ಪಾಠ ಮತ್ತು ಆಟ ಎರಡೂ ತದ್ವಿರುದ್ಧ ಪದಗಳಾಗಿರುವುದು ನಮ್ಮ ವ್ಯವಸ್ಥೆಯ ದುರಂತ.
ಪಾಠದಲ್ಲಿ ಆಟದ ವಿನೋದ ಕಾಣಬೇಕಾದರೆ ಆಟಿಕೆಗಳು ಬೋಧನಾ ಸಾಮಗ್ರಿಗಳಾಗಬೇಕು. ಹಾಗೆಯೇ
ಬೋಧನಾ ಸಾಮಗ್ರಿಗಳನ್ನು ಮಾರ್ಪಡಿಸಿ ಆಟಿಕೆಗಳಾಗಿಸಬೇಕು. ಆಗ ಆಟದ ಆನಂದ, ಕಲಿಕೆಯ ಆನಂದ
ಕೂಡಿ ಆಯಾಸವಿಲ್ಲದ ಸಂವಹನಕ್ಕೆ , ಆಯಾಸವಿಲ್ಲದ ಅಕ್ಷರ ಕಲಿಕೆಗೆ ದಾರಿಮಾಡಿಕೊಡುತ್ತದೆ.
ಹಾಗಾದರೆ ಮಾಡಬೇಕಾದ್ದಾದರೂ ಏನು? ಆಟಿಕೆಗಳನ್ನು ಗಮನಿಸುತ್ತಾ ಏಕ ಪರಿಕಲ್ಪನೆ ಲಕ್ಷಿತವಾಗುವಂತೆ ಅದನ್ನು ಮಾರ್ಪಡಿಸುವುದು. ಹಾಗೆಯೇ ಬೋಧನಾ ಸಾಮಗ್ರಿಗಳನ್ನು ಸ್ಥಳೀಯ ಲಭ್ಯ ಪರ್ಯಾಯಗಳೊಂದಿಗೆ ರೂಪಿಸಿ ಅದಕ್ಕೆ ರಂಜನೆಯ ಲೇಪವನ್ನು ಕೊಡುವುದು. ಈ ಕೆಲಸ, ಹೇಳಿದಷ್ಟು ಸುಲಭವಲ್ಲ. ಹಾಗೆ ಮಾಡಿ ಯಶಸ್ವಿಯಾದ ಮಾದರಿ ಇಲ್ಲಿದೆ.
ಇದು ಐ ಕ್ಯೂಬ್ ಸೈನ್ಸ್ ಕ್ಲಬ್. ಪ್ರಾಥಮಿಕ ಶಿಕ್ಷಣ ಶಿಕ್ಷಕರಿಗೆ ವಿಜ್ಞಾನದಲ್ಲಿ ಕುತೂಹಲ ಮೂಡಿಸುವ, ಆಸಕ್ತಿ ಕೆರಳಿಸುವ ಕೆಲಸವನ್ನು ಈ ಸಂಸ್ಥೆ ನಿರ್ವಹಿಸುತ್ತಿದೆ. ಇಂತಹ ಕಾರ್ಯವನ್ನು ನಮ್ಮ ಡಯಟ್ ನಲ್ಲೂ ನಡೆಸಲಾಯಿತು.
ಜಿಲ್ಲೆಯ ಹಲವು ಬ್ಲಾಕ್ ಗಳಿಂದ ಬಿ.ಆರ್.ಪಿ, ಸಿ.ಆರ್.ಪಿಗಳು ಮತ್ತು ವಿಜ್ಞಾನ ಶಿಕ್ಷಕರು ಭಾಗವಹಿಸಿದ್ದರು.
ನಮ್ಮ ಪ್ರಾಚಾರ್ಯರೂ ಸಹಈ ಅವಧಿಯಲ್ಲಿ ಶಿಕ್ಷಕರೊಂದಿಗೆ,ಬಿ.ಆರ್.ಪಿ,ಸಿ.ಆರ್.ಪಿಯವರೊಂದಿಗೆಸಂವಾದದಲ್ಲಿ ಭಾಗವಹಿಸಿದ್ದರು.

- Prashanth M C
Lecturer, Diet, Mysore