ಪ್ರತಿ ವರ್ಷದ ಕುತೂಹಲವಿದು. ಪ್ರತಿ ವರ್ಷದ ಕಳಕಳಿ ಇದು. ಪ್ರತಿ ವರ್ಷದ ಹರ್ಷದ ಹೊನಲಿದು. ಎಸ್.ಎಸ್.ಎಲ್.ಸಿ ಫಲಿತಾಂಶ ಎಂದರೆ ಪ್ರೌಢಶಿಕ್ಷಣದ ಸುಗ್ಗಿಕಾಲ. ವರ್ಷದ ಬೆಳೆ, ಹರ್ಷದಹೊಳೆ ಹರಿಯೋ ಸಮಯ. ಹಲವು ತಿಂಗಳುಗಳ ಪರಿಶ್ರಮದ ಫಲ ಕೈಗೆ ಸಿಗೋ ಹೊತ್ತು. ಅಂತೆಯೇ ಈ ವರ್ಷವು ಒಳ್ಳೆ ಫಸಲು ಬಂದಿದೆ.
ಮಹಾ ಸಾಧನೆ ಮಾಡಿದವರು, ಸಾಧನೆ ಹಾದಿಯಲ್ಲಿರುವವರು ಎಲ್ಲರೂ ತಾವು "ನಾವು ಕೂಡ ಹಳ್ಳಿಯಿಂದ ಬಂದವರು" ಎನ್ನುವ ಪರಿಗೆ ಈ ವರ್ಷದ ಫಲಿತಾಂಶವೂ ಬೆಂಬಲ ನೀಡಿದೆ. ಏಕೆಂದರೆ ಈ ವರ್ಷವೂ ಹಳ್ಳಿಹೈಕ್ಳು ನಗರದವರನ್ನು ಮೀರಿಸಿ ಮುಂದಿದ್ದಾರೆ.
ಮೇಲಿನ ಪಟ್ಟಿಯಲ್ಲಿ ಆಂಗ್ಲ ಮಾಧ್ಯಮದ ಫಲಿತಾಂಶ ಹೆಚ್ಚಿರುವುದು ಕಾಣುತ್ತದೆ. ಇದು ಪ್ರಸ್ತುತ ಆಂಗ್ಲ ಮಾಧ್ಯಮದ ಕಡೆಗೆ ಒಲವು ಹೆಚ್ಚುತ್ತಿರುವುದನ್ನು ತಿಳಿಸುತ್ತದೆ.
ಜಿಲ್ಲಾವಾರು ಫಲಿತಾಂಶ ನೋಡಿದಾಗ ಕಳೆದ ವರ್ಷದಲ್ಲಿ ಉಡುಪಿ ತನ್ನ ಪ್ರಥಮವನ್ನು ಕಾಯ್ದುಕೊಂಡಿದೆ. ಎರಡನೇ ಸ್ಥಾನದಲ್ಲಿ ಕಳೆದ ವರ್ಷ ದಕ್ಷಿಣ ಕನ್ನಡ ಇತ್ತು. ಆದರೆ ಈ ಬಾರಿ ಆ ಸ್ಥಾನವನ್ನು ಉತ್ತರಕನ್ನಡ ಆಕ್ರಮಿಸಿಕೊಂಡಿದೆ. ಇನ್ನು ಮೂರನೇ ಸ್ಥಾನವನ್ನು ಚಿಕ್ಕೋಡಿ ಸಹ ಉಳಿಸಿಕೊಂಡಿದೆ. ನಮ್ಮ ಜಿಲ್ಲೆಗೆ ಬಂದರೆ ಕಳೆದ ಬಾರಿ 21ನೇ ಸ್ಥಾನದಲ್ಲಿದ್ದ ಮೈಸೂರು ಈ ಸಲ 11ನೇ ಸ್ಥಾನಕ್ಕೆ ಏರಿದೆ. ಇದು ಮೈಸೂರಿನ ಶೈಕ್ಷಣಿಕ ಸಾರಥಿಗಳ, ಸೈನಿಕರ ಪರಿಶ್ರಮದ ಫಲ. ಮುಂದಿನ ದಿನಗಳಲ್ಲಿ ಈ ಜಿಗಿತ ಇನ್ನೂ ಮೇಲಕ್ಕೇರಲಿ ಎಂಬುದೇ ನಮ್ಮ ಆಶಯ.
No comments:
Post a Comment