My Blog List

Wednesday, 2 December 2015

ಬಾರಿಸು ಕನ್ನಡ ಡಿಂಡಿಮವಾ..... (ಕನ್ನಡ ಎಸ್.ಟಿ.ಎಫ್ ತರಬೇತಿ ಮೊದಲನೇ ತಂಡ)


ಕನ್ನಡವೆನೆ ಬರಿಯ ಹೆಸರೆ ಮಣ್ಣಿಗೆ ?
ಅದು ಮಂತ್ರ ಕಣಾ ! ಶಕ್ತಿ ಕಣಾ ! ಅಂತಾರೆ ರಸ‍ಋಷಿ. 
ಅವರ ಮಾತಿನಂತೆ ಜಿಲ್ಲೆಯ ಕನ್ನಡ ಭಾಷಾ ಶಿಕ್ಷಕರ ತರಗತಿಗಳನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ದಿನಾಂಕ :01-12-2015 ರಂದು ಮೊದಲ ಬ್ಯಾಚ್ ನಲ್ಲಿ ಕನ್ನಡ ಎಸ್.ಟಿ.ಎಫ್ ತರಬೇತಿಯನ್ನು ಆರಂಭಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾನ್ಯ ಪ್ರಾಂಶುಪಾಲರು ಭಾಷಾ ಶಿಕ್ಷಕರ ಮಹತ್ವವನ್ನ ಮನವರಿಕೆ ಮಾಡಿದರು. ಶಾಲೆಗಳ ಚಲನಶೀಲತೆಗೆ ಭಾಷಾ ಶಿಕ್ಷಕರು ಹೇಗೆ ಕೊಡುಗೆ ನೀಡಬೇಕೆಂದು ಉದಾಹರಣೆಗಳೊಂದಿಗೆ ಸ್ಫೂರ್ತಿತುಂಬಿದರು.


ಶಿಕ್ಷಕರು, ತಮ್ಮ ಅನುಭವಗಳನ್ನು, ಅಭ್ಯಾಸಗಳು ಹಾಗೂ ಒಳನೋಟಗಳನ್ನು ಮತ್ತು ಕಲಿಕೆಗಳನ್ನು ಹಂಚಿಕೊಳ್ಳಲು, ತಮ್ಮ ಸಹವರ್ತಿಗಳೊಂದಿಗೆ  ನಿರಂತರವಾಗಿ ಸಂಪರ್ಕ ಹೊಂದುವ ಅಗತ್ಯವಿದೆ. ಸಹವರ್ತಿಗಳೊಂದಿಗೆ  ಸಂವಹನ ಸಂಪರ್ಕವನ್ನು  ಹೊಂದುವ ಹಾಗೂ ಅವರ ಜೊತೆಯಲ್ಲಿ ಮಾರ್ಗದರ್ಶಕರ ಬೆಂಬಲ ಕೂಡ ಅಗತ್ಯವಿದೆ.  ಭಾರತದಲ್ಲಿರುವ ದೊಡ್ಡ ಶಾಲಾ ವ್ಯವಸ್ಥೆಯಲ್ಲಿ ಇದು ಬಹಳ ಮುಖ್ಯವಾಗಿದೆ. ನಾವು ಶಿಕ್ಷಕರಾಗಿ ತಮ್ಮ ಅಭ್ಯಾಸ  ಮತ್ತು  ತಮ್ಮ ಅನುಭವಗಳನ್ನು ಹಂಚಿಕೊಳ್ಳುವ,ಪುನಃ ವಿಮರ್ಶಿಸುವ ಮತ್ತು ತಮ್ಮ ನಿರ್ದಿಷ್ಟ ಸವಾಲುಗಳಿಗೆ ಪರಿಹಾರಗಳನ್ನು ಪಡೆಯಲು ವೃತ್ತಿಪರ ಶಿಕ್ಷಕರ ಸಮೂಹದೊಡನೆ ಬೆರೆಯಬೇಕಾಗಿದೆ.




ಈಗಾಗಲೇ ಕರ್ನಾಟಕದಲ್ಲಿ ವೃತ್ತಿಪರ ಶಿಕ್ಷಕರ ವೇದಿಕೆಗಳು ಜಾರಿಯಲ್ಲಿದ್ದು,  ಗಣಿತ, ವಿಜ್ಞಾನ ಮತ್ತು ಸಮಾಜವಿಜ್ಞಾನ ವಿಷಯ ಶಿಕ್ಷಕರ ವೇದಿಕೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವುದರನ್ನು ನೋಡಬಹುದಾಗಿದೆ.
ಕಾರ್ಯಕ್ರಮದ ಉದ್ದೇಶಗಳು:

  • ಶಿಕ್ಷಕರು ಸಹವರ್ತಿ ಮತ್ತು ಸಹಯೋಜಿತ ಕಲಿಕೆ ಮತ್ತು ಹಂಚಿಕೆಯಲ್ಲಿ ತೊಡಗಲು ಸಹಕಾರಿಯಾಗುವಂತೆ ಭಾಷಾ ಶಿಕ್ಷಕರ  ವೇದಿಕೆಯನ್ನು ಪರಿಚಯಿಸುವುದು
  • ಭಾಷಾ ಶಿಕ್ಷಕರ ವೇದಿಕೆ ನಿರ್ಮಾಣ  ಮಾಡುವ ಮೂಲಕ  ಭಾಷಾ ಶಿಕ್ಷಕರು ತಮ್ಮ ಅನುಭವಗಳನ್ನು   ಮತ್ತು  ಭೋದನೆಯಲ್ಲಿನ ಸವಾಲುಗಳನ್ನು  ಮತ್ತು  ಅವುಗಳನ್ನು  ತರಗತಿಯಲ್ಲಿ  ಹೇಗೆ ಪರಿಹರಿಸಿದರು ಎಂಬುದನ್ನು   ಹಂಚಿಕೊಳ್ಳಲು ಪ್ರೋತ್ಸಾಹಿಸುವುದು. 
  • ಶಿಕ್ಷಕರಿಗೆ ತಂತ್ರಜ್ಞಾನದಲ್ಲಿ  ಆಸಕ್ತಿಯನ್ನು  ಮೂಡಿಸುವ ಮೂಲಕ ಸ್ವಯಂ ಕಲಿಕೆಗೆ, ತರಗತಿ ಕಲಿಕೆಗೆ ಮತ್ತು ಬೋಧನಾ  ವಿಧಾನದಲ್ಲಿ  ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆ ಮಾಡುವುದು .
  • ತಂತ್ರಜ್ಞಾನದ ಮೂಲಕ ಭಾಷಾ ಕಲಿಕೆ ಅವಕಾಶಗಳನ್ನು ತಿಳಿಯುವುದು & ಶೈಕ್ಷಣಿಕ ಪರಿಕರಗಳ ಪರಿಚಯ
  • ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ ದ ಪರಿಚಯ
  • ಪಠ್ಯಕ್ರಮದಲ್ಲಿ ಕನ್ನಡ ಭಾಷಾ ಬೋಧನೆಯ ಉದ್ದೇಶಗಳನ್ನು   ಅರ್ಥೈಸಿಕೊಳ್ಳುವುದು.
  • ಹೊಸ ಪಠ್ಯಕ್ರಮ ಭೋದನೆ
  • ಮಕ್ಕಳಲ್ಲಿನ ಭಾಷಾ ಸಾಕ್ಷರತೆ ಮತ್ತು ಸಾಮರ್ಥ್ಯಗಳು
  • ಸೇತುಬಂಧ ಕಾರ್ಯಕ್ರಮ ಸಾಮಗ್ರಿ ರಚನೆ
  • ಭಾಷಾ ಕಲಿಕೆಯಲ್ಲಿ ತಾಂತ್ರಿಕ ಪರಿಕರಗಳ ಬಳಕೆ
  • ಭಾಷಾ ಪಠ್ಯಕ್ರಮದ ವಿಷಯಗಳಿಗೆ ಕೊಯರ್ ಮೂಲಕ ಸಂಪನ್ಮೂಲ ಅಭಿವೃದ್ದಿಪಡಿಸುವುದು. 
  • NCF ಪೋಷಿಷನ್ ಪೇಪರ್ ಮತ್ತು ಪ್ರಸ್ತುತ ಪಠ್ಯಪುಸ್ತಕಗಳಲ್ಲಿನ ಪರಿಕಲ್ಪನೆಗಳ ಚರ್ಚೆ
  • ಉಪಯುಕ್ತ ಅಂತರ್ಜಾಲ ತಾಣಗಳ ಪರಿಚಯ, ಅಂತರ್ಜಾಲಾಧಾರಿತ ಸಂಪನ್ಮೂಲ ಸಂಗ್ರಹಾಲಯ ರಚಿಸುವ ವಿಧಾನವನ್ನು  ತಿಳಿಯುವುದು. ಇಂಟರ್ನೆಟ್ ಬಳಕೆ, ಇಮೇಲ್ ಬಳಕೆ, ವಿವಿಧ ಅಂತರ್ಜಾಲ ತಾಣಗಳ ಮೂಲಕ ಸಂಪನ್ಮೂಲ ಸಂಗ್ರಹಿಸುವಿಕೆ


ಈ ಮೇಲಿನ ಉದ್ದೇಶಗಳನ್ನು  ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ವಿಷಯ ಶಿಕ್ಷಕರ ವೇದಿಕೆ  ಕಾರ್ಯಗಾರಗಳನ್ನು  ಹಮ್ಮಿಕೊಳ್ಳಲಾಗುವುದು.
ಕಾರ್ಯಾಗಾರದ ಉದ್ದೇಶಗಳು :

