“Everyone’s effort is needed to implement educational technology in classroom. Let us all attempt to achieve this”
ಕಲಿಕೋತ್ಸಾಹದಲ್ಲಿ ವಿದ್ಯಾರ್ಥಿಗಳು |
ವಿದ್ಯಾರ್ಥಿ 1 : “ ಲೋ ಇವತ್ತು ಪಿ.ಸಿಯಲ್ಲಿ
ವಿಜ್ಞಾನದ ಹೊಸ ಪಾಠ ಓದೋಣ”
ವಿದ್ಯಾರ್ಥಿ 2: ಹ್ಞಾಂ ಕಣೋ….
ವಿದ್ಯಾರ್ಥಿ 2 :”ನಿನ್ನೆ ಮೇಡಂ ಪಾಠಕ್ಕೆ
ಸಂಬಂಧಿಸಿದಂತೆ ಮಾಡಿರುವ ಪೇಯಿಂಟಿಂಗ್ ತೋರಿಸ್ತಿನಿ”…
ವಿದ್ಯಾರ್ಥಿ 1:’ಹ್ಞಾಂ ಆಯ್ತು’. ಆದ್ರೆ
ನಂಗೂ ಹೇಳ್ಕೊಡಬೇಕಪ್ಪ ಪೇಯಿಂಟಿಂಗ್ ಮಿಕ್ಸ್ ಮಾಡೋದು….ಆಯ್ತಾ “
ಡಿ.ವಿ.ಡಿ ನೋಡುತ್ತಿರುವ ವಿದ್ಯಾರ್ಥಿಗಳು |
ಹೀಗೆ ಪರಸ್ಪರ ಕಲಿಕೆ. ಒಬ್ಬರಿಗೊಬ್ಬರು
ಗುರುವಾಗಿ, ಉತ್ಸಾಹದಿಂದ ಕಲಿಕೆಗೆ ತೊಡಗಿರುವ ಕ್ಷಣ ನೋಡೋದೆ ಕಣ್ಣಿಗೆ ಹಬ್ಬ. “ಶಾಲೆಯೊಂದು ದೇವಾಲಯ
ಕೈಮುಗಿದು ಒಳಗೆ ಬನ್ನಿ “ ಎಂಬ ಫಲಕ, ಇಂತಹ ಸನ್ನಿವೇಶಗಳಿಂದಲೇ ಪುಳಕಗೊಳಿಸೋದು. ಅಂದಹಾಗೆ, ಈ ಸಂದರ್ಭ
ನಮ್ಮ ಕಣ್ಣಿಗೆ ಸಿಗೋದು ಮೈಸೂರು ದಕ್ಷಿಣ ವಲಯದಲ್ಲಿರುವ ಟಿ.ಕೆ. ಲೇ ಔಟ್ ನ ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆಯಲ್ಲಿ.
ವಿದ್ಯಾರ್ಥಿಗಳೇ ಸ್ವಯಂ ಕಂಪ್ಯೂಟರ್ ನಿರ್ವಹಿಸುತ್ತಿರುವುದು |
ಇಲ್ಲಿರುವ ಶಿಕ್ಷಕರ ಆಸ್ಥೆ, ಎಸ್.ಡಿ.ಎಂ.ಸಿಯವರ
ಸಹಕಾರ, ಪರಸ್ಪರ ನಂಬಿಕೆಗಳೇ ಈ ಶಾಲೆಯ ಸಿ.ಎ.ಎಲ್.ಸಿ ಕಲಿಕಾಕೇಂದ್ರ ನಿರಂತರವಾಗಿ ಮುಂದುವರಿಯಲು ಸಾಧ್ಯವಾಗಿದೆ.
ಪ್ರಸ್ತುತ ಶಾಲೆಯ ಮುಖ್ಯಶಿಕ್ಷಕಿಯಾಗಿ ಕರ್ತವ್ಯನಿರ್ವಹಿಸುತ್ತಿರುವ
ಚಂದ್ರಮ್ಮ, ಕಂಪ್ಯೂಟರ್ ಕಲಿಕಾಕೇಂದ್ರದ ಉಸ್ತುವಾರಿ
ಶಿಕ್ಷಕಿ ಸುಬ್ಬುಲಕ್ಷ್ಮಿ ಅವರ ಅವಿರತ ಪರಿಶ್ರಮದ ಫಲವೇ ಸಿ.ಎ.ಎಲ್.ಸಿ ಕೇಂದ್ರ ಜೀವಂತವಾಗಿರುವುದಕ್ಕೆ
ಮುಖ್ಯ ಕಾರಣ.
