My Blog List

Friday, 27 March 2015

ಹೀಗೊಂದು "ಹೃದಯ ಸಂವಾದ"

ವೇದವೇ ಹಿರಿದೆಂದು ವಾದವನು ಮಾಡುವರು
ವೇದದೊಳೇನು ಹಿರಿದಿಹುದು ಅನುಭವಿಯ
ವೇದವೇ ವೇದ ಸರ್ವಜ್ಞ ||
ಸಭೆ-ಶೋಭೆ

ಸಭೆಗೆ ಶೋಭೆಯ ಮಾತು ಮಾನ್ಯ ಪ್ರಾಚರ್ಯರಾದ ಬಿ.ಕೆ.ಬಸವರಾಜರವರಿಂದ

"ಅನುಭವ" ಪದಕ್ಕೆ ಎಲ್ಲ ಬಲ್ಲವರು ಹೇಳಿದ ಮಾತದು. ಈ ಮಾತಿನಂತೆ "ಅನುಭವ" ಅನಾವರಣಗೊಂಡಿದ್ದು ದಿ:03-2015 ರಿಂದ 4 ದಿನ ಮತ್ತು 03-2015 ರಿಂದ 4 ದಿನಗಳ ಕಾಲ. ಬರಿಯ ಶಿಕ್ಷಕರಿಗಷ್ಟೇ ತರಬೇತಿಗಳನ್ನು ಆಗಿಂದಾಗ್ಗೆ ನೀಡುವ ಅನುಪಾಲನಾಧಿಕಾರಿಗಳು, ತಾವೂ ತರಬೇತಿ ಪಡೆಯುವುದು ಅವಶ್ಯ ಎಂಬುದು ಈ ತರಬೇತಿಯ ಆಶಯ. ಆದರೆ ಈ ಆಶಯ ಈಡೇರಿದ್ದು ತರಬೇತಿಗಾಗಿ ತರಬೇತಿ ಎಂಬಂತಲ್ಲ. ಇದು "ಹೃದಯ ಸಂವಾದ"ದ ಮೂಲಕ.


ಎರಡು ತಂಡಗಳಲ್ಲಿ ಈ ಹೃದಯ ಸಂವಾದ ನಡೆಯಿತು. ಹಲವು ಹೃದಯಗಳ ಹೃದ್ಯಂಗಮವಾದ ಪಾಲ್ಗೊಳ್ಳುವಿಕೆ ತರಬೇತಿಯ ತಿರುಳಿನ ರುಚಿ ಹೆಚ್ಚಿಸಿತು. ಮೊದಲ ದಿನ 'ಎಲೆಗಳು ನೂರಾರು ಭಾವದ ಎಳೆಗಳು ನೂರಾರು...' ಹಾಡಿಗೆ ರೂಪಕ ಎಂಬಂತೆ, ಮಾನ್ಯ ಪ್ರಾಚಾರ್ಯರಾದ ಶ್ರೀ ಬಿ.ಕೆ.ಬಸವರಾಜರವರು ಸೇರಿದಂತೆ ತರಬೇತಿಯ ಎಲ್ಲ ಭಾಗೀದಾರರೂ ಹಾಡಿನ ಸಾಲಿಗೆ ಅನ್ವರ್ಥವಾದರು.
ಎಲೆಗಳು ನೂರಾರು ಹಾಡಿಗೆ ರೂಪುಗೊಂಡ ಚಿತ್ರಪಟ

ಶೈಕ್ಷಣಿಕ ಅನುಪಾಲನೆ ಎಲ್ಲರೂ ತೊಡಗಿಸಿಕೊಳ್ಳಬೇಕಾದ ಚಟುವಟಿಕೆ. ಸಂವಾದಗಳ ಮೂಲಕ ಭಾಗೀದಾರರ ಒಳಗೊಳ್ಳುವಿಕೆ. ತಮ್ಮ ತಮ್ಮ ಪರಿಭಾಷೆಯ ಪಥ ಬದಲಿಸಿ, ಎನ್.ಸಿ.ಎಫ್-ಕೆ.ಸಿ.ಎಫ್ ತಿರುಳನ್ನು ಕುಸುರಾಗಿ ಬಿಡಿಸಿಟ್ಟು ತಿರುಗೊಮ್ಮೆ ತಾವಾಗಿಯೇ ಧರಿಸಲು ಈ ತರಬೇತಿ ಅನುಭವ ಚೆಲ್ಲಿತು.
ಚಟುವಟಿಕೆಯಲ್ಲಿ ನಿರತರಾಗಿರುವ ಶಿಬಿರಾರ್ಥಿಗಳು

