My Blog List

Wednesday, 6 June 2018

ಪರಿ ಪರಿ ಪರಿಸರ ಸ್ವರ - ಉಳಿಸಲು ಬೇಕಿದೆ ಆತುರ ಕಾತುರ

ಜೂನ್-5. ವಿಶ್ವಪರಿಸರ ದಿನ. ಜಗತ್ತಿನೆಲ್ಲಡೆ ಪರಿಸರದ ಜಪ ತಪ .  ಈ ದಿನ ಇಂದಿಗಷ್ಟೇ ಸೀಮಿತವಾ ? ಹೌದೇನೋ ಎನ್ನಿಸಿಬಿಡುತ್ತೆ. ಏಕೆಂದರೆ, ಆಚರಣೆ, ಜಾಥಾ, ಘೋಷಣೆ, ಜಾಹೀರಾತುಗಳಲ್ಲಷ್ಟೇ ನಾವು ಆಚರಣೆಗಳನ್ನು ಸೀಮಿತಗೊಳಿಸಿದ್ದೇವೆ. ನಿತ್ಯ  ಒಂದಿಲ್ಲೊಂದು ಆಚರಣೆಗಳು ನಮ್ಮನ್ನು ಮುಟ್ಟುತ್ತಿವೆ. ಈ ಕಾರಣದಿಂದಲೇ ಏನೋ ನಾವು ಇಂದು ಘೊಷಣೆಗಳಿಗೆ ಸೀಮಿತಗೊಳಿಸಿದ್ದೇವೆ. 
ಮೈಸೂರು ಉತ್ತರ ವಲಯದಲ್ಲಿ ಪರಿಸರ ದಿನ

ಆದರೆ ಪರಿಸರ ದಿನ ಎಲ್ಲ ದಿನಗಳಂತಲ್ಲ. ಪ್ರತಿ ದಿನವೂ ಪರಿಸರ ದಿನವೇ. ಪ್ರತಿ ಕ್ಷಣವು ಪರಿಸರ ಕ್ಷಣವೇ. ಪರಿಸರ ಎಂಬ ಉಸಿರಿಲ್ಲದೇ ಯಾವುದೇ ಬಸಿರಿಲ್ಲ. ಯಾವುದೇ ಹೆಸರಿಲ್ಲ. ಅಷ್ಟು ಪಸರಿಸಿದೆ ನಮ್ಮೀ ಪರಿಸರ. 
ಪಿರಿಯಾಪಟ್ಟಣದ ರಾವಂದೂರಿನಲ್ಲಿ ಪರಿಸರ ದಿನ

ನಾವು ಇಂದು ನೆಮ್ಮದಿಯಿಂದ  ಇದ್ದೇವೆ. ನಮ್ಮೆಲ್ಲಾ ಆಸೆ ಆಕಾಂಕ್ಷೆ ಈಡೇರಿಸಿಕೊಳ್ಳುತ್ತಿದ್ದೇವೆ. ಇದೆಲ್ಲವೂ ಪರಿಸರದಿಂದ ಸಾಧ್ಯವಾಗುತ್ತಿದೆ. ನಮ್ಮೆಲ್ಲಾ ಬೇಕುಗಳಿಗೆ, ಬೇಡಗಳಿಗೆ ಪರಿಸರ ತನ್ನ ಒಡಲನ್ನೇ ಧಾರೆಯೆರೆದಿದೆ. 
ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯಲ್ಲಿ ಪರಿಸರ ದಿನ

ಆದರೆ, ಈ ಪರಿಸರ ಕೇವಲ ನಮ್ಮ ಸ್ವತ್ತಾ ? ಪರಿಸರ  ಇರುವುದೇ ಇಂದಿನ ನಮಗಳಿಗಾಗಿ ಮಾತ್ರನಾ ? 
ಮೈಸೂರು ಉತ್ತರ ವಲಯದಲ್ಲಿ 

