My Blog List

Tuesday, 10 February 2015

ವಿಜ್ಞಾನ ವಿಶೇಷ

ಪಾಠ ಮತ್ತು ಆಟ ಎರಡೂ ತದ್ವಿರುದ್ಧ ಪದಗಳಾಗಿರುವುದು ನಮ್ಮ ವ್ಯವಸ್ಥೆಯ ದುರಂತ. ಪಾಠದಲ್ಲಿ ಆಟದ ವಿನೋದ ಕಾಣಬೇಕಾದರೆ ಆಟಿಕೆಗಳು ಬೋಧನಾ ಸಾಮಗ್ರಿಗಳಾಗಬೇಕು. ಹಾಗೆಯೇ ಬೋಧನಾ ಸಾಮಗ್ರಿಗಳನ್ನು ಮಾರ್ಪಡಿಸಿ ಆಟಿಕೆಗಳಾಗಿಸಬೇಕು. ಆಗ ಆಟದ ಆನಂದ, ಕಲಿಕೆಯ ಆನಂದ ಕೂಡಿ ಆಯಾಸವಿಲ್ಲದ ಸಂವಹನಕ್ಕೆ , ಆಯಾಸವಿಲ್ಲದ ಅಕ್ಷರ ಕಲಿಕೆಗೆ ದಾರಿಮಾಡಿಕೊಡುತ್ತದೆ.



 ಹಾಗಾದರೆ ಮಾಡಬೇಕಾದ್ದಾದರೂ ಏನು? ಆಟಿಕೆಗಳನ್ನು ಗಮನಿಸುತ್ತಾ ಏಕ ಪರಿಕಲ್ಪನೆ ಲಕ್ಷಿತವಾಗುವಂತೆ ಅದನ್ನು ಮಾರ್ಪಡಿಸುವುದು. ಹಾಗೆಯೇ ಬೋಧನಾ ಸಾಮಗ್ರಿಗಳನ್ನು ಸ್ಥಳೀಯ ಲಭ್ಯ ಪರ್ಯಾಯಗಳೊಂದಿಗೆ ರೂಪಿಸಿ ಅದಕ್ಕೆ ರಂಜನೆಯ ಲೇಪವನ್ನು ಕೊಡುವುದು. ಈ ಕೆಲಸ, ಹೇಳಿದಷ್ಟು ಸುಲಭವಲ್ಲ. ಹಾಗೆ ಮಾಡಿ ಯಶಸ್ವಿಯಾದ ಮಾದರಿ ಇಲ್ಲಿದೆ.
 ಇದು ಐ ಕ್ಯೂಬ್ ಸೈನ್ಸ್ ಕ್ಲಬ್. ಪ್ರಾಥಮಿಕ ಶಿಕ್ಷಣ ಶಿಕ್ಷಕರಿಗೆ  ವಿಜ್ಞಾನದಲ್ಲಿ ಕುತೂಹಲ ಮೂಡಿಸುವ, ಆಸಕ್ತಿ ಕೆರಳಿಸುವ ಕೆಲಸವನ್ನು ಈ ಸಂಸ್ಥೆ ನಿರ್ವಹಿಸುತ್ತಿದೆ. ಇಂತಹ ಕಾರ್ಯವನ್ನು ನಮ್ಮ ಡಯಟ್ ನಲ್ಲೂ ನಡೆಸಲಾಯಿತು.

ಜಿಲ್ಲೆಯ ಹಲವು ಬ್ಲಾಕ್ ಗಳಿಂದ ಬಿ.ಆರ್.ಪಿ, ಸಿ.ಆರ್.ಪಿಗಳು ಮತ್ತು ವಿಜ್ಞಾನ ಶಿಕ್ಷಕರು ಭಾಗವಹಿಸಿದ್ದರು.
ನಮ್ಮ ಪ್ರಾಚಾರ್ಯರೂ ಸಹಈ ಅವಧಿಯಲ್ಲಿ ಶಿಕ್ಷಕರೊಂದಿಗೆ,ಬಿ.ಆರ್.ಪಿ,ಸಿ.ಆರ್.ಪಿಯವರೊಂದಿಗೆಸಂವಾದದಲ್ಲಿ ಭಾಗವಹಿಸಿದ್ದರು. 
- Prashanth M C
Lecturer, Diet, Mysore

No comments:

Post a Comment

NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...