My Blog List

Sunday, 7 October 2018

ಕೂಗಿ ಕರಿ…ಮುದ್ದನ….ಹಳ್ಳಿ

ಕರಿಮುದ್ದನಹಳ್ಳಿ. ನಿಮಗೆಲ್ಲಾ ಪರಿಚಯಿಸಲೇ ಬೇಕಾದ ಹೆಸರು. ಏಕೀ ಪರಿಚಯ ? ಹೌದು. ಇದರ ಪರಿ ಪರಿಯನ್ನು ಪರಿಚಯಿಸಲೇ ಬೇಕು. ಊರಿನ ಸಾನಿಧ್ಯ ಇರುವವರಿಗೆಲ್ಲಾ ಗೊತ್ತಿದೆ.
ಈ ಊರಿನ ಅಕ್ಷರ ತೇರಿನ ಬಗ್ಗೆ,

ಅಕ್ಕರೆ ಅಕ್ಷರಿಗರ ಬಗ್ಗೆ,

ಸಮುದಾಯದ ನೆರವಿನ ಬಗ್ಗೆ,

ಶಾಲೆಗಳು ಹೂಮಾಲೆ ಆದ ಬಗ್ಗೆ.,

ಮಕ್ಕಳೆಮಗೆ ಬದುಕಾದ ಬಗ್ಗೆ,

ಒಬ್ಬೊಬ್ಬರದ್ದೂ ಒಂದೊಂದು ಬಗೆ.

ಹಲವು ಹೂ ನಗೆ,

ಕೆಲವೇ ಬಣ್ಣನೆ ಹೇಗೆ ?
ನಿಜ. ಹೀಗನಿಸದಿರದು. ಒಂದೊಂದು ಶಾಲೆಯದ್ದೂ ಒಂದೊಂದು ಕಥೆ. ಒಂದೊಂದು ಸಾಹಸಗಾಥೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಹೇಳುವ ಯಾವುದೇ ಒಂದು ದೇಶ ಹಾಗೂ ಸಮಾಜ ಅಲ್ಲಿನ ಶಿಕ್ಷಕರ ಮಟ್ಟವನ್ನು ಮೀರಿರಲು ಸಾಧ್ಯವಿಲ್ಲ ಎಂಬ ಹೇಳಿಕೆಗೆ ಜ್ವಲಂತ ಸಾಕ್ಷಿ ಇಲ್ಲಿದೆ. ಹಲವು ನಿದರ್ಶನಗಳು ಇಲ್ಲಿವೆ. ಇದರ ಯಶೋಪಯಣ ನಮ್ಮ ವಸಂತಯಾನದಲ್ಲಿ ಈಗ ತಾನೆ ಆರಂಭವಾಗುತ್ತಿದೆ. ಇದರ ಮೊದಲ ಕಂತಿನ ಮೊದಲ ಎಪಿಸೋಡ್ ಇದು. 