ಈ ಸಂದೇಹ  ಏಕೆಂದರೆ, ಇಂದಿನ ನಿತ್ಯ ಸನ್ನಿವೇಶಗಳನ್ನ ನೋಡಿದರೆ, ಮಾಲಿನ್ಯದ ಪ್ರಮಾಣವನ್ನ, ಪ್ರಮಾದವನ್ನ ನೋಡಿದರೆ, ಪರಿಸರದ ಮಾರಣ ಹೋಮ ನೋಡಿದರೆ, ಪರಿಸರದ ಬಗ್ಗೆ ಅಸಡ್ಡೆಯನ್ನ ನೋಡಿದರೆ, ಪರಿಸರದ ಬಗ್ಗೆ ಉದಾಸೀನತೆ, ಅಲಕ್ಷ್ಯ, ನಿಶ್ಕಾಳಜಿ, ನಿಷ್ಕರುಣೆ, ಅಂಧತ್ವ ನೋಡಿದರೆ ಹಾಗೆನ್ನಿಸುತ್ತದೆ. 
ಹೆಚ್.ಡಿ.ಕೋಟೆ ತಾಲೂಕಿನ ಮಗ್ಗೆಯಲ್ಲಿ ಪರಿಸರ ದಿನ

ಕೇವಲ   ಇಂದಿಗಷ್ಟೇ ಸೀಮಿತವಾಗಿರುವ ನಮ್ಮ ಆಲೋಚನೆಗಳು, ಆಕಾಂಕ್ಷೆಗಳು, ಆಸೆಗಳು ನಾಳೆಯನ್ನು ಸಂಪೂರ್ಣ ನಿರ್ಲಕ್ಷಿಸಿವೆ. ನಾಳೆಗಳ ಬಗ್ಗೆ ಕಿಂಚಿತ್ತೂ ಆಲೋಚಿಸದೇ ಮುನ್ನಡೆಯುತ್ತಿದ್ದೇವೆ. ಹೀಗಾದರೆ, ನಮ್ಮ ಮುಂದಿನ ಪ್ರಜೆಗಳು/ಮಕ್ಕಳು ಬದುಕುವುದು ಹೇಗೆ ? ಅವರಿಗೆ ನೆಮ್ಮದಿಯ ನಾಳೆಗಳು ಸಿಗುವುದು ಹೇಗೆ ? ಭವಿಷ್ಯದ ಬೆಳಕು ಮೂಡುವುದು ಹೇಗೆ ? ನಮ್ಮೆಲ್ಲರ ದುಡಿಮೆಯೆ ನಮ್ಮ ಮಕ್ಕಳಿಗೆ. ನಮ್ಮೆಲ್ಲರ ಆಸೆ-ಆಕಾಂಕ್ಷೆಗಳೇ ನಮ್ಮ ಮುಂದಿನ ಮಕ್ಕಳು. ಹೀಗಿರುವಾಗ ಅವರಿಗಾಗಿಯೇ ಹಗಲಿರುಳು ದುಡಿಯುತ್ತಿರುವ ನಾವೆಲ್ಲರೂ ಕೇವಲ ಅರ್ಥವನ್ನಷ್ಟೇ ಗಳಿಸಿ ಗಳಿಸಿ, ಉಳಿಸಿ, ಶೇಖರಿಸಿಟ್ಟು ಹೋದರೆ...ನಾವು ನಮ್ಮ ಮಕ್ಕಳಿಗೆ ನೀಡುವ ಸಂದೇಶವಾದರೂ ಏನು ? ಹೌದಲ್ಲವೇ ?
ಪಿರಿಯಾಪಟ್ಟಣ ತಾಲೂಕಿನ ಮಾಕೋಡು ಶಾಲೆಯಲ್ಲಿ ಪರಿಸರ ದಿನ

