My Blog List

Thursday, 17 July 2014

ಟಿಟಿಎಂಎಸ್ ತರಬೇತಿ

ಟಿಟಿಎಂಎಸ್ ತರಬೇತಿ

17-07-2014 ರಂದು ಜಿಲ್ಲೆಯ ಎಲ್ಲಾ ಶೈಕ್ಷಣಿಕ ವಲಯದ ಬಿ.ಆರ್.ಸಿ ಕಚೇರಿಯ ಆಯ್ದ ಸಿಬ್ಬಂದಿ ವರ್ಗದವರಿಗೆ ಟಿಟಿಎಂಎಸ್ ತರಬೇತಿಯನ್ನು ನಡೆಸಲಾಯಿತು
TTMS ಅಂದರೆ TEACHER’S TRAINING & MANAGEMENT SOFTWAREಅರ್ಥಾತ್ ಶಿಕ್ಷಕರ ತರಬೇತಿ ನಿರ್ವಹಣಾ ತಂತ್ರಾಂಶ




ತಂತ್ರಾಂಶದ ಉಪಯೋಗ :

  • ·         ಇದು ಶಿಕ್ಷಕರ ತರಬೇತಿ ನಿರ್ವಹಣೆ ಸುಲಭಗೊಳಿಸಲು ಅಭಿವೃದ್ಧಿಪಡಿಸಿರುವ ತಂತ್ರಾಂಶ.
  • ·         ತಂತ್ರಾಂಶದಿಂದ ಶಿಕ್ಷಕರ ಪ್ರೊಫೈಲ್ ಸುಲಭದಲ್ಲಿ ಲಭ್ಯ .   
  •    ಈ ಪ್ರೊಫೈಲ್ ನ್ನು ಆಗ್ಗಿಂದಾಗ್ಗೆ ಪರಿಷ್ಕರಿಸಬಹುದು.

  • ಯಾವ ಶಿಕ್ಷಕರಿಗೆ ತರಬೇತಿ ಆಗಿದೆ ? ಯಾವ ಶಿಕ್ಷಕರಿಗೆ ಯಾವ್ಯಾವ ತರಬೇತಿ ? ಎಷ್ಟು ದಿನದ ತರಬೇತಿ ? ಎಲ್ಲಿ ? ಹೇಗೆ? ಇತ್ಯಾದಿ ಮಾಹಿತಿ ಇದರಿಂದ ಲಭ್ಯ.
  • ತಂತ್ರಾಂಶದಲ್ಲಿ ಬ್ಲಾಕ್ ನಿಂದ ವರ್ಗಾವಣೆಗೊಂಡ ಶಿಕ್ಷಕರು ಅಥವಾ ಬ್ಲಾಕ್ ಗೆ ಹೊಸದಾಗಿ ಆಗಮಿಸಿದ ಶಿಕ್ಷಕರ ಮಾಹಿತಿಯನ್ನೂ ಅಳವಡಿಸಬಹುದು ಹಾಗು ಮಾಹಿತಿಯನ್ನು ಅಪ್ ಡೇಟ್ ಮಾಡಿಕೊಳ್ಳುವ ಅವಕಾಶವಿದೆ.
  • ತರಬೇತಿವಾರು ಶಿಕ್ಷಕರ ಕ್ರೋಢೀಕೃತ ಮಾಹಿತಿ ಪಡೆಯಬಹುದು.
  • ತರಬೇತಿ ಪಡೆದ ಶಿಕ್ಷಕರಿಗೆ ಹಾಜರಾತಿಯನ್ನು ಆನ್ ಲೈನ್ ನಲ್ಲಿ ದಾಖಲಿಸಿ, ಹಾಜರಾತಿ ಪತ್ರವನ್ನೂ ನೀಡಬಹುದು.
  • ತಾಲೂಕು ಹಾಗು ಜಿಲ್ಲಾ ಹಂತದ ತರಬೇತಿ ಕ್ರಿಯಾ ಯೋಜನೆಗೆ ಈ ತಂತ್ರಾಂಶದ ನೆರವು ಪಡೆಯಬಹುದು.
  • ತರಬೇತಿಯನ್ನೇ ಪಡೆಯದ ಶಿಕ್ಷಕರನ್ನು ಗುರುತಿಸಿ, ತರಬೇತಿ ಪಡೆಯದಿರುವುದಕ್ಕೆ ಕಾರಣಗಳನ್ನು ಅರಿಯಬಹುದು.
  • ತಾಲೂಕು, ಜಿಲ್ಲೆ, ರಾಜ್ಯವಾರು ನಡೆದ ತರಬೇತಿಗಳ ಅಂಕಿಅಂಶದ ವಿವರ ಪಡೆಯಬಹುದು.
  • ತರಬೇತಿಗಳ ಅಂಕಿಅಂಶಗಳ ಮಾಹಿತಿ ಆಧಾರದ ಮೇಲೆ ತಾಲೂಕುಗಳ ಪ್ರಗತಿ ಪರಿಶೀಲನೆ ಮಾಡಬಹುದು.
  • ತರಬೇತಿಯನ್ನು ಬಿ.ಆರ್.ಸಿ, ಓರ್ವ ಬಿ.ಆರ್.ಪಿ, ಮತ್ತೋರ್ವ ಪ್ರೋಗ್ರಾಂ ಆಪರೇಟರ್ ಗಳು ಪಡೆದರು.
ಇದೇ ವೇಳೆ, ಇನ್ಸ್ ಫೈರ್ ಅವಾರ್ಡ್ -2014-15 ರ ಮಕ್ಕಳ ಮಾಹಿತಿಯನ್ನು ಅಂತರ್ಜಾಲದಲ್ಲಿ ದಾಖಲಿಸುವುದು ಹೇಗೆ ? ಎಂಬ ತರಬೇತಿಯನ್ನು ನೀಡಲಾಯಿತು.