ಇದು ಸಮಷ್ಠಿ ಸಭೆ. ಸ ಮುಷ್ಠಿ ಸಭೆಯೂ ಹೌದು. ಏಕೆಂದರೆ ವ್ಯಷ್ಟಿ ವ್ಯಷ್ಟಿ ಸ್ವರ ಸಮಷ್ಠಿಯೇ ತಾನಂ…ಎಂಬ ಪುತಿನರ ಮಾತಿನಂತೆ ಸಮಷ್ಠಿಯೊಂದು ತನ್ನ,, ತನ್ನವರ ಏಳ್ಗೆಗೆ ಟೊಂಕಕಟ್ಟಿ ನಿಂತಿದೆ. ಇದಕ್ಕೆ ನಿದರ್ಶನ ಈ ವಿಡಿಯೋ.  ಅಂದಹಾಗೆ ಇದೆಲ್ಲದರ ಹಿಂದೆ ಒಂದು ಪ್ರೇರಣೆ ಇದೆ. ಒಬ್ಬ ವ್ಯಕ್ತಿ ಇದ್ದಾರೆ. ಅವರದ್ದೇ ವ್ಯಕ್ತಿತ್ವವಿದೆ. ವ್ಯಕ್ತಿತ್ವಕ್ಕೆ ತಕ್ಕ ಭಕ್ತಿತ್ವ ಇದೆ. ಭಕ್ತಿ ಬಯಸಿದ್ದಷ್ಟೂ ಶಕ್ತಿತ್ವವೂ ಇದೆ. ಅವರೇ ವಾಸು. ವಾಹ್….ಸು..ಯೋಗ, ಸು…ಮಧುರ…ಸು…ಲಾಭ…. ಸು..ದರ….. ಸು...ಮಾರ್ಗ…. ಸು….ವಾರ್ತೆ ಎಂಬಂತೆ ಅವರ ಕಾರ್ಯ ವೈಖರಿ ಇದೆ. ದಿನಾಂಕ:06-10-2018 ರಂದು ಹೀಗೆ ಆಹ್ವಾನದ ಮೇರೆಗೆ ಇಲ್ಲಿಗೆ ಡಯಟ್ ಪ್ರತಿನಿಧಿಯಾಗಿ ಭೇಟಿ ನೀಡಿದೆ. ನಿಜಕ್ಕೂ ಆಶ್ಯರ್ಯವಾಯಿತು. ನಿಜಕ್ಕೂ ಹೆಮ್ಮೆ ಎನಿಸಿತು. ನಿಜಕ್ಕೂ ಅರ್ಥಪೂರ್ಣವಾಗಿತ್ತು. ನಿಜಕ್ಕೂ ಹ್ಯಾಟ್ಸ್ ಅಪ್ ಎಂದಿತು ಮನಸು. ಮತ್ತೆ ಬರಬೇಕೆನಿಸಿತು. “ ಆನೋ ಭದ್ರಾಃ ಕ್ರತವೋಯಂತು ವಿಶ್ವತಃ” ಎಂಬ ಮಾತಿನಂತೆ ಜಗತ್ತಿನೆಲ್ಲೆಡೆಯಿಂದ ಇಲ್ಲಿಗೆ ಒಳ್ಳೆಯ ಸಂಗತಿಗಳೇ ಹರಿದು ಬರಲಿ ಎಂದು ಆಶಿಸಿದೆ. ಒಳ್ಳೆಯ ಕೆಲಸವನ್ನು ಎಲ್ಲರಿಗೂ ಹಂಚುವ ಎಂದು ಇಲ್ಲಿ ಒಂದಷ್ಟು ತೋಚಿದ್ದು ಗೀಚಿದೆ. ಇದು ಆರಂಭ. ಮುಂದೆ ಇಲ್ಲಿನ ಒಂದೊಂದು ಕಥೆಯನ್ನು ನಿಮ್ಮ ಮುಂದೆ ಇದೆ ವಸಂತಯಾನದಲ್ಲಿ ಬಿಚ್ಚಿಡಬೇಕೆಂಬ ಹಂಬಲ ಇದೆ. ನಿರೀಕ್ಷಿಸಿ…..

ಈ ಕ್ಲಸ್ಟರ್ ನಿಜಕ್ಕೂ ಕ್ಲ್ಯೂ ಸ್ಟಾರ್ ಆಗಿದೆ. ಹಲವು ಸಮಸ್ಯೆಗಳಿಗೆ ಕ್ಲ್ಯೂ ನೀಡುತ್ತಾ…ಸ್ಟಾರ್ ಆಗಿದೆ. pls see this linkhttps://www.facebook.com/100027375706281/posts/168564164066106/