ಹೀಗಾಗಿ ನಮ್ಮೆಲ್ಲರ ಭವಿಷ್ಯದ ಬೆಳಕಿಗೆ ಮುನ್ನುಡಿಯಾಗಿರುವ ನಮ್ಮ ಶಾಲೆಗಳಲ್ಲಿ ಈ ಬಗ್ಗೆ ಕಾಳಜಿ, ಆಸ್ಥೆ ವಹಿಸಿ ಸಹಸ್ರಾರು ಗಿಡಗಳನ್ನು ನೆಡುವ ಕೈಂಕರ್ಯ ಕೈಗೊಳ್ಳಲಾಗಿದೆ. ರಾಜ್ಯವಷ್ಟೇ ಅಲ್ಲದೇ, ದೇಶವಷ್ಟೇ ಅಲ್ಲದೇ, ವಿಶ್ವದೆಲ್ಲೆಡೆ ಈ ದಿನ ಪರಿಸರ ಉಳಿಸುವ ನಿಟ್ಟಿನಲ್ಲಿ ನಮ್ಮ ಮಕ್ಕಳು ಸಸಿ ನೆಡುವ ಮೂಲಕ ವಿಶ್ವಪರಿಸರದ ಉಳಿವಿಗೆ ನಾಂದಿ ಹಾಡಿದ್ದಾರೆ. 
ಕೆ.ಆರ್.ನಗರ ತಾಲೂಕಿನ ಚಿಕ್ಕನಾಯಕನಹಳ್ಳಿಯಲ್ಲಿ ಪರಿಸರ ದಿನ

ಎಲ್ಲಾ ಶಾಲೆಗಳಲ್ಲೂ ಗಿಡ ನೆಡುವ ಮೂಲಕ ವಿಶ್ವಪರಿಸರ ದಿನ ಆಚರಿಸಲಾಗಿದೆ. ಆದರೆ, ಗಿಡ ನೆಟ್ಟ ಮಾತ್ರಕ್ಕೆ ಪರಿಸರ ಉಳಿದಂತಲ್ಲ. ಸಸಿ, ಗಿಡ ನೆಟ್ಟಷ್ಟೇ ಕಾಳಜಿ ಅವುಗಳನ್ನು ರಕ್ಷಿಸುವಲ್ಲಿಯೂ ತೋರಬೇಕಿದೆ. 


  • ನೆಟ್ಟ ಪ್ರತಿ ಸಸಿಗೂ ಒಬ್ಬ ವಿದ್ಯಾರ್ಥಿಯನ್ನೋ, ಶಿಕ್ಷಕರನ್ನೋ, ತರಗತಿಯನ್ನೋ ರಕ್ಷಕರನ್ನಾಗಿ ನೇಮಿಸಬೇಕು. 
  • ಪ್ರತಿ ನಿತ್ಯ ನೀರು ಹಾಕುವ ಕಾಯಕವನ್ನು ವೇಳಾಪಟ್ಟಿಯಂತೆ ನಿಗದಿಗೊಳಿಸಬೇಕು. 
  • ಪ್ರತಿ ಗಿಡ ಸ್ವಲ್ಪ ಪ್ರಮಾಣದ ಬೆಳವಣಿಗೆ ಕಾಯುವ ತನಕ ಅದಕ್ಕೆ ರಕ್ಷಣೆ ಅತ್ಯಗತ್ಯ.  ಇಲ್ಲವಾದಲ್ಲಿ ಕಿಡಿಗೇಡಿಗಳ ಮೂರ್ಖತನಕ್ಕೆ ಅವು ಬಲಿಯಾಗಬೇಕಾದೀತು. ಆದ ಕಾರಣ ಮುಳ್ಳಿನ/ರಕ್ಷಣೆಯ ಬೇಲಿಯನ್ನು ನಿರ್ಮಿಸಿ. 
  • ಪ್ರಸಕ್ತ ವರ್ಷ ಶಾಲೆಯಿಂದ ಹೊರಗಡಿಯಿಡುವ ಹಿರಿಯರಿಗೆ, ನೆಟ್ಟ ಗಿಡಗಳನ್ನು ಉಳಿಸುವ ಜವಾಬ್ದಾರಿ ವಹಿಸಿದರೆ ಅದು ಕಿರಿಯರಿಗೆ ಮಾರ್ಗದರ್ಶನವಾಗಬಹುದೇನೋ.!
  • ಗಿಡಗಳು ಅಕ್ಷರ ದಾಸೋಹಕ್ಕೆ ನೆರವಾಗುವಂತಿರಲಿ. ಹಣ್ಣು, ತರಕಾರಿ, ಔಷಧಿ, ಫಲ ನೀಡುವಂತಿರಲಿ. 
  • ಶಾಲೆಗೆ ವಿಶೇಷವಾಗಿ ಆಗಮಿಸುವ ಅತಿಥಿಗಳಿಂದಲೂ ಒಂದೊಂದು ಗಿಡ ನೆಡಿಸಿ, ಅವರ ನೆನಪಿನಲ್ಲಿ ಉಳಿಯುವಂತೆಯೂ, ಸಸಿಗಳಿಗೆ ಜೀವ ತುಂಬಿರಿ. 
  • ಪರಿಸರದ ಉಳಿವಿನ ಅಗತ್ಯತೆಯನ್ನು ಮಕ್ಕಳಿಗೆ ಸಾರಿ ಸಾರಿ ಮನಮುಟ್ಟುವಂತೆ ಹೇಳಿರಿ. 
  • ವಿಶ್ವಸಂಸ್ಥೆಯ  ಈ ವರ್ಷದ ಘೋಷಣೆ " ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟಿರಿ" ಕುರಿತು ಮಕ್ಕಳಿಗೆ ಹೆಚ್ಚು ವಿಷಯಜ್ಞಾನ ತುಂಬಿರಿ (ನಾಗೇಶ್ ಹೆಗಡೆಯವರ 'ಪ್ಲಾಸ್ಟಿಕ್ ಎಂಬ ಕಸ-ರಕ್ಕಸ' ಪುಸ್ತಕ ಪರಿಚಯಿಸಿ". 


