತಲೇ ಎರಡು ಸಸಿ ನೆಟ್ಟರು. ಈ ಸಸಿಗಳಂತೆಯೇ ಎಲ್ಲರು ಬೆಳೆಯಿರಿ ಎಂದರು.

ಬಳಿಕ ಮೈಸೂರು ಡಯಟ್ ನಿರ್ವಹಿಸುತ್ತಿರುವ , ನಿರ್ವಹಿಸಿರುವ ಕಾರ್ಯಗಳ ಸ್ಥೂಲ ಪರಿಚಯ ಮಾಡಿಕೊಂಡರು. ನಂತರ ಸೀದಾ ಡಿಇಡಿ, ಬಿಇಡಿ ಪ್ರಶಿಕ್ಷಣಾರ್ಥಿಗಳೊಂದಿಗೆ ಸಂವಾದಕ್ಕಾಗಿ ನೇರ ಹೊರಟ್ಟಿದ್ದು ಕಾನ್ಫರೆನ್ಸ್ ಹಾಲ್ ಕಡೆಗೆ. 

ಅಲ್ಲಿ ಎಲ್ಲರ ಕುತೂಹಲದ ಕಣ್ಣುಗಳು, ಕಿವಿಗಳು ಸಚಿವರ ಮಾತಿಗೆ ಹಾತೊರೆದಿದ್ದವು. ಯಾವುದೇ ಔಪಚಾರಿಕ ಮಾತುಗಳಿಗೆ ಎಡೆ ಮಾಡದೇ ನೇರ ಅಂತರಂಗದ ಮಾತು ಮುಂದಿಟ್ಟರು.

''ಮಾತು ಮಾತು ಮಥಿಸಿ ಬಂದ ಭಾವನವನೀತಾ" ಎನ್ನುವಂತೆ, "ಶೃತಿ ಮಾಡಿದ ವೀಣೆ"ಯಂತೆ ನುಡಿದರು. ಅವರ ಮಾತುಗಳಲ್ಲಿ ಕೃತಕತೆ ಇರಲಿಲ್ಲ. ಭಾವುಕತೆ ಇತ್ತು. ಆದರೆ ಅದು, ವಾಸ್ತವಿಕತೆಗೆ ಮುನ್ನುಡಿಯಾಗಿತ್ತು. 

ಹಾಗೆಯೇ, ಡಯಟ್ ನಲ್ಲಿ ಕಲರವಗೈಯುತ್ತಿರುವ ಡಿಇಡಿ ಪ್ರಶಿಕ್ಷಣಾರ್ಥಿಗಳೊಡನೆ ಮತ್ತು ಬಿಇಡಿ ಪ್ರಶಿಕ್ಷಣಾರ್ಥಿಗಳೊಡನೆ ಒಂದು ಫೋಸ್ ಕೊಟ್ಟರು. 

ಮುಂದೆ ಹೊರಟವರೇ, ನಮ್ಮ ಡಯಟ್ ನ ಡಿ ಗ್ರೂಪ್ ಸಿಬ್ಬಂದಿ ಶ್ವೇತವಸ್ತ್ರಧಾರಿ ಸುರೇಶ್ ರನ್ನು ಕಂಡು ಕೈ ಕುಲುಕಿದರು. ಕುಶಲೋಪರಿ ಮಾತನಾಡಿದರು. ಶಿಸ್ತಿನ ನಡೆಇರಲಿ ಎಂದು ಬೆನ್ನುತಟ್ಟಿದರು. 



ಈ ಸಮಯವನ್ನು ಸೆರೆಹಿಡಿದ ಬಳಿಕ  ಮಾನ್ಯ ಸಚಿವರನ್ನು ಬೀಳ್ಕೊಡಲಾಯಿತು. 
- Prashanth M C
Lecturer, Diet, Mysore

No comments:

Post a Comment

NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...