ಡಯಟ್ ಎಂದಾಕ್ಷಣ ಶರೀರದ ಏರುಪೇರು ಸರಿಪಡಿಸಲು ಮಾಡುವ ಪಥ್ಯ ಎಂಬುದೇ ಸಾಮಾನ್ಯರ ಭಾವನೆ. ಆದರೆ, ಡಯಟ್ ಅರ್ಥಾತ್ DISTRICT INSTITUTE OF EDUCATION AND TRAINING (ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ) ಎಂದರೇನು ಎಂಬ ಪರಿಚಯ ಶಿಕ್ಷಣ ರಂಗದಲ್ಲಿರುವವರಿಗೆ ಮಾತ್ರ ಚಿರಪರಿಚಿತ. ಈ ಶಿಕ್ಷಣದ ಬೆನ್ನುಹತ್ತಿರುವ ಭವಿಷ್ಯದ ಶಿಕ್ಷಕರು ಅರ್ಥಾತ್ ಬಿಇಡಿ ಪ್ರಶಿಕ್ಷಣಾರ್ಥಿಗಳು ಇಂದು ಡಯಟ್ , ವಸಂತಮಹಲ್, ಮೈಸೂರಿಗೆ ಭೇಟಿ ನೀಡಿದ್ದರು.
16-10-2017 ಮತ್ತು 17-10-2017 ಎರಡು ದಿನಗಳ ಕಾಲ
1. ಇನ್ಸ್ ಟಿಟ್ಯೂಟ್ ಆಫ್ ಎಜುಕೇಷನ್
2. ಸಂತ ಜೋಸೆಫರ ಬಿಇಡಿ ಮಹಾವಿದ್ಯಾಲಯ
3. ಜೆ.ಎಸ್.ಎಸ್. ಬಿಇಡಿ ಕಾಲೇಜ್
4.ಅಮೃತಾನಂದಮಯಿ ಬಿಇಡಿ ಕಾಲೇಜ್
5.ಶಾರದಾವಿಲಾಸ್ ಬಿಇಡಿ ಕಾಲೇಜ್ ನ ವಿದ್ಯಾರ್ಥಿಗಳು ಡಯಟ್ ನ ವಸಂತಯಾನದಲ್ಲಿ ವಿಹರಿಸಿದರು.
ಡಯಟ್ ಎಂದರೇನು ? ಇದರ ಕೆಲಸಗಳೇನು ? ಯಾರೆಲ್ಲಾ ಇಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ ? ಇವರ ವಿದ್ಯಾರ್ಹತೆಗಳೇನು ? ಏನೇನೆಲ್ಲಾ ಕರ್ತವ್ಯಗಳನ್ನು ಇಲ್ಲಿ ನಿರ್ವಹಿಸುತ್ತಾರೆ ? ಎಷ್ಟೆಲ್ಲಾ ವಿಭಾಗಗಳಿವೆ ? ಯಾವ ವಿಭಾಗದ ಕಾರ್ಯ ಏನು ? ಏನೆಲ್ಲಾ ದಾಖಲೆಗಳನ್ನು ನಿರ್ವಹಿಸಲಾಗುತ್ತೆ ? ಒಂದು ಜಿಲ್ಲೆಯ ಶೈಕ್ಷಣಿಕ ಮೇಲುಸ್ತುವಾರಿಯನ್ನು, ಶೈಕ್ಷಣಿಕ ಆಡಳಿತ ನಿರ್ವಹಣೆಯನ್ನ ಹೇಗೆ ನಿರ್ವಹಿಸಲಾಗುತ್ತೆ ? ಎಂಬಿತ್ಯಾದಿ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳುವ ಪ್ರಯತ್ನ ನಡೆಯಿತು.
ಈ ಕಾರ್ಯಾಗಾರದಲ್ಲಿ ತರಗತಿಗಳ ಉಸ್ತುವಾರಿಯನ್ನು
1. ಶ್ರೀನಿವಾಸ್, ಹಿರಿಯ ಉಪನ್ಯಾಸಕರು, ಡಯಟ್,ಮೈಸೂರು
2. ಚಂದ್ರಶೇಖರ್, ಹಿರಿಯ ಉಪನ್ಯಾಸಕರು, ಡಯಟ್,ಮೈಸೂರು
3. ಪುಷ್ಪಲತಾ,ಉಪನ್ಯಾಸಕರು, ಡಯಟ್,ಮೈಸೂರು
4.ತ್ರಿವೇಣಿ,ಉಪನ್ಯಾಸಕರು, ಡಯಟ್,ಮೈಸೂರು
5.ಪ್ರಶಾಂತ್.ಎಂ.ಸಿ, ಉಪನ್ಯಾಸಕರು, ಡಯಟ್,ಮೈಸೂರು
ಇವರು ವಹಿಸಿಕೊಂಡು ನಿರ್ವಹಿಸಿದರು.
No comments:
Post a Comment