ಕ್ಲಾರಾ ಜೆಟ್'ಕಿನ್ ಮಹಿಳೆಯರ ಹಕ್ಕಿನ ಹೋರಾಟಗಾರಳು ಮತ್ತು ರೋಸಾ ಲಕ್ಸಂಬರ್ಗ್ ಸಮಾಜವಾದಿ ನಾಯಕಿ 1910ರಲ್ಲಿ |
ಮಹಿಳೆ
ಮಹಾ..ಳೆ
ಅವಳಿಗೆ ಸಮರಾರು ಇಲ್ಲ.
ಪ್ರತಿ ದಿನವೂ
ಅವಳ ದಿನವೇ.
ಅವಳಿಲ್ಲದ ದಿನಗಳಿಲ್ಲ.
ಅವಳಿಂದಲೇ ಕ್ಷಣಗಳೆಲ್ಲಾ.
ಹಾಗಾಗಿ ಮಾರ್ಚ್ ಹಲವು ದಿನಾಚರಣೆಗಳಿಗೆ ನಾಂದಿ ಹಾಡುವುದೇ ಈ ಮಹಿಳಾ ದಿನಾಚರಣೆ ಮೂಲಕ ಎನಿಸುತ್ತದೆ.
ವಿಶ್ವದೆಲ್ಲೆಡೆ ಈ ದಿನ ಆಚರಿಸಲಾಗುತ್ತದೆ. ಈ ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯಲಾಗುತ್ತದೆ. ಅಂತೆಯೇ ಮೈಸೂರಿನ ಜಿಲ್ಲಾ ಶಿಕ್ಷಣ ಮತ್ತು
ತರಬೇತಿ ಸಂಸ್ಥೆಯಲ್ಲೂ ಸಹ ದಿನಾಚರಣೆ ನಡೆಯಿತು.
ಮೈಸೂರು ಮಹಾನಗರ ಪಾಲಿಕೆಯ
ಸದಸ್ಯೆಯವರಾದ ಶ್ರೀಮತಿ ಛಾಯಾ ನವೀನ್ ರವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಭಾಷಣಕಾರರಾಗಿ ಕನ್ನಡ ಪ್ರಭ ಪತ್ರಿಕೆಯ ಮೈಸೂರು
ವಿಭಾಗದ ಸಹ ಸಂಪಾದಕರು ಹಾಗು ಕವಿಗಳಾದ ಶ್ರೀ ಅಂಶಿ ಪ್ರಸನ್ನ ಕುಮಾರ್ ಆಗಮಿಸಿದ್ದರು.
ಡಯಟ್ ನ ುಪನ್ಯಾಸಕರಾದ ಶ್ರೀಮತಿ
ಭಾಗ್ಯಲಕ್ಷ್ಮೀ, ಶ್ರೀಮತಿ ಭಾಗ್ಯ, ಸೂಪರಿಂಟೆಂಡೆಂಟ್
ರವರಾದ ಶ್ರೀಮತಿ ಜಯಲಕ್ಷ್ಮೀಭಾಯಿರವರು ಮಹಿಳಾ ದಿನಚ ವಿಶೇಷತೆಗಳ ವಿಷಯ ಮಂಡನೆ ಮಾಡಿದರು.
No comments:
Post a Comment