prASHAnth.M.C
Lecturer
Diet,Mysuru

ಟಿಪಿಡಿ ತರಬೇತಿ – ಕನ್ನಡ



ಕನ್ನಡ  ಭಾಷಾ ಸ್ವರೂಪ ಮತ್ತು ಸಂರಚನೆ ಹಾಗು ವ್ಯಾಕರಣ ಕಲಿಕೆಯಲ್ಲಿ ಹೊಸ ದೃಷ್ಟಿಕೋನ ವಿಷಯದ ಟಿಪಿಡಿ ತರಬೇತಿಯು ದಿನಾಂಕ:01-10-2018 ರಿಂದ 06-10-2018 ರವರೆಗೆ ಕೆ.ಆರ್.ನಗರ ಆದರ್ಶ ವಿದ್ಯಾಲಯದಲ್ಲಿ ನಡೆಯಿತು. ಈ ತರಬೇತಿಯಲ್ಲಿ ಪಾಲ್ಗೊಂಡ ಬಗೆ, ಶಿಬಿರಾರ್ಥಿಗಳ ಭಾಗವಹಿಸುವಿಕೆ ಇತ್ಯಾದಿ ಕುರಿತ ಒಂದು ವಿಡಿಯೋ ಇದು. ಇದರ ಯೂಟೂಬ್ ಲಿಂಕ್ ಇಲ್ಲಿದೆ.  https://www.youtube.com/watch?v=4i9Rf1VjAmY&t=6s ಇದನ್ನು ಕ್ಲಿಕ್ಕಿಸುವ ಮೂಲಕವೂ ನೀವು ವಿಡಿಯೋ ವೀಕ್ಷಿಸಬಹುದು. (ಸಲಹೆಗಳಿಗೆ ಸ್ವಾಗತ.)

-prASHAnth.M.C
Lecturer
Diet,Mysuru






Friday, 14 September 2018

ನಾಟ್ಯಂ ಭಾವಾನುಕೀರ್ತನಂ

ಜಿಲ್ಲಾ ಹಂತದ ವಿಜ್ಞಾನ ನಾಟಕ ಸ್ಪರ್ಧೆ ನಮ್ಮ ಡಯಟ್ ನಲ್ಲಿ ನಡೆಯಿತು. ಜಿಲ್ಲೆಯ 9 ಬ್ಲಾಕ್ ನಿಂದ ಭಾಗವಹಿಸಿದ್ದ ವಿದ್ಯಾರ್ಥಿಗಳು ನಾಟಕಗಳ ಮೂಲಕ ವಿಜ್ಞಾನ ದೀವಿಗೆಯನ್ನು ಬೆಳಗಿದರು.






Wednesday, 29 August 2018

ಸಂಶೋಧನಾ ಪಥ

ನವನವೋನ್ಮೇಷಶಾಲಿನಿಯಾದದ್ದು ಪ್ರತಿಭೆ ಮಾತ್ರವಲ್ಲ, ಪ್ರತಿಭಾ ನಿಷ್ಪತ್ತಿಯಾದ ಸಂಶೋಧನೆ ಸಹ. ಸಂಶೋಧನೆ ಎಂಬುದೇ ಪ್ರತಿಭಾ ವಿಶೇಷ. ಹೊಸ ಹೆಜ್ಜೆಗಳಿಗೆ, ಹೊಸ ದಾರಿಗಳಿಗೆ, ಹೊಸ ಸಹವರ್ತಿಗಳಿಗೆ, ಹೊಸ ಹೊಸತು ಅನ್ವೇಷನೆಗಳಿಗೆ ಇದರಿಂದ ನಾಂದಿ ಎಂಬುದರಲ್ಲಿ ಎರಡು ಮಾತಿಲ್ಲ.