  • ಶಿಕ್ಷಕರು ತಮ್ಮ ತರಗತಿ ಭಾಷಾ ಬೊಧನಾ ಪ್ರಕ್ರಿಯೆಯಲ್ಲಿ ಎದುರಿಸುವ ಸವಾಲುಗಳು ಮತ್ತು ಪರಿಹಾರಿಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸುವುದು. 
  • ಈ ಸವಾಲುಗಳನ್ನು ಪರಿಹರಿಸಲು ಮತ್ತು ನಾವಿನ್ಯಯುತ ಚಟುವಟಿಕೆಗಳ ಮಕ್ಕಳಲ್ಲಿ ಕಲಿಕಾಸಕ್ತಿ ಮೂಡಿಸಲು ಸಾದ್ಯವಾಗುವಂತೆ ಅಂತರ್ಜಾಲಾಧಾರಿತ ಸಂಪನ್ಮೂಲ ಬಳಕೆಗಳ ಬಗ್ಗೆ ಶಿಕ್ಷಕರಿಗೆ ಅರಿವು ಮೂಡಿಸುವುದು. 
  • ಕಲಿಕಾ ಸಂಪನ್ಮೂಲವಾಗಿ ಅಂತರ್ಜಾಲ ಬಳಕೆಯ ಅರಿವು ಮೂಡಿಸಿವುದು. ಅಂತರ್ಜಾಲ ಸಂಪನ್ಮೂಲಗಳ ಬಳಕೆ ಮತ್ತು ಅವುಗಳ ಮೌಲ್ಯಮಾಪನದ ಬಗ್ಗೆ ತಿಳಿಯುವುದು. 
  • ಬಹುಭಾಷಾ ಹಿನ್ನೆಲೆ ಮತ್ತು ಬಹುಭಾಷಾ ಸಾಮರ್ಥ್ಯವುಳ್ಳ ಮಕ್ಕಳ ಕಲಿಕೆಗ ಪೂರಕವಾದ ಚಟುವಟಿಕೆಗಳು ಮತ್ತು ಸಂಪನ್ಮೂಲಗಳ ಬಗ್ಗೆ ತಿಳಿಯುವುದು. 
  • ಭಾಷಾ ಕಲಿಕೆಯ ಉದ್ದೇಶಗಳು, ಭಾಷೆಯ ಬೆಳವಣಿಗೆ ಬಗೆಗಿನ ನೀತಿ ನಿರೂಪಣೆಗಳನ್ನು, ಲೇಖನಗಳನ್ನು ಚರ್ಚಿಸುವುದು. 
  • ಮಕ್ಕಳಲ್ಲಿ ಸೃಜನಾತ್ಮಕ ಅಭಿವೈಕ್ತಿ ಮೂಡಿಸಲು ಪೂರಕವಾಗುವ ಸಂಪನ್ಮೂಲಗಳ ಸಂಗ್ರಹಿಸುವುದು..
  • ಭಾಷಾ ಶಿಕ್ಷಕರಲ್ಲಿ ತಂತ್ರಜ್ಞಾನ ಕೌಶಲ ಬೆಳೆಸುವುದು. 


ಭಾಷಾ ಬೋಧನೆ-ಕಲಿಕೆಗೆ ಪೂರಕವಾದ ಅಂತರ್ಜಾಲಾಧಾರಿತ ಉಪಯುಕ್ತ ವೆಬ್‌ತಾಣಗಳ ಬಗ್ಗೆ ತಿಳಿಯುವುದು.
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ ಪ್ರಕ್ರಿಯೆಯ ಬಗ್ಗೆ ತಿಳಿಯುವುದು ಮತ್ತು ನೆರವು ನೀಡುವುದು.
ಈ ಕಾರ್ಯಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಿಗೆ ರಾಜ್ಯಮಟ್ಟದಲ್ಲಿ ತರಬೇತಿ ನೀಡಲಾಗುವುದು.   ಈ ಸ೦ಪನ್ಮೂಲ ವ್ಯಕ್ತಿಗಳ ಮೂಲಕ ಜಿಲ್ಲಾ ಹಂತದಲ್ಲಿ ತರಬೇತಿ ನೀಡುವುದು. ಕಾರ್ಯಗಾರದ ನಂತರ ಅಂತರ್ಜಾಲದ ಮೂಲಕ ಶಿಕ್ಷಕರ ನಡುವೆ ಸಂವಹನ, ಸಂಪನ್ಮೂಲ ಹಂಚಿಕೆ ಪ್ರಕ್ರಿಯೆ ಮುಂದುವರೆಯುತ್ತದೆ. .







NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...