ವಿದ್ಯಾರ್ಥಿಗೆ ಅನುಕೂಲಿಸುತ್ತಿರುವ ಶಿಕ್ಷಕರು |
ಅಂದಹಾಗೆ ಈ ಶಾಲೆ ಆರಂಭಗೊಂಡಿದ್ದು
2010-11 ರಲ್ಲಿ. ಪ್ರತಿ ಸಿ.ಎ.ಎಲ್.ಸಿ ಶಾಲೆಗೆ ನೀಡುವಂತೆ 3ಕೆ.ವಿ.ಎ ಯುಪಿಎಸ್ , 5 ಕಂಪ್ಯೂಟರ್
ಗಳನ್ನು ಇಲ್ಲಿಗೂ ನೀಡಲಾಗಿದೆ. ಇದರ ಜೊತೆಗೆ 10 ಸ್ಪೀಕರ್ ಗಳನ್ನು ಇವರ ದಾನಿಗಳ ನೆರವಿನಿಂದ ಪಡೆದಿದ್ದಾರೆ.
ಡಿ.ಎಸ್.ಇ.ಆರ್.ಟಿಯಿಂದ ನೀಡಿರುವ ಡಿವಿಡಿಗಳನ್ನು ಮಕ್ಕಳ ಕಲಿಕೆಗೆ ಅನುಕೂಲಿಸುತ್ತಾ ಪರಿಣಾಮಕಾರಿ
ಕಲಿಕೆ ಉಂಟುಮಾಡುವಲ್ಲಿ ಶ್ರಮಿಸುತ್ತಿದ್ದಾರೆ.
ವಿದ್ಯಾರ್ಥಿಗೆ ಅನುಕೂಲಿಸುತ್ತಿರುವ ಶಿಕ್ಷಕರು |
ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ಶಿಕ್ಷಣಕ್ಕೆ ತಾಂತ್ರಿಕತೆಯ ಒತ್ತು ಕೊಟ್ಟು ರೇಡಿಯೊ, ಶಿಕ್ಷಣ ಸಂವಾದ, ಶ್ರವಣ ಮತ್ತು ದೃಶ್ಯ ಮಾಧ್ಯಮ - ಟಿ.ವಿ., ಗಣಕ ಯಂತ್ರ, ಉಪಗ್ರಹ ಆಧಾರಿತ ದೂರ ಸಂಪರ್ಕ ತರಬೇತಿ ಕಾರ್ಯಕ್ರಮ ಇತ್ಯಾದಿಗಳ ಮುಖಾಂತರ ಶಿಕ್ಷಣ ನೀಡಿದಲ್ಲಿ ಶಿಕ್ಷಣ ಇನ್ನೂ ಪರಿಣಾಮಕಾರಿಯಾಗಬಲ್ಲದು ಎಂಬ ಆಲೋಚನೆಯೇ ಸಿ.ಎ.ಎಲ್.ಸಿ
ಹುಟ್ಟಿಗೆ ಮೂಲ. ಹೀಗೆ ರಾಜ್ಯದಲ್ಲಿ 2001-02 ರಲ್ಲಿ ಸಿ.ಎ.ಎಲ್.ಸಿ ಆರಂಭಗೊಂಡಿತು. ಅಂದು ಇದ್ದ
22567 ಶಾಲೆಗಳ ಪೈಕಿ 4301 ಹೆಚ್.ಪಿ.ಎಸ್ ಗಳಲ್ಲಿ ಸಿ.ಎ.ಎಲ್.ಸಿ ಕೇಂದ್ರ ಸ್ಥಾಪಿಸಲಾಯಿತು. ಇದುವರೆವಿಗೂ
ನಮ್ಮ ಜಿಲ್ಲೆಯಲ್ಲಿ 169 ಸಿ.ಎ.ಎಲ್.ಸಿ ಕೇಂದ್ರಗಳು ಸ್ಥಾಪನೆಗೊಂಡಿವೆ. ಇವುಗಳಲ್ಲಿ ಹಲವು ಕೇಂದ್ರಗಳು
ಸ್ಥಾವರವಾಗಿ ಮತ್ತೆ ಹಲವು ಜಂಗಮವಾಗಿಯೂ ಕಾರ್ಯನಿರ್ವಹಿಸುತ್ತಿವೆ.
ಜಂಗಮರೂಪದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿ.ಎ.ಎಲ್.ಸಿ ಶಾಲೆಗಳ ಚಿತ್ರಣವನ್ನು
ನಮ್ಮ ಬ್ಲಾಗ್ ನಲ್ಲಿ ನಿಮ್ಮಮುಂದಿಡಲಿದ್ದೇವೆ. ಇದರ ಮೊದಲ ಹೆಜ್ಜೆಯೇ ನೀವಿಗ ಕಾಣುತ್ತಿರುವ ಮೈಸೂರು ದಕ್ಷಿಣ
ವಲಯದ ಟಿ.ಕೆ.ಕಾಲೋನಿಯಲ್ಲಿರುವ ಹೆಚ್.ಪಿ.ಎಸ್ ಶಾಲೆ.