ನಾವೆಲ್ಲಾ ಮನುಷ್ಯರು.ಅಕ್ಷರಶಃ ಮನುಷ್ಯರಾಗಬೇಕು. ರಾಕ್ಷಸರಾಗಬಾರದು. ಪರಿಸರ ನಮ್ಮ ಉಸಿರಾಗಬೇಕು. ಪರಿಸರ ನಮ್ಮ ಹೆಜ್ಜೆ ಹೆಜ್ಜೆಯ ದನಿಯಾಗಬೇಕು. ಬದುಕೋಣ. ಬದುಕಲು ಬಿಡೋಣ.  


Tuesday, 8 May 2018

ಸಾಧನಕೇರಿಯ ಸೌರಭಗಳು



















YES. YES. ಯೆಲ್ಲಿ..SEE....ಫಲಿತಾಂಶ...ನೂರೊಂದು ಅಂಶ

ಪ್ರತಿ ವರ್ಷದ ಕುತೂಹಲವಿದು. ಪ್ರತಿ ವರ್ಷದ ಕಳಕಳಿ ಇದು. ಪ್ರತಿ ವರ್ಷದ ಹರ್ಷದ ಹೊನಲಿದು. ಎಸ್.ಎಸ್.ಎಲ್.ಸಿ  ಫಲಿತಾಂಶ ಎಂದರೆ ಪ್ರೌಢಶಿಕ್ಷಣದ ಸುಗ್ಗಿಕಾಲ. ವರ್ಷದ ಬೆಳೆ, ಹರ್ಷದಹೊಳೆ ಹರಿಯೋ ಸಮಯ. ಹಲವು ತಿಂಗಳುಗಳ ಪರಿಶ್ರಮದ ಫಲ ಕೈಗೆ ಸಿಗೋ ಹೊತ್ತು. ಅಂತೆಯೇ ಈ ವರ್ಷವು ಒಳ್ಳೆ ಫಸಲು ಬಂದಿದೆ. 





 ಮಹಾ ಸಾಧನೆ ಮಾಡಿದವರು, ಸಾಧನೆ ಹಾದಿಯಲ್ಲಿರುವವರು ಎಲ್ಲರೂ ತಾವು "ನಾವು ಕೂಡ ಹಳ್ಳಿಯಿಂದ ಬಂದವರು" ಎನ್ನುವ ಪರಿಗೆ ಈ ವರ್ಷದ ಫಲಿತಾಂಶವೂ ಬೆಂಬಲ ನೀಡಿದೆ. ಏಕೆಂದರೆ ಈ ವರ್ಷವೂ ಹಳ್ಳಿಹೈಕ್ಳು ನಗರದವರನ್ನು ಮೀರಿಸಿ ಮುಂದಿದ್ದಾರೆ.

