7ನೇ ತರಗತಿ ಗಣಿತ ವಿಷಯದ ಖಾನ್ ಅಕಾಡೆಮಿ ಇ-ಸಂಪನ್ಮೂಲಗಳನ್ನು
ಸ್ಥಳೀಕರಣ ಗೊಳಿಸುವ ಜವಬ್ದಾರಿಯನ್ನು ಮೈಸೂರು ಡಯಟ್ ಗೆ ವಹಿಸಲಾಗಿತ್ತು. ಇದು ರಜಾ ದಿನಗಳಲ್ಲಿ ಆಗಬೇಕಾದ ಕಾರ್ಯ. ಎಂದಿನಂತೆ ಈ ಹೊಣೆ
ಇಟಿ ವಿಭಾಗಕ್ಕೆ ಬಿತ್ತು. ನಮ್ಮ ವಿಭಾಗದ ಉಪನ್ಯಾಸಕಿಯವರಾದ ಶ್ರೀಮತಿ ಭಾಗ್ಯಲಕ್ಷ್ಮೀ ರವರು ಈ ಕಾರ್ಯಾಗಾರಕ್ಕೆ
ಕಾರ್ಯೋನ್ಮುಖರಾದರು.
ಸತತ ದೂರವಾಣಿ ಕರೆಗಳ ಮೂಲಕ ಸಂಪರ್ಕಿಸಿ ಹದಿನೈದು ಮಂದಿ ಅನುವಾದಕರು ಮತ್ತು ಐದು ಮಂದಿ ಅನುಮೋದಕರನ್ನು ಆಯ್ಕೆಮಾಡಿದರು. ಎಲ್ಲರನ್ನು ಕಾರ್ಯಾಗಾರಕ್ಕೆ ಕರೆಸುವಲ್ಲಿ ಯಶಸ್ವಿಯಾದರು.
ಹತ್ತು ದಿನಗಳ ಕಾಲ ಈ ಕಾರ್ಯಾಗಾರ ನಡೆಯಿತು. ತಪಸ್ಸಿಗೆ ಕುಳಿತಂತೆ ಹೊಸ ಕಾರ್ಯದ
ಅನುಭವಗಳನ್ನು ತಮ್ಮದಾಗಿಸಿಕೊಂಡ ಇಡೀ ತಂಡ ಪ್ರಾಂಶುಪಾಲರ
ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಾಗರದ ಮಧ್ಯೆ ಭೇಟಿ ನೀಡಿದ
ಡಿ.ಎಸ್.ಇ.ಆರ್.ಟಿಯ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀ ವೇದಮೂರ್ತಿರವರು ಸಂಪನ್ಮೂಲವ್ಯಕ್ತಿಗಳೊಂದಿಗೆ
ಸಂವಾದ ನಡೆಸಿದರು. ಸಲಹೆ ನೀಡಿದರು. ಜೊತೆ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಇಡಿ ರಾಜ್ಯವನ್ನು
ಉದ್ದೇಶಿಸಿ “ಹೋಬಳಿ ಹಂತದ ಸಮಾಲೋಚನಾ ಕಾರ್ಯಾಗಾರಗಳ” ಬಗ್ಗೆ ಇಲ್ಲಿಂದಲೇ ಮಾಹಿತಿ ನೀಡಿದರು.
No comments:
Post a Comment