My Blog List

Monday, 8 October 2018

"ಮಂಥನ" ಎಂಬ ಮನೆತನ



ಮಂಥನ. ನಮ್ಮೊಳಗೆ, ನನ್ನೊಳಗೆ ಆಗಲೇಬೇಕಾದ ಪ್ರಕ್ರಿಯೆ. ಆದಾಗಲೇ ಮಥಿಸಿ,ಮಥಿಸಿ ಬಂದ ಭಾವ ನವನೀತವಾಗೋದು. ದಿನ ಬೆಳಗಾದರೆ ಮಾಹಿತಿಗಳ ಮಂಥನದಲ್ಲೇ ಮುಳುಗುವ ನಾವು, ನಮ್ಮೊಳಗಿನ, ನನ್ನೊಳಗಿನ ಮಂಥನಕ್ಕೆ ಅವಕಾಶ ನೀಡುವುದೇ ಕಡಿಮೆ. ಈ ಅವಕಾಶ ಕಡಿಮೆ ಆದ್ದದ್ದರಿಂದಲೇ ನಮ್ಮ ಕಾರ್ಯಕ್ಷಮತೆ ನಮಗೆ ಅರಿವಿಲ್ಲದೇ ಕರಗುತ್ತಿದೆ. ಇದು ಆಗಬಾರದು. ನಮ್ಮತನಗಳ ಕುರಿತು ನಮಗೆ ನಾವೇ ಮಂಥನ ಮಾಡಿಕೊಳ್ಳಬೇಕು. ಇದಕ್ಕೆ ಇಲಾಖೆ ಪರೋಕ್ಷವಾಗಿ ಅವಕಾಶ ಕಲ್ಪಿಸಿದೆ. ಅದು ಸ್ಟಿರ್ ಮೂಲಕ. 


ಸ್ಟಿರ್ ಅಂತಾರಾಷ್ಷ್ರೀಯ ಸರ್ಕಾರೇತರ ಸಂಸ್ಥೆ. ಇದರ ಮೂಲ ಬ್ರಿಟನ್. ಈಗಾಗಲೇ 2 ಲಕ್ಷ ಶಿಕ್ಷಕರ ಸಮೂಹವನ್ನು ತಲುಪಿರುವ ಸಂಸ್ಥೆ ಶಿಕ್ಷಕರ ಬಲವರ್ಧನೆ, ಉಸ್ತುವಾರಿದಾರರ ಗುಣವರ್ಧನೆಗೆ ಶ್ರಮಿಸುತ್ತಿದೆ. ನಮ್ಮೊಳಗಿನ ಸವಾಲುಗಳಿಗೆ ನಮ್ಮಿಂದಲೇ ಉತ್ತರ ಹುಡುಕಿಸುವ, ನಮ್ಮೊಳಗಿನ ಸಮಸ್ಯೆಗಳಿಗೆ ನಮ್ಮಲ್ಲೇಪರಿಹಾರ ಕಾಣಿಸುವ, ಪರಸ್ಪರ ಕೇಳಿಸಿಕೊಳ್ಳುವ, ಪರಸ್ಪರ ನೋಡಿಕೊಳ್ಳುವ, ಪರಸ್ಪರ ಹಂಚಿಕೊಳ್ಳುವ, ಪರಸ್ಪರ ಬೆಳೆಯುವ ಬೆಳೆಸುವ ಗುರಿ ಇದರದ್ದು. 




ಹೀಗೆ ಗುರಿಯೊಂದಿಗೆ ಮೈಸೂರಿನ ವಸಂತಯಾನದ ಸಹಭಾಗಿಯಾದ ಸ್ಟಿರ್ ಸಂಸ್ಥೆ ಮೊದಲಿಗೆ ಕಾರ್ಯಾಗಾರದ ಮೂಲಕ ತನ್ನೆಲ್ಲ ಉಸ್ತುವಾರಿದಾರರಿಗೆ ಮೊದಲು ಪರಸ್ಪರ ಎಂಬ ಪರಿಚಯ ಮಾಡಿಕೊಟ್ಟಿತು. ಮಂಥನಕ್ಕೆ ನಾಂದಿ ಹಾಡಿತು. ಮಾನ್ಯ ಪ್ರಾಂಶುಪಾಲರಾದ ಮಹದೇವಪ್ಪನವರು ಹಾಗು ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿಗಳು(ಎಸ್ಎಸ್.ಎ)ರವರನ್ನು ಒಳಗೊಂಡಂತೆ ಕಾರ್ಯಕ್ರಮದಲ್ಲಿ ಹಲವರು ಭಾಗಿಯಾದರು. ಭಾಗೀದಾರರಾದರು. 







ಮೊದಲಿಗೆ ಜಿಲ್ಲಾ ಹಂತದಲ್ಲಿ ಕಾರ್ಯಕ್ರಮ ನಡೆಸಿ, ನಂತರ ಎಲ್ಲಾ ತಾಲೂಕುಗಳಲ್ಲೂ ಸಹ ಎಲ್ಲಾ ಉಸ್ತುವಾರಿದಾರರನ್ನೂತಲುಪುವ ಕೈಂಕರ್ಯ ತೊಟ್ಟಿತು. ಆ ಮೂಲಕ ದೂರವೇ ಇದ್ದ ಸ್ಟಿರ್ ಇನ್ನಷ್ಟು ಹತ್ತಿರವಾಯಿತು. 













ಮುಂದೆ ಕ್ಲಸ್ಟರ್ ಸಮಾಲೋಚನಾ ಸಭೆಗಳ ಮೂಲಕ ತನ್ನ ಗುರಿ ಸಾಧನೆಗೆ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಇನ್ನಷ್ಟೇ ಯಶಸ್ಸಿನ ಹಾದಿ ಹಿಡಿಯಬೇಕಿದೆ. ನಮ್ಮೊಳಗಿನ ಬಲವರ್ಧನೆಗೆ ನಾವೇ ನಾಂದಿ ಹಾಡಬೇಕಿದೆ.

No comments:

Post a Comment

NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...