NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ
ವಸಂತಯಾನ
ಪರಂಪರೆಯ ಪರಿಧಿಯೊಳಗೆ ಅನುದಿನ ಅನುಕ್ಷಣ ಶಿಕ್ಷಣ
My Blog List
Tuesday 8 November 2022
Thursday 25 November 2021
Wednesday 12 August 2020
Tuesday 4 August 2020
ವಸಂತಯಾನ.
ವಸಂತಯಾನ. ಇದು ಕೋವಿಡ್ ಕಾಲದ ಸಾಪ್ತಾಹಿಕ. ನಮ್ಮ ಹೆಮ್ಮೆಯ ಶಿಕ್ಷಕ ಪ್ರತಿನಿಧಿ. ಒಂದಷ್ಟು ಓದು, ಒಂದಿಷ್ಟು ಸ್ಫೂರ್ತಿ, ಮತ್ತೊಂದಿಷ್ಟು ಹೊಸ ಹೊಸ ವಿಷಯಗಳ ಕಲಿಕೆಗೆ ಅವಕಾಶ ನೀಡುವ ಇಂಗಿತ ಇದರದ್ದು. ಅಂಬೆಗಾಲಿನ ಈ ಹೆಜ್ಜೆಗೆ ನೀವು ಗೆಜ್ಜೆಯಾಗಿ. ನಿಮ್ಮ ಸಲಹೆ ನೀಡಿ. ನವ ನವೀನ ವಿಷಯಗಳನ್ನು ಹಂಚಿಕೊಳ್ಳಿ. ನಾವಿನ್ಯತೆಯ ಲತೆ ಹಬ್ಬಲಿ. ಹೆಚ್ಚಲಿ ನಮ್ಮ ವಸಂತಯಾನದ ರಸಬಳ್ಳಿ.
Tuesday 28 July 2020
ಘಮ ಘಮಿಸಿದ "ವಿದ್ಯಾಗಮ"
ಈ ದಿನ ಡಯಟ್ ವಸಂತ ಮಹಲ್ ನಲ್ಲಿ ಮೈಸೂರು ಜಿಲ್ಲೆಯ ಎಲ್ಲಾ ಶೈಕ್ಷಣಿಕ ವಲಯಗಳ ಬಿ.ಆರ್.ಸಿ ರವರು ತಮ್ಮ ಬ್ಲಾಕ್ ಗಳಲ್ಲಿ ವಿದ್ಯಾಗಮ ಕಾರ್ಯಕ್ರಮ ಅನುಷ್ಠಾನಕ್ಕೆ ಮಾಡಿಕೊಂಡಿರುವ ತಯಾರಿಗಳನ್ನು ಪ್ರಸ್ತುತ ಪಡಿಸಿದ ರು. ಕಾರ್ಯಕ್ರಮದ ನೋಡಲ್ ಅಧಿಕಾರಿ ಉಪನ್ಯಾಸಕರಾದ ಶ್ರೀ ಆರ್.ಎಂ. ಶಶಿಧರ್ ಅವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ನುಡಿದು ನಂತರ ಪ್ರತಿ ಬ್ಲಾಕಿನ ಕ್ಷೇತ್ರ ಸಮನ್ವಯಾಧಿಕಾರಿ ಗಳಿಗೆ ಪ್ರಸ್ತುತಿಗೆ ಅವಕಾಶ ಮಾಡಿಕೊಟ್ಟರು.
ಜಿಲ್ಲೆಯಲ್ಲಿ ಕಾರ್ಯಕ್ರಮವನ್ನು ಹೇಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬಹುದು ಎಂಬ ಕುರಿತು ಸುದೀರ್ಘ ಅರ್ಥಪೂರ್ಣ ಚರ್ಚೆ ನಡೆಯಿತು.
ವಿದ್ಯಾಗಮ “ನಿರಂತರ ಕಲಿಕಾ ಕಾರ್ಯಕ್ರಮ”ವನ್ನು ಅನುಷ್ಠಾನ ಮಾಡುವಾಗ ಈಕೆಳಕಂಡ ಅಂಶಗಳ ಬಗ್ಗೆ ಗಮನ ಹರಿಸುವಂತೆ ಚರ್ಚಿಸಲಾಯಿತು.
• ವಿದ್ಯಾರ್ಥಿಗಳ ಕಲಿಕೆಗೆ ಇದು ಪೂರಕ ವ್ಯವಸ್ಥೆಯೇ ಹೊರತು ಇದು ಪರ್ಯಾಯವಲ್ಲ .
• ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ತಂತ್ರಜ್ಞಾನವನ್ನು ಆಧರಿಸಿ ಕಲಿಕೆಯನ್ನು ಪ್ರಾರಂಭಿಸಲಾಗಿದೆ ಹಾಗು ಪೋಷಕರು ಸಹಕಾರ ನೀಡುತಿದ್ದಾರೆ.
