My Blog List

Wednesday, 18 December 2019

ಐಟಿ@ಸ್ಕೂಲ್ಸ್ ಶಾಲಾ ಭೇಟಿ ನಮೂನೆ



ಐಟಿ@ಸ್ಕೂಲ್ಸ್ ಶಾಲೆಗಳಿಗೆ ಭೆಟಿ ನೀಡಿದ ಅಧಿಕಾರಿಗಳು ಭರ್ತಿ ಮಾಡಬೇಕಾದ ಆನ್ ಲೈನ್ ನಮೂನೆಗೆ ಇಲ್ಲಿ ಕ್ಲಿಕ್ಕಿಸಿ.

https://forms.gle/c31Zv25vSCsQUtyh8




ಐಟಿ@ಸ್ಕೂಲ್ಸ್ ತರಬೇತಿ ಕೇಂದ್ರಗಳಿಗೆ ಭೆಟಿ ನೀಡಿದ ಅಧಿಕಾರಿಗಳು ಭರ್ತಿ ಮಾಡಬೇಕಾದ ಆನ್ ಲೈನ್ ನಮೂನೆಗೆ ಇಲ್ಲಿ ಕ್ಲಿಕ್ಕಿಸಿ.  https://forms.gle/9R1GJp5yHT8Ubue76 


Friday, 13 December 2019

ಜಂಟಿ ನಿರ್ದೇಶಕರ ಭೇಟಿ

ಇಂದು ಡಿ.ಎಸ್.ಇ.ಆರ್.ಟಿ ಜಂಟಿನಿರ್ದೇಶಕರಾದ ಶ್ರೀಮತಿ ಗಾಯಿತ್ರಿದೇವಿಯವರು ಭೇಟಿ ನೀಡಿದ್ದರು. ಡಯಟ್ ಮೈಸೂರಿನಲ್ಲಿ ನಡೆಯುತ್ತಿದ್ದ ವಿವಿಧ ತರಬೇತಿಗಳಿಗೆ ಭೇಟಿ ನೀಡಿದರು.


ಈ ಸಂದರ್ಭದಲ್ಲಿ ಟ್ಯಾಲ್ಪ್ ತರಬೇತಿಗೆ ಆಗಮಿಸಿದ  ಅವರು ತರಬೇತಿ ಪಡೆಯುತ್ತಿದ್ದ ಶಿಕ್ಷಕರೊಂದಿಗೆ ಸಂವಾದ ನಡೆಸಿದರು. ಶಿಕ್ಷಕರ ಅಭಿಪ್ರಾಯ ಕೇಳಿದರು. 


ತಾವೂ ಸಹ ಶಿಬಿರಾರ್ಥಿಗಳಿಗೆ ಕನ್ನಡ ಟೈಪಿಂಗ್ ಮತ್ತು UNDO  , CONTROL+Z , ಬಳಕೆಯ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಲ್ಲದೇ, ಟ್ಯಾಲ್ಪ್ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ಇದರಿಂದ ಶಿಕ್ಷಕರು ಸ್ಮಾರ್ಟ್ ಆಗಲಿದ್ದಾರೆ. ಶಿಕ್ಷಕರೆಲ್ಲಾ ಒಂದು ಶಕ್ತಿ ಇದ್ದಂತೆ ಎಂದು ಶಿಕ್ಷಕರನ್ನು ಹುರಿದುಂಬಿಸಿದರು. 


ಈ ಸಂದರ್ಭದಲ್ಲಿ ಮೈಸೂರು ಡಯಟ್ ಪ್ರಾಂಶುಪಾಲರಾದ ಶ್ರೀ ಕೆ.ಮಹದೇವಪ್ಪನವರು ಹಾಗು ಇವೃತ್ತ ಜಂಟಿನಿರ್ದೇಶಕರಾದ ಶ್ರೀ ಪ್ರಭುಸ್ವಾಮಿ ರವರು, ಆರ್.ಎಂ.ಎಸ್.ಎ ನೊಡಲ್ ಅಧಿಕಾರಿಗಳಾದ ಶ್ರೀ ಚಂದ್ರಕಾಂತ್ ರವರು ಹಾಗು ಟ್ಯಾಲ್ಪ್ ನೋಡಲ್ ಅಧಿಕಾರಿಗಳಾದ ಪ್ರಶಾಂತ್.ಎಂ.ಸಿ ಹಾಗು ಶ್ರೀಮತಿ ಭಾಗ್ಯಲಕ್ಷ್ಮೀರವರು ಉಪಸ್ಥಿತರಿದ್ದರು.

