ನವನವೋನ್ಮೇಷಶಾಲಿನಿಯಾದದ್ದು ಪ್ರತಿಭೆ ಮಾತ್ರವಲ್ಲ, ಪ್ರತಿಭಾ ನಿಷ್ಪತ್ತಿಯಾದ ಸಂಶೋಧನೆ ಸಹ. ಸಂಶೋಧನೆ ಎಂಬುದೇ ಪ್ರತಿಭಾ ವಿಶೇಷ. ಹೊಸ ಹೆಜ್ಜೆಗಳಿಗೆ, ಹೊಸ ದಾರಿಗಳಿಗೆ, ಹೊಸ ಸಹವರ್ತಿಗಳಿಗೆ, ಹೊಸ ಹೊಸತು ಅನ್ವೇಷನೆಗಳಿಗೆ ಇದರಿಂದ ನಾಂದಿ ಎಂಬುದರಲ್ಲಿ ಎರಡು ಮಾತಿಲ್ಲ.
ಇಂತಹ ಸಂಶೋಧನೆಗೆ ಪ್ರಸ್ತುತ ಭಾರತೀಯ ಶಿಕ್ಷಣ ರಂಗ ಮುಂದಾಗಿದೆ. ದೇಶದ ಐದು ಪ್ರಾದೇಶಿಕ ಶಿಕ್ಷಣ ಸಂಸ್ಥೆಗಳು ಸಹ ರಾಷ್ಟ್ರದ ಶೈಕ್ಷಣಿಕ ಅವಸ್ಥಾಂತರಗಳ ಅಧ್ಯಯನಕ್ಕೆ ಮುಂದಾಗಿವೆ. ಭುವನೇಶ್ವರ , ಭೂಪಾಲ್, ಶಿಲ್ಲಾಂಗ್, ಅಜ್ಮೀರ್, ಮೈಸೂರು ಗಳಲ್ಲಿ ಈಗಾಗಲೇ ಅಧ್ಯಯನಕ್ಕೆ ಹೆಜ್ಜೆ ಇಡಲಾಗಿದೆ.
ಒಂದು ವಲಯದ/ಬ್ಲಾಕ್ ನ ಎಲ್ಲಾ ಒಂದನೇ ತರಗತಿಯಿಂದ 8ನೇ ತರಗತಿ ವರೆಗಿನ ವಿದ್ಯಾರ್ಥಿಗಳು, ಶಿಕ್ಷಕರು, ಸಮುದಾಯದ ಸಹಭಾಗಿತ್ವ, ಎಸ್.ಡಿ.ಎಂ.ಸಿ ಇತ್ಯಾದಿ ಎಲ್ಲಾ ವಿಷಯಗಳನ್ನೂ ಒಳಗೊಂಡಂತೆ ಮಹಾಸಂಶೋಧನೆಯ ಮೂಲಕ ಮಧ್ಯವರ್ತನಗಳನ್ನು ಅಳವಡಿಸಿಕೊಂಡು, ಹೇಗೆ ಗುಣಾತ್ಮಕ ಶಿಕ್ಷಣವನ್ನು ಮುಂದುವರಿಸಬೇಕು ಎಂಬ ನಿಟ್ಟಿನಲ್ಲಿ ಪ್ರಸ್ತುತ ಅಧ್ಯಯನಕ್ಕೆ ಮುಂದಡಿಯಿಡಲಾಗಿದೆ.
ಮೈಸೂರಿನ ಆರ್.ಐ.ಇ ಈ ಸಂಶೋಧನೆಗಾಗಿ ಹುಣಸೂರು ವಲಯವನ್ನು ಆಯ್ಗುಕೊಂಡಿದೆ. ಡಿ.ಎಸ್.ಇ.ಆರ್.ಟಿ ಸಹಯೋಗ, ಡಯಟ್ ಜೊತೆಗೂಡಿ ಸಂಶೋಧನೆ ನಡೆಯಲಿದೆ. ದಿನಾಂಕ;28-8-2018ರಂದು ಹುಣಸೂರು ಬಿ.ಆರ್.ಸಿಕೇಂದ್ರದಲ್ಲಿ ಇದರ ಕುರಿತು ಮಹತ್ವದ ಸಭೆ ನಡೆಯಿತು.
ಶೈಕ್ಷಣಿಕ ಸಾರಥಿಗಳಾದ ಮೈಸೂರು ಆರ್.ಐ.ಇ ಪ್ರಾಂಶುಪಾಲರಾದ ಪ್ರೋ.ಶ್ರೀಕಾಂತ್ ರವರು, ಸಂಶೋಧನಾ ವಿಭಾಗದ ಡೀನ್ ರಾದ ಪ್ರೋ.ವೆಂಕಟೇಶಮೂರ್ತಿರವರು, ಫ್ರೋ ಗೋಪಾಲ್, ಪ್ರೋ.ಮಂಜುಳಾರಾವ್ ರವರು ಭಾಗವಹಿಸಿದ್ದರು.
ಡಿ.ಎಸ್.ಇ.ಆರ್.ಟಿ ಸಹಾಯಕ ನಿರ್ದೇಶಕರಾದ ಮಂಜುನಾಥ್ ರವರು, ಮೈಸೂರು ಜಿಲ್ಲೆಯ ಡಿಡಿಪಿಐ(ಆಡಳಿತ) ಮತ್ತು ಡಿಡಿಪಿಐ(ಅಭಿವೃದ್ಧಿ) ಇಬ್ಬರೂ ಸಹ ಉಪಸ್ಥಿತರಿದ್ದರು. ಎನ್.ಸಿ.ಎಫ್ ನ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಂಶೋಧನೆ ಹಲವ ಒಳಹುಗಳನ್ನು ನೀಡಲಿದೆ.
ಈ ಕುರಿತು ಪತ್ರಿಕೆಗಳಲ್ಲೂ ಸಹ ಸುದ್ದಿ ಆಯಿತು.

-prASHAnth.M.C
Lecturer
Diet,Mysuru