ಕರಿಮುದ್ದನಹಳ್ಳಿ. ನಿಮಗೆಲ್ಲಾ ಪರಿಚಯಿಸಲೇ ಬೇಕಾದ ಹೆಸರು. ಏಕೀ ಪರಿಚಯ
? ಹೌದು. ಇದರ ಪರಿ ಪರಿಯನ್ನು ಪರಿಚಯಿಸಲೇ ಬೇಕು. ಊರಿನ ಸಾನಿಧ್ಯ ಇರುವವರಿಗೆಲ್ಲಾ ಗೊತ್ತಿದೆ.
ಈ
ಊರಿನ ಅಕ್ಷರ ತೇರಿನ ಬಗ್ಗೆ,
ಅಕ್ಕರೆ
ಅಕ್ಷರಿಗರ ಬಗ್ಗೆ,
ಸಮುದಾಯದ
ನೆರವಿನ ಬಗ್ಗೆ,
ಶಾಲೆಗಳು
ಹೂಮಾಲೆ ಆದ ಬಗ್ಗೆ.,
ಮಕ್ಕಳೆಮಗೆ
ಬದುಕಾದ ಬಗ್ಗೆ,
ಒಬ್ಬೊಬ್ಬರದ್ದೂ
ಒಂದೊಂದು ಬಗೆ.
ಹಲವು
ಹೂ ನಗೆ,
ಕೆಲವೇ
ಬಣ್ಣನೆ ಹೇಗೆ ?
ನಿಜ.
ಹೀಗನಿಸದಿರದು. ಒಂದೊಂದು ಶಾಲೆಯದ್ದೂ ಒಂದೊಂದು ಕಥೆ. ಒಂದೊಂದು ಸಾಹಸಗಾಥೆ. ರಾಷ್ಟ್ರೀಯ ಪಠ್ಯಕ್ರಮ
ಚೌಕಟ್ಟು ಹೇಳುವ “ಯಾವುದೇ
ಒಂದು ದೇಶ ಹಾಗೂ ಸಮಾಜ ಅಲ್ಲಿನ ಶಿಕ್ಷಕರ ಮಟ್ಟವನ್ನು ಮೀರಿರಲು ಸಾಧ್ಯವಿಲ್ಲ” ಎಂಬ ಹೇಳಿಕೆಗೆ ಜ್ವಲಂತ ಸಾಕ್ಷಿ ಇಲ್ಲಿದೆ. ಹಲವು ನಿದರ್ಶನಗಳು ಇಲ್ಲಿವೆ. ಇದರ ಯಶೋಪಯಣ
ನಮ್ಮ ವಸಂತಯಾನದಲ್ಲಿ ಈಗ ತಾನೆ ಆರಂಭವಾಗುತ್ತಿದೆ. ಇದರ ಮೊದಲ ಕಂತಿನ ಮೊದಲ ಎಪಿಸೋಡ್ ಇದು.
ಇದು
ಸಮಷ್ಠಿ ಸಭೆ. ಸ ಮುಷ್ಠಿ ಸಭೆಯೂ ಹೌದು. ಏಕೆಂದರೆ ವ್ಯಷ್ಟಿ ವ್ಯಷ್ಟಿ ಸ್ವರ ಸಮಷ್ಠಿಯೇ ತಾನಂ…ಎಂಬ ಪುತಿನರ
ಮಾತಿನಂತೆ ಸಮಷ್ಠಿಯೊಂದು ತನ್ನ,, ತನ್ನವರ ಏಳ್ಗೆಗೆ ಟೊಂಕಕಟ್ಟಿ ನಿಂತಿದೆ. ಇದಕ್ಕೆ ನಿದರ್ಶನ ಈ ವಿಡಿಯೋ.
ಅಂದಹಾಗೆ
ಇದೆಲ್ಲದರ ಹಿಂದೆ ಒಂದು ಪ್ರೇರಣೆ ಇದೆ. ಒಬ್ಬ ವ್ಯಕ್ತಿ ಇದ್ದಾರೆ. ಅವರದ್ದೇ ವ್ಯಕ್ತಿತ್ವವಿದೆ. ವ್ಯಕ್ತಿತ್ವಕ್ಕೆ
ತಕ್ಕ ಭಕ್ತಿತ್ವ ಇದೆ. ಭಕ್ತಿ ಬಯಸಿದ್ದಷ್ಟೂ ಶಕ್ತಿತ್ವವೂ ಇದೆ. ಅವರೇ ವಾಸು. ವಾಹ್….ಸು..ಯೋಗ, ಸು…ಮಧುರ…ಸು…ಲಾಭ…. ಸು..ದರ….. ಸು...ಮಾರ್ಗ…. ಸು….ವಾರ್ತೆ
ಎಂಬಂತೆ ಅವರ ಕಾರ್ಯ ವೈಖರಿ ಇದೆ. ದಿನಾಂಕ:06-10-2018 ರಂದು ಹೀಗೆ ಆಹ್ವಾನದ ಮೇರೆಗೆ ಇಲ್ಲಿಗೆ ಡಯಟ್
ಪ್ರತಿನಿಧಿಯಾಗಿ ಭೇಟಿ ನೀಡಿದೆ. ನಿಜಕ್ಕೂ ಆಶ್ಯರ್ಯವಾಯಿತು. ನಿಜಕ್ಕೂ ಹೆಮ್ಮೆ ಎನಿಸಿತು. ನಿಜಕ್ಕೂ
ಅರ್ಥಪೂರ್ಣವಾಗಿತ್ತು. ನಿಜಕ್ಕೂ ಹ್ಯಾಟ್ಸ್ ಅಪ್ ಎಂದಿತು ಮನಸು. ಮತ್ತೆ ಬರಬೇಕೆನಿಸಿತು. “ ಆನೋ ಭದ್ರಾಃ
ಕ್ರತವೋಯಂತು ವಿಶ್ವತಃ” ಎಂಬ ಮಾತಿನಂತೆ ಜಗತ್ತಿನೆಲ್ಲೆಡೆಯಿಂದ ಇಲ್ಲಿಗೆ ಒಳ್ಳೆಯ ಸಂಗತಿಗಳೇ ಹರಿದು
ಬರಲಿ ಎಂದು ಆಶಿಸಿದೆ. ಒಳ್ಳೆಯ ಕೆಲಸವನ್ನು ಎಲ್ಲರಿಗೂ ಹಂಚುವ ಎಂದು ಇಲ್ಲಿ ಒಂದಷ್ಟು ತೋಚಿದ್ದು ಗೀಚಿದೆ.
ಇದು ಆರಂಭ. ಮುಂದೆ ಇಲ್ಲಿನ ಒಂದೊಂದು ಕಥೆಯನ್ನು ನಿಮ್ಮ ಮುಂದೆ ಇದೆ ವಸಂತಯಾನದಲ್ಲಿ ಬಿಚ್ಚಿಡಬೇಕೆಂಬ
ಹಂಬಲ ಇದೆ. ನಿರೀಕ್ಷಿಸಿ…..
ಈ
ಕ್ಲಸ್ಟರ್ ನಿಜಕ್ಕೂ ಕ್ಲ್ಯೂ ಸ್ಟಾರ್ ಆಗಿದೆ. ಹಲವು ಸಮಸ್ಯೆಗಳಿಗೆ ಕ್ಲ್ಯೂ ನೀಡುತ್ತಾ…ಸ್ಟಾರ್ ಆಗಿದೆ.
pls see this linkhttps://www.facebook.com/100027375706281/posts/168564164066106/
prASHAnth.M.C
Lecturer
Diet,Mysuru
No comments:
Post a Comment