ಮೇಲಿನ ಪಟ್ಟಿಯಲ್ಲಿ ಆಂಗ್ಲ ಮಾಧ್ಯಮದ ಫಲಿತಾಂಶ ಹೆಚ್ಚಿರುವುದು ಕಾಣುತ್ತದೆ. ಇದು ಪ್ರಸ್ತುತ ಆಂಗ್ಲ ಮಾಧ್ಯಮದ ಕಡೆಗೆ ಒಲವು ಹೆಚ್ಚುತ್ತಿರುವುದನ್ನು ತಿಳಿಸುತ್ತದೆ.



ಜಿಲ್ಲಾವಾರು ಫಲಿತಾಂಶ ನೋಡಿದಾಗ ಕಳೆದ ವರ್ಷದಲ್ಲಿ ಉಡುಪಿ ತನ್ನ ಪ್ರಥಮವನ್ನು ಕಾಯ್ದುಕೊಂಡಿದೆ. ಎರಡನೇ ಸ್ಥಾನದಲ್ಲಿ ಕಳೆದ ವರ್ಷ ದಕ್ಷಿಣ ಕನ್ನಡ ಇತ್ತು. ಆದರೆ ಈ ಬಾರಿ  ಆ ಸ್ಥಾನವನ್ನು ಉತ್ತರಕನ್ನಡ ಆಕ್ರಮಿಸಿಕೊಂಡಿದೆ. ಇನ್ನು ಮೂರನೇ ಸ್ಥಾನವನ್ನು ಚಿಕ್ಕೋಡಿ ಸಹ ಉಳಿಸಿಕೊಂಡಿದೆ. ನಮ್ಮ ಜಿಲ್ಲೆಗೆ ಬಂದರೆ ಕಳೆದ ಬಾರಿ 21ನೇ ಸ್ಥಾನದಲ್ಲಿದ್ದ ಮೈಸೂರು ಈ ಸಲ 11ನೇ ಸ್ಥಾನಕ್ಕೆ ಏರಿದೆ. ಇದು ಮೈಸೂರಿನ ಶೈಕ್ಷಣಿಕ ಸಾರಥಿಗಳ, ಸೈನಿಕರ ಪರಿಶ್ರಮದ ಫಲ. ಮುಂದಿನ ದಿನಗಳಲ್ಲಿ ಈ ಜಿಗಿತ ಇನ್ನೂ ಮೇಲಕ್ಕೇರಲಿ ಎಂಬುದೇ ನಮ್ಮ ಆಶಯ.


Friday, 27 April 2018

ಪ್ರಧಾನ ಕಾರ್ಯದರ್ಶನ

ದಿನಾಂಕ:14-04-2018. ಪೂರ್ವಾಹ್ನದ ಸಮಯ. ಅಂಬೇಡ್ಕರ್ ದಿನಾಚರಣೆ ಸಂಸ್ಥೆಯಲ್ಲಿ ನಡೆದಿತ್ತು. ಕಾರ್ಯಕ್ರಮ ಮುಗಿದ ನಂತರ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಬರುವುದಾಗಿ ವಿಷಯ ತಿಳಿಯಿತು. ಎಲ್ಲರೂ ಕುತೂಹಲಿಗಳಾಗಿದ್ದೆವು. ನಿರೀಕ್ಷೆಯಂತೆ ಡಾ.ಶಾಲಿನಿ ರಜನೀಶ್, ಪ್ರಧಾನ ಕಾರ್ಯದರ್ಶಿಗಳು, ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ..ರವರು ಡಯಟ್,ಮೈಸೂರಿಗೆ ಆಗಮಿಸಿದರು.