ಇಂತಹ ಸಂಶೋಧನೆಗೆ ಪ್ರಸ್ತುತ ಭಾರತೀಯ ಶಿಕ್ಷಣ ರಂಗ ಮುಂದಾಗಿದೆ. ದೇಶದ ಐದು ಪ್ರಾದೇಶಿಕ ಶಿಕ್ಷಣ ಸಂಸ್ಥೆಗಳು ಸಹ ರಾಷ್ಟ್ರದ ಶೈಕ್ಷಣಿಕ ಅವಸ್ಥಾಂತರಗಳ ಅಧ್ಯಯನಕ್ಕೆ ಮುಂದಾಗಿವೆ. ಭುವನೇಶ್ವರ , ಭೂಪಾಲ್, ಶಿಲ್ಲಾಂಗ್, ಅಜ್ಮೀರ್, ಮೈಸೂರು ಗಳಲ್ಲಿ ಈಗಾಗಲೇ ಅಧ್ಯಯನಕ್ಕೆ ಹೆಜ್ಜೆ ಇಡಲಾಗಿದೆ.

ಒಂದು ವಲಯದ/ಬ್ಲಾಕ್ ನ ಎಲ್ಲಾ ಒಂದನೇ ತರಗತಿಯಿಂದ 8ನೇ ತರಗತಿ ವರೆಗಿನ ವಿದ್ಯಾರ್ಥಿಗಳು, ಶಿಕ್ಷಕರು, ಸಮುದಾಯದ ಸಹಭಾಗಿತ್ವ, ಎಸ್.ಡಿ.ಎಂ.ಸಿ ಇತ್ಯಾದಿ ಎಲ್ಲಾ ವಿಷಯಗಳನ್ನೂ ಒಳಗೊಂಡಂತೆ ಮಹಾಸಂಶೋಧನೆಯ ಮೂಲಕ ಮಧ್ಯವರ್ತನಗಳನ್ನು ಅಳವಡಿಸಿಕೊಂಡು, ಹೇಗೆ ಗುಣಾತ್ಮಕ ಶಿಕ್ಷಣವನ್ನು ಮುಂದುವರಿಸಬೇಕು ಎಂಬ ನಿಟ್ಟಿನಲ್ಲಿ ಪ್ರಸ್ತುತ ಅಧ್ಯಯನಕ್ಕೆ ಮುಂದಡಿಯಿಡಲಾಗಿದೆ.

ಮೈಸೂರಿನ ಆರ್.ಐ.ಇ ಈ ಸಂಶೋಧನೆಗಾಗಿ ಹುಣಸೂರು ವಲಯವನ್ನು ಆಯ್ಗುಕೊಂಡಿದೆ. ಡಿ.ಎಸ್.ಇ.ಆರ್.ಟಿ ಸಹಯೋಗ, ಡಯಟ್ ಜೊತೆಗೂಡಿ ಸಂಶೋಧನೆ ನಡೆಯಲಿದೆ.  ದಿನಾಂಕ;28-8-2018ರಂದು ಹುಣಸೂರು ಬಿ.ಆರ್.ಸಿಕೇಂದ್ರದಲ್ಲಿ ಇದರ ಕುರಿತು ಮಹತ್ವದ ಸಭೆ ನಡೆಯಿತು.

ಶೈಕ್ಷಣಿಕ ಸಾರಥಿಗಳಾದ ಮೈಸೂರು ಆರ್.ಐ.ಇ ಪ್ರಾಂಶುಪಾಲರಾದ ಪ್ರೋ.ಶ್ರೀಕಾಂತ್ ರವರು, ಸಂಶೋಧನಾ ವಿಭಾಗದ ಡೀನ್ ರಾದ ಪ್ರೋ.ವೆಂಕಟೇಶಮೂರ್ತಿರವರು, ಫ್ರೋ ಗೋಪಾಲ್, ಪ್ರೋ.ಮಂಜುಳಾರಾವ್ ರವರು ಭಾಗವಹಿಸಿದ್ದರು.

