ದಿನಾಂಕ:14-04-2018.
ಪೂರ್ವಾಹ್ನದ ಸಮಯ. ಅಂಬೇಡ್ಕರ್ ದಿನಾಚರಣೆ ಸಂಸ್ಥೆಯಲ್ಲಿ ನಡೆದಿತ್ತು. ಕಾರ್ಯಕ್ರಮ ಮುಗಿದ ನಂತರ ಶಿಕ್ಷಣ
ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಬರುವುದಾಗಿ ವಿಷಯ ತಿಳಿಯಿತು. ಎಲ್ಲರೂ ಕುತೂಹಲಿಗಳಾಗಿದ್ದೆವು. ನಿರೀಕ್ಷೆಯಂತೆ ಡಾ.ಶಾಲಿನಿ ರಜನೀಶ್, ಪ್ರಧಾನ ಕಾರ್ಯದರ್ಶಿಗಳು, ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ..ರವರು ಡಯಟ್,ಮೈಸೂರಿಗೆ ಆಗಮಿಸಿದರು.
ಶ್ರೀ ಪ್ರಭುಸ್ವಾಮಿ, ಪ್ರಾಚಾರ್ಯರು, ಸಿಟಿಇ, ಮೈಸೂರು
ಶ್ರೀಮತಿ ಮಮತಾ, ಉಪನಿರ್ದೇಶಕರು(ಆಡಳಿತ), ಮೈಸೂರು
ಶ್ರೀ ರಘುನಂದನ್.ಆರ್.,ನ ಉಪನಿರ್ದೇಶಕರು(ಅಭಿವೃದ್ಧಿ), ಡಯಟ್,ಮೈಸೂರು
ಸಂಸ್ಥೆಯ ಎಲ್ಲಾ ಹಿರಿಯ ಉಪನ್ಯಾಸಕರು, ಉಪನ್ಯಾಸಕರು, ಡಯಟ್, ಮೈಸೂರು
- ಎನ್.ಎ.ಎಸ್ ಫಲಿತಾಂಶದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಅದಕ್ಕೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
- ತಂಡದಲ್ಲಿ ಕಾರ್ಯನಿರ್ವಹಿಸುವ ಮೂಲಕ ಸಂಸ್ಥೆಯ ಯಶಸ್ಸಿನ ಪಾಲುದಾರರಾಗಲು ಪ್ರೇರೇಪಿಸಿದರು.
- ಆರ್.ಐ.ಇ ವಿದ್ಯಾರ್ಥಿ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಪ್ರದರ್ಶನಕ್ಕಿಟ್ಟ ಕಡಿಮೆ ವೆಚ್ಚದ ಕಲಿಕೋಪಕರಣದ ಬಗ್ಗೆ ವಿವರಿಸುತ್ತಾ ನಿಮ್ಮ ಜಿಲ್ಲೆಯ ಶಾಲೆಗಳಲ್ಲೂ ಈ ರೀತಿಯಾಗಿ ಮಕ್ಕಳ ಕ್ಷಮತೆ ಗುರುತಿಸಲು ಸಲಹೆ ನೀಡಿದರು.
- ಜಿಲ್ಲೆಯ ಶೈಕ್ಷಣಿಕ ಉಸ್ತುವಾರಿದಾರರಾದ ನಮಗೆ ಏಕಾಗ್ರತೆ ಅವಶ್ಯಕ ಎನ್ನುವುದನ್ನು ಮಾದರಿ ಶಿಕ್ಷಕಿ ಶಾಂತಿದೇಸಾಯಿ ಉದಾಹರಣೆಯೊಂದಿಗೆ ವಿವರಿಸಿದರು.
- ಫಿನ್ ಲ್ಯಾಂಡ್ ಮತ್ತು ನ್ಯೂಜಿಲ್ಯಾಂಡ್ ಗಳಲ್ಲಿರುವ ಶೈಕ್ಷಣಿಕ ವ್ಯವಸ್ಥೆಗಳನ್ನು ನಮ್ಮ ಕಣ್ಣಮುಂದಿಟ್ಟು ಮೌಲ್ಯಗಳುಳ್ಳ ಪಠ್ಯವಸ್ತುವಿನ ಸ್ವರೂಪವನ್ನು ತೆರೆದಿಟ್ಟರು.
- ನಾವಿನ್ಯಯುತ ಆಚರಣೆಗಳು ನಮ್ಮೆಲ್ಲರಲ್ಲೂ ಹಾಸುಹೊಕ್ಕಾಬೇಕೆಂದು ಬಯಸಿದರು.
- ಶೈಕ್ಷಣಿಕ ಗುಣಮಟ್ಟದ ಬಲವರ್ಧನೆ/ಸುಧಾರಣೆಗೆ ಸಂಬಂಧಿಸಿದ ನಿಮ್ಮ ಯಾವುದೇ ಸಲಹೆಗಳು, ಆಲೋಚನೆಗಳನ್ನು ಎದುರು ನೋಡುವ ನಿರೀಕ್ಷೆಯನ್ನು ಮುಂದಿಟ್ಟರು.