My Blog List

Tuesday 19 January 2016

ಈ ಐದು ದಿನ - EYEದು ದಿನ

ಅರಸಿ ಬಂದವರು ವಿರಳ
ಕರೆಸಿ-ಕೊಂಡವರು ಬಹಳ
ಅರಸಿಬಂದವರಿಗೆ EYEದು ದಿನ
ಕರೆಸಿಕೊಂಡವಗೆ ಐದು ದಿನ
ಇವರ ನಡು-ವೇ
ಕನ್ನಡ ನುಡಿ-WAY.
ಅದು STF ಹೈ-WAY.

ಮೂರು ತಂಡಗಳ ಎಸ್.ಟಿ.ಎಫ್ ತರಬೇತಿ ಮುಗಿದಿದೆ. ಇದು ನಾಲ್ಕನೇ ತಂಡದ ತರಬೇತಿ. 34 ಶಿಬಿರಾರ್ಥಿಗಳು. ಅವರವರ ಭಾವಕ್ಕೆ ಅವರವರ ಭಕುತಿಗೆ ಈ ಐದು ದಿನ, ಅವರವರ EYE-ದು ದಿನವಾಗಲಿದೆ. ಈ ಅವಧಿಯಲ್ಲಿ ಕಂಪ್ಯೂಟರ್ ಗಳ ಜೊತೆಗೆ ಮತ್ತು ಕನ್ನಡದ ಕಂಪು-TUTOR ಜೊತೆಗೆ ಒಡನಾಟ ಬೆಳೆಸುವುದು ನಮ್ಮ ತುಡಿತ. ಹಿಂದಿನ EYE-ದು ದಿನಗಳ ಮೂರು ತರಬೇತಿಯಲ್ಲೂ ಈ ತುಡಿತ ಮಿಡಿದಿದೆ. ಬಂದವರ ಮನಕೆ ಹಿಡಿಸಿದೆ. ಬರದವರ ಕಡೆಗೆ ಒಲಿದಿದೆ. ಈ ಒಲುಮೆಯೇ ನಾಲ್ಕನೇ ತಂಡದ ತರಬೇತಿ.

ನಮ್ಮ ಡಯಟ್ ನ ಉಪಪ್ರಾಂಶುಪಾಲರಾದ ಶ್ರೀ ನಾರಾಯಣಗೌಡರು ತರಬೇತಿ ಮೊದಲ ದಿನ ಉದ್ಘಾಟಿಸಿದರು. ಕನ್ನಡದ ಸಿರಿತನಕೆ, ಸಂಭ್ರಮಕ್ಕೆ ಸುವರ್ಣದ ಚೌಕಟ್ಟು ಈ ಎಸ್.ಟಿ.ಎಫ್ ತರಬೇತಿಯ ಫಲಶೃತಿ ಎಂದರು. "ವಂದೇಮಾತರಂ" ಗೀತೆಯ ವೀಡಿಯೋ ತುಣುಕನ್ನು ಪ್ಲೇ ಮಾಡುವ ಮೂಲಕ ತರಬೇತಿಗೆ ಚಾಲನೆ ನೀಡಿದರು.
ಡಿಎಂಪಿಬಿಎಸ್ ವಿಭಾಗದ ಮುಖ್ಯಸ್ಥರಾದ ಶ್ರೀ ಸ್ವಾಮಿ.ಎಸ್ ರವರು, ತರಬೇತಿ ಸಂಯೋಜಕರಾದ ಪ್ರಶಾಂತ್.ಎಂ.ಸಿರವರು, ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ನಾಗರಾಜ್, ಶ್ರೀ ಆನಂದ್ , ಶ್ರೀ ಸಂಜಯ್ ಕುಮಾರ್ ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
 
 

No comments:

Post a Comment

NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...