ಕರ್ನಾಟಕದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಇರುವ "ವಿಜ್ಞಾನಕೇಂದ್ರಗಳು" ವೈಜ್ಞಾನಿಕ ಚಟುವಟಿಕೆಗಳಿಂದ ಸುತ್ತಮುತ್ತಲಿನ ಶಾಲೆಗಳಲ್ಲಿ ವಿಜ್ಞಾನದ ದೀವಿಗೆ ಹಿಡಿಯುತ್ತಿವೆ. ಇಂತಹ 11 ವಿಜ್ಞಾನ ಕೇಂದ್ರಗಳು ನಮ್ಮ ಮೈಸೂರು ಜಿಲ್ಲೆಯಲ್ಲಿವೆ. ಪ್ರತಿ ವರ್ಷ ಒಂದಿಲ್ಲೊಂದು ವಿನೂತನ ಕಾರ್ಯಕ್ರಮಗಳ ಮೂಲಕ ಚಲನಶೀಲವಾಗಿ ಕಾರ್ಯ ನಿರ್ವಹಿಸುತ್ತಿವೆ. ಇಂತಹ ವಿಜ್ಞಾನಕೇಂದ್ರಗಳೆಲ್ಲವನ್ನೂ ಒಂದೆಡೆ ಸೇರಿಸಿ ಅವುಗಳ ಕಾರ್ಯವೈಖರಿ ಶ್ಲಾಘಸುವ ನಿಟ್ಟಿನಲ್ಲಿ ಮೈಸೂರು ಕುವೆಂಪು ಪ್ರೌಢಶಾಲೆಯಲ್ಲಿ ಒಂದು ದಿನದ ಕಾರ್ಯಗಾರ ನಡೆಯಿತು.
ಪ್ರತಿಯೊಂದು ತಾಲೂಕಿನ ವಿಜ್ಞಾನ ಕೇಂದ್ರದ ಉಸ್ತುವಾರಿ ಶಿಕ್ಷಕರು ತಮ್ಮ ಕೇಂದ್ರದಲ್ಲಿ ಕೈಗೊಂಡಿರುವ ಚಟುವಟಿಕೆಗಳನ್ನು ಪ್ರಸ್ತುಪಡಿಸಿದರು.
ಪ್ರತಿ ವಿಜ್ಞಾನ ಕೇಂದ್ರದ ಪ್ರಸ್ತುತಿ ಬಳಿಕ ಹಿಮ್ಮಾಹಿತಿಯೊಂದಿಗೆ ಹಲವು ಸಲಹೆ ಸೂಚನೆಗಳನ್ನು ನೀಡಲಾಯಿತು.
ವಿಜ್ಞಾನ ಕೇಂದ್ರಗಳ ಮುಖ್ಯಸ್ಥರು ಮತ್ತು ಉಸ್ತುವಾರಿ ಶಿಕ್ಷಕರಿಬ್ಬರು ಸಹ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಎಲ್ಲಾಕೇಂದ್ರಗಳ ಶಿಕ್ಷಕರು ತಮ್ಮ ವಾರ್ಷಿಕ ವರದಿಯನ್ನು ಸಾಫ್ಟ್ ಪ್ರತಿಯಲ್ಲೇ ಮಂಡನೆ ಮಾಡಿದ್ದು ವಿಶೇಷವಾಗಿತ್ತು.
ಮೈಸೂರುಸೈನ್ಸ್ ಫೌಂಡೇಷನ್ ನ ಕಾ್ರ್ಯದರ್ಶಿಗಳಾದ ಸಂತೋಷ್ ಕುಮಾರ್ ರವರು ತಮ್ಮ ಫೌಂಡೇಷನ್ ನಿರ್ವಹಿಸುತ್ತಿರುವ ವಿ-ಜ್ಞಾನ ಬಿತ್ತುವ ಕಾಯಕದ ಕುರಿತು ಮಾಹಿತಿ ನೀಡುತ್ತಲೇ, ಹೇಗೆಲ್ಲಾ ತರಗತಿಯೊಳಗೆ ವಿಜ್ಞಾನ ಬೋಧನೆಯನ್ನು ಸರಳೀಕರಿಸಬಹುದು, ನಾವಿನ್ಯಯುತ ಚಟುವಟಿಕೆಗಳನ್ನು ತರಗತಿಯೊಳಗೆ ಮೂಡಿಸಬಹುದು ಎಂಬ ಕುರಿತು ಉಪನ್ಯಾಸದೊಂದಿಗೆ ವಿಷಯ ಪ್ರಸ್ತುತಿ ಪಡಿಸಿದರು.