My Blog List

Friday, 13 September 2019

2016-17 IT@SCHOOLS HM'S MEETING

2016-17 IT@SCHOOLS HM'S MEETING
ಈ ದಿನ 2016-17ನೇ ಸಾಲಿನ ಐಟಿ@ಸ್ಕೂಲ್ಸ್ ಶಾಲೆಗಳ ಮುಖ್ಯಶಿಕ್ಷಕರ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಈ ಕೆಳಕಂಡ ಅಜೆಂಡಾಗಳ ಕುರಿತಂತೆ ಸಮಗ್ರವಾಗಿ ಮುಖ್ಯಶಿಕ್ಷಕರಿಗೆ ಮಾಹಿತಿಯನ್ನು ತಿಳಿಸಲಾಯಿತು.


ಅಜೆಂಡಾಗಳು
  • ಪೋಸ್ಟ್ ಡೆಲಿವರಿ ಇನ್ಸ್ ಪೆಕ್ಷನ್
  • ಐಟಿ ಪರಿಕರಗಳ ದಾಸ್ತಾನು ನಿರ್ವಹಣೆ
  • ಇ-ಸಂಪನ್ಮೂಲಗಳ ಬಳಕೆ
  • ಕಂಪ್ಯೂಟರ್ ಲ್ಯಾಬ್ ನಿರ್ವಹಣೆ
  • ತರಗತಿಯಲ್ಲಿ ತಂತ್ರಜ್ಞಾನನ ಅನುಷ್ಠಾನ
  • ಪ್ರತಿ ಶಾಲೆಯಲ್ಲಿ ಇಟಿ ಸೆಲ್ ರಚನೆ
  • ಶಾಲೆಗಳ ಬ್ಲಾಗ್ ಸಕ್ರೀಯಗೊಳಿಸುವಿಕೆ





Wednesday, 4 September 2019

ವಿಭಾಗೀಯಮಟ್ಟದ ಕಾರ್ಯಾಗಾರ


ಈ ದಿನ ಐಟಿ@ಸ್ಕೂಲ್ಸ್ ಕರ್ನಾಟಕ 2016-17ನೇ ಸಾಲಿನ ಶಾಲೆಗಳ POST DELIVERY INSPECTION  REPORT ನಡೆಸುವ ಸಂಬಂಧ ವಿಭಾಗೀಯ ಮಟ್ಟದ ಕಾರ್ಯಾಗಾರ ನಡೆಸಲಾಯಿತು. 
 ಡಿ.ಎಸ್.ಇ.ಆರ್.ಟಿಯ ಇಟಿ ವಿಭಾಗದ ಉಪನಿರ್ದೇಶಕರಾದ ಶ್ರೀ ಸೂರ್ಯಪ್ರಕಾಶ್, ಎಸ್.ಎ.ಡಿ.ಪಿ.ಐ ರವರಾದದ ಶ್ರೀ ಬೈಲಾಂಜನಪ್ಪನವರು ಮತ್ತು ಅವರ ತಾಂತ್ರಿಕ ಸಮಿತಿ ಸದಸ್ಯರು ಮೈಸೂರು ಡಯಟ್ ನಲ್ಲಿ ಭಾಗವಹಿಸಿ ವಿಭಾಗೀಯ ಹಂತದಿಂದ ಆಗಮಿಸಿದ್ದ 8 ಜಿಲ್ಲೆಗಳ ಸಮಿತಿಯ ಸದಸ್ಯರಿಗೆ ಮಾಹಿತಿ ಹಂಚಿಕೊಂಡರು. 
ಎರಡು ಹಂತಗಳಲ್ಲಿ ಕಾರ್ಯಾಗಾರ ನಡೆಸಲಾಯಿತು. ಮೊದಲಿಗೆ ಪರಿಶೀಲನಾ ತಂಡ ರಚನೆ ಮತ್ತು ತಂಡವು ಶಾಲೆಗಳಿಗೆ ತೆರಳಿ ನಿರ್ವಹಿಸಬೇಕಾದ ಕಾರ್ಯಗಳ ಕುರಿತು ಸಲಹೆ ಮಾರ್ಗದರ್ಶನ ನೀಡಲಾಯಿತು.

 ನಂತರ ಕಂಪ್ಯೂಟರ್ ಲ್ಯಾಬ್ ಗೆ ತೆರಳಿ ಪ್ರಾಯೋಗಿಕವಾಗಿ ಎಂಟು ಜಿಲ್ಲೆಗಳ ಪ್ರಾಂಶುಪಾಲರು ಮತ್ತು ನೋಡಲ್ ಅಧಿಕಾರಿಗಳ ತಂಡ ಜೊತೆಗೂಡಿ ಅನುಭವ ಪಡೆದುಕೊಂಡರು.



