My Blog List

Thursday, 5 June 2014

ಪ್ರಕೃತಿ ದೇವೋ ಭವಃ


ಸಂಯುಕ್ತ ರಾಷ್ಟ್ರಗಳ ಸಾರ್ವತ್ರಿಕ ಸಭೆಯಿಂದ (United Nations General Assembly)೧೯೭೨ರ ಇಸವಿಯಿಂದ ಪ್ರಾರಂಭವಾಗಿ ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ ಜೂನ್ ದಿನಾಂಕದಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ . ಪರಿಸರ ಉಳಿಸಿ ಬೆಳೆಸುವುದು ಇದರ ಉದ್ದೇಶ. ಹಿನ್ನೆಲೆಯಲ್ಲೇ ನಮ್ಮ ಸಂಸ್ಥೆಯಲ್ಲೂ ಪರಿಸರ ದಿನ ಕಳೆ ಕಟ್ಟಿತ್ತು. ಇಂದು ನಮ್ಮ ಡಿ.ಎಸ್..ಆರ್.ಟಿ ನಿರ್ದೇಶಕರಾದ ಮಾನ್ಯ ಶ್ರೀ ಮನಹಳ್ಳಿ ರವರು ಡಯಟ್ ಗೆ ಆಗಮಿಸಿದ್ದರು.







ಡಯಟ್ ಅಂಗಳದಲ್ಲಿ ಮಾನ್ಯ ನಿರ್ದೇಶಕರು, ಡಿಎಸ್‌ಇಆರ್.ಟಿ ಇವರಿಂದ ಸಸಿ ನೆಟ್ಟ ಕ್ಷಣ
ಡಯಟ್ ನಲ್ಲಿ ಪರಿಸರ ದಿನಾಚರಣೆ
ಪರಿಸರ ದಿನ ಬರೀಯ ಅರ್ಥಪೂರ್ಣವಲ್ಲ, ಭಾವಪೂರ್ಣವೂ ಆಗಿತ್ತು. ನಮ್ಮ ಸಂಸ್ಥೆಯಲ್ಲಿ ಹಲವು ವರ್ಷಗಳಿಂದ ದಣಿವರಿಯದೇ ದುಡಿಯುತ್ತಿರುವ ಶ್ರೀ ಈಶ್ವರ್ ರವರನ್ನು ಈ ದಿನ ಗೌರವಿಸಲಾಯಿತು. ಮಾನ್ಯ ನಿರ್ದೇಶಕರು, ಪ್ರಾಂಶುಪಾಲರು ಮತ್ತು ಬಳಗ ಆತ್ಮೀಯವಾಗಿ ಸತ್ಕರಿಸಿದರು.
ದಣಿವರಿಯದೇ ದುಡಿದ ಜೀವಕ್ಕೆ ಸಂಸ್ಥೆಯಿಂದ ಗೌರವ ಸಮರ್ಪಣೆ

ಪರಿಸರ ಉಳಿವು ಶಾಲೆಗಳಲ್ಲಿ ಹೇಗೆ ? ಎಂಬ ಬಗ್ಗೆ ಮಾನ್ಯರ ಮಾತು
ಈ ವೇಳೆ ಡಯಟ್ ನ ಬ್ಲಾಗ್ www.dietmysore.blogspot.com ನ್ನೂ ಕೂಡ ಮಾನ್ಯ ನಿರ್ದೇಶಕರು ಉದ್ಘಾಟಿಸಿದರು.
ಬ್ಲಾಗ್ ಉದ್ಘಾಟನೆ

ಮಾನ್ಯರ ಸಭೆಯಲ್ಲಿ  ಗಹನ ಚರ್ಚೆ

ಪರಿಸರ ದಿನಾಚರಣೆಯಲ್ಲಿ ಭಾಗವಹಿಸಿದ್ದ, ಉಪನ್ಯಾಸಕರು, ವಿದ್ಯಾರ್ಥಿಗಳು


No comments:

Post a Comment

NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...