·        ಎಲ್ಲಾ ವಲಯದ ಹೆಚ್.ಪಿ.ಎಸ್ ಮತ್ತು ಪ್ರೌಢಶಾಲೆಗಳು ಪ್ರತ್ಯೇಕವಾಗಿ ತಮ್ಮ ಶಾಲೆಯ ಹೆಸರಿನಲ್ಲಿ ಈ-ಮೇಲ್ ವಿಳಾಸವನ್ನು  ತೆರೆಯುವುದು.
·        ಬಳಿಕ  www.inspireaward-dst.gov.in ಈ ವೆಬ್ ವಿಳಾಸದಲ್ಲಿ SCHOOLAUTHORITY ಗೆ ತೆರಳಿ, ವಿವಿಧ ಹಂತಗಳ ಮೂಲಕ ವಿವರವನ್ನು ದಾಖಲಿಸುವುದು.
·        ಇದು ಐದು ವರ್ಷದ ಯೋಜನೆಯಾಗಿದ್ದು, ನಿಖರವಾದ ಮಾಹಿತಿಗಳನ್ನು ವೆಬ್ ನಲ್ಲಿ ದಾಖಲಿಸುವುದು.
·        ಈ ತಂತ್ರಾಂಶದ ಕುರಿತು ಮುಂದಿನ ದಿನಗಳಲ್ಲಿ ವೀಡಿಯೋ ಕಾನ್ಫರೆನ್ಸ್ ನಡೆಸಲಾಗುವುದು.

KARTET ಪರೀಕ್ಷೆ




ದಿನಾಂಕ:04-06-2014 ರಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗು ಮಹಾರಾಣಿ ಪ್ರಶಿಕ್ಷಣ ಸಂಸ್ಥೆ ಸಹಯೋಗದೊಡನೆ KARTET 2014ರ ಪರೀಕ್ಷೆಯ ರೂಪುರೇಷೆಗಳ ಬಗ್ಗೆ ಅರಿವು ಮೂಡಿಸಲಾಯಿತು. ಕಾರ್ಯಾಗಾರದಲ್ಲಿ ಜಿಲ್ಲೆ ಎಲ್ಲಾ ಡಿಇಡಿ ಸಂಸ್ಥೆಗಳ ದ್ವಿತೀಯ ವರ್ಷದ 240 ವಿದ್ಯಾರ್ಥಿಗಳು ಭಾಗವಹಿಸಿದ್ದರು.