• ಬ್ಲಾಕ್ ಹಂತದಲ್ಲಿ ಶಿಕ್ಷಕರಿಗೆ ತಂತ್ರಜ್ಞಾನದ ಅರಿವು ಮೂಡಿಸುವುದು.
• ಟ್ಯಾಲ್ಪ್ ತರಬೇತಿ ಪಡೆದ ಶಿಕ್ಷಕರ ಸಹಕಾರ ಪಡೆದು ತರಬೇತಿ ನೀಡುವುದು.
• ಸಮುದಾಯ ಬಾನುಲಿ ಕೇಂದ್ರಗಳನ್ನು ಬಳಸಿಕೊಂಡು ಪಾಠಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿನ ಶಿಕ್ಷಕರನ್ನು ಅಧಿಕವಾಗಿ ಕಾರ್ಯಕ್ರಮಕ್ಕೆ ಪ್ರೇರೇಪಿಸುವುದು.
• ಸಿ.ಆರ್.ಪಿ/ ಬಿ.ಆರ್.ಪಿ, ಮತ್ತು ಮುಖ್ಯಶಿಕ್ಷಕರಿಗೆ ಬ್ಲಾಕ್ ಹಂತದಲ್ಲಿ ಪೂರ್ಣ ಮಾಹಿತಿಯನ್ನು ಸಭೆಗಳ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡುವುದು.
• ಸ್ವಯಂ ಸೇವಕರನ್ನು ಬಳಸಿಕೊಳ್ಳುವುದು.
• ಶಾಲಾ ಹಂತದಲ್ಲಿ “ ತಾಯಂದಿರ ಸಭೆ”ಯನು ಕರೆದು ಕಾರ್ಯಕ್ರಮದ ಬಗ್ಗೆ ಪೂರ್ಣ ಮಾಹಿತಿ ನೀಡುವುದು.
• ತಾಲೂಕು ಹಂತದಲ್ಲಿ ಡಯಟ್ ನ ನೋಡಲ್ ಅಧಿಕಾರಿಗಳನ್ನು ಒಳಗೊಂಡAತೆ ತಾಲೂಕು ಅನುಪಾಲನ ಸಮಿತಿಯನ್ನು ರಚಿಸಿ, ೧೫ ದಿನಗಳಿಗೊಮ್ಮೆ ಸಭೆಯ ಮೂಲಕ ಅನುಪಾಲನೆ ಮಾಡುವುದು.
• ಶೇ೨೦ ರಿಂದ ಶೇ೩೦ರಷ್ಟು ಕಡಿತಗೊಳಿಸಿರುವ ಪ್ರಸ್ತುತ ವರ್ಷದ ಪಠ್ಯಕ್ರಮವು ತರಗತಿವಾರು, ವಿಷಂiÀವಾರು ಡಿ.ಎಸ್.ಇ.ಆರ್.ಟಿ ಮತ್ತು ಪಠ್ಯಪುಸ್ತಕದ ಸಂಘದ ವೆಬ್ ಸೈಟ್ ನಲ್ಲಿ ಲಭ್ಯವಿದ್ದು ಶಿಕ್ಷಕರಿಗೆ ವ್ಯಾಪಕ ಮಾಹಿತಿ ನೀಡಿ ಮನವರಿಕೆ ಮಾಡುವುದು.
• ಕಲಿಕಾ ವಠಾರದಲ್ಲಿ ಎನ್.ಜಿ.ಓಗಳನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುವುದು.
• ಚಂದನವಾಹಿನಿ, ದೀಕ್ಷಾ ಪೋರ್ಟಲ್, ಮೇಘಶಾಲಾ, ಪ್ರಥಮ್ ಸಂಸ್ಥೆ, ಮ್ಯಾಜಿಕ್ ಫೌಂಡೇಷನ್, ಅಗಸ್ತö್ಯ ಫೌಂಡೇಷನ್, ಶಿಕ್ಷಣ ಫೌಂಡೇಷನ್ ರವg ಶೈಕ್ಷಣಿಕ ತಂತ್ರಗಳನ್ನು ಮತ್ತು ಕಾರ್ಯಕ್ರಮಗಳನ್ನು ಸಕ್ರಿಯವಾಗಿ ಬಳಸಿಕೊಳ್ಳುವುದು.
• ಮೂರು ಗುಂಪಿನ (ಕಾಲ್ಪನಿಕ ಕಲಿಕಾ ಕೋಣೆ, ಇಂಟೆಲಿಜೆAಟ್, ಬ್ರಿಲಿಯೆಂಟ್, ಜೀನಿಯಸ್) ವಿದ್ಯಾರ್ಥಿಗಳ ಸಂಖ್ಯೆ ಮತ್ತು ಮ್ಯಾಪಿಂಗ್ ಕಾರ್ಯವನ್ನು ಸುಸಜ್ಜಿತವಾಗಿ ಕೈಗೊಳ್ಳುವುದು.
