My Blog List

Sunday, 24 February 2019

ಚುನಾವಣಾ ಸಾಕ್ಷರತೆ ಕುರಿತಾದ ತಾಲೂಕು ಸಂಪನ್ಮೂಲ ವ್ಯಕ್ತಿಗಳ ತರಬೇತಿ - ದಿನಾಂಕ:22.02.2019

ಚುನಾವಣಾ ಸಾಕ್ಷರತೆ ಕುರಿತಾದ ತಾಲೂಕು ಸಂಪನ್ಮೂಲ ವ್ಯಕ್ತಿಗಳ ತರಬೇತಿ - ದಿನಾಂಕ:22.02.2019








Saturday, 16 February 2019

ವಸಂತಯಾನದಲ್ಲಿ ನಮ್ಮ ಆಯುಕ್ತರು

ಮಾನ್ಯ ಆಯುಕ್ತರಾದ ಪಿ.ಸಿ ಜಾಫರ್ ರವರು ನಮ್ಮ ಡಯಟ್ ಗೆ ಭೇಟಿ ಕೊಟ್ಟ ಕ್ಷಣ. ರಾಜ್ಯದ ಎಲ್ಲಾ ಕ್ಷೇತ್ರಶಿಕ್ಷಣಾಧಿಕಾರಿಗಳೊಡನೆ ನಡೆದ ವಿಡಿಯೋ ಕಾನ್ಫರೆನ್ಸ್ ಸಂವಾದದಲ್ಲಿ ಅವರು ಭಾಗವಹಿಸಿದ್ದರು. ರಾಜ್ಯದ ಎಲ್ಲಾ ಶೈಕ್ಷಣಿಕ ಉಸ್ತುವಾರಿದಾರರ ಜೊತೆ ಅವರು ಸಂವಾದ ನಡೆಸಿದರು.


Tuesday, 5 February 2019

ಲ್ಯಾಪ್ಸ್ ಗಳೆಲ್ಲವೂ ಟಾಪ್ ಗೆ ಹೋಗುವ ಸಮಯ – ಲ್ಯಾಪ್ ಟಾಪ್ ವಿತರಣೆ




 ಈ ದಿನ ನಮ್ಮ ಮೈಸೂರು ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ ಟ್ಯಾಲ್ಪ್ ಯೋಜನೆಗೆ ಆಯ್ಕೆಯಾದ ಶಾಲೆಗಳಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು. ಒಟ್ಟು 36 ಶಾಲೆಗಳಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು. ಎಲ್ಲರೂ ಬಹಳ ಸಂತೋಷದಿಂದ ಲ್ಯಾಪ್ ಟಾಪ್ ಗಳನ್ನು ಸ್ವೀಕರಿಸಿ, ತಮ್ಮ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ರೂಪಿಸುವ ಕನಸಿನೊಂದಿಗೆ ತೆರಳಿದರು. 


ಲ್ಯಾಪ್ ಟಾಪ್ ಬಳಕೆ ಬಗ್ಗೆ ಪ್ರಾತ್ಯಕ್ಷತೆ ನೀಡಲಾಯಿತು. ಲ್ಯಾಪ್ ಟಾಪ್ ಮತ್ತು ಪ್ರೊಜೆಕ್ಟರ್ ಬಳಕೆ ಕುರಿತು ಶಾಲೆಯಲ್ಲಿ ನಿರ್ವಹಿಸಬೇಕಾದ ದಾಖಲೆಗಳ ಬಗ್ಗೆ ಮಾನ್ಯ ಪ್ರಾಂಶುಪಾಲರು ಮತ್ತು ಇಟಿ ನೋಡಲ್ ಅಧಿಕಾರಿಗಳು ಸಭೆಯಲ್ಲಿ ವಿಷದಪಡಿಸಿದರು.

Sunday, 6 January 2019

ಟ್ಯಾಲ್ಪ್ ರಿಫ್ರೆಶರ್ 6ನೇ ತಂಡ


 ಇಂದು ಟ್ಯಾಲ್ಪ್ ರಿಫ್ರೆಶರ್ 6ನೇ ತಂಡದ ತರಬೇತಿಯನ್ನು ಆರಂಭಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾನ್ಯ ಪ್ರಾಂಶುಪಾಲರಾದ ಕೆ.ಮಹದೇವಪ್ಪನವರು ಶಿಕ್ಷಕರಿಗೆ ಕಿವಿಮಾತು ಹೇಳಿದರು. ಡಿಎಂ.ಪಿ.ಬಿಎಸ್ ವಿಭಾಗದ ಮುಖ್ಯಸ್ಥರಾದ ಮಹಿಮುನ್ನಿಸಾ ಬೇಗಂ, ತರಬೇತಿ ಸಂಯೋಜಕರಾದ ಶ್ರೀ ಪ್ರಶಾಂತ್.ಎಂ.ಸಿ, ಶ್ರೀಮತಿ ಭಾಗ್ಯಲಕ್ಷ್ಮೀ ಮೇಂ ರವರು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ದಿನೇಶ್ ಕುಮಾರ್, ಸ.ಶಿ, ಸರ್ಕಾರಿ ಪ್ರೌಢಶಾಲೆ, ಸಾಲುಂಡಿ, ,ಮೈಸೂರು ಗ್ರಾಮಾಂತರ ತಾಲೂಕು ಇವರು ಇಂದಿನ ಮೊದಲ ದಿನದ ತರಗತಿಗಳನ್ನು ಆರಂಭಿಸಿದರು.








