My Blog List

Wednesday 28 January 2015

ಮೂರನೇ ಹಂತದ ಎಸ್.ಟಿ.ಎಫ್ ತರಬೇತಿ

ಮೂರನೇ ಹಂತದ ಎಸ್.ಟಿ.ಎಫ್ ತರಬೇತಿ 20-01-15 ರಿಂದ 24-01-15 ರವರೆಗೆ ನಡೆಯಿತು. ಒಟ್ಟು 46 ಮಂದಿ ಗಣಿತ ಶಿಕ್ಷಕರು ತರಬೇತಿಯಲ್ಲಿ ತೊಡಗಿಸಿಕೊಂಡಿದ್ದರು. ಮೊದಲ ದಿನ ಇಟಿ ವಿಭಾಗದ ಮುಖ್ಯಸ್ಥರಾದ ಶ್ರೀ ಸ್ವಾಮಿ.ಎಸ್ ರವರು ತರಬೇತಿಗೆ ಸತ್ ಆಲೋಚನೆ ಮೂಲಕ ಚಾಲನೆ ನೀಡಿದರು.




ಎರಡನೇ ದಿನ ಮಾನ್ಯ ಉಪನಿರ್ದೇಶಕರು(ಆಡಳಿತ) ರವರಾದ ಶ್ರೀ ಬಸಪ್ಪನವರು ತರಬೇತಿಗೆ ಆಗಮಿಸಿದ್ದರು. ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು. ತಂತ್ರಜ್ಞಾನದ ಅವಶ್ಯಕತೆ ಜೊತೆಗೆ ಅದೇ ಅನಿವಾರ್ಯವಾಗಬಾರದು ಎಂದು ಕಿವಿಮಾತು ಹೇಳಿದರು.

ಮೂರನೇ ದಿನ ಮಾನ್ಯ ನಿರ್ದೇಶಕರು, ಆರ್.ಎಂ.ಎಸ್.ಎ ರವರಾದ ಶ್ರೀ ರಾಜಶೇಖರ್ ರವರು ಆಗಮಿಸಿದ್ದರು. ಶ್ರೀಯುತರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿನ ಗಣಿತ ಶಿಕ್ಷಕರ ಜೊತೆ ಸಂವಾದ ನಡೆಸಿದರು. ಪ್ರಸ್ತುತ ತಂತ್ರಜ್ಞಾನದ ಜೊತೆಗೆ ಬೋಧನಾ ಕ್ರಮ ಎಷ್ಟು ಪೂರಕವಾಗಿದೆ ಎಂಬ ವಿಷಯವಾಗಿ ಶಿಕ್ಷಕರ ಜೊತೆ ಚರ್ಚೆ ನಡೆಸಿದರು.



ಶಿಕ್ಷಕರು ಎಸ್.ಟಿ.ಎಫ್ ತರಬೇತಿಯ ಸಂಪೂರ್ಣ ಲಾಭ ಪಡೆದರು. ಕೆಲವು ಶಾಲೆಯ ಶಿಕ್ಷಕರು ತಮ್ಮ ತಮ್ಮ ಶಾಲೆಯ ಬ್ಲಾಗ್ ನ್ನು ತರಬೇತಿ ಅವಧಿಯಲ್ಲೇ ರಚಿಸಿದರು. ಅಲ್ಲದೇ ಅದನ್ನು ಶಾಲೆಯ ಸಂಚಿಕೆ ರೂಪದಲ್ಲಿ ಮುಂದುವರಿಸಿಕೊಂಡು ಹೋಗುವ ಸಂಕಲ್ಪ ಮಾಡಿದರು.
- Prashanth M C
Lecturer, Diet, Mysore

No comments:

Post a Comment

NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...