• ಮುಖ್ಯಶಿಕ್ಷಕರು ಶಾಲೆಯಲ್ಲಿ ಮಾರ್ಗದರ್ಶಿ ಶಿಕ್ಷಕರಾಗಿ ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸುವುದು.
• ಶಿಕ್ಷಕರು ಸ್ಥಳೀಯವಾಗಿ ಲಭ್ಯವಾಗುವ ಸಂಪನ್ಮೂಲಗಳನ್ನು ಬಳಸಿಕೊಂಡು ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಟಾನಗೊಳಿಸುವುದು.
• ಕಾರ್ಯಕ್ರಮ ಅನುಷ್ಠಾನಗೊಳಿಸುವಾಗ ಮಕ್ಕಳ ದೈಹಿಕ ಅಂತರ ಮತ್ತು ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು.
• ಮಾರ್ಗದರ್ಶಿ ಶಿಕ್ಷಕರು, ವಿಷಯವಾರು ತರಗತಿವಾರು, ಪಠ್ಯಕ್ರಮಕ್ಕೆ ಸಂಬAಧಿಸಿದAತೆ ಸಣ್ಣ ಸಣ್ಣ ವಿಡಿಯೋ ಕ್ಲಿಪಿಂಗ್ ಗಳ ಮೂಲಕ ಮಕ್ಕಳಲ್ಲಿ ಕಲಿಕೆಯನ್ನು ಉತ್ತೇಜಿಸುವುದು.
• ಅನುಪಾಲನಾಧಿಕಾರಿಗಳಿಗೆ ವಿಡಿಯೋ ಕಾನ್ಫರೆನ್ಸ್ ಸಭೆಯ ಮೂಲಕ ಮಾಹಿತಿ ನೀಡುವುದು.
• ಅಭ್ಯಾಸ ಹಾಳೆಗಳನ್ನು, ಶಾಲಾ ಹಂತದಲ್ಲಿ ತಯಾರಿಸಿ ಶಾಲೆಯಲ್ಲಿ ಲಭ್ಯವಿರುವ ಶಾಲಾನುದಾನ ಅಥವ ಸಂಚಿತ ನಿಧಿಯಿಂದ ಕಲಿಕಾ ಸಾಮಾಗ್ರಿಗಳನ್ನು ಮಕ್ಕಳಿಗೆ ಒದಗಿಸುವುದು.
• ಭೌಗೋಳಿಕ ಹಿನ್ನೆಲೆಯನ್ನು ಸರಿಯಾಗಿ ಗುರುತಿಸಿ ಮಾರ್ಗದರ್ಶಿ ಶೀಕ್ಷಕರಿಗೆ ವಿದ್ಯಾರ್ಥೀಗಳ ಗುಂಪನ್ನು ಹಂಚಿಕೆಮಾಡುವುದು.
Thursday 19 March 2020
ವಸಂತಯಾನದಲ್ಲಿ ಮಹಾಳ ದಿನ
ಕ್ಲಾರಾ ಜೆಟ್'ಕಿನ್ ಮಹಿಳೆಯರ ಹಕ್ಕಿನ ಹೋರಾಟಗಾರಳು ಮತ್ತು ರೋಸಾ ಲಕ್ಸಂಬರ್ಗ್ ಸಮಾಜವಾದಿ ನಾಯಕಿ 1910ರಲ್ಲಿ |
ಮಹಿಳೆ
ಮಹಾ..ಳೆ
ಅವಳಿಗೆ ಸಮರಾರು ಇಲ್ಲ.
ಪ್ರತಿ ದಿನವೂ
ಅವಳ ದಿನವೇ.
ಅವಳಿಲ್ಲದ ದಿನಗಳಿಲ್ಲ.
ಅವಳಿಂದಲೇ ಕ್ಷಣಗಳೆಲ್ಲಾ.
ಹಾಗಾಗಿ ಮಾರ್ಚ್ ಹಲವು ದಿನಾಚರಣೆಗಳಿಗೆ ನಾಂದಿ ಹಾಡುವುದೇ ಈ ಮಹಿಳಾ ದಿನಾಚರಣೆ ಮೂಲಕ ಎನಿಸುತ್ತದೆ.
ವಿಶ್ವದೆಲ್ಲೆಡೆ ಈ ದಿನ ಆಚರಿಸಲಾಗುತ್ತದೆ. ಈ ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯಲಾಗುತ್ತದೆ. ಅಂತೆಯೇ ಮೈಸೂರಿನ ಜಿಲ್ಲಾ ಶಿಕ್ಷಣ ಮತ್ತು
ತರಬೇತಿ ಸಂಸ್ಥೆಯಲ್ಲೂ ಸಹ ದಿನಾಚರಣೆ ನಡೆಯಿತು.