TALP REFRESHER BATCH 5

Wednesday, 2 January 2019

ನಿರ್ದೇಶಕರ ವಸಂತಯಾನ


ಇಂದು ಆರ್.ಎಂ.ಎಸ್.ಎ ನಿರ್ದೇಶಕರಾದ ಶ್ರೀ ನಾಗೇಂದ್ರ ಮಧ್ಯಸ್ಥರ ಸರ್ ಮತ್ತು ನಲಿಕಲಿ ಕೋಶದ ಮುಖ್ಯಸ್ಥರಾದ ಶ್ರೀ ಬೆಳ್ಳಶೆಟ್ಟರು ಹಾಗು ರಾಜ್ಯ ಮಟ್ಟದ ಅಧಿಕಾರಿಗಳ ಸಾರಥ್ಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಸಿದ್ಧತೆ, ಆರ್.ಎಂ.ಎಸ್.ಎ ಚಟುವಟಿಕೆಗಳ ಗುರಿ-ಸಾಧನೆ, ನಲಿಕಲಿ ಗುಣಮಟ್ಟ ಪರಿಶೀಲನೆ, ಮೈಕ್ರೋ ಅಧ್ಯಯನ ಸೇರಿದಂತೆ ಹಲವು ವಿಚಾರಗಳ ಕುರಿತು ಪರಿಶೀಲನಾ ಸಭೆ ನಡೆದಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳ ಉಪನಿರ್ದೇಶಕರು(ಆಡಳಿತ) ಮತ್ತು ಉಪನಿರ್ದೇಶಕರು(ಅಭಿವೃದ್ಧಿ) ಹಾಗು ಎಲ್ಲಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಯಟ್ ಉಪನ್ಯಾಸಕರುಗಳು ಒಳಗೊಂಡಂತೆ ಹಲವರು ಉಪಸ್ಥಿತರಿದ್ದಾರೆ.







ಟ್ಯಾಲ್ಪ್ ತರಬೇತಿಗೆ ಆಗಮಿಸಿ ಶಿಕ್ಷಕರಿಗೆ ಕಿವಿಮಾತು ಹೇಳಿದರು. ಶಿಕ್ಷಕರ ಜೊತೆ ಸಂವಾದ ನಡೆಸಿದರು



Monday, 10 December 2018

ಡಯಟ್ ಸಲಹಾ ಸಮಿತಿ ಸಭೆ

ದಿನಾಂಕ:11-12-2018 ರಂದು ಜಿಲ್ಲಾಪಂಚಾಯತ್ ಮೈಸೂರಿನ ಮಾನ್ಯ ಸಿ.ಇ.ಓ. ರವರಾದ ಕೆ.ಜ್ಯೋತಿ(IAS)ರವರು ಡಯಟ್ ಸಲಹಾ ಸಮಿತಿ ಸಭೆಗೆ ಭೇಟಿ ನೀಡಿದ್ದರು. ಡಯಟ್ ಮೂಲಕ ಪ್ರಸಕ್ತ ವರ್ಷ ಹಮ್ಮಿಕೊಳ್ಳಲಾಗುತ್ತಿರುವ ತರಬೇತಿಗಳು, ಸಂಶೋಧನೆಗಳು, ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕ್ರಿಯಾಯೋಜನೆಗೆ ಅನುಮೋದನೆ ನೀಡಿದರು.


ಜಿ.ಪಂ. ಸಿಇಓ ರವರಾದ ಕೆ.ಜ್ಯೋತಿ ಮೇಂ ರವರನ್ನು ಸ್ವಾಗತಿಸಿದ ಸಂದರ್ಭ

ಈ ಸಂದರ್ಭದಲ್ಲಿ ಅವರು ಡಯಟ್ ನಲ್ಲಿ ನಡೆಯುತ್ತಿದ್ದ ಟ್ಯಾಲ್ಪ್ ರಿಫ್ರೆಶರ್ ತರಬೇತಿ ತಂಡ-4ಕ್ಕೆ ಭೇಟಿ ನೀಡಿದರು. ಶಿಕ್ಷಕರೊಂದಿಗೆ ಚರ್ಚಿಸಿದರು. ತಂತ್ರಜ್ಞಾನದ ಮೂಲಕ ತರಗತಿಗಳಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಗಣಿತ ವಿಷಯ ಬೋಧಕರು ಆಗಿದ್ದ ಅವರು ಗಣಿತ ವಿಷಯದಲ್ಲಿ ಬಳಕೆ ಮಾಡುತ್ತಿರುವ  ಟೂಲ್ ಗಳ ಬಗ್ಗೆ ವಿವರ ಪಡೆದರು. ಈ ವೇಳೆ ಹುಣಸೂರು ತಾಲೂಕಿನ ಬನ್ನಿಕುಪ್ಪೆ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕರಾದ ಹರೀಶ್ ರವರು ಜಿಯೋ ಜೀಬ್ರಾ ಕುರಿತು ವಿವರಣೆ ನೀಡಿದರು.



ಒಟ್ಟಾರೆ ತಂತ್ರಜ್ಞಾನ ಆಧರಿತ ಕಲಿಕೆ ಬೋಧನೆ ಮಕ್ಕಳಿಗೆ ಮುಟ್ಟಬೇಕು ಎಂಬ ಆಶಯವನ್ನು ಶ್ರೀಮತಿ ಜ್ಯೋತಿ ಮೇಂ ರವರು ವ್ಯಕ್ತಪಡಿಸಿದರು. 

NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...