ಈ ದಿ ನ ವಸಂತಮಹಲ್ ನಲ್ಲಿ ವಸಂತಯಾನದ ಸಂಭ್ರಮ. ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯ ಸಾರಥಿಗಳಾದ ಶ್ರೀ ಎಸ್.ಆರ್. ಉಮಾಶಂಕರ್ ರವರು, ಮಾನ್ಯ ಪ್ರಧಾನ ಕಾರ್ಯದರ್ಶಿಗಳು ಮೈಸೂರು ಜಿಲ್ಲೆಯ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನೆಗೆಂದು ಆಗಮಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು, ಹೃದಯಸ್ಪರ್ಶಿಯಾಗಿ
ಶ್ರೀಯುತರನ್ನು ಸ್ವಾಗತಿಸಿದರು.
ಮೈಸೂರು ಜಿಲ್ಲೆಯ
ಎಲ್ಲಾ ವಲಯಗಳ ಶಿಕ್ಷಣಾಧಿಕಾರಿಗಳೊಂದಿಗೆ ಪ್ರೋತ್ಸಾಹದಾಯಕ
ಯೋಜನೆಗಳ ಕುರಿತು ಮಾಹಿತಿ ವಿನಿಮಯ ಮಾಡಿಕೊಂಡರು. ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿರುವ ಸಮವಸ್ತ್ರಗಳನ್ನು
ಶಾಲೆಯಿಂದ ತರಿಸಿಕೊಂಡು ಗುಣಮಟ್ಟವನ್ನು ಪರಿಶೀಲಿಸಿದರು.
No comments:
Post a Comment