ಟಿಟಿಎಂಎಸ್ ತರಬೇತಿ
17-07-2014 ರಂದು ಜಿಲ್ಲೆಯ ಎಲ್ಲಾ ಶೈಕ್ಷಣಿಕ ವಲಯದ ಬಿ.ಆರ್.ಸಿ ಕಚೇರಿಯ ಆಯ್ದ ಸಿಬ್ಬಂದಿ ವರ್ಗದವರಿಗೆ ಟಿಟಿಎಂಎಸ್ ತರಬೇತಿಯನ್ನು ನಡೆಸಲಾಯಿತು.
TTMS ಅಂದರೆ TEACHER’S TRAINING & MANAGEMENT
SOFTWARE. ಅರ್ಥಾತ್ ಶಿಕ್ಷಕರ ತರಬೇತಿ ನಿರ್ವಹಣಾ ತಂತ್ರಾಂಶ.
ತಂತ್ರಾಂಶದ ಉಪಯೋಗ :
- · ಇದು ಶಿಕ್ಷಕರ ತರಬೇತಿ ನಿರ್ವಹಣೆ ಸುಲಭಗೊಳಿಸಲು ಅಭಿವೃದ್ಧಿಪಡಿಸಿರುವ ತಂತ್ರಾಂಶ.
- · ತಂತ್ರಾಂಶದಿಂದ ಶಿಕ್ಷಕರ ಪ್ರೊಫೈಲ್ ಸುಲಭದಲ್ಲಿ ಲಭ್ಯ .
- ಈ ಪ್ರೊಫೈಲ್ ನ್ನು ಆಗ್ಗಿಂದಾಗ್ಗೆ ಪರಿಷ್ಕರಿಸಬಹುದು.
- ಯಾವ ಶಿಕ್ಷಕರಿಗೆ ತರಬೇತಿ ಆಗಿದೆ ? ಯಾವ ಶಿಕ್ಷಕರಿಗೆ ಯಾವ್ಯಾವ ತರಬೇತಿ ? ಎಷ್ಟು ದಿನದ ತರಬೇತಿ ? ಎಲ್ಲಿ ? ಹೇಗೆ? ಇತ್ಯಾದಿ ಮಾಹಿತಿ ಇದರಿಂದ ಲಭ್ಯ.
- ಈ ತಂತ್ರಾಂಶದಲ್ಲಿ ಬ್ಲಾಕ್ ನಿಂದ ವರ್ಗಾವಣೆಗೊಂಡ ಶಿಕ್ಷಕರು ಅಥವಾ ಬ್ಲಾಕ್ ಗೆ ಹೊಸದಾಗಿ ಆಗಮಿಸಿದ ಶಿಕ್ಷಕರ ಮಾಹಿತಿಯನ್ನೂ ಅಳವಡಿಸಬಹುದು
ಹಾಗು ಮಾಹಿತಿಯನ್ನು ಅಪ್ ಡೇಟ್ ಮಾಡಿಕೊಳ್ಳುವ ಅವಕಾಶವಿದೆ.
- ತರಬೇತಿವಾರು ಶಿಕ್ಷಕರ ಕ್ರೋಢೀಕೃತ ಮಾಹಿತಿ ಪಡೆಯಬಹುದು.
- ತರಬೇತಿ
ಪಡೆದ ಶಿಕ್ಷಕರಿಗೆ ಹಾಜರಾತಿಯನ್ನು ಆನ್ ಲೈನ್ ನಲ್ಲಿ ದಾಖಲಿಸಿ, ಹಾಜರಾತಿ ಪತ್ರವನ್ನೂ
ನೀಡಬಹುದು.
- ತಾಲೂಕು
ಹಾಗು ಜಿಲ್ಲಾ ಹಂತದ ತರಬೇತಿ ಕ್ರಿಯಾ ಯೋಜನೆಗೆ ಈ ತಂತ್ರಾಂಶದ ನೆರವು ಪಡೆಯಬಹುದು.
- ತರಬೇತಿಯನ್ನೇ
ಪಡೆಯದ ಶಿಕ್ಷಕರನ್ನು ಗುರುತಿಸಿ, ತರಬೇತಿ ಪಡೆಯದಿರುವುದಕ್ಕೆ ಕಾರಣಗಳನ್ನು ಅರಿಯಬಹುದು.
- ತಾಲೂಕು,
ಜಿಲ್ಲೆ, ರಾಜ್ಯವಾರು ನಡೆದ ತರಬೇತಿಗಳ ಅಂಕಿಅಂಶದ ವಿವರ ಪಡೆಯಬಹುದು.
- ತರಬೇತಿಗಳ ಅಂಕಿಅಂಶಗಳ ಮಾಹಿತಿ ಆಧಾರದ ಮೇಲೆ ತಾಲೂಕುಗಳ ಪ್ರಗತಿ ಪರಿಶೀಲನೆ ಮಾಡಬಹುದು.
- ತರಬೇತಿಯನ್ನು ಬಿ.ಆರ್.ಸಿ, ಓರ್ವ ಬಿ.ಆರ್.ಪಿ, ಮತ್ತೋರ್ವ ಪ್ರೋಗ್ರಾಂ ಆಪರೇಟರ್ ಗಳು ಪಡೆದರು.
ಇದೇ ವೇಳೆ, ಇನ್ಸ್ ಫೈರ್ ಅವಾರ್ಡ್ -2014-15 ರ ಮಕ್ಕಳ ಮಾಹಿತಿಯನ್ನು
ಅಂತರ್ಜಾಲದಲ್ಲಿ ದಾಖಲಿಸುವುದು ಹೇಗೆ ? ಎಂಬ ತರಬೇತಿಯನ್ನು ನೀಡಲಾಯಿತು.
·
ಎಲ್ಲಾ ವಲಯದ ಹೆಚ್.ಪಿ.ಎಸ್
ಮತ್ತು ಪ್ರೌಢಶಾಲೆಗಳು ಪ್ರತ್ಯೇಕವಾಗಿ ತಮ್ಮ ಶಾಲೆಯ ಹೆಸರಿನಲ್ಲಿ ಈ-ಮೇಲ್ ವಿಳಾಸವನ್ನು ತೆರೆಯುವುದು.
·
ಬಳಿಕ www.inspireaward-dst.gov.in
ಈ ವೆಬ್ ವಿಳಾಸದಲ್ಲಿ SCHOOLAUTHORITY ಗೆ ತೆರಳಿ, ವಿವಿಧ ಹಂತಗಳ ಮೂಲಕ ವಿವರವನ್ನು ದಾಖಲಿಸುವುದು.
·
ಇದು ಐದು ವರ್ಷದ ಯೋಜನೆಯಾಗಿದ್ದು,
ನಿಖರವಾದ ಮಾಹಿತಿಗಳನ್ನು ವೆಬ್ ನಲ್ಲಿ ದಾಖಲಿಸುವುದು.
·
ಈ ತಂತ್ರಾಂಶದ ಕುರಿತು ಮುಂದಿನ
ದಿನಗಳಲ್ಲಿ ವೀಡಿಯೋ ಕಾನ್ಫರೆನ್ಸ್ ನಡೆಸಲಾಗುವುದು.
No comments:
Post a Comment