Thursday, 5 December 2019

ಇ-ಕಂಟೆಂಟ್ ಕಮಿಟ್ಮೆಂಟ್

ಇ-ಕಂಟೆಂಟ್. ಟ್ಯಾಲ್ಪ್ ತರಬೇತಿಗಳ ಮುಂದುವರಿದ ಭಾಗ. 2016-17ನೇ ಸಾಲಿನಲ್ಲಿ ಟ್ಯಾಲ್ಪ್ ಗೆ ಆಯ್ಕೆಗೊಂಡ ಶಾಲೆಗಳಲ್ಲಿ ಇಬ್ಬರು ಶಿಕ್ಷಕರು ಈ ಇ-ಕಂಟೆಂಟ್   ತರಬೇತಿ ಪಡೆದಿದ್ದಾರೆ. ಪ್ರಸ್ತುತ ಶಾಲೆಗಳಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಈ ತರಬೇತಿಯು ಅನುಷ್ಠಾನಗೊಂಡಿದ್ದು, ಅದರ ವಿವಿಧ ಶಾಲೆಯ ಚಿತ್ರಗಳು ಇಂತಿವೆ.

ಸರ್ಕಾರಿ ಪ್ರೌಢಶಾಲೆ, ಹಂಪಾಪುರ, ಕೆ.ಆರ್.ನಗರ ತಾ.

ಸರ್ಕಾರಿ ಪ್ರೌಢಶಾಲೆ, ಹಂಪಾಪುರ, ಕೆ.ಆರ್.ನಗರ ತಾ.

Add caption

ಸರ್ಕಾರಿ ಪ್ರೌಢಶಾಲೆ, ಎನ್.ಆರ್.ಮೊಹಲ್ಲಾ,ಮೈಸೂರು ಉತ್ತರ


ಚೆನ್ನೈ ಡಯಟ್ ತಂಡದ ಭೇಟಿ


ಇಂದು ಚೆನ್ನೈ ಡಯಟ್ ನ ಉಪನ್ಯಾಸಕರ ತಂಡ ಮೈಸೂರು ಡಯಟ್ ಗೆ ಭೇಟಿ ನೀಡಿತ್ತು. ಶೈಕ್ಷಣಿಕ ಅದ್ಯಯನದ ಹಿನ್ನೆಲೆಯಲ್ಲಿ ಆಗಮಿಸಿದ್ದ ತಂಡದ ಸದಸ್ಯರು ಮೈಸೂರು ಡಯಟ್ ನಲ್ಲಿ ನಡೆಯುತ್ತಿದ್ದ ತರಬೇತಿಗಳು ಮತ್ತು ಡಯಟ್ ನ ನಾವಿನ್ಯಯುತ ಚಟುವಟಿಕೆಗಳನ್ನು ಪರಿವೀಕ್ಷಿಸಿದರು.






Wednesday, 4 December 2019

ಇ-ತ್ಯಾಜ್ಯ ನಿರ್ವಹಣೆ ಸಭೆ

ಈ ದಿನ ಮೈಸೂರು ಡಯಟ್ ನಲ್ಲಿ ನಡೆದ ಇ-ತ್ಯಾಜ್ಯ ನಿರ್ವಹಣೆ ಮತ್ತು ಡಯಟ್ ತರಬೇತಿಗಳ ಸಂಬಂಧ ಸಭೆಯಲ್ಲಿ ಮೈಸೂರು ಜಿಲ್ಲೆಯ ಕ್ಷೇತ್ರಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ತಂಡ ಭಾಗವಹಿಸಿತ್ತು. ಸಭೆಯಲ್ಲಿ ಈ ಕೆಳಕಂಡ ವಿಷಯಗಳನ್ನು ಚರ್ಚಿಸಲಾಯಿತು. 