 ಡಿ.ಎಸ್.ಇ.ಆರ್.ಟಿ ಸಹಾಯಕ ನಿರ್ದೇಶಕರಾದ ಮಂಜುನಾಥ್ ರವರು, ಮೈಸೂರು ಜಿಲ್ಲೆಯ ಡಿಡಿಪಿಐ(ಆಡಳಿತ) ಮತ್ತು ಡಿಡಿಪಿಐ(ಅಭಿವೃದ್ಧಿ) ಇಬ್ಬರೂ ಸಹ ಉಪಸ್ಥಿತರಿದ್ದರು.  ಎನ್.ಸಿ.ಎಫ್ ನ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಂಶೋಧನೆ ಹಲವ ಒಳಹುಗಳನ್ನು ನೀಡಲಿದೆ.
ಈ ಕುರಿತು ಪತ್ರಿಕೆಗಳಲ್ಲೂ ಸಹ ಸುದ್ದಿ ಆಯಿತು.
-prASHAnth.M.C
Lecturer
Diet,Mysuru


Monday, 20 August 2018

ಮರಿವಿಜ್ಞಾನಿಗಳ ವಿಚಾರಗೋಷ್ಠಿ

"ಹಳೆ ಬೇರು ಹೊಸ ಚಿಗುರು
ಕೂಡಿರಲು ಮರ ಸೊಬಗು
ಹೊಸಯುಕ್ತಿ ಹಳೆತತ್ವದೊಡಗೂಡೆ ಧರ್ಮ
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ 
ಜಸವು ಜನಜೀವನಕೆ ಮಂಕುತಿಮ್ಮ||"

ಎಂಬ ಮಾತಿನಂತೆ ನಮ್ಮ ಡಯಟ್ ಅಂಗಳಕ್ಕೂ ಈ ದಿನ ಮೈಸೂರಿನ 9 ಬ್ಲಾಕ್ ಗಳಿಂದ ವಿಜೇತರಾದ ಒಟ್ಟು 27 ಮರಿ ವಿಜ್ಞಾನಿಗಳು ಆಗಮಿಸಿದ್ದರು.

ಕೈಗಾರಿಕಾ ಕ್ರಾಂತಿ ವಿಚಾರವಾಗಿ ತಮ್ಮ ವಿಚಾರ ಪ್ರಸ್ತುತಪಡಿಸಿದರು. ಬಹಳ ಹುರುಪಿನಿಂದ ತಮ್ಮ ವಿಚಾರ ಪ್ರಸ್ತುತ ಪಡಿಸಿದ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಶಿಕ್ಷಕರ ಜೊತೆಗಿದ್ದರು.

ಪ್ರಾಂಶುಪಾಲರು ಮಕ್ಕಳನ್ನು ಹುರಿದುಂಬಿಸಿದರು. ಯಾವುದೇ ಭಯವಿಲ್ಲದೇ ಮಕ್ಕಳು ಸಂತೋಷದಿಂದ ವಿಚಾರಗೋಷ್ಠಿಯಲ್ಲಿ ಪಾಲ್ಗೊಳ್ಳಿ ಎಂದು ಪ್ರೇರೇಪಿಸಿದರು.

ಕಾರ್ಯಕ್ರಮವನ್ನು ನಿರೂಪಣೆಯೊಂದಿಗೆ ಉಪನ್ಯಾಸಕರಾದ  ಪ್ರಶಾಂತ್.ಎಂ.ಸಿ ಆರಂಬಿಸಿದರು. ಉಪನ್ಯಾಸಕರಾದ ಶಿವರಾಜ್ ರವರು ಸ್ಪರ್ಧೆಯನ್ನು ನಡೆಸಿಕೊಟ್ಟರು.

ಜಿಲ್ಲಾ ನೋಡಲ್ ಅಧಿಕಾರಿಗಳಾದ ಶ್ರೀನಿವಾಸ್ ರವರು ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜಿಸಿದ್ದರು. ತೀರ್ಪುಗಾರರಾಗಿ ಆಗಮಿಸಿದ್ದ ಟಿಟಿಐ ಪ್ರಾಂಶುಪಾಲರಾದ ನಂಜುಂಡಸ್ವಾಮಿ ರವರು, ಉಪನ್ಯಾಸಕರಾದ ನಾಗೇಂದ್ರ ರವರು, ಶ್ರೀಮತಿ ಕಮಲಮ್ಮ ರವರು ಪಾರದರ್ಶಕವಾಗಿ ರಾಜ್ಯಮಟ್ಟಕ್ಕೆ ಸೂಕ್ತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದರು.