Monday, 26 August 2019

ಐಟಿ@ಸ್ಕೂಲ್ಸ್ ಇಂಡಕ್ಷನ್ ತರಬೇತಿ - ೬ನೇ ಬ್ಯಾಚ್


ದಿನಾಂಕ:೧೯-೦೮-೨೦೧೯ ರಿಂದ ೨೮-೦೮-೨೦೧೯ ರವರೆಗೆ ಟ್ಯಾಲ್ಪ್ ಹೊಸ ಶಾಲೆಗಳ ಇಂಡಕ್ಷನ್ ತರಬೇತಿ ೬ನೇ ಬ್ಯಾಚ್ ನ್ನು ಡಯಟ್ ಮೈಸೂರಿನ ಹೊಸಲ್ಯಾಬ್ ನಲ್ಲಿ ಆರಂಭಿಸಲಾಯಿತು.

ಪ್ರಾಂಶುಪಾಲರಾದ ಶ್ರೀ ಕೆ. ಮಹದೇವಪ್ಪ ನವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ಶ್ರೀ ಪ್ರಶಾಂತ್ .ಎಂ.ಸಿ, ಮತ್ತು ಶ್ರೀಮತಿ ಭಾಗ್ಯಲಕ್ಷ್ಮೀ ಮತ್ತು ವಿಭಾಗದ ಮುಖ್ಯಸ್ಥರಾದ ಶ್ರೀಮತಿ ವಿಜಯಶ್ರೀ ಮೇಂ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶ್ರೀ ರಾಜೇಶ್ , ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.


Tuesday, 6 August 2019

ವಸಂತಯಾನದಲ್ಲಿ ಮಾನ್ಯ ಪ್ರಧಾನ ಕಾರ್ಯದರ್ಶಿಗಳು


ಈ ದಿ ನ ವಸಂತಮಹಲ್ ನಲ್ಲಿ ವಸಂತಯಾನದ ಸಂಭ್ರಮ. ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯ ಸಾರಥಿಗಳಾದ ಶ್ರೀ ಎಸ್.ಆರ್. ಉಮಾಶಂಕರ್ ರವರು, ಮಾನ್ಯ ಪ್ರಧಾನ ಕಾರ್ಯದರ್ಶಿಗಳು ಮೈಸೂರು ಜಿಲ್ಲೆಯ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನೆಗೆಂದು ಆಗಮಿಸಿದರು. 


ಈ ಸಂದರ್ಭದಲ್ಲಿ ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು, ಹೃದಯಸ್ಪರ್ಶಿಯಾಗಿ ಶ್ರೀಯುತರನ್ನು ಸ್ವಾಗತಿಸಿದರು.


ಮೈಸೂರು ಜಿಲ್ಲೆಯ ಎಲ್ಲಾ ವಲಯಗಳ  ಶಿಕ್ಷಣಾಧಿಕಾರಿಗಳೊಂದಿಗೆ ಪ್ರೋತ್ಸಾಹದಾಯಕ ಯೋಜನೆಗಳ ಕುರಿತು ಮಾಹಿತಿ ವಿನಿಮಯ ಮಾಡಿಕೊಂಡರು. ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿರುವ ಸಮವಸ್ತ್ರಗಳನ್ನು ಶಾಲೆಯಿಂದ ತರಿಸಿಕೊಂಡು ಗುಣಮಟ್ಟವನ್ನು ಪರಿಶೀಲಿಸಿದರು.




Tuesday, 16 July 2019

ಐಟಿ@ಸ್ಕೂಲ್ – 4ನೇ ಬ್ಯಾಚ್ - ತರಬೇತಿ

ಇಂದು ಐಟಿ@ಸ್ಕೂಲ್ ಇಂಡಕ್ಷನ್ -1 ತರಬೇತಿಯ 4ನೇ ಬ್ಯಾಚ್ ನ್ನು ಆರಂಭಿಸಲಾಯಿತು. ಈ ತರಬೇತಿಯ ಹಿನ್ನೆಲೆ ಮುನ್ನೆಲೆ ಬಗ್ಗೆ ಶ್ರೀ ರಾಜೇಶ್, ರಾಜ್ಯ ಸಂಪನ್ಮೂಲ ವ್ಯಕ್ತಿ ಮಾತನಾಡಿದರು. ಕಾರ್ಯಕ್ರಮದ ಪ್ರಾಮುಖ್ಯತೆ ಬಗ್ಗೆ ಮಾನ್ಯ ಪ್ರಾಂಶುಪಾಲರು, ಕೆ.ಮಹದೇವಪ್ಪನವರು ಮಾತನಾಡಿದರು. 2018-19ನೇ ಸಾಲಿನ ಶಾಲೆಗಳ ಶಿಕ್ಷಕರಿಗೆ ಪ್ರಸ್ತುತ ತರಬೇತಿ ನಡೆಯುತ್ತಿದೆ.





