ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಇಂದು ವಿಜ್ಞಾನದ ಗಾಢ ಪ್ರಭಾವವಿದೆ. ಬಿಜ್ಞಾನ ರಹಿತ ನಡಿಗೆ ಊಹಿಸಲೂ ಅಸಾಧ್ಯ. ಈ ವಿಜ್ಞಾನವನ್ನು ಬಿತ್ತುವ ಕೆಲಸವನ್ನು ಶಾಲೆ ಎಂಬ ಕೃಷಿ ಭೂಮಿಯಲ್ಲಿ ನಾವು ನೋಡುತ್ತೇವೆ. ಹಲವು ಮಾಧ್ಯಮದಲ್ಲಿ ಈ ಕಾರ್ಯವನ್ನು ಮಾಡಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಆಶಯದಂತೆ ಮತ್ತು ಡಿ.ಎಸ್.ಇ.ಆರ್.ಟಿ ನಿರ್ದೇಶನದಂತೆ ಪ್ರತಿ ವರ್ಷವೂ ಜಿಲ್ಲಾ ಹಂತದಲ್ಲಿ ವಿಜ್ಞಾನ ನಾಟಕ ಸ್ಪರ್ಧೆ ಆಯೋಜಿಸಲಾಯಿತು.
- ಸ್ವಚ್ಛಭಾರತ
- ಡಿಜಿಟಲ್ ಭಾರತ
- ಹಸಿರು ಶಕ್ತಿ
- ನದಿಗಳ ಶುದ್ಧೀಕರಣ
ಈ ಭಾರಿಯ ವಿಶೇಷ. ಉತ್ತಮ ನಿರ್ದೇಶಕ, ಉತ್ತಮ ಸಾಹಿತ್ಯ ರಚನೆ, ಅತ್ಯುತ್ತಮ ನಟ, ಅತ್ಯುತ್ತಮ ನಟಿ ಪ್ರಶಸ್ತಿ ನೀಡಿದ್ದು.
ತಮ್ಮ ನಿರ್ದೇಶನಕ್ಕೆ ಹುಣಸೂರಿನ ಪ್ರೌಢಶಾಲೆಯ ನಾಟಕ ಶಿಕ್ಷಕಿ ವಿದ್ಯಾಕಾಮತ್, ಉತ್ತಮ ಸಾಹಿತ್ಯ ರಚನೆಗಾಗಿ ಸಂತೋಷ್ ಗುಡ್ಡಿಯಂಗಡಿ, ಅತ್ಯುತ್ತಮ ನಟನಾಗಿ ದರ್ಶನ್, ಅತ್ಯುತ್ತಮ ನಟಿಯಾಗಿ ಜಟ್ರೋಫ ಪಾತ್ರಧಾರಿ ವಿದ್ಯಾರ್ಥಿನಿ ಬಹುಮಾನ ಪಡೆದು ಸಂಭ್ರಮಿಸಿದರು.