72ನೇ ಸ್ವಾತಂತ್ರ್ಯೋತ್ಸವ

72ನೇ ಸ್ವಾತಂತ್ರ್ಯೋತ್ಸವವನ್ನು ಡಯಟ್, ವಸಂತಮಹಲ್, ಮೈಸೂರಿನಲ್ಲೂ ಆಚರಿಸಲಾಯಿತು. ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಎಲ್ಲರೂ ಸ್ವಾತಂತ್ರ್ಯವನ್ನು ಸಂಭ್ರಮಿಸಿದರು.

ಆಗಸ್ಟ್ -15ನೇ ತಾರೀಖು ಏಕೆ ಸ್ವಾತಂತ್ರ್ಯ ದಿನವನ್ನಾಗಿ ಘೋಷಿಸಲಾಯಿತು ? ಬ್ರಿಟೀಷರು ಏಕೆ ಈ ದಿನವನ್ನೇ ಆಯ್ಕೆ ಮಾಡಿಕೊಂಡರು ? ಎಂಬ ವಿವರವನ್ನು ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮಾನ್ಯ ಪ್ರಾಂಶುಪಾಲರಾದ ಮಹದೇವಪ್ಪ ರವರು ದೇಶಾಭಿಮಾನಿಗಳ ಮುಂದಿಟ್ಟರು.

ಸ್ವಾತಂತ್ರ್ಯೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಿದ ಎಲ್ಲಾ ಡಯಟ್ ಹಿರಿಯ ಉಪನ್ಯಾಸಕರು, ಉಪನ್ಯಾಸಕರು, ಕಚೇರಿ ಸಿಬ್ಬಂದಿಗಳು ಪ್ರಾಂಶುಪಾಲರ ಜೊತೆಗೂಡಿ ಕ್ಲೋಸಪ್ ಫೋಟೋಗೆ ಫೋಸ್ ಕೊಟ್ಟೆವು. 



Thursday, 12 July 2018

ನಿರ್ದೇಶಕರ ವಸಂತಯಾನ

ಇಂದು ಡಿ.ಎಸ್.ಇ.ಆರ್.ಟಿ ನಿರ್ದೇಶಕರಾದ ಶ್ರೀ ಗೋಪಾಲಕೃಷ್ಣ ಸರ್ ರವರು ಡಯಟ್, ಮೈಸೂರಿಗೆ ಭೇಟಿ ನಿಡಿದರು. ಡಯಟ್ ನಲ್ಲಿ ನಿಗದಿತ ಸಮಯಕ್ಕೆ ಆರಂಭವಾಗಿರುವ ಐಟಿ@ಸ್ಕೂಲ್ ತರಬೇತಿಯ ಕುರಿತು ಶ್ಲಾಘಿಸಿದರು. 
ಶಿಬಿರಾರ್ಥಿಗಳೊಂದಿಗೆ ಚರ್ಚೆ ನಡೆಸಿದರು. ಐಟಿ@ಸ್ಕೂಲ್ ಆರಂಭಗೊಂಡ ಹಿನ್ನೆಲೆ, ಅದರ ಮೂಲ ಉದ್ದೇಶದ ಕುರಿತು ವಿವರಿಸಿದರು. ಇಲಾಖೆ ವತಿಯಿಂದ ನಡೆಯುತ್ತಿರುವ ಅತ್ಯುತ್ತಮ ಕಾರ್ಯಕ್ರಮಗಳಲ್ಲಿ/ತರಬೇತಿಗಳಲ್ಲಿ ಐಟಿ@ಸ್ಕೂಲ್ ಕೂಡ ಒಂದು ಎಂದು ಅಭಿಪ್ರಾಯಪಟ್ಟರು.


NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...