 ಹಾಜರಿದ್ದವರು :
ಶ್ರೀ ಪ್ರಭುಸ್ವಾಮಿ, ಪ್ರಾಚಾರ್ಯರು, ಸಿಟಿಇ, ಮೈಸೂರು
ಶ್ರೀಮತಿ ಮಮತಾ, ಉಪನಿರ್ದೇಶಕರು(ಆಡಳಿತ), ಮೈಸೂರು
ಶ್ರೀ ರಘುನಂದನ್.ಆರ್.,ನ ಉಪನಿರ್ದೇಶಕರು(ಅಭಿವೃದ್ಧಿ), ಡಯಟ್,ಮೈಸೂರು
ಸಂಸ್ಥೆಯ ಎಲ್ಲಾ ಹಿರಿಯ ಉಪನ್ಯಾಸಕರು, ಉಪನ್ಯಾಸಕರು, ಡಯಟ್, ಮೈಸೂರು



  • ಎನ್.ಎ.ಎಸ್ ಫಲಿತಾಂಶದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಅದಕ್ಕೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

  • ತಂಡದಲ್ಲಿ ಕಾರ್ಯನಿರ್ವಹಿಸುವ ಮೂಲಕ ಸಂಸ್ಥೆಯ ಯಶಸ್ಸಿನ ಪಾಲುದಾರರಾಗಲು ಪ್ರೇರೇಪಿಸಿದರು.

  • ಆರ್.ಐ.ಇ ವಿದ್ಯಾರ್ಥಿ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಪ್ರದರ್ಶನಕ್ಕಿಟ್ಟ ಕಡಿಮೆ ವೆಚ್ಚದ ಕಲಿಕೋಪಕರಣದ ಬಗ್ಗೆ ವಿವರಿಸುತ್ತಾ ನಿಮ್ಮ ಜಿಲ್ಲೆಯ ಶಾಲೆಗಳಲ್ಲೂ ಈ ರೀತಿಯಾಗಿ ಮಕ್ಕಳ ಕ್ಷಮತೆ ಗುರುತಿಸಲು ಸಲಹೆ ನೀಡಿದರು.

  • ಜಿಲ್ಲೆಯ ಶೈಕ್ಷಣಿಕ ಉಸ್ತುವಾರಿದಾರರಾದ ನಮಗೆ ಏಕಾಗ್ರತೆ ಅವಶ್ಯಕ ಎನ್ನುವುದನ್ನು ಮಾದರಿ ಶಿಕ್ಷಕಿ ಶಾಂತಿದೇಸಾಯಿ ಉದಾಹರಣೆಯೊಂದಿಗೆ ವಿವರಿಸಿದರು.

  • ಫಿನ್ ಲ್ಯಾಂಡ್ ಮತ್ತು ನ್ಯೂಜಿಲ್ಯಾಂಡ್ ಗಳಲ್ಲಿರುವ ಶೈಕ್ಷಣಿಕ ವ್ಯವಸ್ಥೆಗಳನ್ನು ನಮ್ಮ ಕಣ್ಣಮುಂದಿಟ್ಟು ಮೌಲ್ಯಗಳುಳ್ಳ ಪಠ್ಯವಸ್ತುವಿನ ಸ್ವರೂಪವನ್ನು ತೆರೆದಿಟ್ಟರು.  

  • ನಾವಿನ್ಯಯುತ ಆಚರಣೆಗಳು ನಮ್ಮೆಲ್ಲರಲ್ಲೂ ಹಾಸುಹೊಕ್ಕಾಬೇಕೆಂದು ಬಯಸಿದರು.

  • ಶೈಕ್ಷಣಿಕ ಗುಣಮಟ್ಟದ ಬಲವರ್ಧನೆ/ಸುಧಾರಣೆಗೆ ಸಂಬಂಧಿಸಿದ ನಿಮ್ಮ ಯಾವುದೇ ಸಲಹೆಗಳು, ಆಲೋಚನೆಗಳನ್ನು ಎದುರು ನೋಡುವ ನಿರೀಕ್ಷೆಯನ್ನು ಮುಂದಿಟ್ಟರು.









Saturday, 4 November 2017

NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...