My Blog List

Thursday, 25 September 2014

ಥರೋ ತರಬೇತಿ

ದಿನಾಂಕ:19-09-2014 ರಿಂದ 23-09-2014 ರವರೆಗೆ ಡಯಟ್ ನಲ್ಲಿ ಎರಡು ತರಬೇತಿಗಳು ಜರುಗಿದವು. 6-7-8 ನೇ ತರಗತಿಗೆ ವಿಜ್ಞಾನ  ವಿಷಯಾಧರಿತ ತರಬೇತಿ ನೀಡಲಾಯಿತು. ಹಾಗೆಯೇ, 4-5ನೇ ತರಗತಿಯ ಕನ್ನಡ , ಇಂಗ್ಲೀಷ್, ಪರಿಸರ ಅಧ್ಯಯನ, ಮತ್ತು ಗಣಿತ ವಿಷಯಾಧರಿತವಾಗಿ ತರಬೇತಿ ನೀಡಲಾಯಿತು. ತರಬೇತಿಯನ್ನುಉಪಪ್ರಾಂಶುಪಾಲರಾದ ಶ್ರೀ ನಾರಾಯಣಗೌಡರು ಉದ್ಘಾಟಿಸಿದರು.


ಕಾರ್ಯಕ್ರಮದಲ್ಲಿ 6-8ನೇ ತರ ಗತಿ ವಿಷಯಾಧಾರಿತವಾದ ತರಬೇತಿಯ ಸಂಯೋಜಕರಾದ ಶ್ರೀ ಎಸ್.ಸ್ವಾಮಿರವರು ಎಲ್ಲರನ್ನು ಸ್ವಾಗತಿಸಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಉಪಪ್ರಾಂಶುಪಾಲರು ಎಲ್ಲರಲ್ಲೂ ಉತ್ಸಾಹ ತುಂಬಿದರು.

ಇದಕ್ಕೂ ಮೊದಲು ಐಸ್ ಬ್ರೇಕ್ ಅವಧಿಯಲ್ಲಿ ಎಲ್ಲರನ್ನು ಸಾಮೂಹಿಕವಾಗಿ ಸರಳ ವ್ಯಾಯಾಮ, ಚಟುವಟಿಕೆಯಲ್ಲಿ ತೊಡಗಿಸಲಾಯಿತು.


ತರಬೇತಿಯ ಮೊದಲ ಅಧಿವೇಶನದಲ್ಲಿ ಹಿರಿಯ ಉಪನ್ಯಾಸಕರಾದ ಶ್ರೀ ಸ್ವಾಮಿ ರವರು ಎಲ್ಲರಿಗೂ ಯೋಗದ ಯೋಗ ಮುಂದಿಟ್ಟರು. ಪ್ರಾಣಾಯಾಮ, ಸರಳ ಆಸನ, ಯೋಗ ಮುದ್ರೆಗಳನ್ನು ಪರಿಚಯಿಸಿದರು.

ತರಬೇತಿಗಳು ಶಿಬಿರಾರ್ಥಿಗಳ ಪೂರ್ಣಮನದ ಭಾಗವಹಿಸುವಿಕೆಯಿಂದ ಕಳೆಗಟ್ಟಿತ್ತು.


ತರಬೇತಿಯ ಮೂರನೇ ದಿನ ಡಿ.ಎಸ್.ಇ.ಆರ್.ಟಿಯ ಉಪನಿರ್ದೇಶಕ ರಾದ ಶ್ರೀಮತಿ ಭಾರತಿ, ಶ್ರೀಮತಿ ದ್ರಾಕ್ಷಾಯಿಣಿ ರವರು ಆಗಮಿಸಿ, ತರಬೇತಿಯನ್ನು ಹುರಿದುಂಬಿಸಿದರು.


ಕಡೆ ದಿನ  .ಸಿ.ಆರ್.ಪಿ, ಬಿ.ಆರ್.ಪಿ, ಇ.ಸಿ.ಓಗಳ ಅಭಿಪ್ರಾಯ ಸಂಗ್ರಹಣೆ ಮಾಡಲಾಯಿತು. ಮಾನ್ಯ ಪ್ರಾಚರ್ಯರು ತರಬೇತಿ ನಡೆಸುವುದು ಹೇಗೆ ? ತರಬೇತಿಗಳ ರೂಪರೇಷೆಯ ಪಾಠ ಬೋಧಿಸಿದರು. ಕಡೆಗೆ ಎಲ್ಲರನ್ನೂ ಆತ್ಮೀಯವಾಗಿ ಬೀಳ್ಕೊಡಲಾಯಿತು.
- Prashanth M C
Lecturer, Diet, Mysore

No comments:

Post a Comment

NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...