Tuesday, 2 July 2019

ಗಣಕ ಸಂಸ್ಥೆಗಳ ಮುಖ್ಯಸ್ಥರ ಸಭೆ



ಇಂದು ಮೈಸೂರು ಜಿಲ್ಲೆಯ ಗಣಕಯಂತ್ರ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಒಟ್ಟು 10 ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು. ಮಾನ್ಯ ನಿರ್ದೇಶಕರು, ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ, ಬೆಂಗಳೂರು ಇವರು ದಿನಾಂಕ:01-07-2019 ರಂದು ನಡೆಸಿದ ನೋಡಲ್ ಅಧಿಕಾರಿಗಳ ಸಭೆಯ ಮಾಹಿತಿಯನ್ನು ಸಭೆಯಲ್ಲಿ ಹಂಚಿಕೊಳ್ಳಲಾಯಿತು. ಮಂಡಳಿ ನೀಡಿದ್ದ ನಿರ್ದೇಶನಗಳನ್ನು ತಿಳಿಸಲಾಯಿತು.

 

Thursday, 20 June 2019

ಟಿಇ ಪ್ಲಾನ್ ಮತ್ತು ತರಬೇತಿಗಳು ಹಾಗು ರಾಷ್ಟ್ರೀಯಶಿಕ್ಷಣ ನೀತಿ-2019-20ರ ಕುರಿತು ಸಭೆ


ಈ ದಿನ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ 2019-20ನೇ ಸಾಲಿನ ಟಿಇ ಪ್ಲಾನ್ ಮತ್ತು ತರಬೇತಿಗಳ ಆಯೋಜನೆ ಹಾಗು ಡಯಟ್ ಕಾರ್ಯಚಟುವಟಿಕೆಗಳ ಕುರಿತು ಸಭೆ ನಡೆಯಿತು. ಸಭೆಯಲ್ಲಿ ವಿಸ್ತೃತವಾಗಿ ಡಯಟ್ ಕಾರ್ಯಚಟುವಟಿಕೆಗಲ ಕುರಿತು ಚರ್ಚೆ ನಡೆಯಿತು.

ಟಿಇ ಪ್ಲಾನ್ ನಡಿಯಲ್ಲಿ ನಡೆಯಬೇಕಾದ ಸಂಶೋಧನಾ ಚಟುವಟಿಕೆಗಳು, ಡಯಟ್ ಸಂಚಿಕೆಗಳು, ವೆಬ್ ಸೈಟ್, ಡಯಟ್ ಲ್ಯಾಬ್ ಅಪ್‍ಗ್ರೇಡ್‍ ಕೆಲಸ,  ತರಬೇತಿಗಳು-ವರದಿಗಳು-ಪೂರ್ವ ಚಟುವಟಿಕೆಗಳು-ತರಬೇತಿ ಆಯೋಜನೆ ಸ್ವರೂಪ-ಫಲಶೃತಿಗಳು, ಇತ್ಯಾದಿ ವಿಷಯಗಳನನ್ನು ನೋಡಲ್ ಅಧಿಕಾರಿಗಳಾದ ಶ್ರೀನಿವಾಸ್ ರವರು ಪ್ರಸ್ತುಪಡಿಸಿದರು. ಸಭೆಯಲ್ಲಿದ್ದ ಹಿರಿಯ ಉಪನ್ಯಾಸಕರು, ಉಪನ್ಯಾಸಕರುಗಳು ಚರ್ಚೆಯಲ್ಲಿ ಭಾಗವಹಿಸಿದ್ದರು.

ರಾಷ್ಟ್ರೀಯಶಿಕ್ಷಣ ನೀತಿ-2019-20ರ ಕುರಿತು ಸಹ ಟಿಟಿಐನ ಪ್ರಾಂಶುಪಾಲರಾದ ಶ್ರೀ ನಂಜುಂಡಸ್ವಾಮಿ ಮತ್ತು ಶ್ರೀ ಶಂಕರ್ ರವರು ತಮ್ಮ ವಿಚಾರ ಪ್ರಸ್ತುತಪಡಿಸಿದರು. ಈ ಬಗ್ಗೆ ಮತ್ತೊಮ್ಮೆ ಕೂಲಂಕಷವಾಗಿ ಚರ್ಚೆ ನಡೆಸುವ  ಇಂಗಿತ ವ್ಯಕ್ತಪಡಿಸಿದರು.





NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...