ಚಟುವಟಿಕೆಯಲ್ಲಿ ನಿರತರಾಗಿರುವ ಶಿಬಿರಾರ್ಥಿಗಳು

ಚಿಂತನಶೀಲ ಆಚರಣೆಗಳು, ಸಂವಾದ-ಸಂವಹನದ ಅನುಸಂಧಾನ, ಸಮಸ್ಯೆ ನಿರ್ವಹಣೆ ಕೌಶಲ, ತಾಂತ್ರಿಕ ಪರಿಣತಿ, ಬದಲಾದ ಶೈಕ್ಷಣಿಕ ಪರಿಕಲ್ಪನೆಗಳ ಸ್ಪಷ್ಟ ಅರಿವಿನೊಂದಿಗೆ ಎಲ್ಲ ಸುಗಮಕಾರರನ್ನು ಬೀಳ್ಕೊಡುವುದು ಈ ತರಬೇತಿಯ ಸದುದ್ದೇಶವಾಗಿತ್ತು. ಅಂತೆಯೇ ತರಬೇತಿಯ ಭಾಗವಾಗಿ ಬಂದ ನಮ್ಮ ಜಿಲ್ಲೆಯ ಮಾನ್ಯ ಉಪನಿರ್ದೇಶಕರು(ಆಡಳಿತ)ರವರಾದ ಬಸಪ್ಪನವರು ತಾವೊಂದು ನಾವಿನ್ಯಯುತ ಚಟುವಟಿಕೆ ನಡೆಸಿ ಭಾಗೀದಾರರ ಲವಲವಿಕೆ ಹೆಚ್ಚಿಸಿದರು.
ಶ್ರೀ ಬಸಪ್ಪರವರು, ಉಪನಿರ್ದೇಶಕರು(ಆಡಳಿತ), ರವರಿಂದ ಚಟುವಟಿಕೆ ಕಾರ್ಯ


ಸೌಜನ್ಯಯುತ ನಡವಳಿಕೆ, ಒಪ್ಪಿಕೊಳ್ಳುವಿಕೆ,ಧೈಹಿಕ ಭಾಷೆ, ಸೂಕ್ತ ಪದ ಬಳಕೆ, ಪ್ರಜಾಸತ್ತಾತ್ಮಕತೆ ಮತ್ತು ಧನಿಯ ಏರಿಳಿತದಿಂದ ಕೂಡಿತ ಮಾತು ಉತ್ತಮ ಸಂವಹನವಾಗಬಲ್ಲುದು ಎಂಬ ಅಂಶ ಅರಿವಿಗೆ ಬಂದಿತು.
ಗೋಧೂಳಿ ಸಮಯದಲ್ಲಿ ನಿತ್ಯ ಯೋಗ-ಪ್ರಾಣಾಯಾಮ ತರಗತಿ ನಡೆದವು. ಯೋಗಾಯೋಗದ ಲಾಭವನ್ನು ಶಿಬಿರಾರ್ಥಿಗಳು ಅನುಭವಕ್ಕೆ ತಂದುಕೊಂಡರು.
ಸಂವಹನ ತರಗತಿ ನಿರ್ವಹಣೆ ಸಂದರ್ಭ 

ಎರಡೂ ತಂಡಗಳ ಹೃದಯ ಸಂವಾದದ ಕೊನೆಯ ದಿನ ಅದು ಮೊದಲ ದಿನದ ಅನುಭವ. ಭಾವಬಿಂದು ಎಲ್ಲರೆದೆಯಲ್ಲಿ ತುಂಬಿ ಬಂದಿತ್ತು. ಎಲ್ಲರು ಮಾತಿಗೆ ಮಾತು ಕೊಟ್ಟರು. ತಮ್ಮ ತಮ್ಮ ಕಾರ್ಯಕ್ಷೇತ್ರದ ಶ್ರೀಮಂತಿಕೆ ಹೆಚ್ಚಿಸುವ ಸಂಕಲ್ಪತೊಟ್ಟರು.
ಬಿದಿರಮ್ಮ ತಾಯಿ ಕೇಳೆ...ಹಾಡು ಹಾಡುತ್ತಿರುವ ಅಧಿಕಾರಿಗಳು..

ತರಬೇತಿ ತಂಡದ ಒಂದು ಕ್ಲೋಸಪ್...

ಪರಸ್ಪರ ಸಂಕಲ್ಪ ಗಟ್ಟಿಗೊಳಿಸುವ ಪ್ರಕ್ರಿಯೆ

ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ ಕರೆಯುವೆ ಕೈ ಬೀಸಿ....ಬತ್ತಿದೆದೆಯಲ್ಲಿ ಬೆಳೆಯಿರಿ ಹಸಿರನು ಪ್ರೀತಿಯ ಮಳೆಸುರಿಸಿ....ಎಂಬ ಹಾಡು ಅರ್ಥಪೂರ್ಣವಾಯಿತು. ಹೃದಯ ಸಂವಾದಕೆ ನಾಂದಿ ಹಾಡಿತು.
- Prashanth M C
Lecturer, Diet, Mysore

NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...