ಮೈಸೂರು ಮಹಾನಗರ ಪಾಲಿಕೆಯ
ಸದಸ್ಯೆಯವರಾದ ಶ್ರೀಮತಿ ಛಾಯಾ ನವೀನ್ ರವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಭಾಷಣಕಾರರಾಗಿ ಕನ್ನಡ ಪ್ರಭ ಪತ್ರಿಕೆಯ ಮೈಸೂರು
ವಿಭಾಗದ ಸಹ ಸಂಪಾದಕರು ಹಾಗು ಕವಿಗಳಾದ ಶ್ರೀ ಅಂಶಿ ಪ್ರಸನ್ನ ಕುಮಾರ್ ಆಗಮಿಸಿದ್ದರು.
ಡಯಟ್ ನ ುಪನ್ಯಾಸಕರಾದ ಶ್ರೀಮತಿ
ಭಾಗ್ಯಲಕ್ಷ್ಮೀ, ಶ್ರೀಮತಿ ಭಾಗ್ಯ, ಸೂಪರಿಂಟೆಂಡೆಂಟ್
ರವರಾದ ಶ್ರೀಮತಿ ಜಯಲಕ್ಷ್ಮೀಭಾಯಿರವರು ಮಹಿಳಾ ದಿನಚ ವಿಶೇಷತೆಗಳ ವಿಷಯ ಮಂಡನೆ ಮಾಡಿದರು.
Wednesday 18 December 2019
ಐಟಿ@ಸ್ಕೂಲ್ಸ್ ಶಾಲಾ ಭೇಟಿ ನಮೂನೆ
ಐಟಿ@ಸ್ಕೂಲ್ಸ್ ಶಾಲೆಗಳಿಗೆ ಭೆಟಿ ನೀಡಿದ ಅಧಿಕಾರಿಗಳು ಭರ್ತಿ ಮಾಡಬೇಕಾದ ಆನ್ ಲೈನ್ ನಮೂನೆಗೆ ಇಲ್ಲಿ ಕ್ಲಿಕ್ಕಿಸಿ.
https://forms.gle/c31Zv25vSCsQUtyh8
ಐಟಿ@ಸ್ಕೂಲ್ಸ್ ತರಬೇತಿ ಕೇಂದ್ರಗಳಿಗೆ ಭೆಟಿ ನೀಡಿದ ಅಧಿಕಾರಿಗಳು ಭರ್ತಿ ಮಾಡಬೇಕಾದ ಆನ್ ಲೈನ್ ನಮೂನೆಗೆ ಇಲ್ಲಿ ಕ್ಲಿಕ್ಕಿಸಿ. https://forms.gle/9R1GJp5yHT8Ubue76
Subscribe to:
Posts (Atom)
NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ
NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...
-
ಯಾವುದೇ ಒಂದು ದೇಶ ಹಾಗೂ ಸಮಾಜ ಅಲ್ಲಿನ ಶಿಕ್ಷಕರ ಮಟ್ಟವನ್ನು ಮೀರಿರಲು ಸಾಧ್ಯವಿಲ್ಲ” ಎನ್ನುವ ಹೇಳಿಕೆ, ಶಿಕ್ಷಕರ ಶಕ್ತಿ ಹಾಗೂ ಮಹತ್ವವನ್ನು ಸಾರಿ ಹೇಳುತ್ತದೆ. ಸಮಾಜದ ನ...
-
ಇಂದು ಆರ್.ಎಂ.ಎಸ್.ಎ ನಿರ್ದೇಶಕರಾದ ಶ್ರೀ ನಾಗೇಂದ್ರ ಮಧ್ಯಸ್ಥರ ಸರ್ ಮತ್ತು ನಲಿಕಲಿ ಕೋಶದ ಮುಖ್ಯಸ್ಥರಾದ ಶ್ರೀ ಬೆಳ್ಳಶೆಟ್ಟರು ಹಾಗು ರಾಜ್ಯ ಮಟ್ಟದ ಅಧಿಕಾರಿಗಳ ಸಾರಥ್...
-
ಡಯಟ್ ಎಂದಾಕ್ಷಣ ಶರೀರದ ಏರುಪೇರು ಸರಿಪಡಿಸಲು ಮಾಡುವ ಪಥ್ಯ ಎಂಬುದೇ ಸಾಮಾನ್ಯರ ಭಾವನೆ. ಆದರೆ, ಡಯಟ್ ಅರ್ಥಾತ್ DISTRICT INSTITUTE OF EDUCATION AND TRAINING (...