Monday, 14 July 2014

ಶೈಕ್ಷಣಿಕ ವರ್ಷದ ಮೊದಲ ಸಭೆ

ದಿನಾಂಕ :11-07-2014 ರಂದು ಮಾನ್ಯ ಪ್ರಾಂಶುಪಾಲರು & ಉಪನಿರ್ದೇಶಕರು(ಅಭಿವೃದ್ಧಿ) ರವರಾದ ಶ್ರೀ ಬಿ.ಕೆ.ಬಸವರಾಜ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆ ಎಲ್ಲಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿ.ಆರ್.ಸಿಗಳ ಸಭೆಯನ್ನು ನಡೆಸಲಾಯಿತು.
ಸಭೆಯಲ್ಲಿ ಭಾಗವಹಿಸಿರುವ ಕ್ಷೇತ್ರಶಿಕ್ಷಣಾಧಿಕಾರಿಗಳು


ಸಭೆಯಲ್ಲಿ ಚರ್ಚಿಸಿದ ಪ್ರಮುಖಾಂಶಗಳು :
ಎಸ್.ಎಸ್.ಎ ತರಬೇತಿ :-
-      2014-15ನೇ ಸಾಲಿನ ಎಸ್.ಎಸ್.ಎ ತರಬೇತಿಯ ತಾಲೂಕುವಾರು ಭೌತಿಕ ಗುರಿ ನಿಗದಿಗೊಳಿಸುವುದು.
-      ತರಬೇತಿಗೆ ಸಂಪನ್ಮೂಲವ್ಯಕ್ತಿಗಳಾಗಿರುವ ಬಿ.ಆರ್.ಪಿ, ಸಿಆರ್.ಪಿ ತಂಡ ನಿಗದಿ
-      ಪ್ಯಾಕೇಜ್ ವಾರು ಶಿಕ್ಷಕರ ಪ್ರೊಫೈಲ್ ನ್ನು ದಿ:17/7/2014 ರೊಳಗೆ ಸಲ್ಲಿಸುವುದು.
-      ರಾಜ್ಯ, ಜಿಲ್ಲೆ, ತಾಲೂಕು ಮತ್ತು ಕ್ಲಸ್ಟರ್ ಹಂತಗಳಲ್ಲಿ ನಡೆಸಬೇಕಾದ ತರಬೇತಿ ವೇಳಾಪಟ್ಟಿ ಸ್ಪಷ್ಟೀಕರಣ.
-      ಬ್ಯಾಚ್ ವಾರು ತರಬೇತಿ ಪಡೆಯಲಿರುವ ಶಿಕ್ಷಕರ ಪಟ್ಟಿಯನ್ನು ಪ್ರಕಟಿಸುವುದು.
-      ಪ್ರೊಫೈಲ್ ನಲ್ಲಿ ತರಬೇತಿ ಪಡೆದಿರುವ ಬಗ್ಗೆ ಶಿಕ್ಷಕರ ಮಾಹಿತಿ ದಾಖಲಿಸುವುದು.
-      ಬ್ಲಾಕ್ ಹಂತದಲ್ಲಿ 6-8ರ ವಿಜ್ಞಾನ ಮತ್ತು ಗಣಿತ ಶಿಕ್ಷಕರ ಸಮಾಲೋಚನಾ ತರಬೇತಿ ನಿರ್ವಹಣೆ
-      ತರಬೇತಿ ಮಾರ್ಗದರ್ಶನಕ್ಕಾಗಿ ಎಲ್ಲಾ ಅನುಪಾಲನಾಧಿಕಾರಿಗಳನ್ನು ನಿಯೋಜಿಸುವುದು.
-      ಬ್ಲಾಕ್ ಹಂತದಿಂದ ಜಿಲ್ಲಾ ಮಟ್ಟದಲ್ಲಿ ತರಬೇತಿ ಪಡೆಯಲಿರುವ ಎಂ.ಆರ್.ಪಿಗಳ ಪಟ್ಟಿ ಸಲ್ಲಿಕೆ.

ಡಯಟ್ ನಲ್ಲಿ ಇಂಗ್ಲೀಷ್ ಫೋರಂ ಆರಂಭ
-    ನಿಮ್ಮ ಡಯಟ್ ನಲ್ಲಿ ಇಂಗ್ಲಿಷ್ ಫೋರಂ ಆರಂಭಗೊಂಡಿದೆ. ಇದು ನಿಮಗಾಗಿ ಕ್ರಿಯಾಶೀಲವಾಗಿರುವುದು ಪ್ರತಿ ಶನಿವಾರ ಮಧ್ಯಾಹ್ನ 2 ಗಂಟೆ ಬಳಿಕ. ಬನ್ನಿ, ನಿಮ್ಮ ವೃತ್ತಿಪರತೆಗಾಗಿ ಈ ವೇದಿಕೆಯನ್ನು ಬಳಸಿಕೊಳ್ಳಿ.
ಕ್ಯುಎಂಟಿ : ಕಲಿಕೆಯನ್ನು ಅರ್ಥೈಸುವ ಸಾಧನವಾಗಿ...
-     ಸಿ.ಆರ್.ಜಿ ರಚನೆ, ವಿಷಯವಾರು ಪ್ರಶ್ನೆಕೋಠಿ ಸಿದ್ಧತೆ, ಸಿಆರ್.ಜಿಯಿಂದ ಮಕ್ಕಳ ಕಲಿಕೆಯ ವಸ್ತುನಿಷ್ಠ ಮೌಲ್ಯಮಾಪನ, ಸಕಾಲದಲ್ಲಿ ಕ್ಯುಎಂಟಿ ನಮೂನೆ ಭರ್ತಿಗೊಳಿಸಿ ಸಲ್ಲಿಸುವಿಕೆ.

