ಈ ದಿನ ಮಾನ್ಯ ಪ್ರಾಂಶುಪಾಲರ
ಅಧ್ಯಕ್ಷತೆಯಲ್ಲಿ 2019-20ನೇ ಸಾಲಿನ ಟಿಇ ಪ್ಲಾನ್ ಮತ್ತು ತರಬೇತಿಗಳ ಆಯೋಜನೆ ಹಾಗು ಡಯಟ್ ಕಾರ್ಯಚಟುವಟಿಕೆಗಳ
ಕುರಿತು ಸಭೆ ನಡೆಯಿತು. ಸಭೆಯಲ್ಲಿ ವಿಸ್ತೃತವಾಗಿ ಡಯಟ್ ಕಾರ್ಯಚಟುವಟಿಕೆಗಲ ಕುರಿತು ಚರ್ಚೆ ನಡೆಯಿತು.
ಟಿಇ ಪ್ಲಾನ್ ನಡಿಯಲ್ಲಿ ನಡೆಯಬೇಕಾದ
ಸಂಶೋಧನಾ ಚಟುವಟಿಕೆಗಳು, ಡಯಟ್ ಸಂಚಿಕೆಗಳು, ವೆಬ್ ಸೈಟ್, ಡಯಟ್ ಲ್ಯಾಬ್ ಅಪ್‍ಗ್ರೇಡ್ ಕೆಲಸ, ತರಬೇತಿಗಳು-ವರದಿಗಳು-ಪೂರ್ವ ಚಟುವಟಿಕೆಗಳು-ತರಬೇತಿ ಆಯೋಜನೆ
ಸ್ವರೂಪ-ಫಲಶೃತಿಗಳು, ಇತ್ಯಾದಿ ವಿಷಯಗಳನನ್ನು ನೋಡಲ್ ಅಧಿಕಾರಿಗಳಾದ ಶ್ರೀನಿವಾಸ್ ರವರು ಪ್ರಸ್ತುಪಡಿಸಿದರು.
ಸಭೆಯಲ್ಲಿದ್ದ ಹಿರಿಯ ಉಪನ್ಯಾಸಕರು, ಉಪನ್ಯಾಸಕರುಗಳು ಚರ್ಚೆಯಲ್ಲಿ ಭಾಗವಹಿಸಿದ್ದರು.
ರಾಷ್ಟ್ರೀಯಶಿಕ್ಷಣ ನೀತಿ-2019-20ರ
ಕುರಿತು ಸಹ ಟಿಟಿಐನ ಪ್ರಾಂಶುಪಾಲರಾದ ಶ್ರೀ ನಂಜುಂಡಸ್ವಾಮಿ ಮತ್ತು ಶ್ರೀ ಶಂಕರ್ ರವರು ತಮ್ಮ ವಿಚಾರ
ಪ್ರಸ್ತುತಪಡಿಸಿದರು. ಈ ಬಗ್ಗೆ ಮತ್ತೊಮ್ಮೆ ಕೂಲಂಕಷವಾಗಿ ಚರ್ಚೆ ನಡೆಸುವ ಇಂಗಿತ ವ್ಯಕ್ತಪಡಿಸಿದರು.