ಮೊದಲಿಗೆ ಇ-ತ್ಯಾಜ್ಯ ಮತ್ತು ಇ ಆಸ್ತಿ ನಿರ್ವಹಣೆ ಸಂಬಂಧ ಕೈಪಿಡಿಯ ಮಾಹಿತಿಗಳನ್ನು ಹಂಚಿಕೊಳ್ಳಲಾಯಿತು.ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ಶ್ರೀಮತಿ ಭಾಗ್ಯಲಕ್ಷ್ಮೀರವರು ಈ ಬಗ್ಗೆ ವಿವರಿಸಿದರು.
  • ಪ್ರತಿ ಶಾಲೆಗಳಲ್ಲಿ ಮತ್ತು ವಲಯ ಮಟ್ಟದಲ್ಲಿ ಮೊದಲಿಗೆ ಈ ಸಂಭಂಧ ಇ-ಕೋಶ ರಚಿಸಲು ತಿಳಿಸಲಾಯಿತು. 
  • ಸುತ್ತೋಲೆಯಲ್ಲಿ ತಿಳಿಸಿರುವಂತೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ, ತಾಲೂಕು ಹಂತದ ಕಚೇರಿಗಳಲ್ಲಿ, ಜಿಲ್ಲಾ ಹಂತದ ಕಚೇರಿಗಳಲ್ಲಿ ಇರುವ ಇ ಆಸ್ತಿಗಳನ್ನು ಅವುಗಳ ಸ್ಥಿತಿಗತಿ ಆಧರಿಸಿ ನಿಗದಿಪಡಿಸಿರುವ ನಮೂನೆಯಲ್ಲಿ ಮಾಹಿತಿಗಳನ್ನು ಕ್ರೋಢೀಕರಿಸಿ ತಾಲೂಕು ಹಂತಕ್ಕೆ , ನಂತರ ಜಿಲ್ಲಾ ಹಂತಕ್ಕೆ ರವಾನಿಸಲು ತಿಳಿಸಲಾಯಿತು.
  • ನಂತರ ಟ್ಯಾಲ್ಪ್  ಅಥವ ಐಟಿ@ಸ್ಕೂಲ್ಸ್ ಕಾರ್ಯಕ್ರಮದ ಸಂಪೂರ್ಣ ವಿವರವನ್ನು ನೀಡಲಾಯಿತು. ನೋಡಲ್ ಅಧಿಕಾರಿಗಳಾದ ಶ್ರೀ ಪ್ರಶಾಂತ್.ಎಂ.ಸಿರವರು ಮಹತ್ವಾಕಾಂಕ್ಷಿಯ ಕಾರ್ಯಕ್ರಮದ ಅಡಿಯಲ್ಲಿ ನೀಡಲಾಗುತ್ತಿರುವ ತರಬೇತಿ ಮತ್ತು ಅದರ ಸ್ವರೂಪ ಹಾಗು ತರಬೇತಿಯ ಬಳಿಕ ತರಗತಿಗಳಲ್ಲಿ ಅಳವಡಿಸಿಕೊಳ್ಳಬೇಕಾದ ಅಂಶಗಳ ಬಗ್ಗೆಯೂ ವಿವರಿಸಲಾಯಿತು. 
  • ಜಿಲ್ಲೆಯ ಎಲ್ಲಾ ಬ್ಲಾಕ್ ನ ಸರ್ಕಾರಿ ಪ್ರೌಢಶಾಲೆಗಳಲ್ಲಿಯೂ ಟ್ಯಾಲ್ಪ್ ಶಾಲೆಗಳಲ್ಲಿ ಬ್ಲಾಗ್ ರಚಿಸಲು ತಿಳಿಸಿದ್ದು, ಇವುಗಳನ್ನು ಸಂಭಂಧಿಸಿದ ಕ್ಷೇತ್ರಶಿಕ್ಷಣಾಧಿಕಾರಿಗಳು ಉಸ್ತುವಾರಿ ಮಾಡಲು ತಿಳಿಸಲಾಯಿತು.

  • ಆರ್.ಎಂ.ಎಸ್.ಎ ತರಬೇತಿ ಸಂಬಂಧ ಮಾಹಿತಿಯನ್ನು ನೋಡಲ್ ಅಧಿಕಾರಿಗಳಾದ ಶ್ರೀ ಚಂದ್ರಕಾಂತ್ ಸರ್ ಹಂಚಿಕೊಂಡರು. ನಿಗದಿಪಡಿಸಿರುವ ಗುರಿ ತಲುಪಲು ಮುಂದಿನ ತರಬೇತಿಗಳಿಗೆ ಶಿಕ್ಷಕರನ್ನು ಮತ್ತು ಸಂಪನ್ಮೂಲ ವ್ಯಕ್ತಿಗಳನ್ನು ಕಳುಹಿಸಿಕೊಡಲು ತಿಳಿಸಲಾಯಿತು.

  •  ಇದೇ ವೇಳೆ ಗುರುಚೇತನ ತರಬೇತಿ ಬಗ್ಗೆ ವಿವರಣೆಯನ್ನು ನೋಡಲ್ ಅಧಿಕಾರಿಗಳಾದ ಶ್ರೀ ಚಂದ್ರಶೇಖರ್ ರವರು ವಿವರಿಸಿದರು. 

  • ಈ ಸಂದರ್ಭದಲ್ಲಿ ಓದು ಕರ್ನಾಟಕ ಮತ್ತು ಗಣಿತ ಕಲಿಕಾಂದೋಲನ ತರಬೇತಿಯ ನೋಡಲ್ ಅಧಿಕಾರಿಗಳಾದ ಶ್ರೀ ನಂಜುಂಡಾರಾಧ್ಯ ರವರು ತಮ್ಮ ಗುರಿ-ಸಾಧನೆಯ ಬಗ್ಗೆ ವಿವರಿಸಿದರು
  • NISHTHA ತರಬೇತಿಯ ಉದ್ದೇಶ ಮತ್ತು ಮುಂದಿನ ದಿನಗಳಲ್ಲಿ KRP&SRP ಗಳನ್ನು ಬಳಸಿಕೊಂಡು ಕೈಗೊಳ್ಳಬೇಕಾದ ತರಬೇತಿಗಳ ಬಗ್ಗೆ ಶ್ರೀಮತಿ ರಾಧಾಮಣಿ ರವರು ವಿವರಿಸಿದರು.
  • ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಸಂಭಂಧ ವಲಯ ಮಟ್ಟದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಕ್ಷೇತ್ರಶಿಕ್ಷಣಾಧಿಕಾರಿಗಳೋಂದಿಗೆ ವಿಭಾಗದ ಮುಖ್ಯಸ್ಥರಾದ ಶ್ರೀ ಸಿ.ನಾಗರಾಜಯ್ಯನವರು ಚರ್ಚಿಸಿದರು.


NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...