ಶಿಕ್ಷಣ ಗುಣವರ್ಧನಾ ವರ್ಷ-2014-15
-      ಪರಿಣಾಮಕಾರಿ ಬೆಳವಣಿಗೆಗಾಗಿ 10 ಅಂಶಗಳ ಕಾರ್ಯಕ್ರಮದ ಅನುಷ್ಠಾನ.
     ಜಂಟಿ ಪ್ರಗತಿ ಪರಿಶೀಲನಾ ಸಭೆ :
-      ಪ್ರತಿ ತಿಂಗಳ ಕೊನೆಯ ದಿನ ಬ್ಲಾಕ್ ಹಂತದಲ್ಲಿ ಸಭೆ ಆಯೋಜನೆ. ಮುಕ್ತ ಸಮಾಲೋಚನೆ.
ಎಸ್.ಡಿ.ಎಂ.ಸಿ ತರಬೇತಿ  - ಪೂರ್ವಸಿದ್ಧತೆ :
-      ಅಗತ್ಯವಿರುವ ಶಾಲೆಗಳಲ್ಲಿ ಎಸ್.ಡಿ.ಎಂ.ಸಿ ಪುನರ್ ರಚನೆ.
-      ಮಹಿಳೆ, ಪುರುಷ, ಎಸ್.ಸಿ, ಎಸ್.ಟಿ, ಅಲ್ಪಸಂಖ್ಯಾತ ಸದಸ್ಯರ ಪ್ರತ್ಯೇಕ ಪಟ್ಟಿ ಸಿದ್ಧತೆ.
-      ಪ್ರತಿ ಶಾಲೆಯಿಂದ 6 ಮಂದಿ ಸದಸ್ಯರಿಗೆ ಅಕ್ಟೋಬರ್ ತಿಂಗಳಲ್ಲಿ 3 ದಿನದ ತರಬೇತಿ ಆಯೋಜನೆ.
-      ಸಿ.ಆರ್.ಪಿಗಳೇ ಸಂಪನ್ಮೂಲ ವ್ಯಕ್ತಿಗಳು.
-      ಮುಖ್ಯಶಿಕ್ಷಕರಿಗೆ ಈ ತರಬೇತಿ ಇಲ್ಲ. ಭಾಗವಹಿಸಬಹುದು. ಆದರೆ, ಯಾವುದೇ ಅನುದಾನ ಬಳಕೆ ಇಲ್ಲ.
ತಂಡದಲ್ಲಿ ಶಾಲಾ ಭೇಟಿ :
-      ಡಯಟ್ ನೋಡಲ್ ಅಧಿಕಾರಿಗಳು, ಬಿಇಓ, ಬಿ.ಆರ್.ಸಿ, ಬಿ.ಆರ್.ಪಿ, ಸಿ.ಆರ್.ಪಿ, ಇಸಿಓ, ಇವರ ತಂಡದೊಂದಿಗೆ ಶಾಲಾ ಭೇಟಿ.

-      ಪ್ರಯಾಣಕ್ಕಾಗಿ ಭೇಟಿ ನೀಡುವ ಬ್ಲಾಕ್ ಮತ್ತು ಅಕ್ಕಪಕ್ಕದ ಬ್ಲಾಕ್ ಗಳಿಂದ ವಾಹನ ವ್ಯವಸ್ಥೆ.
-      ಅಪರಾಹ್ನ ತಾಲೂಕು ಹಂತದಲ್ಲಿ ಪ್ರಗತಿಗಾಗಿ ಎಲ್ಲರೊಂದಿಗೆ ಮುಕ್ತ ಸಮಾಲೋಚನೆ.


NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...